ಗಂಭೀರ್ 13 ವರ್ಷದ ಸಿಟ್ಟು – ಸಚಿನ್ ಗೆ ಕೊಟ್ಟ ಶಾಕ್ ಹೇಗಿತ್ತು?
ಯುವಿ ನಿವೃತ್ತಿಗೆ ಧೋನಿಯೇ ಕಾರಣನಾ?

ಗೌತಮ್ ಗಂಭೀರ್ ಟೀಂ ಇಂಡಿಯಾ ಹೆಡ್ಕೋಚ್ ಆದ ಟೈಮಲ್ಲಿ ಒಂದು ಮಾತು ಹೇಳಿದ್ರು. ತಂಡದಲ್ಲಿ ಸ್ಟಾರ್ಡಂ ಬಿಡ್ಬೇಕು ಯಂಗ್ಸ್ಟರ್ಸ್ ಬರ್ಬೇಕು ಅಂತಾ. ಅವ್ರು ಯಾರನ್ನ ಟಾರ್ಗೆಟ್ ಮಾಡಿ ಹೇಳಿದ್ರು ಅನ್ನೋದು ಇಡೀ ಜಗತ್ತಿಗೇ ಗೊತ್ತಿದೆ. ಌಂಡ್ ಇತ್ತೀಚೆಗೆ ಭಾರತ ಟಿ-20 ವಿಶ್ವಕಪ್ ಗೆದ್ಮೇಲೆ ಪ್ಲೇಯರ್ಸ್ ಯಾವತ್ತೂ ಇಂಡಿವಿಶ್ಯುಯಲ್ ಸ್ಕೋರ್ಗಾಗಿ ಆಡೋದಲ್ಲ. ಅರ್ಧಶತಕ ಅಥವಾ ಶತಕಕ್ಕೆ ಹತ್ತಿರವಿದ್ದಾಗ ಸ್ಲೋಗೇಮ್ ಆಡ್ತಾರೆ. ಅದನ್ನ ಬಿಟ್ಟು ಟೂರ್ನಿಗಳಲ್ಲಿ ಕಪ್ ಗೆದ್ದು ಸೆಲೆಬ್ರೇಟ್ ಮಾಡ್ಬೇಕು ಅಂತಾ. ಌಸ್ ಎ ಕೋಚ್ ಆಗಿ ಗಂಭೀರ್ ಹೇಳೋದೆಲ್ಲಾ ನಿಜಾನೇ. ತಂಡಕ್ಕಾಗಿ ಅವ್ರು ತಗೊಳ್ಳೋ ನಿರ್ಧಾರಗಳೂ ಕರೆಕ್ಟೇ. ಬಟ್ ಒಬ್ಬ ಪ್ಲೇಯರ್ ಆಗಿ ಸ್ವತಃ ಗಂಭೀರ್ ಅವ್ರೇ ತಮ್ಮ ಪಾಲಿಸಿಯನ್ನ ಪಾಲಿಸಿಲ್ಲ. ಅದೆಷ್ಟರ ಮಟ್ಟಿಗೆ ಅಂದ್ರೆ ತಮ್ಮನ್ನ ತಂಡದಿಂದ ಕೈಬಿಟ್ರು ಅನ್ನೋ ಒಂದೇ ಕಾರಣಕ್ಕೆ ಅದೊಬ್ಬರ ಜೊತೆಗೆ ಮಾತನ್ನೇ ಬಿಟ್ಟಿದ್ದಾರೆ.
ಇದನ್ನೂ ಓದಿ : ಇಸ್ರೇಲ್ – ಇರಾನ್ ಎಫೆಕ್ಟ್! – ಇನ್ಮುಂದೆ ವಿಮಾನಯಾನದಲ್ಲೂ ಇಂಧನ ಶುಲ್ಕ ಪಾವತಿಸಬೇಕು!
