HITಮ್ಯಾನ್ ಇದ್ರಷ್ಟೇ MIಗೆ ಲಕ್ – ಮೈದಾನದಲ್ಲಿದ್ರೆ ಗೆಲ್ಲುತ್ತಾ ಮುಂಬೈ?
ರೋಹಿತ್ ಪವರ್ ಗೆ ತಲೆಬಾಗಿದ ಕೋಚ್

HITಮ್ಯಾನ್ ಇದ್ರಷ್ಟೇ MIಗೆ ಲಕ್ – ಮೈದಾನದಲ್ಲಿದ್ರೆ ಗೆಲ್ಲುತ್ತಾ ಮುಂಬೈ?ರೋಹಿತ್ ಪವರ್ ಗೆ ತಲೆಬಾಗಿದ ಕೋಚ್

ರೋಹಿತ್ ಶರ್ಮಾ.. ಟೀಂ ಇಂಡಿಯಾದ ಸಕ್ಸಸ್​​ಫುಲ್ ಕ್ಯಾಪ್ಟನ್. ಭಾರತಕ್ಕೆ ಎರಡು ಐಸಿಸಿ ಟ್ರೋಫಿಗಳನ್ನ ಗೆಲ್ಲಿಸಿಕೊಟ್ಟ ನಾಯಕ. ಬ್ಯಾಟರ್ ಆಗಿ, ಸ್ಕಿಪ್ಪರ್ ಆಗಿ ತಂಡವನ್ನ ಯಶಸ್ವಿಯಾಗಿ ಲೀಡ್ ಮಾಡಿದ್ದಾರೆ.  ಐಪಿಎಲ್ ಅಂತಾ ಬಂದಾಗ್ಲೂ ಮುಂಬೈ ಸಾರಥಿಯಾಗಿ ಐದು ಟ್ರೋಫಿಗಳನ್ನ ಗೆಲ್ಲಿಸಿಕೊಟ್ಟಿದ್ದಾರೆ. ಆದ್ರೆ ಕಳೆದ 2 ವರ್ಷಗಳಿಂದ ಎಂಐನಲ್ಲಿ ರೋಹಿತ್​ ಇಂಪಾರ್ಟೆನ್ಸ್ ಕಮ್ಮಿ ಆಗಿತ್ತು. ಬಟ್ ಹಿಟ್​ಮ್ಯಾನ್ ಇಲ್ಲದೇ ಎಂಐ ಏನೇನೂ ಇಲ್ಲ ಅನ್ನೋದು ಗೊತ್ತಾಗಿತ್ತು.

ಐಪಿಎಲ್​ ಅಭಿಮಾನಿಗಳಲ್ಲಿ ಎರಡು ಥರ ಇದ್ದಾರೆ. ಫ್ರಾಂಚೈಸಿ ಅಥವಾ ಹೋಂ ಟೀಂ ಅಂತಾ ಸಪೋರ್ಟ್ ಮಾಡೋರು ಕೆಲವ್ರು. ತಮ್ಮಿಷ್ಟರ ಪ್ಲೇಯರ್​​ಗಳು ಆಡುವಂಥ ತಂಡಕ್ಕೆ ಸಪೋರ್ಟ್ ಮಾಡುವಂಥ ಇನ್ನೊಂದು ಕೆಟಗರಿ. ಸೋ ಇವ್ರಿಗೆ ಹೋಂ ಟೀಂ ಮ್ಯಾಟ್ರ್ ಆಗಲ್ಲ. ಹೀಗೆ ಗಡಿಗಳ ಎಲ್ಲೆ ಮೀರಿ ಫ್ಯಾನ್​​ಬೇಸ್ ಹೊಂದಿರೋ ಆಟಗಾರರಲ್ಲಿ ರೋಹಿತ್ ಶರ್ಮಾ ಕೂಡ ಒಬ್ರು. ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನ ಸಕ್ಸಸ್​​ಫುಲ್ ಟೀಂ ಆಗಿ ಮಾಡಿದ ಗ್ರೇಟೆಸ್ಟ್ ಕ್ಯಾಪ್ಟನ್. ಆದ್ರೆ ಕಳೆದ ಎರಡು ವರ್ಷಗಳಿಂದ ಎಂಐ ಟೀಮ್​ನಲ್ಲಿ ಎಲ್ಲವೂ ಬದಲಾಗಿದೆ. ರೋಹಿತ್ ರನ್ನ ಸೈಡ್​ಲೈನ್ ಮಾಡಿದ್ದಾರೆ. ಕ್ಯಾಪ್ಟನ್ಸಿ ಕಿತ್ಕೊಂಡ ಅಂಬಾನಿ ಬ್ರಿಗೇಡ್ ಕಳೆದ ವರ್ಷ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡ್ಸಿದ್ರು. ರೋಹಿತ್ ಇಲ್ಲದ ಎಂಐ ಮತ್ತೆ ಮಕಾಡೆ ಮಲಗಿತ್ತು. ಬಟ್ ಈ ಸಲ ಮೈದಾನದಲ್ಲೇ ಹಿಟ್​ಮ್ಯಾನ್ ಪವರ್ ಬಳಸಿಕೊಳ್ಳೋಕೆ ಹೊರಟಿದ್ದಾರೆ.

