RCB ಫ್ಲವರ್ ಅಲ್ಲ ಫೈಯರ್ – ಆಲ್ ರೌಂಡರ್ ಗಳೇ ಮ್ಯಾಚ್ ವಿನ್ನರ್ಸ್
ಟಿಮ್, ಶೆಫರ್ಡ್, ಕೃನಾಲ್ ಇದ್ರೆ ಕಪ್ ನಮ್ದೇ

RCB ಫ್ಲವರ್ ಅಲ್ಲ ಫೈಯರ್ – ಆಲ್ ರೌಂಡರ್ ಗಳೇ ಮ್ಯಾಚ್ ವಿನ್ನರ್ಸ್ಟಿಮ್, ಶೆಫರ್ಡ್, ಕೃನಾಲ್ ಇದ್ರೆ ಕಪ್ ನಮ್ದೇ

ಈ ಬಾರಿಯ ಟಿ-20 ವಿಶ್ವಕಪ್​ನಲ್ಲಿ ಟೀಂ ಇಂಡಿಯಾ ಇದ್ದ ಹಾಗೇ ಐಪಿಎಲ್​ನಲ್ಲಿ ಈ ಸಲ ಆರ್​ಸಿಬಿ ಟೀಂ. ಹಾಲಿ ಚಾಂಪಿಯನ್ಸ್ ಅನ್ನೋದ್ರ ಜೊತೆಗೆ ಮೋಸ್ಟ್ ಡೇಂಜರಸ್ ಕಾಂಬಿನೇಷನ್ ಇದೆ. ಬ್ಯಾಟಿಂಗ್, ಬೌಲಿಂಗ್, ಆಲ್​ರೌಂಡರ್ಸ್ ಹೀಗೆ ಕಂಪ್ಲೀಟ್ ಪ್ಯಾಕೇಜ್ಡ್​​ ಟೀಂ. ಅದ್ರಲ್ಲೂ ಬೆಂಗಳೂರು ತಂಡದಲ್ಲಿರೋ ಆಲ್​ರೌಂಡರ್​ಗಳೇ ಗೇಮ್ ಚೇಂಜರ್ಸ್ ಕೂಡ ಆಗ್ತಾರೆ.  2025ರಲ್ಲಿ ಬೆಂಗಳೂರು ಚಾಂಪಿಯನ್ ಆಗೋಕೆ ಕಾರಣವೇ ಬ್ಯಾಟಿಂಗ್ ಡೆಪ್ತ್, ಡೇಂಜರಸ್ ಬೌಲಿಂಗ್ ಹಾಗೇ ಪವರ್ ಹಿಟ್ಟಿಂಗ್ ಫಿನಿಶರ್ಸ್. ಸೋ ಈ ಸಲವೂ ಸೇಮ್ ಟೀಂ ಕಂಟಿನ್ಯೂ ಆಗೋದ್ರಿಂದ ಮಿಡಲ್ ಆರ್ಡರ್ ಕೂಡ ಬಲಿಷ್ಠವಾಗೇ ಇದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಈ ವರ್ಷದ ಜರ್ನಿಯಲ್ಲಿ ಪ್ರಮುಖ ಪಾತ್ರ ವಹಿಸುವಂಥ ಐವರು ಪ್ರಮುಖ ಆಲ್​ರೌಂಡರ್​ಗಳು.

ಇದನ್ನೂ ಓದಿ : ರಾಜಸ್ಥಾನ್ ರಾಯಲ್ಸ್   ತಂಡಕ್ಕೆ ಬಿಗ್‌ ಶಾಕ್ -IPLನಿಂದ ಇಂಗ್ಲೆಂಡ್‌ನ ಸ್ಟಾರ್ ಆಲ್‌ರೌಂಡರ್ ಸ್ಯಾಮ್ ಕರನ್  OUT

ನಂಬರ್ 1

ಬ್ಯಾಟ್ & ಬಾಲ್ ಬ್ರಹ್ಮಾಸ್ತ್ರ ಕೃನಾಲ್!

