ಧೂಳೆಬ್ಬಿಸಿದ ಧುರಂಧರ್-2 – ಯಶ್ ಹಿಂದೆ ಸರಿದಿದ್ದೇ ಒಳ್ಳೆದಾಯ್ತಾ?
4 ಗಂಟೆಯಲ್ಲೂ ಬಡೇ ಸಾಬ್ ನಾಪತ್ತೆ!

ಧೂಳೆಬ್ಬಿಸಿದ ಧುರಂಧರ್-2  – ಯಶ್ ಹಿಂದೆ ಸರಿದಿದ್ದೇ ಒಳ್ಳೆದಾಯ್ತಾ?4 ಗಂಟೆಯಲ್ಲೂ ಬಡೇ ಸಾಬ್ ನಾಪತ್ತೆ!

ಧುರಂಧರ್ ಓನ್ ನೋಡಿದವರಿಗೆ ಧುರಂಧರ್ 2 ಬಗ್ಗೆ ಭಾರೀ ನಿರೀಕ್ಷೆ ಇತ್ತು. ಯುಗಾದಿಯಲ್ಲಿ ಭರ್ಜರಿ ಹಬ್ಬದೂಟನೇ ಸಿಕ್ಕಿದೆ ಅಂತ ಹೇಳಬಹುದು.  1300 ಕೋಟಿಗೂ ಹೆಚ್ಚು ಗಳಿಕೆ ಮಾಡಿದ ಧುರಂಧರ್​ನ ಸೀಕ್ವೆಲ್ ಆಗಿ ಬಂದ ಧುರಂಧರ್ 2 ಬಾಕ್ಸ್‌ ಆಫೀಸ್‌ನಲ್ಲಿ ಕೊಳ್ಳೆ ಹೊಡೆಯುವುದು ಪಕ್ಕಾ.

ನೀವು ನೋಡಿದ ಹಾಗೇ ಧುರಂಧರ್ ಸಿನಿಮಾದಲ್ಲಿ ಲೆಹಾರಿಯ ರಾಜಕೀಯ, ಅಂಡರ್​​ವರ್ಲ್ಡ್ ಗೇಮ್ಸ್, ಟೆರರಿಸಂ ಸೇರಿದಂತೆ ಹಲವಾರು ವಿಚಾರಗಳ ಮೇಲೆ ಬೆಳಕು ಚೆಲ್ಲಿತ್ತು. ಈಗ ಧುರಂಧರ್ 2ನಲ್ಲಿ ಅದು ಇನ್ನಷ್ಟು ಡೀಪ್ ಆಗಿ ಹೋಗುತ್ತದೆ, ಪ್ರೇಕ್ಷಕನಿಗೆ ಮತ್ತಷ್ಟು ಗ್ರೌಂಡ್ ಲೆವೆಲ್‌ನಲ್ಲಿ ಕಥೆ ತೆರೆದುಕೊಳ್ಳುತ್ತಾ ಹೋಗುತ್ತೆ.  ರೆಹಮಾನ್ ಡಕಾಯಿತ್​ನ ಅಂತ್ಯ ಸಂಸ್ಕಾರದೊಂದಿಗೆ ಶುರುವಾಗುವ ಧುರಂಧರ್ 2 ಸಿನಿಮಾ, ಲೆಹಾರಿಯ ಗದ್ದುಗೆ ಯಾರ ಪಾಲಿಗೆ, ಪವರ್ ಪಾಲಿಟಿಕ್ ಹೇಗೆ ಕೆಲಸ ಮಾಡುತ್ತೆ  ಅನ್ನೋ ಸಾಕಷ್ಟು ವಿಚಾರಗಳನ್ನ ಎಳೆಎಳೆಯಾಗಿ ತೋರಿಸಲಾಗಿ. ನಿಮ್ಗೆ ಫಸ್ಟ್ ಆಫ್‌  ಸ್ವಲ್ಪ ಪ್ಲೇನ್ ಆಗಿದೆ ಅಂತನಿಸಿದರೂ ಚಾಪ್ಟರ್​​ಗಳು ತೆರೆದುಕೊಳ್ಳುತ್ತಾ ಹೋದಂತೆ ಎಲ್ಲವೂ ಎಷ್ಟು ಕನೆಕ್ಟೆಡ್ ಹಾಗೂ ಲಿಂಕ್ ಆಗಿವೆ ಅನ್ನೋದು ಗೊತ್ತಾಗುತ್ತೆ.  ಧುರಂಧರ್ 2 ನಲ್ಲಿ ಕಥೆಯನ್ನು ಅಷ್ಟೊಂದು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ ಡೈರೆಕ್ಟರ್..

