LPG ಗ್ಯಾಸ್ ವಿತರಣೆಗೆ ರಾಜ್ಯ ಸರ್ಕಾರದಿಂದ ಹೊಸ ಗೈಡ್ಲೈನ್ಸ್! – ಯಾರೆಲ್ಲಾ ಬುಕ್ ಮಾಡಬಹುದು?

ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದ ದೇಶದಲ್ಲಿ ಶುರುವಾಗಿರುವ ವಾಣಿಜ್ಯ ಸಿಲಿಂಡರ್ ಅಭಾವ ಮುಂದುವರೆದಿದೆ. ಕರ್ನಾಟಕ, ತಮಿಳುನಾಡು, ಕೇರಳ, ಮಹಾರಾಷ್ಟ್ರ, ಉತ್ತರಪ್ರದೇಶ, ಉತ್ತರಾಖಂಡ, ರಾಜಸ್ಥಾನ ಸೇರಿದಂತೆ ಹಲವು ರಾಜ್ಯಗಳ ಹೋಟೆಲ್, ರೆಸ್ಟೋರೆಂಟ್, ಬೇಕರಿ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೀಗ LPG ಗ್ಯಾಸ್ ವಿತರಣೆಗೆ ಕರ್ನಾಟಕ ಸರ್ಕಾರದಿಂದ ಗೈಡ್ಲೈನ್ಸ್ ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ: ರಾಜ್ಯಸಭೆಯಿಂದ ನಿವೃತ್ತ -H.D ದೇವೇಗೌಡರು, ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯನ್ನ ಶ್ಲಾಘಿಸಿದ ನರೇಂದ್ರ ಮೋದಿ
ಯುದ್ದದಿಂದಾಗಿ ಕರ್ನಾಟಕದಲ್ಲಿ LPG ಗ್ಯಾಸ್ ಸಿಲಿಂಡರ್ ಅಭಾವ ಮುಂದುವರಿದಿದೆ. ಇದೀಗ ಕರ್ನಾಟಕ ಸರ್ಕಾರ ಸಿಲಿಂಡರ್ ವಿತರಣೆಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರ ಪ್ರಾಮುಖ್ಯತೆ ನೀಡಿದ್ದು, ಶೇ.100 ಗ್ಯಾಸ್ ವಿತರಣೆಗೆ ಸೂಚನೆ ನೀಡಿದೆ. ಆದರೆ, ಹೋಟೆಲ್ಗಳಿಗೆ ಕೇವಲ 10% ಗ್ಯಾಸ್ ವಿತರಣೆಗೆ ಸೂಚಿಸಲಾಗಿದೆ.
ನಾಳೆಯಿಂದ ಗ್ಯಾಸ್ ವಿತರಣೆಗೆ ಸರ್ಕಾರ ಸೂಚಿಸಿದೆ. ಅಗತ್ಯ ವಲಯಗಳಿಗೆ ಪ್ರಮುಖ ಆದ್ಯತೆ ನೀಡಲಾಗಿದೆ. ಯಾವ್ಯಾವ ವಲಯಕ್ಕೆ ಎಷ್ಟೆಷ್ಟು ಪರ್ಸೆಂಟೇಜ್ ಗ್ಯಾಸ್ ವಿತರಿಸಬೇಕೆಂದು ಏಜೆನ್ಸಿ ಕಂಪನಿಗಳಿಗೆ ಸರ್ಕಾರ ಗೈಡ್ಲೈನ್ಸ್ ಬಿಡುಗಡೆ ಮಾಡಿದೆ.
ಯಾವ್ಯಾವ ವಲಯಕ್ಕೆ ಎಷ್ಟೆಷ್ಟು ಗ್ಯಾಸ್?
- ಆಸ್ಪತ್ರೆ – 100%
- ಶಿಕ್ಷಣ ಸಂಸ್ಥೆಗಳಿಗೆ- 100%
- ಸೀಡ್ ಪ್ರೋಸೆಸಿಂಗ್ – 70%
- ಆಯಿಲ್ ಉತ್ಪಾದನೆ ಕಂಪನಿಗಳಿಗೆ – 70%
- ಏರ್ ಲೈನ್ಸ್, ರೈಲ್ವೆ – 70%
- ಸೀಡ್ ಪ್ರೋಸೆಸಿಂಗ್ – 70%
- ಆಯಿಲ್ ಉತ್ಪಾದನೆ ಕಂಪನಿಗಳಿಗೆ – 70%
- ಏರ್ಲೈನ್ಸ್, ರೈಲ್ವೆ – 70%
- ಇಂಡಸ್ಟ್ರೀಯಲ್ ಕ್ಯಾಂಟಿನ್ – 10% ಗ್ಯಾಸ್
- ಕಾರ್ಪೋರೇಟ್ ಗೆಸ್ಟ್ ಹೌಸ್ – 10%
- ಫುಡ್ ಪ್ರೋಸೆಸಿಂಗ್ ಕಂಪನಿ – 10%
- ವೃದ್ಧಾಶ್ರಮಗಳಿಗೆ – 70%
- ಹೋಟೆಲ್ – 10%
ಹೋಟೆಲ್ಗಳಿಗೆ ಇಂದಿನಿಂದ ಕಮರ್ಷಿಯಲ್ ಗ್ಯಾಸ್ ವಿತರಣೆ ಸರ್ಕಾರ ಸೂಚನೆ ನೀಡಿದೆ. 10% ಅಷ್ಟೇ ಕಮರ್ಷಿಯಲ್ ಗ್ಯಾಸ್ ವಿತರಣೆ ಮಾಡಬೇಕೆಂದು ತಿಳಿಸಿದೆ. ಹೋಟೆಲ್ ಗಳು ಇಂದಿನಿಂದ ಕಮರ್ಷಿಯಲ್ ಗ್ಯಾಸ್ ಬುಕ್ ಮಾಡಬಹುದಾಗಿದೆ.

ನೋಡಿರಿ