ಟ್ರೋಫಿ ಡಿಫೆಂಡಿಂಗ್ ಟೀಂ ಆಗಿ ಕಣಕ್ಕಿಳಿಯೋ ಆರ್​ಸಿಬಿಗೆ ಒನ್ ಆಫ್ ದಿ ಬೆಸ್ಟ್ ಪ್ಲೇಯರ್ ಕೃನಾಲ್ ಪಾಂಡ್ಯ. ಬ್ಯಾಟ್ ಹಾಗೇ ಬಾಲ್ ಎರಡ್ರಲ್ಲೂ ಇಂಪ್ಯಾಕ್ಟ್ ಮಾಡೋ ಪ್ಲೇಯರ್. ಎಡಗೈ ಸ್ಪಿನ್ನರ್ ಆಗಿರೋ ಕೃನಾಲ್ ಮಧ್ಯಮ ಓವರ್​ಗಳಲ್ಲಿ ರನ್ಸ್ ಕಂಟ್ರೋಲ್ ಮಾಡ್ತಾರೆ. ಕ್ರೂಶಿಯಲ್ ಟೈಮಲ್ಲಿ ವಿಕೆಟ್ಸ್ ತಂದುಕೊಡ್ತಾರೆ. ಌಂಡ್ ಬ್ಯಾಟಿಂಗ್​ನಲ್ಲೂ ಬಿಗ್ ಸ್ಕೋರ್ ಕಲೆಹಾಕೋ ಸ್ಟ್ರೆಂಥ್ ಇದೆ. ಕಳೆದ ವರ್ಷ ಆರ್​ಸಿಬಿ ಕಪ್ ಗೆಲ್ಲುವಲ್ಲಿ ಇವ್ರ ಪಾತ್ರನೂ ದೊಡ್ಡದಿದೆ. ಅದ್ರಲ್ಲೂ ಪಂಜಾಬ್ ವಿರುದ್ಧದ ಫೈನಲ್ ಮ್ಯಾಚಲ್ಲಿ ಇಡೀ ಪಂದ್ಯದ ಗತಿಯನ್ನೇ ಬದಲಿಸಿದ್ರು. ಫಿಂಗರ್ ಸ್ಪಿನ್ ಮೂಲಕ ಅಟ್ಯಾಕಿಂಗ್ ಶುರು ಮಾಡಿದ್ದ ಕೃನಾಲ್ 4 ಓವರ್​ಗಳಲ್ಲಿ ನೀಡಿದ್ದು ಕೇವಲ 17 ರನ್​ಗಳು ಮಾತ್ರ. ಇದರ ಜೊತೆಗೆ ಡೇಂಜರಸ್ ಆಗಿದ್ದ ಪ್ರಭ್ ಸಿಮ್ರಾನ್ ಸಿಂಗ್ ಹಾಗೇ ಜೋಶ್ ಇಂಗ್ಲಿಸ್ ಅವರ ವಿಕೆಟ್ಸ್ ತೆಗೆದಿದ್ರು. ಪ್ಲೇಯರ್ ಆಫ್ ದಿ ಮ್ಯಾಚ್ ರಿವಾರ್ಡ್ ಕೂಡ ಪಡ್ಕೊಂಡ್ರು. ಇನ್ನೊಂದು ವಿಶೇಷ ಅಂದ್ರೆ ಕಳೆದ ಸೀಸನ್​ನಲ್ಲಿ ಆರ್​ಸಿಬಿ ಲೀಗ್ ಹಂತದ 9 ಪಂದ್ಯ ಹಾಗೇ ಕ್ವಾಲಿಫೈಯರ್ 1 ಮತ್ತು ಫೈನಲ್ ಮ್ಯಾಚ್ ಸೇರಿ ಟೋಟಲ್ಲಾಗಿ 11 ಪಂದ್ಯಗಳನ್ನ ಗೆದ್ದಿತ್ತು. ಇದ್ರಲ್ಲಿ 9 ಬೇರೆ ಬೇರೆ ಪ್ಲೇಯರ್ಸ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಗೆದ್ದು ಬೀಗಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ ಆರ್​ಸಿಬಿ ಪರ ಕೃನಾಲ್ ಪಾಂಡ್ಯ ಮೂರು ಸಲ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಮುತ್ತಿಕ್ಕಿದ್ರು. ಸೋ ಇದ್ರಲ್ಲೇ ಗೊತ್ತಾಗುತ್ತೆ ಕೃನಾಲ್ ಪಾಂಡ್ಯ ಪ್ರಸೆನ್ಸ್ ತಂಡಕ್ಕೆ ಎಷ್ಟು ಇಂಪಾರ್ಟೆಂಟ್ ಅನ್ನೋದು.

