ಎಕ್ಸಾಂ ಟೈಮ್​​ನಲ್ಲಿ ಬೆಂಗಳೂರಲ್ಲಿ ಕರೆಂಟ್ ಕಣ್ಣಾಮುಚ್ಚಲೆ..! – ಗಂಟೆ ಗಂಟೆಗೂ ಕರೆಂಟ್ ಕಟ್

ಎಕ್ಸಾಂ ಟೈಮ್​​ನಲ್ಲಿ ಬೆಂಗಳೂರಲ್ಲಿ ಕರೆಂಟ್ ಕಣ್ಣಾಮುಚ್ಚಲೆ..! – ಗಂಟೆ ಗಂಟೆಗೂ ಕರೆಂಟ್ ಕಟ್

ಬೆಂಗಳೂರಿನಲ್ಲಿ ಕರೆಂಟ್ ಕಣ್ಣಾಮುಚ್ಚಾಲೆ ಆಡುತ್ತಿದೆ. ರಾಜಧಾನಿಯಲ್ಲಿ ಗಂಟೆ ಗಂಟೆಗೂ ಕರೆಂಟ್ ಹೋಗಿ ಹೋಗಿ ಬರುವುದು ಮಾಡುತ್ತಿದೆ. ಇದರಿಂದ ಆಫೀಸ್‌ ಸೇರಿದಂತೆ ಸಾಕಷ್ಟು ಕಂಪನಿಗಳು ತೊಂದರೆ ಅನುಭವಿಸುತ್ತಿದೆ. ಅಲ್ಲದೇ ಈಗ ಎಕ್ಸಾಂ ಟೈಮ್ ಆಗಿರುವುದರಿಂದ ವಿದ್ಯಾರ್ಥಿಗಳು ಕರೆಂಟ್ ಕಟ್‌ನಿಂದ ತೊಂದರೆ ಅನುಭವಿಸುತ್ತಿದ್ದಾರೆ.

ಎಕ್ಸಾಂ ಟೈಮ್​​ನಲ್ಲಿ ಕರೆಂಟ್ ಕಣ್ಣಾಮುಚ್ಚಲೆ..!

ರಾಜಧಾನಿ ಬೆಂಗಳೂರಿನಲ್ಲಿ ಬೇಸಿಗೆ ಆರಂಭದಲ್ಲೇ ಕರೆಂಟ್ ಕಟ್​ ಸಮಸ್ಯೆಗೆ ಜನರು ಹಿಡಿಶಾಪ ಹಾಕ್ತಿದ್ದಂತೆ ಬೆಸ್ಕಾಂ ಎಚ್ಚೆತ್ತುಕೊಂಡಿದೆ. ಮಾರ್ಚ್​ ತಿಂಗಳು ಪರೀಕ್ಷೆಯ ಸಮಯವಾಗಿರೋದ್ರಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಬೆಸ್ಕಾಂ ಅಗತ್ಯ ಕ್ರಮವಹಿಸಿದೆ. ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ವಿದ್ಯುತ್ ನೀಡಿ ಪರೀಕ್ಷೆ ವೇಳೆ ತೊಂದರೆ ಆಗದಂತೆ ಸರಾಗವಾಗಿ ವಿದ್ಯುತ್ ನೀಡುವಂತೆ ಬೆಸ್ಕಾಂ ಅಧಿಕಾರಿಗಳಿಗೆ ಬೆಸ್ಕಾಂ ಎಂ ಡಿ ಶಿವಶಂಕರ್ ಸೂಚನೆ ನೀಡಿದ್ದಾರೆ. ಬೇಸಿಗೆ ಆರಂಭದಲ್ಲಿ ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಳವಾಗಿದೆ. ಹೀಗಾಗಿ ಆಗಾಗ ಬೆಂಗಳೂರು ಸೇರಿ ಬೆಸ್ಕಾಂ ವ್ಯಾಪ್ತಿಯಲ್ಲಿ  ಸಂಜೆ 6 ರಿಂದ ಬೆಳಗ್ಗೆ 6 ಗಂಟೆಯವರಿಗೆ ವಿದ್ಯುತ್ ಕಟ್ ಆಗದಂತೆ ಕ್ರಮ ವಹಿಸಲು ಬೆಸ್ಕಾಂ ಎಂಡಿ ಸೂಚನೆ ನೀಡಿದ್ದಾರೆ.

ಅನವಶ್ಯಕವಾಗಿ ಪವರ್ ಕಟ್ ಮಾಡದಂತೆ ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ.  ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆ ಮುಗಿಯುವರಿಗೆ ಸಮಸ್ಯೆ ಆಗದಂತೆ ವಿದ್ಯುತ್ ಸರಬರಾಜು ಮಾಡಿ ಎಂದು ಸೂಚನೆ ನೀಡಲಾಗಿದೆ. ಆದ್ರೂ ಕೂಡ ಬೆಂಗಳೂರಿನ ಸಾಕಷ್ಟು ಏರಿಯಾದಲ್ಲಿ ಕರೆಂಟ್ ಮಡಲಾಗುತ್ತಿದೆ. ಗಂಟೆ ಗಂಟೆಗೆ ಒಮ್ಮೆ ಕರೆಂಟ್ ಕಟ್ ಆಗಿ ಬರುತ್ತಿದೆ.

 

Kishor KV