ಕುಳಿತಲ್ಲೇ ತಿಳಿದುಕೊಳ್ಳಿ ಎಲ್ಲಿದೆ “ನಿಮ್ ಬಸ್” – ಬಿಎಂಟಿಸಿಯ ಹೊಸ ಆ್ಯಪ್ ರೆಡಿ

ಕುಳಿತಲ್ಲೇ ತಿಳಿದುಕೊಳ್ಳಿ ಎಲ್ಲಿದೆ “ನಿಮ್ ಬಸ್” – ಬಿಎಂಟಿಸಿಯ ಹೊಸ ಆ್ಯಪ್ ರೆಡಿ

ಬೆಂಗಳೂರು: ಇನ್ನು ಮುಂದೆ ಬಿಎಂಟಿಸಿ ಬಸ್ ಗಾಗಿ ಗಂಟೆಗಟ್ಟಲೆ ಕಾದು ಕುಳಿತುಕೊಳ್ಳಬೇಕೆಂದಿಲ್ಲ. ನಾವಿರುವ ಸ್ಥಳದಿಂದಲೇ ಬಸ್ ಎಲ್ಲಿದೆ, ಯಾವ ಸಮಯಕ್ಕೆ ಬಸ್ ನಿಲ್ದಾಣಕ್ಕೆ ತಲುಪಲಿದೆ ಎಂಬುದನ್ನು ಸುಲಭವಾಗಿ ತಿಳಿಯಬಹುದು. ಇದಕ್ಕಾಗಿ ಬಿಎಂಟಿಸಿ ಹೊಸ ಅಪ್ಲಿಕೇಶನ್ ಆರಂಭಿಸಿದ್ದು, ಗಣರಾಜ್ಯೋತ್ಸವ ದಿನದಿಂದಲೇ ಈ ಸೇವೆ ಪ್ರಯಾಣಿಕರಿಗೆ ಲಭ್ಯವಾಗಲಿದೆ.

ಇದನ್ನೂ ಓದಿ: ಸಿದ್ದು ಸರ್ಕಾರದಲ್ಲಿ 35 ಸಾವಿರ ಕೋಟಿ ಅವ್ಯವಹಾರ – ರಾಜ್ಯ ರಾಜಕೀಯದಲ್ಲಿ ಹೊಸ ಬಾಂಬ್..!

ಬಿಎಂಟಿಸಿ ಬಸ್ ಎಲ್ಲಿದೆ ಎಂದು ತಿಳಿಸುವ “Nim bus” ಅಪ್ಲಿಕೇಶನ್ ಜನವರಿ 26 ರಂದು ಪ್ರಯಾಣಿಕರಿಗೆ ಲಭ್ಯವಾಗಲಿದೆ. “Nim bus” ಅಪ್ಲಿಕೇಶನ್ ಮೊಬೈಲ್ ನಲ್ಲಿ ಇನ್ ಸ್ಟಾಲ್ ಮಾಡಿಕೊಂಡು ಬಳಕೆ ಮಾಡಬಹುದಾಗಿದೆ. ಈ ಅಪ್ಲಿಕೇಶನ್ ಬಸ್‌ಗಳನ್ನು ಟ್ರ್ಯಾಕ್ ಮಾಡಲು ಸಹಾಯ ಮಾಡುತ್ತದೆ. ಬಸ್  ಯಾವ ಸ್ಥಳದಲ್ಲಿ ಬರುತ್ತಿದೆ. ಯಾವ ಸಮಯಕ್ಕೆ ನಾವಿರುವ ಪ್ರದೇಶಕ್ಕೆ ತಲುಪಲಿದೆ ಎಂಬುದನ್ನು ಪ್ರಯಾಣಿಕರು ತಿಳಿದುಕೊಳ್ಳಬಹುದು. ಪ್ರಯಾಣವನ್ನು ತೊಂದರೆಯಿಂದ ಮುಕ್ತವಾಗಿಸಲು ಇತರ ಆಯ್ಕೆಗಳ ಜೊತೆಗೆ ಬಸ್ ದರದ ವಿವರಗಳು, ಮಾರ್ಗಗಳು ಮತ್ತು ವೇಳಾಪಟ್ಟಿಗಳ ಮಾಹಿತಿಯನ್ನು ಸಹ ಈ ಆ್ಯಪ್ ನಲ್ಲಿ ತಿಳಿದುಕೊಳ್ಳಬಹುದು ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಈ ಅಪ್ಲಿಕೇಶನ್ ಡಿಸೆಂಬರ್ 23 ರಂದು ಬಿಡುಗಡೆ ಮಾಡಲು ಬಿಎಂಟಿಸಿ ನಿರ್ಧರಿಸಿತ್ತು. ಆದರೆ ಆ್ಯಪ್ ನಲ್ಲಿ ತಾಂತ್ರಿಕ ದೋಷಗಳು ಕಂಡುಬಂದಿದ್ದರಿಂದ  ಸರಿಪಡಿಸಲು ಮತ್ತು ಅದರ ನಿಖರತೆಯನ್ನು ಸುಧಾರಿಸಲು ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿತ್ತು. ಇದೀಗ ಈ ಆ್ಯಪ್ ಜನವರಿ 26ಕ್ಕೆ ಪ್ರಯಾಣಿಕರಿಗೆ ಲಭ್ಯವಾಗಲಿದೆ. ಆ್ಯಪ್ ನ ಸಾಫ್ಟ್ ಲಾಂಚ್‌ನಲ್ಲಿ ಅಪ್ಲಿಕೇಶನ್ ಅನ್ನು ಪರೀಕ್ಷಿಸಲು,  ಬಳಕೆದಾರರು ನೀಡಿದ ಪ್ರತಿಕ್ರಿಯೆಯನ್ನು ಆಧರಿಸಿ ಆ್ಯಪ್ ಅನ್ನು ಉತ್ತಮಗೊಳಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಆ್ಯಪ್ ಅನ್ನು ಪ್ರಾರಂಭಿಸಲು ಬಿಎಂಟಿಸಿ ಈ ಹಿಂದೆಯೂ ಎರಡು ಬಾರಿ ಪ್ರಯತ್ನಿಸಿತ್ತು. ಆದರೆ ಹಲವು ತಾಂತ್ರಿಕ ದೋಷಗಳು ಕಂಡುಬಂದಿದ್ದರಿಂದ ಆ ಪ್ರಯತ್ನಗಳು ವಿಫಲವಾಗಿದ್ದವು. ಇದೀಗ ಕಾಲ ಕೂಡಿಬಂದಿದ್ದು, ಜನವರಿ 26ರಂದು ಈ ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

suddiyaana