ಹಬ್ಬದ ದಿನವೇ ಗುಡ್‌ನ್ಯೂಸ್‌ ಕೊಟ್ಟ ದಿನೇಶ್‌ ಕಾರ್ತಿಕ್!‌ – ಮನೆಗೆ ಮಹಾಲಕ್ಷ್ಮೀ ಬರಮಾಡಿಕೊಂಡ DK ದಂಪತಿ!

ಹಬ್ಬದ ದಿನವೇ ಗುಡ್‌ನ್ಯೂಸ್‌ ಕೊಟ್ಟ ದಿನೇಶ್‌ ಕಾರ್ತಿಕ್!‌ – ಮನೆಗೆ ಮಹಾಲಕ್ಷ್ಮೀ ಬರಮಾಡಿಕೊಂಡ DK ದಂಪತಿ!

ಆರ್‌ಸಿಬಿ ಟೀಂನ ಬ್ಯಾಟಿಂಗ್‌ ಕೋಚ್‌ ದಿನೇಶ್‌ ಕಾರ್ತಿಕ್‌ ಗುಡ್‌ನ್ಯೂಸ್‌ ಕೊಟ್ಟಿದ್ದಾರೆ. ದಿನೇಶ್‌ ಕಾರ್ತಿಕ್‌ ಮನೆಗೆ ಪುಟ್ಟ ಲಕ್ಷ್ಮೀ ಅಗಮನವಾಗಿದೆ. ಈ ಖುಷಿಯ ವಿಚಾರವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಕೆಡಿ ಸಿನಿಮಾ ಹಾಡಿನ ವಿವಾದ – ಗಾಯಕಿ ಐಶ್ವರ್ಯಾ ರಂಗರಾಜನ್ ಇನ್ಸ್ಟಾಗ್ರಾಂ ಅಕೌಂಟ್‌ ಮಾಯ!

ದಿನೇಶ್‌ ಕಾರ್ತಿಕ್‌ ಹಾಗೂ  ದೀಪಿಕಾ ಪಳ್ಳಿಕಲ್ ದಂಪತಿ ಮೂರನೇ ಮಗುವನ್ನ ಬರಮಾಡಿಕೊಂಡಿದ್ದಾರೆ. ದೀಪಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಚಾರವನ್ನು ಸ್ವತಃ ದಿನೇಶ್ ಕಾರ್ತಿಕ್ ಅವರೇ ತಮ್ಮ ಇನ್ಸ್​ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದರ ಜೊತೆಗೆ ಮಗಳ ಹೆಸರನ್ನು ರಿವೀಲ್‌ ಮಾಡಿದ್ದಾರೆ. ಪುಟ್ಟ ಕಂದಮ್ಮನಿಗೆ ರಹಾ ಎಂದು ಹೆಸರಿಟ್ಟಿರುವುದಾಗಿ ತಿಳಿಸಿದ್ದಾರೆ.

ಅಂದ್ಹಾಗೆ ದಿನೇಶ್ ಕಾರ್ತಿಕ್ ಅವರ ಎರಡನೇ ಮದುವೆ. ಮೊದಲ ಮಡದಿ ದಿನೇಶ್ ಕಾರ್ತಿಕ್​​ಗೆ ವಿಚ್ಛೇದನ ನೀಡಿ, ಟೀಂ ಇಂಡಿಯಾದ ಮಾಜಿ ಆಟಗಾರ ಮುರುಳಿ ವಿಜಯ್ ಅವರನ್ನು ಮದುವೆಯಾಗಿದ್ದರು. ಅದಾದ ಬಳಿಕ ದಿನೇಶ್ ಕಾರ್ತಿಕ್ ಭಾರತದ ಹೆಸರಾಂತ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಳ್ಳಿಕಲ್ ಅವರನ್ನು ಪ್ರೀತಿಸಿ 2013 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ನಂತರ ಈ ಜೋಡಿ 2015 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿತ್ತು. ಆಗಸ್ಟ್ 18 ರಂದು ಕ್ರಿಶ್ಚಿಯನ್ ವಿಧಿಗಳ ಪ್ರಕಾರ ಮತ್ತು ಆಗಸ್ಟ್ 20 ರಂದು ಹಿಂದೂ ಸಂಪ್ರದಾಯಗಳ ಪ್ರಕಾರ ಮದುವೆ ನೆರವೇರಿತ್ತು. 2021 ರಲ್ಲಿ, ದಂಪತಿಗೆ ಜಿಯಾನ್ ಮತ್ತು ಕಬೀರ್ ಎಂಬ ಅವಳಿ ಗಂಡು ಮಕ್ಕಳು ಜನಿಸಿದ್ದರು. ಈಗ, ಮಗಳ ಆಗಮನವು ಕುಟುಂಬದ ಸಂತೋಷವನ್ನು ಇಮ್ಮಡಿಗೊಳಿಸಿದೆ.

 ದಿನೇಶ್ ಕಾರ್ತಿಕ್ ಹಾಗೂ ದೀಪಿಕಾ ಪಲ್ಲಿಕಲ್ ಜೋಡಿಯೂ ಆಗಸ್ಟ್ 25, 2015ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಜೋಡಿ ಹಿಂದು ಹಾಗೂ ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ಮದುವೆಯಾಗಿದ್ದರು. ಇದಾಗಿ ಆರು ವರ್ಷಗಳ ಬಳಿಕ ಅಂದರೆ 2021ರಲ್ಲಿ ದೀಪಿಕಾ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಇದೀಗ ಮೂರನೇ ಮಗುವನ್ನು ಮನೆಗೆ ಬರಮಾಡಿಕೊಂಡಿದ್ದಾರೆ.

Shwetha M