ಬೆನ್ನಿಗೆ ನಿಂತ ಪಾಕ್​ಗೆ ಬಾಂಗ್ಲಾ ಗುನ್ನಾ – ಕಿಚ್ಚು ಹಚ್ಚಿದ ಸಲ್ಮಾನ್ ರನ್ ಔಟ್ 
ಬಾಂಗ್ಲಾ ಕ್ಯಾಪ್ಟನ್ ಮಾಡಿದ್ದು ಸರಿನಾ?  

ಬೆನ್ನಿಗೆ ನಿಂತ ಪಾಕ್​ಗೆ ಬಾಂಗ್ಲಾ ಗುನ್ನಾ – ಕಿಚ್ಚು ಹಚ್ಚಿದ ಸಲ್ಮಾನ್ ರನ್ ಔಟ್ ಬಾಂಗ್ಲಾ ಕ್ಯಾಪ್ಟನ್ ಮಾಡಿದ್ದು ಸರಿನಾ?  

ಪಾಕಿಸ್ತಾನ ಮ್ಯಾಚ್ ಆಡ್ತಿದೆ ಅಂದ್ರೆ ಅಲ್ಲಿ ಗೆಲ್ತಾರೋ ಸೋಲ್ತಾರೋ ಮ್ಯಾಟ್ರ್ ಆಗಲ್ಲ. ಬಟ್ ಒಂದಿಲ್ಲೊಂದು ಕಾಂಟ್ರವರ್ಸಿಯಂತೂ ಪಕ್ಕಾ. ಈಗ ಬಾಂಗ್ಲಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ದೊಡ್ಡ ಹೈಡ್ರಾಮಾವೇ ನಡೆದಿದೆ. ರನ್​ಔಟ್ ರಾದ್ಧಾಂತವಾಗಿದೆ. ಕೆಲವ್ರು ಇಟ್ಸ್ ಎ ರೂಲ್ಸ್ ಅಂದ್ರೆ ಇನ್ನೂ ಕೆಲವ್ರು ಸ್ಪೋರ್ಟ್ಸ್​ಮ್ಯಾನ್​ಶಿಪ್ ಎಲ್ಲಿ ಅಂತಿದ್ದಾರೆ.

ಇದನ್ನೂ ಓದಿ : IPL ಜೊತೆ PSL ಪೈಪೋಟಿ – ಐಪಿಎಲ್‌ಗೂ ಮುಂಚೆ  PSL ಶುರು 

ಟಿ-20 ವಿಶ್ವಕಪ್​ನೂ ಮುನ್ನ ಬಾಂಗ್ಲಾದೇಶ ಟೂರ್ನಿ ಆಡಲ್ಲ ಅಂದಾಗ ಅವ್ರ ಬೆನ್ನಿಗೆ ನಿಂತಿದ್ದೇ ಪಾಕಿಸ್ತಾನ. ನಿಮ್ಮ ಜೊತೆ ನಾವಿದ್ದೇವೆ. ವೀ ಆರ್ ಬ್ರದರ್ಸ್ ಫ್ರಂ ಅನದರ್ ಮದರ್ಸ್. ವಿಶ್ವಕಪ್ ಆಡದಿದ್ರೂ ನಾವ್ ಸರಣಿ ಆಡೋಣ ಅಂತಾ ವಿಶ್ವಕಪ್ ಬೆನ್ನಲ್ಲೇ ಏಕದಿನ ಸರಣಿ ಶೆಡ್ಯೂಲ್ ಮಾಡಿದ್ರು. ಪಾಕಿಸ್ತಾನಕ್ಕೂ ಫೈನಲ್​ಗೆ ಹೋಗಲ್ಲ ಅನ್ನೋ ಕ್ಲಾರಿಟಿ ಇತ್ತು. ಹೀಗಾಗೇ ಟಿ-20 ವಿಶ್ವಕಪ್​ ಫೈನಲ್ ಡೇಟ್ 8ಕ್ಕೆ ಇಟ್ಟಿದ್ರೆ ಜಸ್ಟ್ 2 ದಿನ ಗ್ಯಾಪ್ ಕೊಟ್ಟು ಮಾರ್ಚ್ 11ಕ್ಕೆ ಫಸ್ಟ್ ಏಕದಿನ ಪಂದ್ಯ ಇಟ್ಟಿದ್ರು. ಬ್ಯಾಡ್​ಲಕ್ ಫಸ್ಟ್ ಮ್ಯಾಚಲ್ಲೇ ಪಾಕಿಸ್ತಾನ ಬಾಂಗ್ಲಾದ ಎದುರು ಹೀನಾಯವಾಗಿ ಸೋತಿತ್ತು. ಇನ್ನು ಮಾರ್ಚ್ 13ಕ್ಕೆ ಎರಡನೇ ಪಂದ್ಯದಲ್ಲಿ ದೊಡ್ಡ ಹೈಡ್ರಾಮಾವೇ ನಡೆದು ಹೋಗಿದೆ.

