ಕಾಂತಾರ-1 ಸೇರಿ ಭಾರತದ ಚಿತ್ರಗಳಿಗೆ ಸಿಗದ ಆಸ್ಕರ್ – 98ನೇ ಆಸ್ಕರ್ ಆರ್ವಾಡ್‌ನಲ್ಲಿ ಯಾರಿಗೆಲ್ಲಾ ಸಿಕ್ಕಿದೆ ಪ್ರಶಸ್ತಿ? 

ಕಾಂತಾರ-1 ಸೇರಿ ಭಾರತದ ಚಿತ್ರಗಳಿಗೆ ಸಿಗದ ಆಸ್ಕರ್ – 98ನೇ ಆಸ್ಕರ್ ಆರ್ವಾಡ್‌ನಲ್ಲಿ ಯಾರಿಗೆಲ್ಲಾ ಸಿಕ್ಕಿದೆ ಪ್ರಶಸ್ತಿ? 

ಅಮೆರಿಕದ ಲಾಸ್‌‍ ಎಂಜಲೀಸ್‌‍ನಲ್ಲಿರುವ ಹಾಲಿವುಡ್‌ ಸ್ಟುಡಿಯೋದ ಡಾಲ್ಬಿ ಥಿಯೇಟರ್‌ನಲ್ಲಿ 98ನೇ ಆಸ್ಕರ್‌ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.  ಆದ್ರೆ ಈ ಸಲ ಕಾಂತಾರ -1 ಸೇರಿದಂತೆ ಭಾರತದ ಒಂದೇ ಒಂದು ಚಿತ್ರಕ್ಕೆ ಆಸ್ಕರ್ ಬಂದಿಲ್ಲ.

ಒನ್‌ ಬ್ಯಾಟಲ್‌ ಆಫ್ಟರ್‌ ಅನದರ್‌ ಸಿನಿಮಾ ಅತ್ಯುತ್ತಮ ಸಿನಿಮಾ ಆಸ್ಕರ್‌ ಪ್ರಶಸ್ತಿಗೆ ಭಾಜನವಾಯಿತು. ಈ ಸಿನಿಮಾದಲ್ಲಿ ಟೈಟಾನಿಕ್‌‍ ಖ್ಯಾತಿಯ ಲಿಯನಾರ್ಡೋ ಡಿಕ್ಯಾಪ್ರರಿಯೋ ಹೀರೋ. ಪೌಲ್‌ ಥಾಮಸ್‌‍ ಆ್ಯಂಡ್ರಿಸನ್‌ ಈ ಚಿತ್ರಕ್ಕೆ ನಿರ್ದೇಶನ ಮಾಡಿದದಾರೆ. ಅವರಿಗೆ ಅತ್ಯುತ್ತಮ ನಿರ್ದೇಶನ ಪ್ರಶಸ್ತಿ ಕೂಡ ಸಿಕ್ಕಿದೆ.

ಇದನ್ನೂ ಓದಿ: ಭಾರತೀಯರಿಗೆ ಗುಡ್‌ನ್ಯೂಸ್!‌ – ವಾರ್‌ ನಡುವೆಯೂ ಭಾರತಕ್ಕೆ 45,000 ಮೆಟ್ರಿಕ್ ಟನ್ LPG ಹೊತ್ತು ತಂದ ಶಿವಾಲಿಕ್‌ ಹಡಗು