ನಂಬರ್ 2

ಸ್ಫೋಟಕ ಹಿಟ್ಟರ್ ಟಿಮ್ ಡೇವಿಡ್!

2025ರಲ್ಲಿ ಆರ್​ಸಿಬಿ ಅಭಿಮಾನಿಗಳಿಗೆ ಸಖತ್ ಥ್ರಿಲ್ ನೀಡಿದ್ದ ಆಟಗಾರ ಅಂದ್ರೆ ಅದು ಟಿಮ್ ಡೇವಿಡ್. ಒಂದೇ ಸೀಸನ್​ನಲ್ಲೇ ಈ ಸಿಂಹದ ಗರ್ಜನೆಗೆ ಫ್ಯಾನ್ಸ್ ಫಿದಾ ಆಗೋಗಿದ್ದಾರೆ. ಟಿ-20 ಫಾರ್ಮೆಟ್​ನಲ್ಲಿ ಒನ್ ಆಫ್ ದಿ ಬೆಸ್ಟ್ ಪವರ್ ಹಿಟ್ಟರ್. ಮಧ್ಯಮ-ವೇಗದ ಬೌಲಿಂಗ್‌ ಕೂಡ ಮಾಡಬಹುದು. ಪ್ರೆಶರ್ ಟೈಮಲ್ಲಿ ಇವ್ರ ಬ್ಯಾಟಿಂದ ಬರೋ ಫೋರ್, ಸಿಕ್ಸ್​ಗಳೇ ಇಡೀ ಪಂದ್ಯದ ದಿಕ್ಕು ಬದಲಿಸುತ್ತೆ. ಜಗತ್ತಿನಾದ್ಯಂತ ಟಿ20 ಲೀಗ್‌ಗಳಲ್ಲಿಯೂ ಅವರು ಟಿ20 ಸ್ವರೂಪದಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್​ನಲ್ಲಿದ್ದಾರೆ. ಅತ್ಯಂತ ಡೇಂಜರಸ್ ಫಿನಿಷರ್‌ಗಳಲ್ಲಿ ಒಬ್ಬರು. 2025ರ ಐಪಿಎಲ್​ನಲ್ಲಿ ಆರ್​ಸಿಬಿ ಪರ ಕಣಕ್ಕಿಳಿದಿದ್ದ ಡೇವಿಡ್ ಬೆಂಗಳೂರು ತಂಡ ಫಸ್ಟ್ ಟೈಂ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ರು. ಮಿಡಲ್ ಆರ್ಡರ್ ನಲ್ಲಿ ಸ್ಫೋಟಕ ಇನ್ನಿಂಗ್ಸ್ ಕಟ್ಟಿದ್ರು. 12 ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದ ಡೇವಿಡ್ 185ಪ್ಲಸ್ ಸ್ಟ್ರೈಕ್ ರೇಟ್ ನಲ್ಲಿ 187 ರನ್ಸ್ ಕಲೆ ಹಾಕಿದ್ರು. ಅದರಲ್ಲೂ  16 ಫೋರ್, 14 ಸಿಕ್ಸರ್​ಗಳು ಬಂದಿದ್ವು. ಇದಾದ ಮೇಲೆ ಆಸೀಸ್ ಟಿ-20 ತಂಡದ ಖಾಯಂ ಪ್ಲೇಯರ್ ಆಗಿದ್ದಾರೆ.