ಮಾರ್ಚ್ 11ರಿಂದ ಬಾಂಗ್ಲಾ ಮತ್ತು ಪಾಕಿಸ್ತಾನ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ಸ್ಟಾರ್ಟ್ ಆಗಿದೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡ 114 ರನ್​ಗಳಿಗೆ ಆಲೌಟ್ ಆಗಿ ಹೀನಾಯವಾಗಿ ಸೋತಿತ್ತು. ಈಗ ಎರಡನೇ ಪಂದ್ಯ ಗೆಲ್ಲಲೇಬೇಕಾದ ಪ್ರೆಶರ್​​ನಲ್ಲಿದ್ರು. ಡಾಕಾದಲ್ಲಿ ನಡೆದ ಈ ಮ್ಯಾಚಲ್ಲಿ ಮೊದಲು ಬ್ಯಾಟಿಂಗ್ ಆರಂಭಿಸಿದ ಪಾಕ್​ಗೆ ಒಳ್ಳೆ ಆರಂಭವೇ ಸಿಕ್ಕಿತ್ತು. ಆದ್ರೆ ಪಾಕ್ ಇನ್ನಿಂಗ್ಸ್​ನ 39ನೇ ಓವರ್​ನಲ್ಲಿ ನಡೆದ ಅದೊಂದು ಘಟನೆ ಕ್ರಿಕೆಟ್ ಲೋಕದಲ್ಲೇ ಕಿಚ್ಚು ಹಚ್ಚಿದೆ. ಪರವಿರೋಧದ ಫೈಟ್ ಶುರುವಾಗಿದೆ. ಆಗಿದ್ದೇನೆಂದ್ರೆ 39 ನೇ ಓವರ್​ನಲ್ಲಿ ಮೊಹಮದ್‌ ರಿಜ್ವಾನ್‌ ಸ್ಟ್ರೈಕ್​ನಲ್ಲಿದ್ರು. ಬಾಂಗ್ಲಾ ಪರ ಕ್ಯಾಪ್ಟನ್ ಕೂಡ ಆಗಿರುವ ಮೆಹದಿ ಹಸನ್ ಮಿರಾಜ್ ಬೌಲಿಂಗ್​ಗೆ ಬಂದ್ರು. ಈ ವೇಳೆ ರಿಜ್ವಾನ್ ಚೆಂಡನ್ನು ಬೌಲರ್‌ನ ಬಲಭಾಗಕ್ಕೆ ಫ್ಲಿಕ್ ಮಾಡಿದ್ರು. ಆಗ ಮಿರಾಜ್ ಚೆಂಡನ್ನು ತನ್ನ ಕಾಲಿನಿಂದ ತಡೆದ್ರು. ಇತ್ತ ನಾನ್-ಸ್ಟ್ರೈಕರ್‌ನಲ್ಲಿದ್ದ ಸಲ್ಮಾನ್ ಅಲಿ ಆಘಾ ರನ್​ಗಾಗಿ ಓಡಲು ಮುಂದಾಗಿ ಬಾಲ್ ಅಲ್ಲೇ ಇದ್ದಿದ್ರಿಂದ ವಾಪಸ್ ಆಗ್ತಿದ್ರು. ಆಗ ಮಿರಾಜ್ ಬಾಲ್ ತಡೆಯೋವಾಗ ಸಲ್ಮಾನ್​ಗೆ ಡಿಕ್ಕಿ ಹೊಡಿತಾರೆ. ಒಂದು ರೀತಿ ಸಲ್ಮಾನ್​ರನ್ನ ತಡೆಯೋ ಥರನೇ ಇತ್ತು ಅವ್ರ ಆಕ್ಷನ್. ಇನ್ನು ಕ್ರೀಸ್‌ನಿಂದ ಹೊರಗಿದ್ದ ಸಲ್ಮಾನ್‌, ಬಗ್ಗಿ ಚೆಂಡನ್ನು ಬೌಲರ್‌ಗೆ ಎತ್ತಿಕೊಡಲು ಹೋಗ್ತಾರೆ. ಕೂಡ್ಲೇ ಅಲರ್ಟ್ ಆದ ಮೆಹಿದಿ ಅದೇ ಚೆಂಡನ್ನ ಎತ್ಕೊಂಡು ಸೀದಾ ಸ್ಟಂಪ್ಸ್​​ಗೆ ಹೊಡೆದು ರನೌಟ್‌ಗೆ ಅಪೀಲ್ ಮಾಡ್ತಾರೆ. ಌಂಡ್ ಥರ್ಡ್ ಅಂಪೈರ್ ಕೂಡ ಔಟ್ ಕೊಟ್ಟೇ ಬಿಡ್ತಾರೆ.

