Jokers of Cricket ಪಾಕಿಸ್ತಾನ! – ಟ್ರಾಫಿಕ್ ಪೊಲೀಸರಿಂದಲೂ ಟ್ರೋಲ್
PAKನಲ್ಲೂ ಮಾನ ಕಳ್ಕೊಂಡ ಪ್ಲೇಯರ್ಸ್

Jokers of Cricket ಪಾಕಿಸ್ತಾನ! – ಟ್ರಾಫಿಕ್ ಪೊಲೀಸರಿಂದಲೂ ಟ್ರೋಲ್PAKನಲ್ಲೂ ಮಾನ ಕಳ್ಕೊಂಡ ಪ್ಲೇಯರ್ಸ್

ವಿಶ್ವಕ್ರಿಕೆಟ್​ನಲ್ಲಿ ಹೈಯೆಸ್ಟ್ ಟ್ರೋಲ್ ಆಗೋದಂದ್ರೆ ಪಾಕಿಸ್ತಾನ ಪ್ಲೇಯರ್ಸ್. ಇತ್ತೀಚೆಗಂತೂ ಪಾಕಿಸ್ತಾನ ಮ್ಯಾಚ್ ಆಡ್ತಿದೆ ಅಂದ್ರೆ ಸೋಶಿಯಲ್ ಮೀಡಿಯಾ ತುಂಬೆಲ್ಲಾ ಅವ್ರದ್ದೇ ಮೀಮ್ಸ್.. ಇಷ್ಟು ದಿನ ಬೇರೆ ಬೇರೆ ದೇಶಗಳ ಜನ ಟ್ರೋಲ್ ಮಾಡ್ತಿದ್ರು. ಆದ್ರೆ ಈಗ ಪಾಕಿಸ್ತಾನಿ ಆಟಗಾರರಿಗೆ ಪಾಕಿಸ್ತಾನದಲ್ಲೇ ಮರ್ಯಾದೆ ಇಲ್ಲ. ಅಲ್ಲಿನ ಪೊಲೀಸರೇ ಟ್ರೋಲ್ ಮಾಡಿದ್ದಾರೆ. ಅಭಿಮಾನಿಗಳೇ ರೋಸ್ಟ್ ಮಾಡ್ತಿದ್ದಾರೆ.

ಇದನ್ನೂ ಓದಿ : ಟ್ರಾಫಿಕ್‌ ರೂಲ್ಸ್‌ ಬ್ರೇಕ್‌ ಮಾಡಿದ್ದಕ್ಕೆ ಇಡೀ ದಿನ ರಸ್ತೆ ಮಧ್ಯೆ ಬೋರ್ಡ್ ಹಿಡಿದು ನಿಲ್ಲುವ ಶಿಕ್ಷೆ ನೀಡಿದ ಕೋರ್ಟ್!

ಪಾಕಿಸ್ತಾನ ಕ್ರಿಕೆಟ್ ಪರಿಸ್ಥಿತಿ ಹೆಂಗಾಗಿದೆ ಅಂದ್ರೆ ಟೀಂ ಸೆಲೆಕ್ಷನ್ ಸರಿ ಇಲ್ವೋ ಅಥವಾ ಪ್ಲೇಯರ್​ಗಳೇ ಆಡ್ತಿಲ್ವೋ ಅಂತಾ ಪಿಸಿಬಿಯೇ ಫುಲ್ ಕನ್ಫ್ಯೂಸ್ ಆಗ್ಬಿಟ್ಟಿದೆ. ಐಸಿಸಿ ಟೂರ್ನಿಗಳಲ್ಲಿ ಗೆಲ್ಲೋಕಾಗ್ತಿಲ್ಲ.. ಸರಣಿಗಳಲ್ಲೂ ಸೋಲು ತಪ್ಪುತ್ತಿಲ್ಲ. ಬೇರೆ ಬೇರೆ ರಾಷ್ಟ್ರಗಳ ವುಮೆನ್ಸ್​ ಟೀಮ್​ಗಳೇ ಇವ್ರಿಗಿಂತ ಸ್ಟ್ರಾಂಗ್ ಇದ್ದಾರೆ. ಕರೆಂಟ್ ಸಿಚುಯೇಷನ್ ನೋಡಿದ್ರೆ ಗಲ್ಲಿ ಪ್ಲೇಯರ್ಸ್​​ನ ಬಿಟ್ರೂ ಈಸಿಯಾಗಿ ಪಾಕಿಸ್ತಾನ ತಂಡಕ್ಕೆ ಮಣ್ಣು ಮುಕ್ಕಿಸ್ತಾರೆ. ಅಧ್ವಾನ ಆಗೋಗಿರೋ ಪಾಕಿಸ್ತಾನಿ ಕ್ರಿಕೆಟ್ ಟೀಂ ಮತ್ತು ಪ್ಲೇಯರ್​ಗಳನ್ನ ಸ್ವತಃ ಪಾಕಿಸ್ತಾನಿಯರೇ ಟ್ರೋಲ್ ಮಾಡ್ತಿದ್ದಾರೆ. ಬಾಂಗ್ಲಾ ವಿರುದ್ಧದ ಏಕದಿನ ಸರಣಿ ಸೋಲಿನ ಬಳಿಕವಂತೂ ಪೊಲೀಸರೂ ಟಾಂಟ್ ಕೊಟ್ಟಿದ್ದಾರೆ.