ರೋಹಿತ್ ರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಳಸಲ್ಲ ಎಂದ ಕೋಚ್!

ಮಾರ್ಚ್ 28 ರಿಂದ ಸ್ಟಾರ್ಟ್ ಆಗಲಿರೋ 2026ರ ಐಪಿಎಲ್​ನಲ್ಲಿ  ರೋಹಿತ್ ಶರ್ಮಾರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಳಸಲ್ಲ ಅಂತಾ ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಕೋಚ್ ಮಹೇಲಾ ಜಯವರ್ಧನೆ ಹೇಳಿದ್ದಾರೆ. ಎಂಐ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಜಯವರ್ಧನೆ ಲಾಸ್ಟ್ ಸೀಸನಲ್ಲಿ ನಾವು ಮಾಜಿ ನಾಯಕನನ್ನ ಇಂಪ್ಯಾಕ್ಟ್ ಸಬ್ ಆಗಿ ಬಳಸಿಕೊಂಡಿದ್ವು. ಇದಕ್ಕೆ ಒಂದಷ್ಟು ಫ್ಯಾನ್ಸ್ ಸಿಟ್ಟಾಗಿದ್ರು. ಆದ್ರೆ ಕಳೆದ ಆವೃತ್ತಿಯಲ್ಲಿ ರೋಹಿತ್ ಗಾಯದ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಹೀಗಾಗಿ ಫ್ರಾಂಚೈಸಿ ತನ್ನ ಕೆಲಸದ ಹೊರೆಯನ್ನು ಎಚ್ಚರಿಕೆಯಿಂದ ನಿರ್ವಹಿಸಿತ್ತು. ಆದ್ರೆ ಐಪಿಎಲ್ 2026ರಲ್ಲಿ ಬ್ಯಾಟಿಂಗ್ ಹಾಗೇ ಫೀಲ್ಡಿಂಗ್ ಎರಡ್ರಲ್ಲೂ ರೋಹಿತ್ ಶರ್ಮಾರ ಎಕ್ಸ್​ಪೀರಿಯನ್ಸ್ ಬಳಸಿಕೊಳ್ತೇವೆ. ಸೋ ಈ ವರ್ಷ ನಾನು ಅವರನ್ನು ಸಾಧ್ಯವಾದಷ್ಟು ಮೈದಾನದಲ್ಲಿ ಇರಿಸಿಕೊಳ್ಳಲು ಬಯಸುತ್ತೇನೆ ಅಂತಾ ಜಯವರ್ದನೆ ಕ್ಲಾರಿಫೈ ಮಾಡಿದ್ದಾರೆ.

ಆಲ್ ರೌಂಡರ್ಸ್ ಜಾಸ್ತಿ ಇದ್ದಾರೆ ಬ್ಯಾಟರ್ ಗಳೇ ಕಣ್ಣಿಗೆ ಬೀಳ್ತಾರೆ!

