ಸನ್ ರೈಸರ್ಸ್ ನಿಂದ ಅಬ್ರಾರ್ ಔಟ್? – ರಿಲೀಸ್ ಮಾಡಿದ್ರೂ ಕಾವ್ಯಗೆ ಸಂಕಷ್ಟ!
ಎಲ್ಲಾ ಪಾಕ್ ಪ್ಲೇಯರ್ಸ್ ನೂ ಬಿಡ್ತಾರಾ?

ಸನ್ ರೈಸರ್ಸ್ ಹೈದ್ರಾಬಾದ್ ಟೀಂ ಸಿಕ್ಕಾಪಟ್ಟೆ ಟ್ರೆಂಡಿಂಗ್ನಲ್ಲಿದೆ. ಹಾಗಂತ ಐಪಿಎಲ್ ಕಾರಣಕ್ಕಾಗಿ ಅಲ್ಲ. ಇಂಗ್ಲೆಂಡ್ನಲ್ಲಿ ನಡೆಯಲಿರೋ ದಿ ಹಂಡ್ರೆಡ್ ಟೂರ್ನಮೆಂಟ್ಗಾಗಿ ಪಾಕಿಸ್ತಾನದ ಬೌಲರ್ ಅಬ್ರಾರ್ ಅಹ್ಮದ್ರನ್ನ ಕಾವ್ಯಾ ಮಾರನ್ ಒಡೆತನದ ಸನ್ ರೈಸರ್ಸ್ ಲೀಡ್ಸ್ ಖರೀದಿ ಮಾಡಿದೆ ಅನ್ನೋ ಕಾರಣಕ್ಕೆ. ಒಂದಷ್ಟು ಭಾರತೀಯರು ಐಪಿಎಲ್ನಲ್ಲಿ ಎಸ್ಆರ್ಹೆಚ್ನೇ ಬ್ಯಾನ್ ಮಾಡಿ ಅಂತಾ ಸಮರ ಸಾರಿದ್ದಾರೆ. ಕಳೆದ ಎರಡು ದಿನಗಳಿಂದ ಸಾಕಷ್ಟು ಡವಲಪ್ಮೆಂಟ್ಸ್ ಕೂಡ ಆಗ್ತಿದೆ.
ಇದನ್ನೂ ಓದಿ : IPL ಜೊತೆ PSL ಪೈಪೋಟಿ – ಐಪಿಎಲ್ಗೂ ಮುಂಚೆ PSL ಶುರು
ಇಂಗ್ಲೆಂಡ್ನಲ್ಲಿ ನಡೆಯಲಿರೋ ದಿ ಹಂಡ್ರೆಡ್ ಲೀಗ್ನಲ್ಲಿ ಪಾಕಿಸ್ತಾನ್ ಆಟಗಾರ ಅಬ್ರಾರ್ ಅಹ್ಮದ್ ಅವರನ್ನು ಸನ್ ರೈಸರ್ಸ್ ಲೀಡ್ಸ್ ಫ್ರಾಂಚೈಸಿ ಖರೀದಿ ಮಾಡಿದೆ. ಎಸ್ಆರ್ಹೆಚ್ ಮಾಲೀಕತ್ವದ ಸನ್ರೈಸರ್ಸ್ ಲೀಡ್ಸ್ 1,90,000 ಪೌಂಡ್ಗಳಿಗೆ ಬಿಡ್ ಮಾಡಿದೆ. ಸೋ ಇದೇ ಭಾರತೀಯರ ಸಿಟ್ಟಿಗೆ ಕಾರಣ ಆಗಿದೆ. ಭಾರತದ ವಿರೋಧಿಗಳಾಗಿರೋ ಪಾಕ್ ಪ್ಲೇಯರ್ಗಳ ಮೇಲೆ ಭಾರತೀಯ ಮೂಲಕ ಮಾಲೀಕರ ಫ್ರಾಂಚೈಸಿ ಯಾಕೆ ಬಿಡ್ ಮಾಡ್ಬೇಕು ಅನ್ನೋದು ಅಭಿಮಾನಿಗಳ ಸಿಟ್ಟಿಗೆ ಕಾರಣ. ಐಪಿಎಲ್ನಲ್ಲೂ ಎಸ್ಆರ್ಹೆಚ್ ಬ್ಯಾನ್ ಮಾಡಿ ಅನ್ನೋ ಕೂಗು ಎದ್ದಿದೆ. ಸೋ ನೆಗೆಟಿವ್ನೆಸ್ ಜಾಸ್ತಿ ಆಗಿರೋದ್ರಿಂದ ಈಗ ಕಾವ್ಯಾ ಮಾರನ್ ಇಕ್ಕಟ್ಟಿಗೆ ಸಿಲುಕಿದ್ದಾರೆ.
ಅಬ್ರಾರ್ ಅಹ್ಮದ್ ರನ್ನು ತಂಡದಿಂದ ಕೈಬಿಡುತ್ತಾ ಫ್ರಾಂಚೈಸಿ?