ಸಂಚಾರಿ ರೂಲ್ಸ್ ಜಾಗೃತಿಗಾಗಿ ಸಲ್ಮಾನ್ ರನ್ ಔಟ್ ಟ್ರೋಲ್!

ಬಾಂಗ್ಲಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಪಾಕಿಸ್ತಾನಿ ಬ್ಯಾಟರ್ ಸಲ್ಮಾನ್ ಅಲಿ ಅಘಾ ರನ್ ಔಟ್ ಆಗಿದ್ರು. ಈ ರನ್​ ಔಟ್ ದೊಡ್ಡ ಕಾಂಟ್ರವರ್ಸಿಯೇ ಆಗಿತ್ತು. ಪಾಕಿಸ್ತಾನದ ಇನಿಂಗ್ಸ್‌ನ 39ನೇ ಓವರ್‌ನಲ್ಲಿ ಬಾಂಗ್ಲಾ ಬೌಲರ್ ಮೆಹದಿ ಹಸನ್ ಬೌಲಿಂಗ್​ನಲ್ಲಿ ರನ್​ಗಾಗಿ ಕ್ರೀಸ್​ನಿಂದ ಈಚೆ ಇದ್ದ ಸಲ್ಮಾನ್ ಅಲಿ ಅಘಾ ತಮ್ಮ ಕಾಲಿನತ್ತ ಬಂದ ಚೆಂಡನ್ನು ಎತ್ತಿ ಬೌಲರ್​ ಮೆಹದಿ ಹಸನ್​ಗೆ ನೀಡಲು ಬಗ್ಗಿದರು. ಅಷ್ಟರಲ್ಲಿ ತಾವೇ ಚೆಂಡನ್ನು ಎತ್ತಿಕೊಂಡ ಮೆಹದಿ ಹಸನ್ ನೇರವಾಗಿ ಸ್ಟಂಪ್​ಗೆ ಎಸೆದರು. ​ ಔಟ್​ಗಾಗಿ ಅಂಪೈರ್ ಬಳಿ ಮನವಿ ಮಾಡಿದ್ರು. ಫೀಲ್ಡ್ ಅಂಪೈರ್ ಮೂರನೇ ಅಂಪೈರ್​ ಬಳಿ ರಿವ್ಯೂಗೆ ಮನವಿ ಮಾಡಿದರು. ಬಳಿಕ ಸಲ್ಮಾನ್ ಅಘಾ ಔಟ್ ಎಂದು ತೀರ್ಪು ನೀಡಲಾಯಿತು. ಈ ರನ್​ಔಟ್ ಸೋಶಿಯಲ್ ಮೀಡಿಯಾದಲ್ಲೂ ಪರವಿರೋಧಕ್ಕೂ ಕಾರಣ ಆಗಿತ್ತು. ಇದೇ ರನ್ ಔಟ್ ಫೋಟೋ ಇಟ್ಕೊಂಡು ಪಾಕಿಸ್ತಾನದ ರಾವಲ್ಪಿಂಡಿ ಸಂಚಾರಿ ಪೊಲೀಸರು ತಮ್ಮ ಅಧಿಕೃತ X ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ. ಸಂಚಾರ ನಿಯಮಗಳನ್ನು ಪಾಲಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.  ಹಾಗೇ ರಸ್ತೆಯಲ್ಲಿರಲಿ ಅಥವಾ ಮೈದಾನದಲ್ಲಿರಲಿ, ಎಚ್ಚರವಾಗಿರುವುದು ಮುಖ್ಯ. ನಿಮ್ಮನ್ನು ಮತ್ತು ಇತರರನ್ನು ಸುರಕ್ಷಿತವಾಗಿರಿಸಲು ನಿಮ್ಮ ಮೇಲೆ ನಂಬಿಕೆ ಇಡಿ, ಜಾಗರೂಕರಾಗಿರಿ ಮತ್ತು ಬುದ್ಧಿವಂತ ನಿರ್ಧಾರಗಳನ್ನು ತೆಗೆದುಕೊಳ್ಳಿ ಎಂದು ಕ್ಯಾಪ್ಶನ್ ಹಾಕಿದ್ದಾರೆ. ಇನ್ನು ಫ್ಯಾನ್ಸ್ ಕೂಡ ಅಲ್ಲಿನ ಆಟಗಾರರನ್ನ ನೆಕ್ಸ್​ಟ್ ಲೆವೆಲ್​ನಲ್ಲಿ ಟ್ರೋಲ್ ಮಾಡ್ತಿದ್ದಾರೆ.

