KLಗೆ ಕ್ಯಾಪ್ಟನ್ಸಿ ಕಟ್ಟುತ್ತಾ ಡೆಲ್ಲಿ? – ಅಕ್ಷರ್ ಗಿಂತ ರಾಹುಲ್ ಬೆಸ್ಟ್ ಹೇಗೆ?
DC ಫ್ರಾಂಚೈಸಿ ಕನ್ಫ್ಯೂಷನ್ ಏನು?

2026ರ ಐಪಿಎಲ್ ಕಿಕ್ಸ್ಟಾರ್ಟ್ಗೆ ಇನ್ನು 2 ವಾರ ಕೂಡ ಉಳ್ದಿಲ್ಲ. ಎಲ್ಲಾ ಫ್ರಾಂಚೈಸಿಗಳು ಭರ್ಜರಿ ಪ್ರಾಕ್ಟೀಸ್ನಲ್ಲಿ ಬ್ಯುಸಿ ಆಗಿದ್ದಾರೆ. 19ನೇ ಸೀಸನ್ ಚಾಂಪಿಯನ್ ಪಟ್ಟಕ್ಕೇರೋಕೆ ಗೇಮ್ ಪ್ಲ್ಯಾನ್ಗಳೂ ಜೋರಾಗಿದೆ. ಮಿನಿ ಆಕ್ಷನ್ ನಿಂದಾಗಿ ಒಂದಷ್ಟು ಪ್ಲೇಯರ್ಸ್ ಬೇರೆ ಟೀಮ್ಗಳಲ್ಲಿ ಕಾಣಿಸಿಕೊಳ್ತಾರೆ. ಅಟ್ ದಿ ಸೇಮ್ ಟೈಂ ಹೊಸ ಕ್ಯಾಪ್ಟನ್ಸ್ ಕೂಡ ನೋಡಬಹುದು. ಈಗಾಗ್ಲೇ ರಾಜಸ್ಥಾನಕ್ಕೆ ರಿಯಾನ್ ಪರಾಗ್ ನಾಯಕನಾಗಿ ಸೆಲೆಕ್ಟ್ ಆಗಿದ್ದಾರೆ. ಚೆನ್ನೈನಲ್ಲೂ ಚೇಂಜಸ್ ಇರುತ್ತಾ ಅನ್ನೋ ಪ್ರಶ್ನೆಗಳಿವೆ. ಹಾಗೇ ಡೆಲ್ಲಿ ತಂಡದಲ್ಲೂ ಬದಲಾವಣೆ ಕೂಗು ಎದ್ದಿದೆ. ಡಿಸಿ ತಂಡಕ್ಕೆ ಕೆಎಲ್ ರಾಹುಲ್ರನ್ನ ನಾಯಕನನ್ನಾಗಿ ಮಾಡುವಂತೆ ಪ್ರೆಶರ್ ಇದೆ.
ಇದನ್ನೂ ಓದಿ : ಚಿನ್ನಸ್ವಾಮಿಯಲ್ಲೇ ನಡೆಯಲಿದೆ 2026ರ IPL ಫೈನಲ್! – ಬೆಂಗಳೂರಿನಲ್ಲಿ RCB ಎಷ್ಟು ಪಂದ್ಯಗಳನ್ನು ಆಡಲಿದೆ?
ಐಪಿಎಲ್ ಆರಂಭಕ್ಕೆ ಇನ್ನೇನು ಕೆಲವೇ ದಿನಗಳಿದ್ದು ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ದೊಡ್ಡ ಬೆಳವಣಿಗೆ ಆಗಿದೆ. ಕಳೆದ ವರ್ಷವಷ್ಟೇ ದೆಹಲಿ ತಂಡಕ್ಕೆ ಮೆಂಟರ್ ಆಗಿ ಸೇರಿದ್ದ ಕೆವಿನ್ ಪೀಟರ್ಸನ್ ಮೆಂಟರ್ ಹುದ್ದೆಯಿಂದ ಹೊರ ಬಂದಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಘೋಷಣೆ ಕೂಡ ಮಾಡಿದ್ದಾರೆ. ಸೋ ಈಗ ಕ್ಯಾಪ್ಟನ್ ಬದಲಾವಣೆ ಬಗ್ಗೆಯೂ ಪ್ರಶ್ನೆಗಳೂ ಮೂಡಿವೆ. ಅಕ್ಷರ್ ಪಟೇಲ್ ಜೊತೆಯೇ ಈ ವರ್ಷವೂ ಕಂಟಿನ್ಯೂ ಆಗ್ಬೇಕಾ ಅಥವಾ ಕೆಎಲ್ ರಾಹುಲ್‌ಗೆ ಕಂಟ್ರೋಲ್ ಕೊಡ್ಬೇಕಾ ಅನ್ನೋ ಬಗ್ಗೆ ಚರ್ಚೆಯಾಗ್ತಿದೆ.
