ಬಾಬರ್ ಅಜಂ ಮೆಂಟಲಿ ಅನ್ ಫಿಟ್ – ಪಾಕ್ ಸ್ಟಾರ್ ಕ್ರಿಕೆಟರ್ ಜರ್ನಿ ಅಂತ್ಯ?
ಇಂಜುರಿ ಕಥೆ ಕಟ್ಟಿತಾ PCB?

ಬಾಂಗ್ಲಾ ವಿರುದ್ಧದ ಏಕದಿನ ಸರಣಿಯಲ್ಲಿ ಹೀನಾಯ ಸೋಲಿನ ಬಳಿಕ ಪಾಕಿಸ್ತಾನ ಕ್ರಿಕೆಟ್ನಲ್ಲಿ ಅಲ್ಲೋಲ ಕಲ್ಲೋಲವಾಗಿದೆ. ಸೆಲೆಕ್ಷನ್ ಕಮಿಟಿ, ಆಟಗಾರರ ಪ್ರದರ್ಶನ ಹೀಗೆ ಎಲ್ಲದ್ರ ವಿರುದ್ಧ ಮಾಜಿ ಪ್ಲೇಯರ್ಸ್ ರೊಚ್ಚಿಗೆದ್ದಿದ್ದಾರೆ. ಹಾಗೇ ಸರಣಿಗೆ ಬಾಬರ್ ಅಜಂರನ್ನ ಕೈಬಿಟ್ಟ ಬಗ್ಗೆಯೂ ಚರ್ಚೆಯಾಗ್ತಿದೆ. ಇಂಟ್ರೆಸ್ಟಿಂಗ್ ಅಂದ್ರೆ ಈ ಬೆಳವಣಿಗೆಗಳ ನಡುವೆ ಬಾಬರ್ ಅಜಂ ಮೆಂಟಲಿ ಅನ್ಫಿಟ್ ಆಗಿದ್ದಾರಾ ಅನ್ನೋ ಚರ್ಚೆ ಹುಟ್ಟಿಕೊಂಡಿದೆ. ಟಿ-20 ವಿಶ್ವಕಪ್ನಲ್ಲಿ ಸೂಪರ್ 8 ಸುತ್ತಿನಲ್ಲಿ ಪಲ್ಟಿ ಹೊಡೆದ ಪಾಕಿಸ್ತಾನ ಸೆಮಿಫೈನಲ್ಗೂ ಸೆಲೆಕ್ಟ್ ಆಗದೇ ಟೂರ್ನಿಯಿಂದ ಹೊರ ಬಿದ್ದಿದ್ರು. ನೆಕ್ಸ್ಟ್ ಬಾಂಗ್ಲಾ ವಿರುದ್ಧ 3 ಪಂದ್ಯಗಳ ಏಕದಿನ ಸರಣಿ ಆಡಿ ಅಲ್ಲೂ ಸೋತು ಶೇಪ್ಔಟ್ ಆದ್ರು. ಪದೇಪದೆ ಪಾಕಿಸ್ತಾನ ಪಲ್ಟಿ ಹೊಡೀತಾ ಇರೋದಕ್ಕೆ ಅಲ್ಲಿನ ಮಾಜಿ ಕ್ರಿಕೆಟಿಗರೆಲ್ಲಾ ಕೆಂಡ ಕಾರ್ತಿದ್ದಾರೆ. ಈಗ ಬಾಬರ್ ಅಜಂ ವಿಚಾರ ಕಿಚ್ಚು ಹಚ್ಚಿದೆ.
ಫಿಟ್ ಇಲ್ಲದಿದ್ರೂ ವಿಶ್ವಕಪ್ ಆಡಿದ್ರಾ ಬಾಬರ್, ಫಖರ್?
ಟಿ-20 ವಿಶ್ವಕಪ್ನಲ್ಲಿ ಪಾಕಿಸ್ತಾನದ ಫ್ಲ್ಯಾಪ್ ಶೋ ಆದ್ಮೇಲೆ ಹೊಸ ಕಾಂಟ್ರವರ್ಸಿಯಾಗ್ತಿದೆ. ಪಾಕಿಸ್ತಾನದ ಸ್ಟಾರ್ ಆಟಗಾರ ಬಾಬರ್ ಅಜಂ, ಫಖರ್ ಜಮಾನ್ ಮತ್ತು ಸಲ್ಮಾನ್ ಮಿರ್ಜಾ ತಾವು ಕಂಪ್ಲೀಟ್ ಆಗಿ ಫಿಟ್ ಇಲ್ಲದೇ ಇದ್ರೂ ವಿಶ್ವಕಪ್ ಆಡಿದ್ದಾರೆ ಅಂತಾ ಆಯ್ಕೆ ಸಮಿತಿ ಸದಸ್ಯ ಆಕಿಬ್ ಜಾವೇದ್ ಹೇಳಿದ್ದಾರೆ. ಈ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ತನಿಖೆ ಮಾಡ್ಬೇಕು ಅಂತಾ ಡಿಮ್ಯಾಂಡ್ ಇಟ್ಟಿದ್ದಾರೆ. ಹಾಗೇ ಇಂಜುರಿ ವಿಚಾರವನ್ನ ಮುಚ್ಚಿಟ್ಟು ತಂಡದಲ್ಲಿ ಉಳ್ಕೊಂಡಿದ್ದಾರೆ ಅಂತಾ ಗಂಭೀರ ಆರೋಪ ಮಾಡಿದ್ದಾರೆ. ಇದು ಒಂದ್ಕಡೆಯಾದ್ರೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಬಸಿತ್ ಅಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಬಾಬರ್ ಅಜಂ ಮೆಂಟಲಿ ಅನ್ಫಿಟ್ ಅಂದುಬಿಟ್ಟಿದ್ದಾರೆ.