ನಂಬರ್ 3

ಡೇಂಜರಸ್ ದಾಂಡಿಗ ರೊಮಾರಿಯೋ ಶೆಫರ್ಡ್!

ವೆಸ್ಟ್‌ ಇಂಡೀಸ್ ತಂಡದ ರೊಮಾರಿಯೊ ಶೆಫರ್ಡ್ ಕೂಡ ಆರ್​ಸಿಬಿಯಲ್ಲಿ ಡೇಂಜರಸ್ ಆಲ್​ರೌಂಡರ್. ಬ್ಯಾಟ್ ಹಾಗೇ ಬಾಲ್ ಎರಡ್ರಲ್ಲೂ ಬಿಗ್ ಇಂಪ್ಯಾಕ್ಟ್ ಮಾಡೋ ಪ್ಲೇಯರ್. ಕಳೆದ ವರ್ಷವೇ ಬೆಂಗಳೂರು ಜರ್ನಿಯಲ್ಲಿ ಇವ್ರ ಕೊಡುಗೆ ದೊಡ್ಡದಿದೆ. ಅದ್ರಲ್ಲೂ ಸಿಎಸ್​ಕೆ ವಿರುದ್ಧ 14 ಬಾಲಲ್ಲೇ ಅರ್ಧಶತಕ ಕಂಪ್ಲೀಟ್ ಮಾಡಿದ್ರು. ಇದು ಐಪಿಎಲ್ ಇತಿಹಾಸದಲ್ಲೇ ಜಾಯಿಂಟ್ ಫಾಸ್ಟೆಸ್ಟ್ ಅರ್ಧಶತಕ ಆಗಿದೆ. ಇನ್ನು ಪಂಜಾಬ್ ವಿರುದ್ಧದ ಫೈನಲ್ ಮ್ಯಾಚಲ್ಲಿ ಶ್ರೇಯಸ್ ಅಯ್ಯರ್​ರನ್ನ 1 ರನ್​ಗೆ ಔಟ್ ಮಾಡಿ ಗೇಮ್ ಟರ್ನ್ ಮಾಡಿದ್ರು. ಌಂಡ್ ಆ ಮ್ಯಾಚಲ್ಲಿ 9 ಬಾಲಲ್ಲೇ 17 ರನ್ ಸಿಡಿಸಿ ಬ್ಯಾಟಿಂಗ್​ನಲ್ಲೂ ಕೊಡುಗೆ ನೀಡಿದ್ರು. ಇನ್ನು ಟಿ20 ವಿಶ್ವಕಪ್​ನಲ್ಲೂ 5 ಪಂದ್ಯಗಳಲ್ಲಿ 6 ವಿಕೆಟ್‌ ಪಡೆದಿದ್ರು. ಇದರಲ್ಲಿ ಹ್ಯಾಟ್ರಿಕ್‌ ವಿಕೆಟ್ಸ್ ಸಹ ಸೇರಿದೆ. ಅಲ್ಲದೆ 80 ರನ್‌ ಸಹ ಬಾರಿಸಿದ್ದಾರೆ.

ನಂಬರ್ 4

ಯಂಗ್ ಡೈನಮೈಟ್ ಜೇಕಬ್ ಬೆಥೆಲ್!