ಅಕ್ಷರ್ ಕ್ಯಾಪ್ಟನ್ಸಿಯಲ್ಲಿ ಆರಂಭ ಸಿಕ್ರೂ ಅಂತ್ಯದಲ್ಲಿ ಎಡವಿದ ಡೆಲ್ಲಿ!
2025ರ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ಗೆ ಅಕ್ಷರ್ ಪಟೇಲ್ರನ್ನ ನಾಯಕನನ್ನಾಗಿ ನೇಮಕ ಮಾಡ್ಲಾಗಿತ್ತು. ಬಾಪು ನಾಯಕತ್ವದಲ್ಲಿ ಡೆಲ್ಲಿ ಟೀಂ ಒಳ್ಳೆ ಆರಂಭವನ್ನೇ ಪಡೆದಿದ್ರು. ಫಸ್ಟ್ ಆಫ್ನಲ್ಲಿ ಕಂಪ್ಲೀಟ್ ಡಾಮಿನೇಟ್ ಮಾಡಿದ್ರು. ಅಕ್ಷರ್ ಲೀಡರ್ಶಿಪ್ನಲ್ಲಿ ಡಿಸಿ ತಂಡವು ಇತಿಹಾಸದಲ್ಲೇ ಫಾರ್ ದಿ ಫಸ್ಟ್ ಟೈಂ ಮೊದಲ ಆರು ಪಂದ್ಯಗಳಲ್ಲಿ ಐದರಲ್ಲಿ ಗೆಲುವನ್ನ ಸಾಧಿಸಿದ್ರು. ಹಾಗೇ ಸತತ ನಾಲ್ಕು ಗೆಲುವುಗಳಿಗೆ ತಂಡವನ್ನ ಮುನ್ನಡೆಸಿದ ಮೊದಲ ಡಿಸಿ ನಾಯಕ ದಾಖಲೆ ಕೂಡ ಬರೆದ್ರು. ಇದು ಐಕಾನಿಕ್ ವೀರೇಂದ್ರ ಸೆಹ್ವಾಗ್ ಅವರ ಹಿಂದಿನ ಮೂರು ಗೆಲುವುಗಳ ದಾಖಲೆಯನ್ನು ಬ್ರೇಕ್ ಮಾಡಿತ್ತು. ಆದ್ರೆ ಸೆಕೆಂಡ್ ಆಫ್ನಲ್ಲಿ ಡೆಲ್ಲಿ ಮತ್ತೆ ಡಲ್ ಆಗಿತ್ತು. ಕ್ಯಾಪಿಟಲ್ಸ್ ತಂಡವು ತಮ್ಮ ಕೊನೆಯ ಎಂಟು ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ಸೋತು ಕೊನೆಗೆ ಮುಂಬೈ ಇಂಡಿಯನ್ಸ್ ವಿರುದ್ಧ ಒಂದೇ ಒಂದು ಅಂಕದಿಂದ ಪ್ಲೇಆಫ್‌ಗೇರುವ ಚಾನ್ಸ್ ಮಿಸ್ ಮಾಡಿಕೊಂಡಿದ್ರು. ಹೀಗಿದ್ರೂ ಅಕ್ಷರ್ ತಮ್ಮ ಕ್ಯಾಪ್ಟನ್ಸಿಯಲ್ಲಿ ಗೇಮ್ಪ್ಲ್ಯಾನ್, ಎಕ್ಸಿಕ್ಯೂಷನ್, ಸ್ಪಿನ್ ವಿಭಾಗವನ್ನು ತುಂಬಾನೇ ಚೆನ್ನಾಗಿ ಲೀಡ್ ಮಾಡಿದ್ರು. ಹೀಗಾಗಿ ಈ ವರ್ಷವೂ ಬಾಪುಗೆ ಮಣೆ ಹಾಕ್ತಾರಾ ಅನ್ನೋ ಪ್ರಶ್ನೆಗಳಿವೆ. ಆದ್ರೆ ಬಾಪುಗೆ ಹೋಲಿಸಿದ್ರೆ ರಾಹುಲ್ ಕೂಡ ಬೆಸ್ಟ್ ಅನ್ನಿಸ್ತಿದ್ದಾರೆ.
ಡೆಲ್ಲಿಗೆ ಬೇಕಿದೆ ಕೆಎಲ್ ರಾಹುಲ್ ಎಕ್ಸ್ ಪೀರಿಯನ್ಸ್!