ಫಿಸಿಕಲಿ ಫಿಟ್ ಇದ್ರೂ ಮೆಂಟಲಿ ಅನ್ ಫಿಟ್ ಬಾಬರ್ ಅಜಂ!
ಬಾಂಗ್ಲಾದೇಶ ಏಕದಿನ ಸರಣಿಯ ನಂತರ ಪಾಕಿಸ್ತಾನ ತಂಡದ ಆಯ್ಕೆಯ ಬಗ್ಗೆ ಸಾಕಷ್ಟು ಚರ್ಚೆಯಾಗ್ತಿದೆ. ಒಂದಷ್ಟು ಮಾಜಿ ಕ್ರಿಕೆಟಿಗರು ಬಾಬರ್ ಅಜಂರನ್ನ ತಂಡದಿಂದ ಹೊರಗಿಡಬಾರದಿತ್ತು ಅಂತಿದ್ದಾರೆ. ಈ ಬಗ್ಗೆ ಮಾತನಾಡಿರೋ ಬಸಿತ್ ಅಲಿ ದೊಡ್ಡ ಸ್ಟೇಟ್ಮೆಂಟ್ ಕೊಟ್ಟಿದ್ದಾರೆ. ಬಾಬರ್ ಅಜಮ್ ಫಿಸಿಕಲಿ ಸ್ಟ್ರಾಂಗ್ ಆಗಿ ಕಂಡ್ರೂ ಮೆಂಟಲಿ ಅನ್ಫಿಟ್ ಆಗಿದ್ದಾರೆ. 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಾಗ ಬ್ಯಾಟಿಂಗ್ ಮಾಡಲು ಅವ್ರಿಗೆ ಆಗ್ತಾ ಇಲ್ಲ. ಇಂಥಾ ಟೈಮಲ್ಲಿ ಅವ್ರನ್ನ ತಂಡಕ್ಕೆ ಸೆಲೆಕ್ಟ್ ಮಾಡಿದ್ರೆ ತಂಡಕ್ಕೂ ಹಾನಿಯಾಗಿತ್ತು. ಅವ್ರಿಗೂ ಕಷ್ಟವಾಗುತ್ತೆ ಎಂದಿದ್ದಾರೆ. ಅಷ್ಟಕ್ಕೂ ಬಾಬರ್ ಬಗ್ಗೆ ಪಾಕಿಸ್ತಾನದಲ್ಲಿ ಇಷ್ಟು ದೊಡ್ಡ ಮಟ್ಟದ ಚರ್ಚೆಯಾಗೋಕೆ ಕಾರಣ ವೈಟ್ ಬಾಲ್ ಫಾರ್ಮೆಟ್ನಲ್ಲಿ ಆತನ ಪ್ರದರ್ಶನ. ಓಡಿಐ ಹಾಗೇ ಟಿ-20ಐ ಫಾರ್ಮೆಟ್ನಲ್ಲಿ ಬಾಬರ್ ಅಜಂ ಈ ಹಿಂದೆ ಐಸಿಸಿ ನಂಬರ್ 1 ಬ್ಯಾಟರ್ ಆಗಿದ್ರು. ಹಾಗೇ ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ. ಹೀಗಾಗಿ ಪಾಕಿಸ್ತಾನದಲ್ಲಿ ಬಾಬರ್ ಅಂದ್ರೆ ದೊಡ್ಡ ಅಭಿಮಾನಿ ಬಳಗವೇ ಇದೆ. ಕಳೆದ 2 ವರ್ಷಗಳಲ್ಲಿ ಅವ್ರನ್ನ ನಾಯಕತ್ವದಿಂದ ಕೆಳಗಿಳಿಸಿ ಮತ್ತೆ ಕ್ಯಾಪ್ಟನ್ಸಿ ನೀಡಿ ತಂಡದಿಂದಲೇ ಹೊರಗಿಡೋದು ಕಾಮನ್ ಆಗೋಗಿದೆ. ಹೀಗಾಗಿ ಅವ್ರನ್ನ ಸೆಲೆಕ್ಟ್ ಮಾಡಿದ್ರೂ ಮಾಡದೇ ಇದ್ರೂ ಒಂದಷ್ಟು ಚರ್ಚೆ್ಗಳಂತೂ ಆಗ್ತಾನೇ ಇರುತ್ತೆ. ಬಟ್ ಈ ಸಲ ಪಾಕಿಸ್ತಾನದ ಸರಣಿ ಸೋಲಿನ ಬೆನ್ನಲ್ಲೇ ಮತ್ತೆ ಮುನ್ನಲೆಗೆ ಬಂದಿದೆ. ಮತ್ತೊಂದೆಡೆ ಪಿಸಿಬಿಯೇ ಇಂಜುರಿ ನೆಪ ಹೇಳಿ ಬಾಂಗ್ಲಾ ಟೂರ್ನಿಂದ ಹೊರಗಿಟ್ಟಿದೆ ಅನ್ನೋ ವಾದವೂ ಇದೆ. ಕೆಲವ್ರು ಮೆಂಟಲಿ ಅನ್ಫಿಟ್ ಅಂದ್ರೆ ಇನ್ನೂ ಕೆಲವ್ರು ಬಾಬರ್ ಪರ ಬ್ಯಾಟ್ ಬೀಸ್ತಿದ್ದಾರೆ.

ನೋಡಿರಿ