ಮೊಹಮ್ಮದ್ ರಿಜ್ವಾನ್ ಅತೀ ಕೆಟ್ಟ ವಿಕೆಟ್ ಕೀಪರ್!

ಇನ್ನು ಪಾಕಿಸ್ತಾನದ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್​ರನ್ನೂ ಫ್ಯಾನ್ಸ್ ರೋಸ್ಟ್ ಮಾಡಿದ್ದಾರೆ. ಟುಕ್ ಟುಕ್ ಮೊಹಮ್ಮದ್ ರಿಜ್ವಾನ್. ಪಾಕಿಸ್ತಾನ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕೆಟ್ಟ ವಿಕೆಟ್ ಕೀಪರ್. ಮೂರು ಕ್ಯಾಚ್ ಬಿಟ್ಟಿದ್ದೂ ಅಲ್ದೇ 291 ರನ್​ಗಳ ಚೇಸಿಂಗ್​ನಲ್ಲಿ 4 ರನ್​ಗಳಿಗೆ ಔಟ್ ಆಗಿದ್ದಾನೆ ಅಂತಾ ಕಿಡಿ ಕಾರಿದ್ದಾರೆ. ಮತ್ತೊಬ್ರು ಪಾರ್ಟ್ ಟೈಂ ಕ್ರಿಕೆಟರ್.. ಫುಲ್ ಟೈಂ ಮೌಲಾನಾ ಅಂತಾ ಬರ್ಕೊಂಡಿದ್ದಾರೆ.

ಕ್ರಿಕೆಟ್ ನ ಜೋಕರ್ಸ್ ಪಾಕಿಸ್ತಾನ ಎಂದ ಫ್ಯಾನ್ಸ್!