ಹಳೇ ಬೇರು ಹೊಸ ಚಿಗುರು ಅನ್ನೋ ಹಾಗೇ ಕ್ರಿಕೆಟ್‌ನಲ್ಲಿ ಲೆಜೆಂಡರಿ ಪ್ಲೇಯರ್ಗಳೆಲ್ಲಾ ತೆರೆಮರೆಗೆ ಸರಿದಂತೆ ಹೊಸಬರು ಬರ್ತಾರೆ. ಲೆಗೆಸಿ ಹಾಗೇ ಕಂಟಿನ್ಯೂ ಆಗ್ತಿರುತ್ತೆ. ಇದು ಯಾವುದೇ ಕ್ರೀಡೆಯ ನಿಯಮ. ಸಚಿನ್, ದ್ರಾವಿಡ್, ಕಪಿಲ್ ದೇವ್, ಗವಾಸ್ಕರ್ ಹೀಗೆ ಕ್ರಿಕೆಟ್ ಲೋಕವನ್ನೇ ಆಳಿದ ದಿಗ್ಗಜರೆಲ್ಲಾ ಈ ಸತ್ಯವನ್ನ ಒಪ್ಪಿಕೊಂಡಿದ್ದಾರೆ. ಜಸ್ಟ್ ಮೂವ್ ಆನ್ ಅಂತಾ ಹೊರನಡೆದಿದ್ದಾರೆ. ಕಳೆದ ಒಂದೂವರೆ ದಶಕದಿಂದ ಭಾರತ ತಂಡದ ಬ್ಯಾಕ್ಬೋನ್ ಆಗಿದ್ದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟಿ-20ಐ ಮತ್ತು ಟೆಸ್ಟ್ ಫಾರ್ಮೆಟ್ಗೆ ಗುಡ್ ಬೈ ಹೇಳಿ ಏಕದಿನ ಪಂದ್ಯಗಳನ್ನ ಮಾತ್ರ ಆಡ್ತಿದ್ದಾರೆ. ಇವ್ರಿಬ್ಬರ ನಿವೃತ್ತಿ ನಿರ್ಧಾರದ ಹಿಂದೆ ಕೋಚ್ಗಳು ಮತ್ತು ಆಯ್ಕೆ ಸಮಿತಿ ಅಧಿಕಾರಿಗಳ ನಿರ್ಧಾರವೂ ಆಗಿರುತ್ತೆ. ಆದ್ರೆ ಕೋಚ್ ಆಗಿ ಡಿಸಿಷನ್ಸ್ ತಗೊಳ್ತಿರೋ ಇದೇ ಗೌತಮ್ ಗಂಭೀರ್ ತಾವು ಆಟಗಾರನಾಗಿದ್ದಾಗ ಮಾತ್ರ ಅದನ್ನ ಒಪ್ಪಿಕೊಳ್ಳೋಕೇ ರೆಡಿನೇ ಇರ್ಲಿಲ್ಲ. ಅದೆಷ್ಟರ ಮಟ್ಟಿಗೆ ಅಂದ್ರೆ ತಮ್ಮ ನಿವೃತ್ತಿ ಬಗ್ಗೆ ಈಗಲೂ ಜಿದ್ದು ಸಾಧಿಸ್ತಿದ್ದಾರೆ.
ಸಚಿನ್, ಯುವಿ ನಿವೃತ್ತಿ ಗುಟ್ಟು ಬಿಚ್ಚಿಟ್ಟ ಸಂದೀಪ್ ಪಾಟೀಲ್!
ಸಂದೀಪ್ ಪಾಟೀಲ್. ಭಾರತದ ಮಾಜಿ ಮುಖ್ಯ ಆಯ್ಕೆಗಾರ. ಇತ್ತೀಚೆಗೆ ವಿಕಿ ಲಾಲ್ವಾನಿ ಶೋನಲ್ಲಿ ಮಾತನಾಡಿದ ಸಂದೀಪ್ ಸಾಕಷ್ಟು ಇಂಟ್ರೆಸ್ಟಿಂಗ್ ವಿಚಾರಗಳನ್ನ ಬಾಯಿ ಬಿಟ್ಟಿದ್ದಾರೆ. ಸಚಿನ್ ಅವ್ರ ನಿವೃತ್ತಿ, ಯುವರಾಜ್ ಸಿಂಗ್ಗೆ ಚಾನ್ಸ್ ಸಿಗದ ವಿಚಾರಗಳನ್ನೂ ಪ್ರಸ್ತಾಪ ಮಾಡಿದ್ದಾರೆ. 