ಐಪಿಎಲ್ನಲ್ಲಿ ಕೆಎಲ್ ರಾಹುಲ್ ಬ್ಯಾಟರ್ ಆಗಿ ಅಷ್ಟೇ ಅಲ್ಲದೆ ಕ್ಯಾಪ್ಟನ್ ಆಗಿಯೂ ಸಾಕಷ್ಟು ಎಕ್ಸ್ಪೀರಿಯನ್ಸ್ ಇದೆ. ಪಂಜಾಬ್ ಕಿಂಗ್ಸ್ ತಂಡವನ್ನು ಲೀಡ್ ಮಾಡಿದ್ದು ಇರ್ಬೋದು ಌಂಡ್ 2022 ಮತ್ತು 2023 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಸತತ ಪ್ಲೇಆಫ್‌ಗೆ ಮುನ್ನಡೆಸಿದ್ರು. ಆದ್ರೆ 2025ರ ಐಪಿಎಲ್ ಬಳಿಕ 14 ಕೋಟಿ ರೂಪಾಯಿಗೆ ಡೆಲ್ಲಿ ಟೀಂ ಸೇರಿದ್ರು. ರಾಹುಲ್ ಎಲ್‌ಎಸ್‌ಜಿಯಲ್ಲಿ ತಮ್ಮ ನಾಯಕತ್ವದ ಅವಧಿಯಲ್ಲಿ 54.05% ಗೆಲುವಿನ ಶೇಕಡಾವಾರು ಹೊಂದಿದ್ದಾರೆ. ರಾಹುಲ್‌ನಂತಹ ಅನುಭವಿ ನಾಯಕ ಪ್ಲೇಯಿಂಗ್ 11ನಲ್ಲಿ ಆಡೋದೇ ತಂಡದ ದೊಡ್ಡ ಪ್ಲಸ್ ಪಾಯಿಂಟ್ ಆಗುತ್ತೆ. ಹೀಗಾಗಿ 2026 ರಲ್ಲಿ ರಾಹುಲ್‌ಗೆ ನಾಯಕತ್ವ ನೀಡಿ ಅನ್ನೋ ಕೆಲವರ ವಾದವೂ ಇದೆ. ಅಥವಾ ಅಕ್ಷರ್ರನ್ನೇ ನಾಯಕನ್ನಾಗಿ ಕಂಟಿನ್ಯೂ ಮಾಡಿ, ಆರಂಭದಲ್ಲಿ ಅಕ್ಷರ್ ಎಡವಿದರೆ ರಾಹುಲ್‌ಗೆ ಪವರ್ ಕೊಡಿ ಅಂತಾ ಸಜೇಷನ್ಸ್ ಕೊಡ್ತಿದ್ದಾರೆ.
2008ರಿಂದಲೂ ಡೆಲ್ಲಿ ಪಾಲಿಗೆ ಸಿಗದ ಟ್ರೋಫಿ!
ಇನ್ನು 2008ರಿಂದ ಐಪಿಎಲ್ನಲ್ಲಿ ಆಡ್ತಿದ್ರೂ ಡೆಲ್ಲಿ ಕ್ಯಾಪಿಟಲ್ಸ್ ತಂಡ ಇದುವರೆಗೂ ಒಮ್ಮೆಯೂ ಟ್ರೋಫಿ ಗೆಲ್ಲೋಕೆ ಸಾಧ್ಯವಾಗಿಲ್ಲ. 2020ರಲ್ಲಿ ಫೈನಲ್ ತಲುಪಿದ್ರೂ ಕೂಡ ಮುಂಬೈ ಇಂಡಿಯನ್ಸ್ ವಿರುದ್ಧ 5 ವಿಕೆಟ್ಗಳಿಂದ ಸೋತು ರನ್ನರ್ ಅಪ್ ಆಗಿತ್ತು. ಸೋ ಈ ಬಾರಿಯಾದ್ರೂ ಮೊದಲ ಕಪ್ ಗೆಲ್ಲೋ ನಿರೀಕ್ಷೆಯಲ್ಲಿ ಟೂರ್ನಿಗೆ ಕಾಲಿಡ್ತಿದ್ದಾರೆ. ಪ್ರಸ್ತುತ ಅನೌನ್ಸ್ ಆಗಿರೋ ಶೆಡ್ಯೂಲ್ ಪ್ರಕಾರ ಡೆಲ್ಲಿ ಕ್ಯಾಪಿಟಲ್ಸ್‌ನ ಮೊದಲ ಪಂದ್ಯ ಏಪ್ರಿಲ್ 1 ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ನಡೆಯಲಿದೆ. ನಂತರ ಏಪ್ರಿಲ್ 4 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ತವರು ಮೈದಾನವಾದ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ 2ನೇ ಪಂದ್ಯವನ್ನು ಆಡಲಿದೆ. ಮುಂದಿನ ಪಂದ್ಯ ಏಪ್ರಿಲ್ 8 ರಂದು ದೆಹಲಿಯಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ನಡೆಯಲಿದ್ದು, ಏಪ್ರಿಲ್ 11 ರಂದು ಕ್ಯಾಪಿಟಲ್ಸ್ ತಮ್ಮ ತವರು ಮೈದಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂದ್ಯ ಆಡ್ತಾರೆ.

ನೋಡಿರಿ

