ಆನೆಗಳ ಕಾಟಕ್ಕೆ ಜೇನುನೊಣಗಳೇ ಅಸ್ತ್ರ!  –  ಏನಿದು ಸರ್ಕಾರದ ಹೊಸ ಪ್ಲ್ಯಾನ್?

ಆನೆಗಳ ಕಾಟಕ್ಕೆ ಜೇನುನೊಣಗಳೇ ಅಸ್ತ್ರ!  –  ಏನಿದು ಸರ್ಕಾರದ ಹೊಸ ಪ್ಲ್ಯಾನ್?

ಭೋಪಾಲ: ಕರ್ನಾಟಕವೂ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಕಾಡಂಚಿನಲ್ಲಿರುವ ಕೃಷಿ ಭೂಮಿ ಪ್ರದೇಶಗಳಿಗೆ ಕಾಡು ಪ್ರಾಣಿಗಳ ಕಾಟ ತಲೆನೋವಾಗಿ ಪರಿಣಮಿಸಿದೆ. ಅದನ್ನು ಪರಿಹರಿಸುವುದು ಹೇಗೆ ಎಂದು ಸರ್ಕಾರಗಳು, ರೈತರು ತಲೆಕೆಡಿಸಿಕೊಂಡಿದ್ದಾರೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮಧ್ಯಪ್ರದೇಶ ಸರ್ಕಾರ ಹೊಸ ಪ್ರಯತ್ನಕ್ಕೆ ಮುಂದಾಗಿದ್ದು, “ಹನಿ ಮಿಷನ್” ಯೋಜನೆಯನ್ನು ರೂಪಿಸಿದೆ.

ಇದನ್ನೂ ಓದಿ: ಫಾರ್ಮ್ ಹೌಸ್​ನಲ್ಲಿ ವಿದೇಶಿ ಹಕ್ಕಿಗಳು – ನಟ ದರ್ಶನ್ ವಿರುದ್ಧ ಕೇಸ್ ದಾಖಲು..!

ಆನೆಗಳು ಸ್ವಭಾವತಃ ಜೇನುನೊಣಗಳಿಗೆ ಹೆದರುತ್ತವೆ. ಅಲ್ಲದೆ ಜೇನು ನೊಣಗಳು ಇರುವ ಪ್ರದೇಶಕ್ಕೆ ಕಾಲಿಡಲು ಗಜ ಪಡೆ ಹಿಂಜರಿಯುತ್ತದೆ. ಆನೆಯ ಈ ಸ್ವಭಾವವನ್ನೇ ಉಪಯೋಗಿಸಿಕೊಂಡಿರುವ ಮಧ್ಯಪ್ರದೇಶ ಸರ್ಕಾರ “ಹನಿ ಮಿಷನ್” ಎನ್ನುವ ಯೋಜನೆಯನ್ನು ರೂಪಿಸಿದೆ.

ಮೊರೆನಾ ಜಿಲ್ಲೆಯಲ್ಲಿ ಈ ಯೋಜನೆಯ ಉದ್ಘಾಟನೆ ಭಾಗವಾಗಿ 10 ಫಲಾನುಭವಿಗಳಿಗೆ 100 ಜೇನು ಸಾಕಾಣಿಕೆ ಪೆಟ್ಟಿಗೆಗಳನ್ನು ನೀಡಲಾಗಿದೆ.  ಅಲ್ಲದೇ ರಾಜ್ಯದ ಎಲ್ಲ ರೈತರಿಗೂ ತಮ್ಮ ತೋಟಗಳಲ್ಲಿ ಇತರೆ ಬೆಳೆಗಳ ನಡುವೆ ಜೇನು ಸಾಕಾಣಿಕೆ ಮಾಡುವಂತೆ ಸೂಚನೆ ನೀಡಿದೆ.

ನೆರೆ ರಾಜ್ಯ ಛತ್ತೀಸ್‌ಗಢದೊಂದಿಗೆ ಮಧ್ಯಪ್ರದೇಶ ಗಡಿ ಹಂಚಿಕೊಂಡಿದೆ.  ಗಡಿ ಭಾಗದಲ್ಲಿ ಬೆಳೆಯಲಾಗುವ ಮಹುವಾ ಹೂಗಳ ಬೆಳೆಗಳನ್ನು ಅರಸಿ, ಆನೆಗಳು ಮಧ್ಯಪ್ರದೇಶ ಪ್ರವೇಶಿಸುತ್ತಿವೆ. ಹೀಗಾಗಿ, ಅಲ್ಲಿ ಕಾಡಾನೆಗಳ ಸಮಸ್ಯೆ ಹೆಚ್ಚಾಗಿದೆ. ಆನೆಗಳಿಂದಾಗುತ್ತಿರುವ ಬೆಳೆಹಾನಿಯನ್ನು ರಕ್ಷಿಸುವುದರ ಜತೆಗೆ ಅವುಗಳಿಗೆ ತೊಂದರೆ ನೀಡದಂತೆ ಹಿಮ್ಮೆಟ್ಟಿಸಲು ಈ ಯೋಜನೆಯನ್ನು ಸರ್ಕಾರ ರೂಪಿಸಿದೆ.

suddiyaana