2013ರ ಟೈಮಲ್ಲೇ ಬಿಸಿಸಿಐ ಆಯ್ಕೆ ಸಮಿತಿ ಸಚಿನ್ ತೆಂಡೂಲ್ಕರ್ ಬದಲಿ ಆಟಗಾರರನ್ನ ಹುಡುಕ್ತಿತ್ತು. ಈ ಟೈಮಲ್ಲಿ ನಾನು ನಿಮ್ಮ ಫ್ಯೂಚರ್ ಪ್ಲ್ಯಾನ್ ಏನು ಅಂತಾ ಪ್ರಶ್ನೆ ಮಾಡಿದ್ದೆ. ಯಾಕೆ ಅಂದಾಗ ಬಿಸಿಸಿಐ ನಿಮ್ಮ ಬದಲಿ ಆಟಗಾರರನ್ನ ಹುಡುಕುತ್ತಿದೆ ಅಂದಿದ್ದೆ. ಸಚಿನ್ ಮತ್ತೆ ಕರೆ ಮಾಡಿ ನೀವು ಸೀರಿಯಸ್ ಆಗಿ ಕೇಳ್ತಿದ್ದೀರಾ ಎಂದು ಪ್ರಶ್ನಿಸಿದ್ರು. ನಾನು ಹೌದು ಎಂದಿದ್ದೆ. ಇದಾದ ಒಂದೇ ವಾರದಲ್ಲಿ ಏಕದಿನ ಕ್ರಿಕೆಟ್ನಿಂದ ಸಚಿನ್ ನಿವೃತ್ತಿ ಘೋಷಿಸಿದ್ರು. ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯೊಂದಿಗೆ ತಮ್ಮ 24 ವರ್ಷಗಳ ಅಂತಾರಾಷ್ಟ್ರೀಯ ವೃತ್ತಿಜೀವನವನ್ನು ಕೊನೆಗೊಳಿಸಿದರು ಎಂದಿದ್ದಾರೆ. ಹಾಗೇ ಯುವರಾಜ್ಸಿಂಗ್ರನ್ನ ತಂಡದಿಂದ ಕೈಬಿಟ್ಟಿದ್ದೇ ಮಹೇಂದ್ರ ಸಿಂಗ್ ಧೋನಿ ಅನ್ನೋ ಆರೋಪವನ್ನ ತಳ್ಳಿ ಹಾಕಿದ್ದಾರೆ. ನಾನು ದಾಖಲೆ ಸಮೇತ ಹೇಳ್ತೇನೆ. ಆಯ್ಕೆ ಸಮಿತಿಯು ಯುವರಾಜ್ ಸಿಂಗ್ ಅವ್ರನ್ನ ತಂಡದಿಂದ ಕೈಬಿಡುವ ನಿರ್ಧಾರ ತೆಗೆದುಕೊಂಡಾಗ ಧೋನಿ ಯಾವುದೇ ಆಕ್ಷೇಪ ವ್ಯಕ್ತಪಡಿಸಲಿಲ್ಲ, ಬದಲಿಗೆ ಸಮಿತಿಯ ಮೇಲೆ ಪೂರ್ಣ ನಂಬಿಕೆ ಇಟ್ಟಿದ್ದರು. ಹೀಗಾಗಿ ಯುವಿ ಕೈಬಿಟ್ಟಿದ್ದು ಮ್ಯಾನೇಜ್ಮೆಂಟ್ ನಿರ್ಧಾರವಾಗಿತ್ತು ಅಂದಿದ್ದಾರೆ. ಌಂಡ್ ಇದೇ ಟೈಮಲ್ಲೇ ಗಂಭೀರ್ ಬಗ್ಗೆ ಶಾಕಿಂಗ್ ವಿಚಾರವನ್ನ ರಿವೀಲ್ ಮಾಡಿದ್ದಾರೆ.
ಸಂದೀಪ್ ಪಾಟೀಲ್ ಜೊತೆ ಮಾತನ್ನೇ ಬಿಟ್ಟಿರುವ ಗಂಭೀರ್!
ಭಾರತದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದಕ್ಕೆ ಈಗ್ಲೂ ಜಿದ್ದು ಸಾಧಿಸ್ತಿದ್ದಾರೆ ಅಂತಾ ಸಂದೀಪ್ ಹೇಳಿದ್ದಾರೆ. 2011 ರ ಏಕದಿನ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿರುವ ಗಂಭೀರ್, ಜನವರಿ 2013 ರಲ್ಲಿ ತಮ್ಮ ಕೊನೆಯ ಏಕದಿನ ಪಂದ್ಯವನ್ನು ಆಡಿದರು. 2013 ರ ಆರಂಭದಲ್ಲಿ ಅವರು ಟೆಸ್ಟ್ ತಂಡದಲ್ಲಿಯೂ ತಮ್ಮ ಸ್ಥಾನವನ್ನು ಕಳೆದುಕೊಂಡರು. ಪಾಟೀಲ್ ನೇತೃತ್ವದ ಆಯ್ಕೆ ಸಮಿತಿಯು ಗಂಭೀರ್ ಮತ್ತು ವೀರೇಂದ್ರ ಸೆಹ್ವಾಗ್ ಅವರ ಕಳಪೆ ಫಾರ್ಮ್ ನಂತರ ಅವರನ್ನು ಕೈಬಿಟ್ಟು ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ಗೆ ಚಾನ್ಸ್ ನೀಡಿತ್ತು. ಅಂದಿನಿಂದ ಗಂಭೀರ್ ಅವರು ಸಂದೀಪ್ ಪಾಟೀಲ್ ಅವರೊಂದಿಗೆ ಮಾತನಾಡುವುದನ್ನೇ ನಿಲ್ಲಿಸಿದ್ದಾರಂತೆ. ಸಂದೀಪ್ ಅವ್ರೇ ಹೇಳಿದಂತೆ ಗಂಭೀರ್ ಮತ್ತು ನಾನು ಈಗಲೂ ಹಲವು ಟಿವಿ ಶೋಗಳಲ್ಲಿ ಒಟ್ಟಿಗೆ ಇರುತ್ತೇವೆ. ಆದರೆ ಅವರು ನನ್ನ ಕಡೆ ಕಣ್ಣೆತ್ತಿಯೂ ನೋಡುವುದಿಲ್ಲ. ನಾನು ಹಲೋ ಎಂದು ಹೇಳಿದರೂ ರಿಯಾಕ್ಟ್ ಮಾಡಲ್ಲ. ಮೊದ್ಲೆಲ್ಲಾ ವಾರಕ್ಕೆ 2 ಸಲ ಫೋನ್ ಮಾಡ್ತಿದ್ರು. ಆದರೆ ಆಯ್ಕೆ ಸಮಿತಿ ನಿರ್ಧಾರದ ಬಳಿಕ ಕಂಪ್ಲೀಟ್ ಚೇಂಜ್ ಆದ್ರು. ಹೀಗಾಗಿ ಗೌತಮ್ ಯಾವುದನ್ನೂ ಮರೆಯುವುದಿಲ್ಲ ಮತ್ತು ಯಾರನ್ನೂ ಕ್ಷಮಿಸುವುದಿಲ್ಲ ಎಂದಿದ್ದಾರೆ. ಹಾಗೇ ದ್ರಾವಿಡ್, ಲಕ್ಷ್ಮಣ್ ಮತ್ತು ಗಂಗೂಲಿ ಅವರಂತಹ ದಿಗ್ಗಜರು ತಂಡದಿಂದ ಹೊರಗುಳಿದಾಗ ಅವ್ರ ಅದನ್ನ ಕೂಲ್ ಆಗಿ ತಗೊಂಡ್ರು. ಬಟ್ ಗಂಭೀರ್ ಈಗ್ಲೂ ಅದನ್ನೇ ಮನಸ್ಸಲ್ಲಿ ಇಟ್ಟುಕೊಂಡಿದ್ದಾರೆ ಅನ್ನೋ ಮೂಲಕ ಗಂಭೀರ್ ವ್ಯಕ್ತಿತ್ವ ಎಂಥದ್ದು ಅನ್ನೋದನ್ನ ಹೇಳಿದ್ದಾರೆ. ಸೋ ಇದನ್ನೆಲ್ಲಾ ಕೇಳಿದಾಗ್ಲೇ ಗೊತ್ತಾಗುತ್ತೆ ಭಾರತೀಯ ಕ್ರಿಕೆಟ್‌ನಲ್ಲಿ ಆಟಗಾರರು ಮತ್ತು ಆಯ್ಕೆಗಾರರ ನಡುವೆ ಎಂಥೆಂಥಾ ಸನ್ನಿವೇಶಗಳು ಬರ್ತಾವೆ ಅನ್ನೋದು. ಕೋಚ್ ಆಗಿ ಈಗ ಆಟಗಾರರಿಗೆ ಲೆಕ್ಚರ್ ಕೊಡ್ತಿರೋ ಗಂಭೀರ್ ತಾವು ಆಟಗಾರನಾಗಿದ್ದಾಗ ಅದನ್ನ ಹೇಗೆ ಸ್ವೀಕಾರ ಮಾಡಿದ್ರು ಅನ್ನೋದನ್ನೂ ನೆನಪಿಸಿಕೊಳ್ಳಬೇಕಾಗುತ್ತೆ.

ನೋಡಿರಿ