ಇದನ್ನೂ ಓದಿ: ವಿಶ್ವದಾದ್ಯಂತ ಧುರಂಧರ್ 2 ಅಬ್ಬರ! – ಅಬ್ಬಬ್ಬಾ.. ಪ್ರೀಮಿಯರ್‌ ಶೋ​ನಿಂದ ಗಳಿಸಿದ್ದು ಇಷ್ಟೊಂದಾ?

ಇನ್ನೂ ಉಜೈರ್ ಬಲೂಚ್​​ನನ್ನು ಬಳಸಿಕೊಂಡು ಹಂಸ ಯಾವ ರೀತಿ ಕೆಲಸ ಮಾಡ್ತಾನೆ, ಯಾರ್ಯಾರನ್ನು ಹೇಗೆ ಎಲಿಮಿನೇಟ್ ಮಾಡುತ್ತಾನೆ ಎನ್ನುವುದು ಥ್ರಿಲ್ಲಿಂಗ್ ಆಗಿ ತೋರಿಸಲಾಗಿದೆ. ಭಾರತೀಯನಾಗಿ ಸಿನಿಮಾ ನೋಡೋ ಯಾರಿಗೇ ಆದರೂ ರೋಮಾಂಚಕ ಅನ್ಸುತ್ತೆ..  ಮೊದಲಾರ್ಧ ಒಂದು ರೀತಿಯಾದರೆ ಸೆಕೆಂಡ್ ಹಾಫ್​ನಲ್ಲಿ ಹಂಸನ ಅಧಿಕಾರ, ಪವರ್ ಪ್ಲೇಯನ್ನು ಡೈರೆಕ್ಟರ್ ಸೂಪರ್ ಆಗಿ ಪ್ರೇಕ್ಷಕರಿಗೆ ಕಟ್ಟಿಕೊಟ್ಟಿದ್ದಾರೆ. ರಣವೀರ್ ಸಿಂಗ್ ಅವರಿಗೆ ಧುರಂಧರ್​ಗಿಂತಲೂ ಹೆಚ್ಚಿನ ಸ್ಕ್ರೀನ್ ಸ್ಪೇಸ್ ಇಲ್ಲಿ ಕೊಡಲಾಗಿದ್ದು ಎಂದಿನಂತೆ ನಟ ಪ್ರೇಕ್ಷಕರ ನಿರೀಕ್ಷೆ ತಲುಪುವಲ್ಲಿ ಸಕ್ಸಸ್ ಆಗಿದ್ದಾರೆ.

ಧುರಂಧರ್ 2 , 3 ಗಂಟೆ 49 ನಿಮಿಷ  ಇದೆ. ಆದ್ರೆ ಇಷ್ಟು ದೊಡ್ಡ ಸಿನಿಮಾದಲ್ಲಿ ಎಲ್ಲೂ ಕೂಡ ಒಂದೇ ಒಂದೂ ಬೋರಿಂಗ್ ಸೀನ್ ಇಲ್ಲ. ಬ್ಲಾಕ್‌ ಗ್ರೌಂಡ್ ಸ್ಕೋರ್‌ ಬ್ಲಾಸ್ಟಿಂಗ್ ಆಗಿದೆ. ಸ್ಕ್ರೀನ್‌ಪ್ಲೇ ಸೂಪರ್ ಡೂರ್ ಆಗಿದೆ. ಎಲ್ಲಾ ಆಯಾಮದಿಂದಲೂ ಇದು ಮಾಸ್ಟರ್‌ ಪೀಸ್ ಅಂತಾನೇ ಹೇಳಬಹುದು.  ಸಿನಿಮಾದಲ್ಲಿ ಪ್ರತಿಯೊಂದು ಡೀಟೇಲಿಂಗ್ ಚೆನ್ನಾಗಿದೆ. ರಣ್‌ವೀರ್‌ ಸಿಂಗ್ ನಟನೆ ಕಿಚ್ಚು ಹಚ್ಚಿಸುವಂತಿದ್ದು, ಇಡೀ ಚಿತ್ರವನ್ನ ತಮ್ಮ ಹೆಗಲ ಮೇಲೆ ಹೊತ್ತು ತೆಗೆದುಕೊಂಡು ಹೋಗಿದ್ದಾರೆ.