ಈ ಚಿತ್ರ ಒಟ್ಟೂ ಆರು ಅವಾರ್ಡ್‌ ಗೆದ್ದಿದ್ದು, ಜಿಯೋ ಹಾಟ್‌ಸ್ಟಾರ್‌ ಅಲ್ಲಿ ವೀಕ್ಷಣೆಗೆ ಲಭ್ಯವಿದೆ. ಜೆಸ್ಸಿ ಬಕ್ಲಿ ಅವರು ಹ್ಯಾಮ್ನೆಟ್‌‍ ಸಿನಿಮಾದ ನಟನೆಗೆ ಅತ್ಯುತ್ತಮ ನಟಿ ಅವಾರ್ಡ್‌ ಪಡೆದರು. ‘ಸಿನ್ನರ್ಸ್’ ಚಿತ್ರದಲ್ಲಿನ ಅದ್ಭುತ ಅಭಿನಯಕ್ಕಾಗಿ ಅಮೆರಿಕದ ನಟ ಮೈಕಲ್ ಬಿ ಜೋರ್ಡಾನ್‌ ‘ಅತ್ಯುತ್ತಮ ನಟ’ ಪ್ರಶಸ್ತಿ ಸ್ವೀಕರಿಸಿದ್ದಾರೆ. ಅಂದ್ಹಾಗೆ, ಇದು ನಟ ಮೈಕಲ್ ಬಿ ಜೋರ್ಡಾನ್ ಅವರ ವೃತ್ತ ಜೀವನದ ಮೊದಲ ಆಸ್ಕರ್ ಪ್ರಶಸ್ತಿ. 98ನೇ ಅಕಾಡೆಮಿ ಅವಾರ್ಡ್ಸ್ ಇತಿಹಾಸದಲ್ಲಿ ‘ಅತ್ಯುತ್ತಮ ನಟ’ ಆಸ್ಕರ್‌ ಪ್ರಶಸ್ತಿ ಪಡೆದ 6ನೇ ಕಪ್ಪು ವರ್ಣೀಯ ನಟ ಮೈಕಲ್ ಬಿ ಜೋರ್ಡಾನ್ ಆಗಿದ್ದಾರೆ.

ಹಾಗಿದ್ರೆ ಯಾರಿಗೆಲ್ಲಾ ಆಸ್ಕರ್ ಸಿಕ್ಕಿದೆ ಅನ್ನೋದ್ದನ್ನ ನೋಡೋದಾದ್ರೆ.

ಯಾರಿಗೆಲ್ಲಾ ಸಿಕ್ಕಿದೆ ಪ್ರಶಸ್ತಿ?

ಅತ್ಯುತ್ತಮ ಸಿನಿಮಾ: ‘ಒನ್ ಬ್ಯಾಟಲ್ ಆಫ್ಟರ್ ಅನದರ್

ಅತ್ಯುತ್ತಮ ನಟಿ: ಜೆಸ್ಸಿ ಬಕ್ಲಿ (‘ಹ್ಯಾಮ್ನೆಟ್’)

ಅತ್ಯುತ್ತಮ ನಟ: ಮೈಕಲ್ ಬಿ ಜೋರ್ಡನ್ (ಸಿನ್ನರ್ಸ್)

ಅತ್ಯುತ್ತಮ ಒರಿಜಿನಲ್ ಸಾಂಗ್: ಗೋಲ್ಡನ್

ಅತ್ಯುತ್ತಮ ಛಾಯಾಗ್ರಾಹಕ: ಸಿನ್ನರ್ಸ್

ಅತ್ಯುತ್ತಮ ಸಿನಿಮಾ ಎಡಿಟಿಂಗ್: ಒನ್ ಬ್ಯಾಟಲ್ ಆಫ್ಟರ್ ಅನದರ್

ಅತ್ಯುತ್ತಮ ಸೌಂಡ್ ಸಿನಿಮಾ: ಎಫ್1

ಅತ್ಯುತ್ತಮ ಸಂಗೀತ ಸಂಯೋಜನೆ: ಸಿನ್ನರ್ಸ್

ಅತ್ಯುತ್ತಮ ಡಾಕ್ಯುಮೆಂಟರಿ ಶಾರ್ಟ್ ಫಿಲ್ಮ್ಸ್: ಆಲ್ ದಿ ಎಂಪ್ಟಿ ರೂಂ

ಅತ್ಯುತ್ತಮ ವಿಶ್ಯುವಲ್ ಎಫೆಕ್ಟ್: ಅವತಾರ್ ಅಂಡ್  ಫೈಯರ್ ಆ್ಯಂಡ್ ಆ್ಯಶ್

ಹಾಲಿವುಡ್‌ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಇದು ಹಾಲಿವುಡ್‌ ಚಿತ್ರರಂಗದ ಪಾಲಿಗೆ ವಿಶೇಷ ಎನಿಸಿಕೊಂಡಿದೆ. ಭಾರತದ ಪ್ರಿಯಾಂಕಾ ಚೋಪ್ರಾ ಸೇರಿದಂತೆ ಅನೇಕರು ಇಲ್ಲಿ ಭಾಗಿ ಆಗಿದ್ದರು. ಈ ವೇಳೆ ವಿವಿಧ ಸಿನಿಮಾಗಳಿಗೆ ಅವಾರ್ಡ್‌ ನೀಡಲಾಯಿತು.

