ಫಾಸ್ಟ್ಯಾಗ್ ವಾರ್ಷಿಕ ಪಾಸ್ ಶುಲ್ಕ ಹೆಚ್ಚಳ – ಏಪ್ರಿಲ್ 1ರಿಂದಲೇ ಹೊಸ ದರ ಜಾರಿ

ಖಾಸಗಿ ವಾಹನಗಳಿಗೆ ನೀಡಲಾಗುವ ವಾರ್ಷಿಕ ಫಾಸ್ಟ್ಯಾಗ್ ಪಾಸ್ನ ದರ ಹೆಚ್ಚಳವಾಗಿದೆ. ಇದೀಗ 75 ರೂಪಾಯಿಯಷ್ಟು ಬೆಲೆ ಏರಿಕೆ ಕಂಡಿದ್ದು, ಏಪ್ರಿಲ್ 1 ರಿಂದಲೇ ಹೊಸ ದರ ಜಾರಿಗೆ ಬರಲಿದೆ.
ಇದನ್ನೂ ಓದಿ:ಹೋಟೆಲ್ ಉದ್ಯಮಕ್ಕೆ ತಟ್ಟಿದ ಯುದ್ದದ ಬಿಸಿ! – ಸಿಬ್ಬಂದಿ ಸಂಬಳ ಕಡಿತ.. ಉದ್ಯೋಗ ಕಳೆದುಕೊಳ್ಳುವ ಭೀತಿ!
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಫಾಸ್ಟ್ಯಾಗ್ ದರವನ್ನು ಹೆಚ್ಚಳ ಮಾಡಿದೆ. ಕಮರ್ಷಿಯಲ್ ಅಲ್ಲದ ವಾಹನಗಳ ವಾರ್ಷಿಕ ಫಾಸ್ಟ್ಯಾಗ್ ಪಾಸ್ ಶುಲ್ಕದಲ್ಲಿ ಏರಿಕೆಯಾಗಿದೆ. ಖಾಸಗಿ ಕಾರುಗಳು, ಜೀಪ್, ವ್ಯಾನ್ಗಳ ಮಾಲೀಕರು ವಾರ್ಷಿಕ ಪಾಸ್ನ ಬೆಲೆ 3,000 ರೂನಿಂದ 3,075 ರೂಗೆ ಏರಿಸಲಾಗಿದೆ. ಮುಂಬರುವ ಹಣಕಾಸು ವರ್ಷದಿಂದ, ಅಂದರೆ 2026ರ ಏಪ್ರಿಲ್ 1ರಿಂದ ಹೊಸ ದರಗಳು ಜಾರಿಗೆ ಬರುತ್ತವೆ. 2025ರಲ್ಲಿ ಸ್ವಾತಂತ್ರ್ಯೋತ್ಸವ ದಿನದಂದು ಫಾಸ್ಟ್ಯಾಗ್ ವಾರ್ಷಿಕ ಪಾಸ್ನ ಸ್ಕೀಮ್ ಆರಂಭವಾಯಿತು. ನಾನ್-ಕಮರ್ಷಿಯಲ್ ಬಳಕೆಗೆ ನೊಂದಾಯಿಸಲಾದ ಖಾಸಗಿ ವಾಹನಗಳ ಮಾಲೀಕರಿಗೆ ಅನುಕೂಲವಾಗಲೆಂದು ಈ ಯೋಜನೆ ಚಾಲನೆಗೆ ತರಲಾಗಿದೆ. ವಾರ್ಷಿಕ್ ಫಾಸ್ಟ್ಯಾಗ್ ಪಾಸ್ ಪಡೆದರೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ 200 ಬಾರಿ ಟೋಲ್ ಪ್ಲಾಜಾದಲ್ಲಿ ಪ್ರವೇಶ ಪಡೆಯಬಹುದು. ಈ ಪಾಸ್ ಒಂದು ವರ್ಷದವರೆಗೆ ಅನ್ವಯವಾಗಿರುತ್ತದೆ.
ಯಾವುದೇ ಟೋಲ್ ಪ್ಲಾಜಾದಲ್ಲಿದರ ಹೆಚ್ಚಿರಲಿ, ಅಥವಾ ಕಡಿಮೆ ಇರಲಿ, ಅದು ಈ ವಾರ್ಷಿಕ ಪಾಸ್ನಲ್ಲಿ ಒಂದೇ ದರ. ಒಂದು ವರ್ಷದೊಳಗೆ ಹಾದು ಹೋಗುವ ಟೋಲ್ ಪ್ಲಾಜಾಗಳ ಸಂಖ್ಯೆ 200 ದಾಟುವಂತಿಲ್ಲ. ವಾರ್ಷಿಕ ಪಾಸ್ ಪಡೆದರೆ ಪದೇ ಪದೇ ಫಾಸ್ಟ್ಯಾಗ್ ರೀಚಾರ್ಜ್ ಮಾಡುವುದು ತಪ್ಪುತ್ತದೆ. ಈ ಪಾಸ್ ಸ್ಕೀಮ್ ಆರಂಭವಾಗಿ ಇನ್ನೂ ಒಂದು ವರ್ಷ ಆಗಿಲ್ಲ, ಆಗಲೇ ಸಾಕಷ್ಟು ಜನಬಳಕೆ ಪಡೆಯುತ್ತಿದೆ. 50 ಲಕ್ಷಕ್ಕೂ ಹೆಚ್ಚು ಜನರು ಫಾಸ್ಟ್ಯಾಗ್ ವಾರ್ಷಿಕ ಪಾಸ್ ಖರೀದಿ ಮಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಖಾಸಗಿ ಕಾರುಗಳ ಶೇ. 20ರಷ್ಟು ಟೋಲ್ ಟ್ರಾನ್ಸಾಕ್ಷನ್ಗಳು ವಾರ್ಷಿಕ ಪಾಸ್ ಬಳಸಿ ಆಗುತ್ತಿವೆ ಎಂದು ದತ್ತಾಂಶಗಳು ಹೇಳುತ್ತವೆ. ರಾಜಮಾರ್ಗ್ ಯಾತ್ರಾ ಆ್ಯಪ್ ಹಾಗೂ ಹೆದ್ದಾರಿ ಪ್ರಾಧಿಕಾರ ಮತ್ತು ರಸ್ತೆ ಸಾರಿಗೆ ಸಚಿವಾಲಯದ ಅಧಿಕೃತ ವೆಬ್ಸೈಟ್ಗಳಲ್ಲಿ ಫಾಸ್ಟ್ಯಾಗ್ ವಾರ್ಷಿಕ ಪಾಸ್ ಅನ್ನು ಪಡೆಯಬಹುದು. ಈ ವೆಬ್ಸೈಟ್ ಅಥವಾ ಆ್ಯಪ್ಗೆ ಹೋಗಿ, ಫಾಸ್ಟ್ಯಾಗ್ ಜೋಡಿತ ಅಕೌಂಟ್, ವಾಹನ ನೊಂದಣಿ ವಿವರ ಮತ್ತು ನೊಂದಾಯಿತ ಮೊಬೈಲ್ ನಂಬರ್ ಮೂಲಕ ಲಾಗಿನ್ ಆಗಬೇಕು. ವಾರ್ಷಿಕ ಪಾಸ್ಗೆ ಪೇಮೆಂಟ್ ಮಾಡಿದ ಬಳಿಕ ಅದು ಆ್ಯಕ್ಟಿವೇಟ್ ಆಗುತ್ತದೆ.

ನೋಡಿರಿ