ಇದೇ ರನ್​ಔಟ್ ವಿಚಾರ ಮೈದಾನದಲ್ಲಿ ದೊಡ್ಡ ರಾದ್ಧಾಂತಕ್ಕೆ ಕಾರಣವಾಗುತ್ತೆ. ಮೆಹಿದಿ ಹಾಗೂ ಸಲ್ಮಾನ್‌ ನಡುವೆ ವಾಕ್ಸಮರ ನಡೆಯುತ್ತೆ. ಸಿಟ್ಟಲ್ಲಿದ್ದ ಸಲ್ಮಾನ್ ಕೈಯಲ್ಲಿದ್ದ ಗ್ಲೌಸ್, ಬ್ಯಾಟ್ ಹಾಗೇ ಹೆಲ್ಮೆಟ್ ಎಲ್ಲಾ ಕಿತ್ತೆಸೆದು ಆಕ್ರೋಶ ಹೊರಹಾಕ್ತಾರೆ. ಬೈಯ್ಕೊಂಡೇ ಮೈದಾನದಿಂದ ಹೊರ ಹೋಗ್ತಾರೆ. ಸೋ ಇಲ್ಲಿ ಬಾಂಗ್ಲಾ ಬೌಲರ್ ಮೆಹಿದಿ ಮಾಡಿದ್ದು ತಪ್ಪೇನಲ್ಲ. ಇಟ್ಸ್​ ಎ ರೂಲ್ಸ್.. ಅದನ್ನ ಅವ್ರು ಫಾಲೋ ಮಾಡಿದ್ದಾರೆ. ಌಂಡ್ ಅಲ್ಲಿ ಸಲ್ಮಾನ್ ಅಘಾ ಬಾಲ್ ಎತ್ತಿಕೊಡುವಂತ ನೆಸೆಸರಿನೇ ಇರ್ಲಿಲ್ಲ. ಅದು ಅವ್ರ ಕೆಲ್ಸನೂ ಅಲ್ಲ. ಬಟ್ ಕ್ರೀಡಾಸ್ಪೂರ್ತಿ ಅಂಥಾ ಬಂದಾಗ ಇದೆಲ್ಲಾ ತಪ್ಪು ಅನ್ಸುತ್ತೆ. ಹೀಗಾಗಿಯೇ ಕೆಲವ್ರು ಮೆಹಿದಿ ಮಾಡಿದ್ದು ತಪ್ಪು ಅಂತಿದ್ದಾರೆ. ಭಾರತದ ಮಾಜಿ ಆಟಗಾರ ಮೊಹಮ್ಮದ್ ಕೈಫ್ ಕೂಡ ಮೆಹಿದಿ ಮಾಡಿದ್ದು ತಪ್ಪು ಅಂತಿದ್ದಾರೆ. ಕ್ರಿಕೆಟರ್ಸ್​ಗೆ ಒಂದಷ್ಟು ಸಜೇಷನ್ಸ್ ಕೊಟ್ಟಿದ್ದಾರೆ. ಯಾವುದೇ ವಿಕೆಟ್ ಪಡೆಯುವ ಆತುರ ಕ್ರೀಡಾ ಸ್ಫೂರ್ತಿಗಿಂತ ದೊಡ್ಡದಲ್ಲ. ಇದು ವಿಶ್ವಕಪ್ ಫೈನಲ್ ಪಂದ್ಯವಾಗಿದ್ದರೂ ಸಹ ಇಂತಹ ಕೆಲಸ ಮಾಡಬಾರದು. ಯುವ ಕ್ರಿಕೆಟಿಗರು ಇದನ್ನು ಎಂದಿಗೂ ಅನುಕರಿಸಬಾರದು ಅಂತಾ ಕೈಫ್ ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಯಂಗ್​ಸ್ಟರ್ಸ್​ಗೆ ಕಿವಿಮಾತು ಹೇಳಿದ್ದಾರೆ.