4 ಗಂಟೆಯಲ್ಲೂ ಬಡೇ ಸಾಬ್ ನಾಪತ್ತೆ! 

ಇನ್ನೂ  ಧುರಂಧರ್ 2’ ಮಾಸ್‌ಗಾಗಿ ಮಾಡಿದ್ದರೂ ಕೂಡ ಎಮೋಷನಲ್ ಆಗಿದೆ. ಸಿನಿಮಾದಲ್ಲಿ ಆಕ್ಷನ್, ಡ್ರಾಮಾ ಮತ್ತು ಶಿಳ್ಳೆ ಹೊಡೆಯುವ ಮೊಮೆಂಟ್ಸ್ ಹೆಚ್ಚಾಗಿಯೇ ಇವೆ. ಆದಿತ್ಯ ಧರ್‌ ಅವರ ನಿರ್ದೇಶನ, ಕಥೆ ಹೇಳುವ ಶೈಲಿಗೆ ಚಪ್ಪಾಳೆ ತಟ್ಟಲೇಬೇಕು. ಪ್ರತಿಯೊಂದಕ್ಕೂ ಡೀಟೇಲಿಂಗ್ ಮಾಡಲಾಗಿದೆ. ಚಿತ್ರದ ಜೀವಾಳವೇ ಆಕ್ಷನ್ ಅಂತನೇ ಹೇಳಬಹದು. ಆದ್ರೆ ಧುರಂಧರ್ ನಲ್ಲಿ ಬಂದ ಬಡೇ ಸಾಬ್ ಮೇಲೆ  ಧುರಂಧರ್ 2ನಲ್ಲಿ  ಹೆಚ್ಚು ನಿರೀಕ್ಷೆ ಇತ್ತು. ಆದ್ರೆ ಇಲ್ಲಿ ವಯಸ್ಸಾಗಿ, ಹಾಸಿಗೆ ಹಿಡಿದ ಹಾಗೆ ತೋರಿಸಲಾಗಿದೆ. ಇವತ್ತು ಯಶ್ ಅಭಿನಯದ ಟಾಕ್ಸಿಕ್ ರಿಲೀಸ್ ಆಗಬೇಕಿತ್ತು. ಇದು ಕೂಡ ಪ್ಲಾನ್ ಇಂಡಿಯಾ ಮೂವಿ ಆಗಿತ್ತು. ಆದ್ರೆ ಇರಾನ್  ಇಸ್ರೇಲ್ ಯುದ್ಧದಿಂದ ಟಾಕ್ಸಿಕ್ ರಿಲೀಸ್ ಡೇಟ್ ಮುಂದಕ್ಕೆ ಹಾಕಲಾಗಿದೆ. ಇದು ಒಳ್ಳೆಯ ಕೆಲಸನೇ ಅಂತ ಹೇಳಬಹುದು. ಎರಡು ಸಿನಿಮಾ ಕ್ಯಾಶ್ ಆಗೋದ್ದಕ್ಕಿಂತ, ಒಂದು ಹಿಂದೆ ಸರಿದಿದ್ದು ಒಳ್ಳೆಯದ್ದು ಅಂತಾನೇ ಹೇಳಬಹುದು..

ಒಟ್ಟಾರೆ ‘ಧುರಂಧರ್‌: ದಿ ರಿವೆಂಜ್‌’ ಚಿತ್ರಕ್ಕೆ ಎಲ್ಲೆಡೆ ಪಾಸಿಟಿವ್ ಪ್ರತಿಕ್ರಿಯೆ ಲಭ್ಯವಾಗಿದೆ. ರಣ್ವೀರ್ ಸಿಂಗ್, ಅರ್ಜುನ್ ರಾಂಪಾಲ್, ಸಂಜಯ್ ದತ್, ಮಾಧವನ್, ಸಾರಾ ಅರ್ಜುನ್, ರಾಕೇಶ್ ಬೇಡಿ ಅಭಿನಯವನ್ನ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಆದಿತ್ಯ ಧರ್‌ ಅವರ ನಿರ್ದೇಶನ, ಚಿತ್ರಕಥೆ ಹೇಳಿರುವ ಶೈಲಿ ಎಲ್ಲರಿಗೂ ಇಷ್ಟವಾಗಿದೆ.

Kishor KV