ಟಿ-20 ವಿಶ್ವಕಪ್​ನಲ್ಲಿ ಸೆಮಿಫೈನಲ್​ಗೂ ಸೆಲೆಕ್ಟ್ ಆಗದೆ ಹೊರಬಿದ್ದಿದ್ದ ಪಾಕಿಸ್ತಾನ ಆ ನಂತ್ರ ಬಾಂಗ್ಲಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿ ಆಡಿತ್ತು. ಮಾರ್ಚ್ 11ರಿಂದ ಆರಂಭವಾಗಿದ್ದ ಈ ಸರಣಿಯಲ್ಲಿ ಸಾಲು ಸಾಲು ಕಿರಿಕ್​ಗಳೇ ಆಗಿದ್ವು. ಪಾಕಿಸ್ತಾನ ಮೊದಲ ಪಂದ್ಯದಲ್ಲಿ ಸೋತಿತ್ತು. ಎರಡನೇ ಪಂದ್ಯದಲ್ಲಿ ಗೆದ್ದು ಸರಣಿಯನ್ನು ಸಮಬಲಗೊಳಿಸುವ ಮೂಲಕ ಉತ್ತಮ ಪ್ರದರ್ಶನ ನೀಡಿತು. ಆದರೆ ಮೂರನೇ ಪಂದ್ಯದಲ್ಲಿ ಮತ್ತೆ ಸೋತು ಸರಣಿ ಕಳ್ಕೊಳ್ಳೋದ್ರ ಜೊತೆ ಶೇಪ್ ಔಟ್ ಆಗಿತ್ತು. ಪಾಕ್ ಆಟಗಾರರ ಕಳಪೆ ಪ್ರದರ್ಶನವೇ ಸೋಲಿಗೆ ಕಾರಣ ಅನ್ನೋದು ಗೊತ್ತಾಗ್ತಿತ್ತು. ವಿಶ್ವಕಪ್‌ನಲ್ಲಿ ಆಡದಿದ್ರೂ ಏಕದಿನ ಸರಣಿಯಲ್ಲಾದ್ರೂ ಗೆಲ್ತಾರೆ ಅನ್ಕೊಂಡ್ರೆ ಫಸ್ಟ್ ಮ್ಯಾಚಲ್ಲೇ 114 ರನ್‌ಗಳಿಗೆ ಆಲೌಟ್ ಆಗಿದ್ರು. ಬಾಂಗ್ಲಾ ವಿರುದ್ಧದ ಏಕದಿನ ಪಂದ್ಯದಲ್ಲಿ 161 ರನ್ ಗಳಿಸಿದ್ದು ಪಾಕಿಸ್ತಾನ ಈ ಹಿಂದೆ ಗಳಿಸಿದ್ದ ಲೋಯೆಸ್ಟ್ ಸ್ಕೋರ್ ಆಗಿತ್ತು. ಬಟ್ ಈ ಸಲ 114ರನ್​ಗಳಿಗೆ ವಿಕೆಟ್​ಗಳನ್ನೆಲ್ಲಾ ಕಳ್ಕೊಂಡಿದ್ದು ಅಲ್ಲಿನ ಅಭಿಮಾನಿಗಳನ್ನ ರೊಚ್ಚಿಗೆಬ್ಬಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ತಮ್ಮದೇ ಆಟಗಾರರನ್ನ ಟ್ರೋಲ್ ಮಾಡಿದ್ದಾರೆ. ಕ್ರಿಕೆಟ್​ನ ಜೋಕರ್​ಗಳು ಅಂತಾ ಟೀಸ್ ಮಾಡಿದ್ದಾರೆ. ಹೀಗೇ ಆದ್ರೆ ಮುಂದಿನ ವರ್ಷ ಏಕದಿನ ವಿಶ್ವಕಪ್ ಗೆಲ್ತೀರಾ ಅಂತಾ ಪ್ರಶ್ನೆ ಮಾಡಿದ್ದಾರೆ.

ಪಾಕಿಸ್ತಾನ ಸರಣಿಗಳು ಕಾಮಿಡಿ ಸಿರೀಸ್ ಎಂದ ಅಕ್ಮಲ್!