ಜೇಕಬ್ ಬೆಥೆಲ್. ಟೀಂ ಇಂಡಿಯಾ ಫ್ಯಾನ್ಸ್ ಅಂತೂ ಈ ಹೆಸ್ರನ್ನ ಮರೆತಿರಲ್ಲ ಬಿಡಿ. 2026ರ ಟಿ-20 ವಿಶ್ವಕಪ್​ ಸೆಮಿಫೈನಲ್ ಮ್ಯಾಚಲ್ಲಿ ಶತಕ ಬಾರಿಸಿ ಭಾರತಕ್ಕೆ ಸೋಲಿನ ಭಯ ಹುಟ್ಟುವಂತೆ ಪರ್ಫಾಮ್ ಮಾಡಿದ್ದ ಯಂಗ್ ಡೈನಮೇಟ್. 22 ವರ್ಷದ ಬೆಥೆಲ್ ಬ್ಯಾಟ್ ಹಾಗೇ ಬಾಲ್ ಎರಡ್ರಲ್ಲೂ ಇಂಪ್ಯಾಕ್ಟ್ ಮಾಡೋ ಪ್ಲೇಯರ್. ಇಂಗ್ಲೆಂಡ್​ನ ಈ ಯುವ ಆಲ್​ರೌಂಡರ್ ಫಿಯರ್​ಲೆಸ್ ಬ್ಯಾಟಿಂಗ್ ಜೊತೆ ಎಡಗೈ ಸ್ಪಿನ್ನರ್ ಆಗಿಯೂ ಸದ್ದು ಮಾಡಿದ್ದಾರೆ. 2025ರ ಟೂರ್ನಿಯಲ್ಲಿ ಆರ್​ಸಿಬಿ ಪರ ಲಿಮಿಟೆಡ್ ಮ್ಯಾಚ್ ಆಡಿದ್ರೂ ಈ ಸಲ ಬೆಥೆಲ್​ಗೆ ಚಾನ್ಸ್ ಸಿಕ್ರೆ ಖಂಡಿತವಾಗಿಯೂ ಸದ್ದು ಮಾಡ್ತಾರೆ.

ನಂಬರ್ 5

ಸಿಡಿದ್ರೆ ಸಿಡಿಲಮರಿ ವೆಂಕಟೇಶ್ ಅಯ್ಯರ್!

2026ರ ಸೀಸನ್​ಗೆ ಆರ್​ಸಿಬಿಗೆ ಸಿಗೋ ಮತ್ತೊಬ್ಬ ಎಫೆಕ್ಟೀವ್ ಆಲ್​ರೌಂಡರ್ ವೆಂಕಟೇಶ್ ಅಯ್ಯರ್. ಮೀಡಿಯಂ ಪೇಸ್ ಬೌಲರ್ ಜೊತೆಗೆ ಟಾಪ್ ಆರ್ಡರ್ ಬ್ಯಾಟಿಂಗ್​ನಲ್ಲಿ ಬೆಸ್ಟ್ ಪ್ಲೇಯರ್ ಆಗ್ತಾರೆ. ತಮ್ಮ ಅಗ್ರೆಸ್ಸಿವ್ ಬ್ಯಾಟಿಂಗ್ ಸ್ಟೈಲಲ್ಲಿ ಪವರ್​ಹಿಟ್​ಗಳನ್ನ ಬಾರಿಸೋ ಸ್ಟ್ರೆಂಥ್ ಇದೆ.. ಬೌಲಿಂಗ್​ನಲ್ಲೂ ಪಾಟ್ನರ್​ಶಿಪ್​ಗಳನ್ನ ಬ್ರೇಕ್ ಮಾಡೋದ್ರಿಂದ ವೆಂಕಿ ಕೂಡ ಪ್ರಮುಖ ಆಲ್​ರೌಂಡರ್​. ಸೋ ಇದು ಆರ್​ಸಿಬಿಯ ಬೆಸ್ಟ್ ಆಲ್​ರೌಂಡರ್ಸ್.. ಬ್ಯಾಟ್ ಹಾಗೇ ಬಾಲ್ ಎರಡ್ರಲ್ಲೂ ಇಂಪ್ಯಾಕ್ಟ್ ಮಾಡೋ ಪ್ಲೇಯರ್ಸ್.

Shantha Kumari

Leave a Reply

Your email address will not be published. Required fields are marked *