ಇನ್ನು ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಪ್ರೆಶರ್ ಬಗ್ಗೆಯೂ ಜಯವರ್ಧನೆ ರಿವೀಲ್ ಮಾಡಿದ್ದಾರೆ. ನಾವು ಬೌಲರ್‌ಗಳನ್ನು ಕಣಕ್ಕಿಳಿಸುವಾಗ ಅಥವಾ ಇಂಪ್ಯಾಕ್ಟ್ ಪ್ಲೇಯರ್ ಅನ್ನು ಬಳಸುವಾಗ ಎಫೆಕ್ಟ್ ಆಗುತ್ತೆ.  ನಮ್ಮ ಹೆಚ್ಚಿನ ಆಟಗಾರರು ಆಲ್ – ರೌಂಡರ್‌ಗಳು ಮತ್ತು  ಬೌಲಿಂಗ್ ಮಾಡುತ್ತಾರೆ. ಹೀಗಾಗಿ ನಾಯಕನಿಗೆ ಮೈದಾನದಲ್ಲಿ ಅವ್ರ ಅಗತ್ಯ ಇದ್ರೆ ನಾವು ಆಡುತ್ತಿರುವ ಆಪೋಸಿಟ್ ಟೀಂ ನೋಡಿಕೊಂಡು ಚರ್ಚೆ ಮಾಡ್ಬೇಕಾಗುತ್ತೆ. ಸೋ ಇಂಥಾ ಟೈಮಲ್ಲಿ ಆಲ್​ರೌಂಡರ್​ಗಳನ್ನ ತಂಡದಲ್ಲಿ ಉಳಿಸಿಕೊಂಡು ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್‌ರಂತಹ ಬ್ಯಾಟರ್​ಗಳನ್ನ ಕೂರಿಸಬೇಕಾಗುತ್ತೆ. ಇನ್ನು ಇಂಪ್ಯಾಕ್ಟ್ ಪ್ಲೇಯರ್ ಬೌಲಿಂಗ್ ಮಾಡೋದ್ರಿಂದ ಆಲ್ – ರೌಂಡರ್‌ಗಳಲ್ಲದ ಇಬ್ಬರು ವ್ಯಕ್ತಿಗಳು ಅಂತಾ ಬಂದಾಗ ರೋಹಿತ್ ಮತ್ತು ಸೂರ್ಯನೇ ಕಾಣ್ತಾರೆ ಅನ್ನೋ ಮೂಲಕ ಐಪಿ ನಿಯಮದ ಚಾಲೆಂಜಸ್​ನೂ ಬಿಚ್ಚಿಟ್ಟಿದ್ದಾರೆ. ಆದ್ರೆ ಈ ಬಾರಿ ಇಂಪ್ಯಾಕ್ಟ್ ಸಬ್ ನಿಯಮದಲ್ಲೂ ರೋಹಿತ್​ರನ್ನ ಮೈದಾನದಲ್ಲೇ ಎಂಗೇಜ್ ಮಾಡೋದಾಗಿ ಹೇಳಿದ್ದಾರೆ. ರೋಹಿತ್ ಶರ್ಮಾ ಫೀಲ್ಡಿಂಗ್ ವೇಳೆ ಅವ್ರ ಅನುಭವ ಕೂಡ ತಂಡಕ್ಕೆ ಅವಶ್ಯಕತೆ ಇರುತ್ತೆ. ಸೋ ಇದನ್ನೂ ಬಳಸಿಕೊಳ್ಬೇಕು. ಈ ಸಲ ಅದನ್ನ ಸಂಪೂರ್ಣವಾಗಿ ಬಳಸಿಕೊಳ್ತೇವೆ ಅನ್ನೋ ಮೂಲಕ ರೋಹಿತ್ ಪವರ್ ಎಂಥಾದ್ದು ಅನ್ನೋದನ್ನ ಒಪ್ಪಿಕೊಂಡಿದ್ದಾರೆ. ಇನ್ನು ಮುಂಬೈ ಇಂಡಿಯನ್ಸ್ ತಂಡ ಈ ಸೀಸನ್​ನಲ್ಲಿ ಮಾರ್ಚ್ 29 ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ತಮ್ಮ ಐಪಿಎಲ್ 2026 ಅಭಿಯಾನವನ್ನು ಆರಂಭಿಸಲಿದೆ. ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲೇ ಮೂರನೇ ಸೀಸನ್​ಗೆ ಕಾಲಿಡ್ತಿದ್ರೂ ಕೂಡ ಎಲ್ಲರ ಕಣ್ಣೂ ರೋಹಿತ್ ಶರ್ಮಾ ಮೇಲೇ ಇರುತ್ತೆ.

Shantha Kumari