ಇಲ್ಲಿ ಸಲ್ಮಾನ್ ಅಲಿ ಅಘಾ ರನ್ ಔಟ್ ಆದ್ಮೇಲೆ ಮತ್ತೆ ಕ್ರಿಕೆಟ್ ಲೋಕದಲ್ಲಿ ಸ್ಪೋರ್ಟ್ಸ್​್ಮ್ಯಾನ್ ಶಿಪ್​ ಚರ್ಚೆಗೆ ಬಂದಿದೆ. ಈ ವಿಚಾರದಲ್ಲಿ ಕೆಲ ಕ್ರಿಕೆಟಿಗರು ರೂಲ್ಸ್ ಈಸ್ ಎ ರೂಲ್ಸ್.. ಸಣ್ಣ ಚಾನ್ಸ್ ಸಿಕ್ರೂ ನಾವು ಔಟ್ ಮಾಡೇ ಮಾಡ್ತೀವಿ ಕೇರೇ ಮಾಡಲ್ಲ. ನಿಯಮನೇ ಹಂಗಿದೆ ಅಂದ್ರೆ ಇನ್ನೊಂದಷ್ಟು ಕ್ರಿಕೆಟರ್ಸ್ ಇದೊಂದು ಜೆಂಟಲ್​ಮೆನ್ ಗೇಮ್. ಕೆಲವು ಸಲ ಪಂದ್ಯಕ್ಕಿಂತ ಕ್ರೀಡಾಸ್ಪೂರ್ತಿ ದೊಡ್ಡದು ಅಂತಾ ಬಿಹೇವ್ ಮಾಡ್ತಾರೆ. ಇದಕ್ಕೇ ಭಾರತೀಯರು ಹೊರತಲ್ಲ. ಭಾರತಕ್ಕೆ ಮೊಟ್ಟ ಮೊದಲ ವಿಶ್ವಕಪ್ ಗೆಲ್ಲಿಸಿಕೊಟ್ಟ ಕಪಿಲ್ ದೇವ್ ಕೂಡ 1992ರಲ್ಲಿ ಇಂಥದ್ದೇ ರನ್ ಔಟ್ ಮಾಡಿದ್ದು ಬಾರೀ ವಿವಾದ ಆಗಿತ್ತು. ಸೌತ್ ಆಫ್ರಿಕಾ ವಿರುದ್ಧದ ಸರಣಿ ವೇಳೆ  ಪೀಟರ್ ಕಿರ್ಸ್ಟನ್ ಪದೇ ಪದೇ ಕ್ರೀಸ್‌ನಿಂದ ಬೇಗನೆ ಹೊರ ಬರ್ತಿದ್ರು. ಬೌಲರ್​ ಬಾಲ್ ರಿಲೀಸ್ ಮಾಡೋ ಮೊದ್ಲೇ ರನ್​ಗಾಗಿ ಓಡ್ತಿದ್ರು. ಬೌಲಿಂಗ್ ಮಾಡ್ತಿದ್ದ ಕಪಿಲ್ ದೇವ್ ಸಾಕಷ್ಟು ಸಲ ಎಚ್ಚರಿಕೆ ನೀಡಿದ್ರು. ಬಟ್ ಪೀಟರ್ ಅದನ್ನೇ ರಿಪೀಟ್ ಮಾಡ್ತಿದ್ರು. ಇದ್ರಿಂದ ಸಿಟ್ಟಾದ ಕಪಿಲ್ ದೇವ್ ಬಾಲ್ ಎಸೆಯುವ ಮುನ್ನವೇ ಬೆಲ್ಸ್ ಹಾರಿಸಿ ರನ್ ಔಟ್ ಮಾಡಿದರು. ಈ ಔಟ್ ದೊಡ್ಡ ವಿವಾದವಾಗಿತ್ತು.