ಅಭಿಮಾನಿಗಳು ರಿಪೋರ್ಟ್ ಮಾಡಿದ್ದ ಪರಿಣಾಮ ಸನ್ರೈಸರ್ಸ್ ಲೀಡ್ಸ್ನ ‘X’ ಖಾತೆಯನ್ನು ತಾತ್ಕಾಲಿಕವಾಗಿ ಸಸ್ಪೆಂಡ್ ಮಾಡಲಾಗಿತ್ತು. ಹಾಗೇ ಫ್ಯಾನ್ಸ್ ಆಕ್ರೋಶ ಜಾಸ್ತಿಯಾಗ್ತಿರೋದ್ರಿಂದ ಫ್ರಾಂಚೈಸಿಯು ಪಾಕ್ ಆಟಗಾರನನ್ನು ಕೈ ಬಿಡುವ ಬಗ್ಗೆ ಚಿಂತಿಸಿದ್ದಾರೆ ಎನ್ನಲಾಗಿದೆ. ಆದ್ರೆ ದಿಢೀರ್ ಅಂತಾ ರಿಲೀಸ್ ಮಾಡೋದೂ ಕಷ್ಟ. ಯಾಕಂದ್ರೆ ಯಾವುದೇ ಸ್ಟ್ರಾಂಗ್ ರೀಸನ್ ಇಲ್ದೇ ಕೈಬಿಟ್ರೆ ಬಿಡ್ ಮಾಡಿದ್ದ ಅಷ್ಟೂ ಹಣ ಕೊಡ್ಬೇಕು. ಅದೂ ಅಲ್ದೇ ದಿ ಹಂಡ್ರೆಡ್ ಟೂರ್ನಿಯು ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ನಿಯಮದಡಿ ನಡೆಯುತ್ತೆ. ಜಸ್ಟ್ ಸೋಶಿಯಲ್ ಮೀಡಿಯಾ ವಿರೋಧದ ಕಾರಣಕ್ಕೆ ಅಬ್ರಾರ್ರನ್ನ ಕೈಬಿಡೋಕೆ ಇಸಿಬಿ ಅನುಮತಿ ನೀಡುತ್ತಾ ಅನ್ನೋ ಪ್ರಶ್ನೆಯೂ ಇದೆ. ಇನ್ನು ಅಬ್ರಾರ್ ಖರೀದ ಕಾಂಟ್ರವರ್ಸಿ ಬಗ್ಗೆ ಬಿಸಿಸಿಐ ಕೂಡ ರಿಯಾಕ್ಟ್ ಮಾಡಿದೆ. ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಮಾತನಾಡಿ, ಇದು ಬಿಸಿಸಿಐ ಲಿಮಿಟ್ಸ್ನಿಂದ ಹೊರಗಿದೆ. ಬಿಸಿಸಿಐ ನಡೆಸುವ ಐಪಿಎಲ್ನಲ್ಲಿ ಪಾಕ್ ಆಟಗಾರರಿಗೆ ಅವಕಾಶವಿಲ್ಲ. ಆದರೆ ವಿದೇಶಿ ಲೀಗ್ ನಮ್ಮ ವ್ಯಾಪ್ತಿಗೆ ಬರಲ್ಲ ಎಂದಿದ್ದಾರೆ. ಹಾಗಂತ ಪಾಕಿಸ್ತಾನಿ ಆಟಗಾರರು ಕಾವ್ಯಾ ಒಡೆತನದ ಫ್ರಾಂಚೈಸಿಯಲ್ಲಿ ಅಷ್ಟೇ ಅಲ್ಲ. ಭಾರತೀಯ ಮೂಲದ ಬೇರೆ ಬೇರೆ ತಂಡಗಳಲ್ಲೂ ಇದ್ದಾರೆ.
ಬೇರೆ ಬೇರೆ ಆಟಗಾರರೂ ಇದ್ದಾರೆ!
ಕೆಕೆಆರ್ ಮಾಲೀಕತ್ವದ ಟ್ರಿನ್ ಬಾಗೊ ನೈಟ್ ರೈಡರ್ಸ್
ಮೊಹಮ್ಮದ್ ಅಮೀರ್ ಮತ್ತು ಉಸ್ಮಾನ್ ತಾರಿಕ್ ಆಟ
ಡೆಲ್ಲಿ ಕ್ಯಾಪಿಟಲ್ಸ್ ಮಾಲೀಕತ್ವ ಸಿಯಾಟಲ್ ಓರ್ಕಾಸ್ ತಂಡ
2025ರ ಎಂಎಲ್ಸಿ ಟೂರ್ನಿಯಲ್ಲಿ ಇಮಾದ್ ವಾಸಿಂ ಆಟ
ಮುಂಬೈ ಇಂಡಿಯನ್ಸ್ ಮಾಲೀಕತ್ವ ಎಂಐ ಎಮಿರೇಟ್ಸ್
ಪಾಕ್ ಆಟಗಾರ ಉಸ್ಮಾನ್ ಖಾನ್ ಐಎಲ್ಟಿ20 ಲೀಗ್ ನಲ್ಲಿ

ನೋಡಿರಿ