ಸಿನ್ನರ್ಸ್‌ ಸಿನಿಮಾ ಬರೋಬ್ಬರಿ 16 ವಿಭಾಗಗಳಲ್ಲಿ ನಾಮಿನೇಟ್‌ ಆಗಿತ್ತು. ಆಸ್ಕರ್‌ ಅವಾರ್ಡ್‌ ಇತಿಹಾಸದಲ್ಲಿ ಚಿತ್ರವೊಂದು ಇಷ್ಟು ನಾಮಿನೇಟ್‌ ಆಗಿದ್ದು ಇದೇ ಮೊದಲು. ಆಲ್‌ ಅಬೌಟ್‌ ಈವ್‌‍ ಸಿನಿಮಾ 14 ವಿಭಾಗಗಳಲ್ಲಿ ನಾಮಿನೇಟ್‌ ಆಗಿ ದಾಖಲೆ ಮಾಡಿತ್ತು. ಸಿನ್ನರ್ಸ್‌ ಸಿನಿಮಾ ಕೆಲವು ವಿಭಾಗಗಳಲ್ಲಿ ಅವಾರ್ಡ್‌ ಪಡೆಯಲು ಯಶಸ್ವಿ ಆಗಿದೆ.

ಕಾಂತಾರ -1ಗೆ ಸಿಗದ ಆಸ್ಕರ್!

ಭಾರತೀಯ ಚಿತ್ರರಂಗಕ್ಕೆ ತುಂಬಾನೆ ನಿರಾಶೆ ಆಗಿದೆ. ಭಾರತದ ಯಾವುದೇ ಚಿತ್ರವೂ ಆಸ್ಕರ್ ಅಂಗಳದಲ್ಲಿ ಸದ್ದು ಮಾಡಿಲ್ಲ. ಈ ಸಲ ಆಸ್ಕರ್ ಅಂಗಳಕ್ಕೆ ಕಾಲಿಡಲು ಕನ್ನಡದ ಕಾಂತಾರ ಚಾಪ್ಟರ್ ಒನ್ ಧೈರ್ಯ ಮಾಡಿತ್ತು. ಈ ಚಿತ್ರವನ್ನ ನಿರ್ಮಿಸಿರೋ ಹೊಂಬಾಳೆ ಸಂಸ್ಥೆ ನಾಮಿನೇಷನ್‌ಗೆ ಅರ್ಜಿ ಸಲ್ಲಿಸಿತ್ತು. ಹಾಗೆ ಕಾಂತಾರ ಒನ್  ಹಾಗೂ ಮಹಾವತಾರ್ ನರಸಿಂಹ ಚಿತ್ರಗಳು ಆಸ್ಕರ್  ಅಂಗಳಕ್ಕೆ ಕಾಲಿಟ್ಟಿದ್ದವು. ಇದರೊಟ್ಟಿಗೆ ತನ್ವಿ ದಿ ಗ್ರೇಟ್ ಚಿತ್ರವೂ ನಾಮಿನೇಷನ್‌ಗೆ ಅರ್ಜಿ ಸಲ್ಲಿಸಿತ್ತು. ಈ ಸಲ ಭಾರತೀಯ ಚಿತ್ರರಂಗಕ್ಕೇನೆ ನಿಜಕ್ಕೂ ನಿರಾಶೆ ಆಗಿದೆ., ಅಮೆರಿಕಾದಲ್ಲಿ ಈ ಸಿನಿಮಾಗಳನ್ನಯಾರು ನೋಡ್ತಾರೆ ಅನ್ನೋ ಪ್ರಶ್ನೆನೂ ಇದೆ. ಅಲ್ಲಿ ಹೆಚ್ಚಿನ ಜನಕ್ಕೆ ಗೊತ್ತಿರದ ಈ ಚಿತ್ರಗಳು ಆಸ್ಕರ್ ಜೂರಿಗಳನ್ನ ಸೆಳೆಯುವಲ್ಲಿ ವಿಫಲವಾಗುತ್ತವೆ. ಆದರೆ, ಹಾಲಿವುಡ್ ಚಿತ್ರಗಳು ಹಾಗಲ್ಲ. ಈ ಚಿತ್ರಗಳು ಭಾರೀ ಸದ್ದು ಮಾಡುತ್ತವೆ. ಇನ್ನಿಲ್ಲದಂತೆ ಜೂರಿಗಳ ಮನಸ್ಸು ಸೆಳೆಯುವಲ್ಲಿ ಯಶಸ್ವಿ ಆಗುತ್ತವೆ.

Kishor KV