ಌಂಡ್ ಕಪಿಲ್​ದೇವ್ ಬಗ್ಗೆ ಇನ್ನೊಂದು ವಿಚಾರ ಹೇಳಲೇಬೇಕು. ಭಾರತದ ಒನ್ ಆಫ್ ದಿ ಲೆಜೆಂಡರಿ ಆಲ್​ರೌಂಡರ್ ಆಗಿದ್ದ ಕಪಿಲ್ ದೇವ್ ತಮ್ಮ 16 ವರ್ಷಗಳ ಕ್ರಿಕೆಟ್ ವೃತ್ತಿಜೀವನದಲ್ಲಿ ಒಮ್ಮೆಯೂ ರನ್ ಔಟ್ ಆಗಿರಲಿಲ್ಲ. ‌ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 687 ವಿಕೆಟ್‌ಗಳನ್ನು ಪಡೆದ ದಾಖಲೆ ಇದೆ. 9031 ರನ್ ಗಳಿಸಿರುವ ಅವರು ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಒಬ್ಬ ಶ್ರೇಷ್ಠ ಆಲ್‌ರೌಂಡರ್ ಆಗಿದ್ದಾರೆ. ಇದೇ ಕಪಿಲ್ ದೇವ್ ಮಾಡಿದ್ದ ಮಂಕಡ್ ರನ್​ಔಟ್ ನೆಕ್ಸ್​ಟ್ ಜಾಸ್ತಿಯಾಗ್ತಾನೇ ಹೋಗಿದೆ. ಅದ್ರಲ್ಲೂ ಭಾರತದ ಮಾಜಿ ಬೌಲರ್ ಆರ್. ಅಶ್ವಿನ್ ಅಂತೂ ಈ ನಿಯಮವನ್ನ ಕಟ್ಟಾ ಪಾಲಿಸ್ತಾರೆ. ರೂಲ್ಸ್ ಈಸ್ ಎ ರೂಲ್ಸ್ ಅಂತಾ ಬೇಲ್ಸ್ ಎಗರಿಸಿ ಚೋಕ್ ಕೊಟ್ಟಿದ್ದಾರೆ. ಌಂಡ್ ವುಮೆನ್ಸ್​ ಟೀಂನಲ್ಲಿ ದೀಪ್ತಿ ಶರ್ಮಾ ಕೂಡ ಮಂಕಡಿಂಗ್ ರನ್​ ಔಟ್ ಮಾಡಿದ್ದಾರೆ.

ಹೀಗೆ ಒಂದಷ್ಟು ಆಟಗಾರರು ನಾನ್​ಸ್ಟ್ರೈಕರ್ ಬ್ಯಾಟರ್​ಗಳನ್ನ ಔಟ್ ಮಾಡಿದ್ರೆ ಇನ್ನೊಂದಷ್ಟು ಸಲ ಔಟ್ ಇದ್ರೂ ಅಪೀಲ್ ವಾಪಸ್ ತಗೊಂಡಿದ್ದಾರೆ. ಗೇಮ್​ಗಿಂತ ಕ್ರೀಡಾಸ್ಪೂರ್ತಿ ದೊಡ್ಡದು ಅಂತಾ ತೋರಿಸಿದ್ದಾರೆ. 2025ರ ಐಪಿಎಲ್​ನಲ್ಲಿ ಆರ್​ಸಿಬಿ ಮತ್ತು ಎಲ್​ಎಸ್​ಜಿ ನಡುವಿನ ಮ್ಯಾಚಲ್ಲೂ ಹೀಗೇ ಆಗಿತ್ತು. 17ನೇ ಓವರ್‌ನ ಕೊನೆಯ ಎಸೆತದಲ್ಲಿ ಲಖನೌ ಸ್ಪಿನ್ನರ್ ದಿಗ್ವೇಶ್ ರಾಠಿ, ನಾನ್‌ ಸ್ಟ್ರೈಕರ್‌ನಲ್ಲಿದ್ದ ಜಿತೇಶ್ ಶರ್ಮಾ ಅವರನ್ನು ಮಂಕಡಿಂಗ್ ರನೌಟ್ ಮಾಡಲು ಮುಂದಾಗಿದ್ರು. ಅಂಪೈರ್‌ಗೆ ಮನವಿ ಮಾಡಿದ್ರು. ಆದ್ರೆ ಲಕ್ನೋ ನಾಯಕ ರಿಷಭ್ ಪಂತ್ ಅಪೀಲ್ ವಾಪಸ್ ತಗೊಂಡಿದ್ರು.

