ರಾಜಧಾನಿ ಬೆಂಗಳೂರು ಸೇರಿ ರಾಜ್ಯದಲ್ಲಿ ಮಳೆಯ ಸಿಂಚನ – ರೈತರಲ್ಲಿ ಹೆಂಚಿದ ಆತಂಕ

ರಾಜಧಾನಿ ಬೆಂಗಳೂರು ಸೇರಿ ರಾಜ್ಯದಲ್ಲಿ ಮಳೆಯ ಸಿಂಚನ – ರೈತರಲ್ಲಿ ಹೆಂಚಿದ ಆತಂಕ

ಕರ್ನಾಟಕದಲ್ಲಿ ಯುಗಾದಿಗೂ ಮುನ್ನವೇ ಬೇಸಿಗೆ ಮಳೆ   ಶುರುವಾಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಆಲಿಕಲ್ಲು ಸಹಿತ ಜೋರು ಮಳೆ ಸುರಿದಿದೆ. ಆ ಮೂಲಕ ಬಿಸಿಲಿಂದ ಬೆಂಡಾಗಿದ್ದ ಭೂಮಿಗೆ ವರುಣ ತಂಪೆರೆದಿದ್ದಾನೆ. ಇತ್ತ ಸಿಲಿಕಾನ್​​ ಸಿಟಿಗೂ ಮಳೆಯ ಸಿಂಚನವಾಗಿದೆ. ಬೆಂಗಳೂರಿನ ಕೆಂಗೇರಿ ಸುತ್ತುಮುತ್ತ ಜೋರು ಮಳೆ ಸುರಿದಿದ್ದು, ರಿಚ್​​​ಮಂಡ್​ ಟೌನ್ ಸುತ್ತಮುತ್ತ ತುಂತುರು ಮಳೆ ಸುರಿದಿದೆ. ಕಳೆದ ಕೆಲ ದಿನಗಳಿಂದ ನಗರದಲ್ಲಿ ಬಿಸಿಲು ಹೆಚ್ಚಾಗಿ ಉಷ್ಣಾಂಶ ಹೆಚ್ಚಾಗಿತ್ತು. ಬೇಸಿಗೆ ಧಗೆಗೆ ಜನರು  ಬೆಂದುಹೋಗಿದ್ದರು. ಹೀಗಾಗಿ ಸೋಮವಾರ ತಡರಾತ್ರಿ ನಗರದ ಹಲವೆಡೆ ತುಂತುರು ಮಳೆ ಆಗಿತ್ತು. ವಿಜಯನಗರ, ದೀಪಾಂಜಲಿನಗರ, ಮೈಸೂರು ರಸ್ತೆ ಸೇರಿದಂತೆ ಹಲವು ಭಾಗಗಳಲ್ಲಿ ಮಳೆಯಾಗಿತ್ತು.

ಇದನ್ನೂ ಓದಿ: ಕೈ ಮುಖಂಡನಿಂದಲೇ  ದಲಿತ ಕಾಂಗ್ರೆಸ್​​ ನಾಯಕಿ ಮೇಲೆ ಹಲ್ಲೆ – ಮೋದಿಗೆ ಪತ್ರ ಬರೆದು ನ್ಯಾಯ ಕೇಳಿದ ಕೈ ಮಹಿಳಾ ನಾಯಕಿ

ಇನ್ನು ಸುಡುಬೇಸಿಗೆ ನಡುವೆ ಮೊದಲ ಮಳೆ ಖುಷಿ ಜೊತೆ ಕೆಲವೆಡೆ ರೈತರಿಗೆ ಆತಂಕತಂದಿದೆ. ಹವಾಮಾನ ಇಲಾಖೆ ಇನ್ನೂ ಮೂರ್ನಾಲ್ಕು ದಿನ ಮಳೆಯ ಮುನ್ಸೂಚನೆ ನೀಡಿದೆ. ಇತ್ತ ಬೆಂಗಳೂರಿನ ಹಲವೆಡೆ ಮೋಡಕವಿದ ವಾತಾವರಣವಿದ್ದು, ಸಂಜೆ ಅಥವಾ ರಾತ್ರಿ ವೇಳೆ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇಂದು ರಾಜ್ಯ ಕೆಲ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ಬೆಳಗಾವಿ ನಗರದಲ್ಲಿ ಭಾರೀ ಮಳೆ ಆಗಿದ್ದು, ರಾಮತೀರ್ಥ ನಗರದಲ್ಲಿರುವ ಮಳೆಯಿಂದ ಮೀನುಗಾರಿಕೆ ಉಪ ನಿರ್ದೇಶಕರ ಕಚೇರಿಗೆ ನೀರು ನುಗ್ಗಿದೆ. ಕಚೇರಿ ಮುಂದೆ ನಿಲ್ಲಿಸಿದ್ದ ಬೈಕ್​ಗಳು ಭಾಗಶಃ ಮುಳುಗಡೆ ಆಗಿದೆ. ಕಚೇರಿಗೆ ಚರಂಡಿ ನೀರು ನುಗಿದ್ದು, ಕಚೇರಿಯಿಂದ ಹೊರ ಬಾರದೆ ನೌಕರರು ಕಂಗಾಲಾಗಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹೊಸೂರಿನ ಶ್ರೀಕಾಂತ ಸುಂಕದವರ ಹೊಲದಲ್ಲಿ ಆಲಿಕಲ್ಲು ಮಳೆ ಆಗಿದೆ.

Kishor KV

Leave a Reply

Your email address will not be published. Required fields are marked *