ಕರಾವಳಿ ರೈಲು ಪ್ರಯಾಣಿಕರೇ ನಿಮಗೆ ಶಾಕಿಂಗ್ ನ್ಯೂಸ್ – 35 ದಿನ ಕೆಲ ರೈಲು ರದ್ದು, ಸಂಚಾರದಲ್ಲಿ ಬದಲಾವಣೆ

ಕರಾವಳಿ ರೈಲು ಪ್ರಯಾಣಿಕರು ಈ ಸುದ್ದಿಯನ್ನು ಓದಲೇಬೇಕು. ಯಾಕೆಂದರೆ, ಕಾಮಗಾರಿಗಳ ಹಿನ್ನಲೆಯಲ್ಲಿ ಸುಬ್ರಹ್ಮಣ್ಯ ರೋಡ್-ಮಂಗಳೂರು ಪ್ಯಾಸೆಂಜರ್ ರೈಲುಗಳು ಮಾರ್ಚ್ 23-ಏಪ್ರಿಲ್ 14 ಹಾಗೂ ಜೂನ್ 10-21 ರವರೆಗೆ ಒಟ್ಟು 35 ದಿನಗಳ ಕಾಲ ರದ್ದುಪಡಿಸಲಾಗಿದೆ.
ಇದನ್ನೂ ಓದಿ:LPG ಗ್ಯಾಸ್ ವಿತರಣೆಗೆ ರಾಜ್ಯ ಸರ್ಕಾರದಿಂದ ಹೊಸ ಗೈಡ್ಲೈನ್ಸ್! – ಯಾರೆಲ್ಲಾ ಬುಕ್ ಮಾಡಬಹುದು?
ದಕ್ಷಿಣ ಪಶ್ಚಿಮ ರೈಲ್ವೆ ವ್ಯಾಪ್ತಿಯಲ್ಲಿ ನಡೆಯಲಿರುವ ಕಾಮಗಾರಿಗಳ ಹಿನ್ನೆಲೆಯಲ್ಲಿ, ಸುಬ್ರಹ್ಮಣ್ಯ ರೋಡ್ – ಮಂಗಳೂರು ಪ್ಯಾಸೆಂಜರ್ ರೈಲು ರದ್ದು ಮಾಡಲಾಗಿದೆ. ಅಲ್ಲದೇ, ಕೆಲ ಪ್ರಯಾಣಿಕ ರೈಲುಗಳ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆಗಳನ್ನು ಮಾಡಲಾಗಿದೆ. ರೈಲು ಸಂಖ್ಯೆ 56629 ಮಂಗಳೂರು – ಸುಬ್ರಹ್ಮಣ್ಯ ರೋಡ್ ಪ್ಯಾಸೆಂಜರ್ ಮತ್ತು ರೈಲು ಸಂಖ್ಯೆ 56630 ಸುಬ್ರಹ್ಮಣ್ಯ ರೋಡ್ – ಮಂಗಳೂರು ಪ್ಯಾಸೆಂಜರ್ ರೈಲುಗಳನ್ನು ಮಾರ್ಚ್ 23 ರಿಂದ ಏಪ್ರಿಲ್ 14 ರವರೆಗೆ ಹಾಗೂ ಜೂನ್ 10 ರಿಂದ ಜೂನ್ 21 ರವರೆಗೆ ಒಟ್ಟು 35 ದಿನಗಳ ಕಾಲ ರದ್ದುಪಡಿಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಇನ್ನು ಕೆಲವು ರೈಲುಗಳನ್ನು ನಿರ್ದಿಷ್ಟ ದಿನಗಳಲ್ಲಿ ಮಾರ್ಗ ಮಧ್ಯೆ ನಿಯಂತ್ರಿಸಲಾಗುತ್ತಿದೆ.
ರೈಲು ಸಂಖ್ಯೆ 16515 ಯಶವಂತಪುರ – ಕಾರವಾರ ಎಕ್ಸ್ಪ್ರೆಸ್, ರೈಲು ಸಂಖ್ಯೆ 16575 ಯಶವಂತಪುರ – ಮಂಗಳೂರು ಎಕ್ಸ್ಪ್ರೆಸ್ ಹಾಗೂ ರೈಲು ಸಂಖ್ಯೆ 16539 ಯಶವಂತಪುರ – ಮಂಗಳೂರು ಎಕ್ಸ್ಪ್ರೆಸ್ ರೈಲುಗಳು ಏಪ್ರಿಲ್ ತಿಂಗಳಲ್ಲಿ ನಿಗದಿತ ದಿನಗಳಲ್ಲಿ ಸಂಚರಿಸುವ ವೇಳೆ ಸುಮಾರು 20 ನಿಮಿಷಗಳಷ್ಟು ವಿಳಂಬವಾಗಲಿದೆ. ಅದೇ ರೀತಿ ರೈಲು ಸಂಖ್ಯೆ 56229 ಮಂಗಳೂರು-ಸುಬ್ರಹ್ಮಣ್ಯ ರೋಡ್ ಪ್ಯಾಸೆಂಜರ್ ರೈಲು ಏಪ್ರಿಲ್ 21 ರಿಂದ ಜೂನ್ 9 ರವರೆಗೆ 50 ದಿನಗಳ ಕಾಲ ಸುಮಾರು 55 ನಿಮಿಷಗಳ ವಿಳಂಬದೊಂದಿಗೆ ಸಂಚರಿಸಲಿದೆ. ಹಾಗೆಯೇ ರೈಲು ಸಂಖ್ಯೆ 56630 ಸುಬ್ರಹ್ಮಣ್ಯ ರೋಡ್ – ಮಂಗಳೂರು ಪ್ಯಾಸೆಂಜರ್ ರೈಲು ಏಪ್ರಿಲ್ 21 ರಿಂದ ಜೂನ್ 9 ರವರೆಗೆ ಆಯ್ದ 22 ದಿನಗಳಲ್ಲಿ ಸುಮಾರು 15 ನಿಮಿಷ ತಡವಾಗಿ ಸಂಚರಿಸುವಂತೆ ಮರುನಿಗದಿ ಮಾಡಲಾಗಿದೆ. ಸರಕು ರೈಲುಗಳ ಸಂಚಾರಕ್ಕೆ ಹೆಚ್ಚಿನ ಅಡ್ಡಿಗಳು ಆಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ರೈಲ್ವೇ ಇಲಾಖೆ ತಿಳಿಸಿದೆ.

ನೋಡಿರಿ