ಇನ್ನು ಈ ಮಂಕಡಿಂಗ್ ರನ್ ಔಟ್ ಅಂತಾ ಬಂದಾಗ ಕ್ರಿಸ್ ಗೇಲ್ ಅವ್ರ ಗೆಶ್ಚರ್ ಸಿಕ್ಕಾಪಟ್ಟೆ ವೈರಲ್ ಆಗುತ್ತೆ. ವೆಸ್ಟ್ ಇಂಡೀಸ್ ಪರ ಬೌಲಿಂಗ್ ಮಾಡುವಾಗ ನಾನ್​ಸ್ಟ್ರೈಕರ್​ನಲ್ಲಿದ್ದ ಬ್ಯಾಟರ್ ಬಾಲ್ ರಿಲೀಸ್​ಗೂ ಮೊದ್ಲೇ ಕ್ರಿಸ್ ಬಿಟ್ಟಿದ್ರು. ಈ ಟೈಮಲ್ಲಿ ಬಾಲ್ ಹಿಡ್ಕೊಂಡು ಸ್ಟಂಪ್ಸ್ ಬಳಿ ಡ್ಯಾನ್ಸ್ ಮಾಡಿದ್ರು. ರನ್​ಔಟ್ ಗೆ ಅವಕಾಶ ಇದ್ರೂ ಮಾಡದೇ ಕ್ರೀಡಾಸ್ಪೂರ್ತಿ ಮೆರೆದಿದ್ರು.ಇನ್ನೊಂದಷ್ಟು ಟೈಮ್​ನಲ್ಲಿ ಬ್ಯಾಟರ್​ ಸ್ಲಿಪ್ ಆಗಿ ಬಿದ್ದಾಗ ರನ್​ಔಟ್​​ಗೆ ಅವಕಾಶ ಇದ್ರೂ ಅದನ್ನ ಮಿಸ್ ಮಾಡಿದ್ದಾರೆ. ಬಿದ್ದಿರೋ ಬ್ಯಾಟರ್​ಗಿಂದ ವಿಕೆಟ್ ಮುಖ್ಯ ಅಲ್ಲ ಅನ್ನೋದನ್ನ ತೋರಿಸಿದ್ದಾರೆ. ಇನ್ನು ಭಾರತದ ಪರ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡಲು ರನ್ ಅಪ್ ತೆಗೆದುಕೊಳ್ಳುವಾಗ್ಲೇ ಬಾಲ್ ಕೈಯಿಮದ ಜಾರಿ ಪಿಚ್​ ಕಡೆ ಓಡಿತ್ತು. ಈ ವೇಳೆ ನಾನ್​ಸ್ಟ್ರೈಕರ್​ನಲ್ಲಿದ್ದ ಆಸ್ಟ್ರೇಲಿಯಾ ಬ್ಯಾಟರ್ ಓಡಿ ಹೋಗಿ ಆ ಬಾಲ್​ ತಂದುಕೊಟ್ಟಿದ್ರು. ಅಲ್ಲಿ ಅವ್ರು ಬಾಲ್​ ತಂದುಕೊಡೋ ಅವಶ್ಯಕತೆ ಇರ್ಲಿಲ್ಲ.

 

Shantha Kumari

Leave a Reply

Your email address will not be published. Required fields are marked *