ಇನ್ನು ಪಾಕಿಸ್ತಾನ ಕ್ರಿಕೆಟರ್ಸ್ ಫ್ಲ್ಯಾಪ್ ಶೋಗೆ ಅಲ್ಲಿನ ಮಾಜಿ ಕ್ರಿಕೆಟರ್ಸ್ ಕೂಡ ರೊಚ್ಚಿಗೆದ್ದಿದ್ದಾರೆ. ಅದ್ರಲ್ಲೂ ಬಾಂಗ್ಲಾ ವಿರುದ್ಧದ ಸರಣಿ ಸೋಲಿನ ಬಳಿಕ ಪಾಕಿಸ್ತಾನದ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ಟಿವಿ ಶೋವೊಂದ್ರಲ್ಲೇ ಪಾಕ್ ಆಟಗಾರರ ಮರ್ಯಾದೆ ತೆಗೆದಿದ್ದಾರೆ. ಇತ್ತೀಚೆಗೆ ಪಾಕಿಸ್ತಾನ ತಂಡ ಸರಣಿಗಳನ್ನ ಆಡೋದನ್ನ ನೋಡಿದ್ರೆ ಕಾಮಿಡಿ ಸಿರೀಸ್​ನಂತೆ ಕಾಣುತ್ತೆ. ಏಕದಿನ ಮಾದರಿಯಲ್ಲಿ 10 ನೇ ರ್ಯಾಂಕಿಂಗ್ ತಂಡಕ್ಕೆ ಸೋಲುವ ಮೂಲಕ ಅವಮಾನ ತಂದಿದ್ದಾರೆ. ಇಷ್ಟು ಕಳಪೆ ಪ್ರದರ್ಶನ ನೀಡಿದ್ರೆ ಐಸಿಸಿ ಟ್ರೋಫಿಗಳನ್ನ ಗೆಲ್ಲೋಕೆ ಆಗುತ್ತಾ. ಅಥವಾ ಟ್ರೋಫಿಗಳನ್ನ ಕದ್ಕೊಂಡು ಬರ್ತಾರಾ ಅನ್ನೋ ಮೂಲಕ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿಗೂ ಟಾಂಟ್ ಕೊಟ್ಟಿದ್ದಾರೆ. ಇನ್ನು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಅಹ್ಮದ್ ಶಹಜಾದ್ ಕೂಡ ಟೀಂ ಸೆಲೆಕ್ಷನ್ ಬಗ್ಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ನಿಮ್ಮ ಪೌರುಷ ಏನಿದ್ರೂ ಉಗಾಂಡ ವಿರುದ್ಧ ಅಷ್ಟೇ ಅಂತಾ ಟೀಸ್ ಮಾಡಿದ್ದಾರೆ. ಇನ್ನು ಪಾಕಿಸ್ತಾನ ಆನ್​ ಫೀಲ್ಡ್ ಪರ್ಫಾಮೆನ್ಸ್ ಅಷ್ಟೇ ಅಲ್ಲ.. ಪ್ರಾಕ್ಟೀಸ್​ನಲ್ಲೂ ಸಿಕ್ಕಾಪಟ್ಟೆ ಟ್ರೋಲ್ ಆಗಿದೆ ನೋಡಿ. ಎದುರಾಳಿ ಟೀಂ ಬ್ಯಾಟರ್ಸ್ ಬ್ಯಾಟಿಂಗ್ ವೇಳೆ ಹೇಗೆ ಕ್ಯಾಚ್ ಹಿಡಿಬೇಕು ಅನ್ನೋದನ್ನ ಪ್ರಾಕ್ಟೀಸ್ ಮಾಡಿದ್ದ ಪಾಕಿಸ್ತಾನಿ ಪ್ಲೇಯರ್ಸ್ ಆಮೇಲೆ ಮ್ಯಾಚ್ ಆಡುವಾಗ ತಾವೇ ಔಟ್ ಆಗಿದ್ರು. ಅದೂ ಕೂಡ ಇಂಡಿಯಾ ವಿರುದ್ಧವೇ ವಿಕೆಟ್ ಒಪ್ಪಿಸಿದ್ದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಪಾಕಿಸ್ತಾನ ಮ್ಯಾಚಸ್ ಅಂದ್ರೆ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಅಂತೂ ಇರುತ್ತೆ. ಬಟ್ ಅದು ಪಕ್ಕಾ ರೋಸ್ಟಿಂಗ್ ಮೀಮ್ಸ್ ಆಗಿರುತ್ತೆ. ಎಷ್ಟೋ ಜನರಿಗೆ ಪಾಕಿಸ್ತಾನ್ ಮ್ಯಾಚಸ್ ಅಂದ್ರೆ ಎಂಟರ್​ಟೈನ್​ಮೆಂಟ್ಸ್ ಗೇಮ್ಸ್ ಅನ್ನೋ ಥರ ಆಗೋಗಿದೆ.

Shantha Kumari

Leave a Reply

Your email address will not be published. Required fields are marked *