ವಿರಾಟ್ ಕೊಹ್ಲಿ ಹೊಸ ಹೇರ್ ಸ್ಟೈಲ್ಗೆ ಫ್ಯಾನ್ಸ್ ಫಿದಾ

ಐಪಿಎಲ್ಗೆ ತಯಾರಾಗುತ್ತಿರುವ ವಿರಾಟ್ ಕೊಹ್ಲಿಹೊಸ ಹೇರ್ಲುಕ್ ಮಾಡಿಸಿಕೊಂಡಿದ್ದು, ನೆಟ್ಟಿಗರ ಗಮನ ಸೆಳೆದಿದೆ. ಕೇಶ ವಿನ್ಯಾಸಕಾರ ಜೋರ್ಡಾನ್ ತಬಕ್ಮನ್, ವಿರಾಟ್ ಕೊಹ್ಲಿಯ ಹೊಸ ಹೇರ್ ಕಟ್ ಫೋಟೊವನ್ನು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಕೊಹ್ಲಿ ಮಾತ್ರವಲ್ಲದೆ ಶುಭಮನ್ ಗಿಲ್ ಕೂಡ ಜೋರ್ಡಾನ್ ತಬಕ್ಮನ್ ಬಳಿ ಹೊಸ ಶೈಲಿಯ ಕೇಸವಿನ್ಯಾಸ ಮಾಡಿಕೊಂಡಿದ್ದಾರೆ.
ತಲೆಯ ಎರಡೂ ಬದಿಗಳಲ್ಲಿ ಮತ್ತು ಹಿಂಭಾಗದಲ್ಲಿ ಸಣ್ಣದಾಗಿ ಟ್ರಿಮ್ ಮಾಡಲಾಗಿದ್ದು, ‘ರೇಜರ್ ಶಾರ್ಪ್’ ಹೇರ್ಕಟ್ನಲ್ಲಿ ಕೊಹ್ಲಿ ಮಿಂಚಿದ್ದಾರೆ. ಕೊಹ್ಲಿ ಅವರ ಫೋಟೊಗಳಿಗೆ ಅವರ ಅಭಿಮಾನಿಗಳು ಹಲವು ಮೆಚ್ಚುಗೆಯ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇನ್ನೇನು ಐಪಿಎಲ್ 2026 ಆರಂಭವಾಗಲು 2 ವಾರವಷ್ಟೇ ಬಾಕಿಯಿದೆ. ಮಾ.28 ರಂದು ನಡೆಯುವ ಉದ್ಘಾಟನ ಪಂದ್ಯದಲ್ಲಿ ಆರ್ಸಿಬಿ ತಂಡ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಆಡಲಿದೆ. ವಿರಾಟ್ ಕೊಹ್ಲಿ ಆಟದ ಮೇಲೆ ಅಭಿಮಾನಿಗಳ ನಿರೀಕ್ಷೆಯೂ ಹೆಚ್ಚಿದೆ.
ಬೆಂಗಳೂರಿನಲ್ಲಿ ಬರೋಬ್ಬರಿ 18 ವರ್ಷಗಳ ಬಳಿಕ ಐಪಿಎಲ್ನ ಉದ್ಘಾಟನಾ ಪಂದ್ಯ ನಡೆಯಲಿದೆ. 2008ರ ಚೊಚ್ಚಲ ಆವೃತ್ತಿಯ ಆರಂಭಿಕ ಪಂದ್ಯ ಬೆಂಗಳೂರಿನಲ್ಲೇ ನಡೆದಿತ್ತು. ಆ ಬಳಿಕ ಇದೇ ಮೊದಲ ಬಾರಿ ಇಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಇಲ್ಲಿ 2014, 2016ರಲ್ಲಿ ಫೈನಲ್ ಪಂದ್ಯ ನಡೆದಿವೆ. ಆರ್ಸಿಬಿ ಲೀಗ್ ಹಂತದಲ್ಲಿ ಬೆಂಗಳೂರಿನಲ್ಲಿ 5, ರಾಯ್ಪುರದಲ್ಲಿ 2 ಪಂದ್ಯಗಳನ್ನಾಡಲಿವೆ.

ನೋಡಿರಿ

