ಹಬ್ಬಕ್ಕೆ ಊರಿಗೆ ಹೊರಟವರಿಗೆ ಗುಡ್ನ್ಯೂಸ್! – KSRTCಯಿಂದ ಹೆಚ್ಚುವರಿ ಬಸ್ ಸೇವೆ, ವಿಶೇಷ ರಿಯಾಯಿತಿ ಘೋಷಣೆ!

ಸಾಲು ಸಾಲು ರಜೆ ಬಂದ್ರೆ ಸಾಕು ಬೆಂಗಳೂರೇ ಖಾಲಿ ಖಾಲಿ ಆಗುತ್ತೆ. ಹಬ್ಬದ ಪ್ರಯುಕ್ತ ರಜೆ ಹಿನ್ನೆಲೆ ಬೆಂಗಳೂರಿನಲ್ಲಿ ಕೆಲಸ ಮಾಡ್ತಿದ್ದವರು ತಮ್ಮ-ತಮ್ಮ ಊರುಗಳತ್ತ ತೆರಳುತ್ತಾರೆ. ಮತ್ತೊಂದೆಡೆ ಪ್ರವಾಸಕ್ಕೆ ಹೋಗುವವರು ಹೆಚ್ಚಾಗಿಯೇ ಇರ್ತಾರೆ. ಹೀಗಾಗಿ ಪ್ರಯಾಣಿಕರಿಗೆ ಅನುಕೂಲವಾಗಲೆಂದು ರಾಜ್ಯ ಸಾರಿಗೆ ಇಲಾಖೆ ಹೆಚ್ಚುವರಿ ಬಸ್ಗಳ ನಿಯೋಜನೆ ಮಾಡುತ್ತಿದೆ.
ಇದನ್ನೂ ಓದಿ: ಸರ್ಸೆ ಸೆರಗ ಸರ್ಸೆ ಹಾಡಿನ ವಿವಾದ – KD ಚಿತ್ರ ತಂಡದ ವಿರುದ್ದ ದಾಖಲಾಯ್ತು ಸಾಲು ಸಾಲು ದೂರು!
ಯಗಾದಿ ಹಾಗೂ ರಂಜಾನ್ ಹಬ್ಬ ಒಟ್ಟಿಗೆ ಬಂದ ಹಿನ್ನೆಲೆ ಕೆಎಸ್ಆರ್ಟಿಸಿ ಹೆಚ್ಚುವರಿ ಬಸ್ಗಳ ವ್ಯವಸ್ಥೆ ಮಾಡಿದ್ದು, ವಿಶೇಷ ರಿಯಾಯಿತಿಯನ್ನು ಘೋಷಿಸಿದೆ. ಮಾ.18, 19 ಹಾಗೂ 20ರಂದು ಬೆಂಗಳೂರಿನಿಂದ ಬೇರೆ ರಾಜ್ಯ ಹಾಗೂ ಬೇರೆ ಜಿಲ್ಲೆಗಳಿಗೆ ಒಟ್ಟು 2,000 ಹೆಚ್ಚುವರಿ ಬಸ್ಗಳ ವ್ಯವಸ್ಥೆ ಮಾಡಿದೆ. ಜೊತೆಗೆ ಹಬ್ಬದ ಹಿನ್ನೆಲೆ ವಿಶೇಷ ರಿಯಾಯಿತಿಯನ್ನು ನೀಡಿದೆ.
ಬಸ್ ಬುಕ್ ಮಾಡುವಾಗ ನಾಲ್ಕು ಹಾಗೂ ಹೆಚ್ಚಿನ ಟಿಕೆಟ್ ಬುಕ್ ಮಾಡಿದರೆ 5% ರಿಯಾಯಿತಿ ನೀಡಲಾಗಿದೆ. ಜೊತೆಗೆ ಹೋಗುವ ಮತ್ತು ಬರುವ ಟಿಕೆಟ್ ಒಟ್ಟಾಗಿ ಬುಕ್ ಮಾಡಿದರೆ 10% ರಿಯಾಯಿತಿ ನೀಡಲಾಗುವುದು ಎಂದು ಸಾರಿಗೆ ಇಲಾಖೆ ತಿಳಿಸಿದೆ.

ನೋಡಿರಿ

