ಮಹಿಕಾ ಹುಚ್ಚಾಟಕ್ಕೆ ಪಾಂಡ್ಯಗೆ ಜೈಲು – ಮೈದಾನದಲ್ಲೇ ಮ್ಯಾನರ್ಸ್ ಮರೆತ್ರಾ?
ಕಿಸ್.. ಹಗ್.. ಮಂಕಾಯ್ತಾ ಸಕ್ಸಸ್?

ಹಾರ್ದಿಕ್ ಪಾಂಡ್ಯ. ಟೀಂ ಇಂಡಿಯಾದ ಸ್ಟಾರ್ ಆಲ್ರೌಂಡರ್. ಭಾರತ ಬ್ಯಾಕ್ ಟು ಬ್ಯಾಕ್ ಟಿ-20 ವಿಶ್ವಕಪ್ಗಳನ್ನ ಗೆಲ್ಲುವಲ್ಲಿ ಪಾಂಡ್ಯ ಕಾಂಟ್ರಬ್ಯೂಷನ್ ಕೂಡ ದೊಡ್ಡದಿದೆ. ಬ್ಯಾಟಿಂಗ್ನಲ್ಲಾಗ್ಲಿ ಬೌಲಿಂಗ್ನಲ್ಲಾಗ್ಲಿ ಬಿಗ್ ಇಂಪ್ಯಾಕ್ಟ್ ಮಾಡೋ ಪ್ಲೇಯರ್ ಅದ್ರಲ್ಲಿ ಡೌಟೇ ಇಲ್ಲ. ಆದ್ರೆ ಈ ಬಾರಿ ಟಿ-20 ವಿಶ್ವಕಪ್ ಮುಗಿದ್ಮೇಲೆ ಪಾಂಡ್ಯ ಬೇಡದೇ ಇರೋ ವಿಚಾರಗಳಿಂದಲೇ ಸುದ್ದಿಯಾಗ್ತಿದ್ದಾರೆ. ಅದೂ ಕೂಡ ತಮ್ಮ ಗರ್ಲ್ ಫ್ರೆಂಡ್ ಮಹಿಕಾ ಶರ್ಮಾಳಿಂದ.
ಇದನ್ನೂ ಓದಿ : PSL ಬಿಟ್ಟು IPLಗೆ ಎಂಟ್ರಿ – PCBಯಿಂದ ಬ್ಲೆಸ್ಸಿಂಗ್ ಮುಝರಬಾನಿ ಬ್ಯಾನ್
2024ರಲ್ಲಿ ಭಾರತ ಟಿ-20 ವಿಶ್ವಕಪ್ ಗೆದ್ದಾಗ ಎಲ್ಲಾ ಪ್ಲೇಯರ್ಗಳೂ ತಮ್ಮ ತಮ್ಮ ಫ್ಯಾಮಿಲಿ ಜೊತೆ ಸೆಲೆಬ್ರೇಟ್ ಮಾಡ್ತಿದ್ರೆ ಪಾಂಡ್ಯ ಮಾತ್ರ ಇಂಡಿಯನ್ ಫ್ಲ್ಯಾಗ್ ಹಿಡಿದು ಏಕಾಂಗಿಯಾಗಿ ಕಣ್ಣೀರು ಹಾಕಿದ್ರು. ಆಗಷ್ಟೇ ನತಾಶ ಜೊತೆಗಿನ ಮದುವೆ ಮುರಿದು ಬಿದ್ದಿತ್ತು. ಪಾಂಡ್ಯ ಕಣ್ಣೀರು ನೋಡಿ ಅಭಿಮಾನಿಗಳೂ ಬೇಜಾರಾಗಿದ್ರು. ಆದ್ರೆ ಈ ಸಲ ಅಂದ್ರೆ 2026ರಲ್ಲಿ ಭಾರತ ಚಾಂಪಿಯನ್ ಆದಾಗ ಎಲ್ರಿಗಿಂತ ಜಾಸ್ತಿ ಹೈಲೆಟ್ ಆಗಿದ್ದೇ ಪಾಂಡ್ಯ. ಅದೂ ಕೂಡ ತಮ್ಮ ಗೆಳತಿ ಮಹಿಕಾ ಶರ್ಮಾ ಜೊತೆ ಕುಣಿದು ಕುಪ್ಪಳಿಸಿದ್ರು. ಬಟ್ ಸೆಲೆಬ್ರೇಷನ್ ಟೈಮಲ್ಲಿ ಅವ್ರು ನಡೆದುಕೊಂಡ ರೀತಿ ಕೆಲವರ ಸಿಟ್ಟಿಗೆ ಕಾರಣ ಆಗಿದೆ. ಹಾಗೇ ಇದು ಪೊಲೀಸ್ ಸ್ಟೇಷನ್ ಮೆಟ್ಟಿಲೂ ಏರಿದೆ.
ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆಂದು ಪಾಂಡ್ಯ ವಿರುದ್ಧ ದೂರು!
ನ್ಯೂಜಿಲೆಂಡ್ ವಿರುದ್ಧ ಗೆದ್ದ ಮೇಲೆ ಹಾರ್ದಿಕ್ ಪಾಂಡ್ಯ ರಾಷ್ಟ್ರ ಧ್ವಜಕ್ಕೆ ಅಗೌರವ ತೋರಿದ್ದಾರೆ. ಹೀಗಾಗಿ ಕ್ರಮ ಕೈಗೊಳ್ಳಬೇಕು ಅಂತಾ ಪುಣೆಯ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ವಕೀಲ ವಾಜಿದ್ ಖಾನ್ ಅನ್ನೋದು ದೂರು ದಾಖಲಿಸಿದ್ದಾರೆ. ರಾಷ್ಟ್ರಧ್ವಜವನ್ನು ಮೈಮೇಲೆ ಸುತ್ತಿಕೊಂಡು ಮೈದಾನದಲ್ಲಿ ಮಲಗಿದ್ದಾರೆ. ಸಂಭ್ರಮಾಚರಣೆ ವೇಳೆ ತಮ್ಮ ಗೆಳತಿ ಮಹಿಕಾ ಶರ್ಮಾ ಜೊತೆಗೆ ಪೋಡಿಯಂ ಮೇಲೆ ಮಲಗಿದ್ದಾಗಲೂ ರಾಷ್ಟ್ರಧ್ವಜವನ್ನು ಮೈಮೇಲೆ ಧರಿಸಿದ್ದರು. ಇದು ಧ್ವಜಕ್ಕೆ ಮಾಡಿದ ಅಗೌರವ. ಹೀಗಾಗಿ ಕ್ರಮ ಕೈಗೊಳ್ಳಬೇಕು ಅಂತಾ ದೂರಿದ್ದಾರೆ. ಆರೋಪ ಸಾಬೀತಾದರೆ, ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆಯಡಿ ಗರಿಷ್ಠ 3 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ವಿಧಿಸಲು ಅವಕಾಶವಿದೆ. ರಾಷ್ಟ್ರಧ್ವಜದ ನಿಯಮದ ಪ್ರಕಾರ ಧ್ವಜವು ಎಂದಿಗೂ ನೆಲಕ್ಕೆ ಅಥವಾ ನೀರಿಗೆ ತಾಗಬಾರದು. ಹೀಗಿದ್ರೂ ಮಿತಿಮೀರಿ ವರ್ತಿಸಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ. ಮತ್ತೊಂದ್ಕಡೆ ಮಹಿಕಾ ವರ್ತನೆ ಐಸಿಸಿ ಅಧಿಕಾರಿಗಳಿಗೂ ಇರುಸು ಮುರುಸು ಉಂಟು ಮಾಡಿದೆ.
ಪಕ್ಕಕ್ಕೆ ಸರಿಯುವಂತೆ ಕೇಳಿದ್ರೂ ಕ್ಯಾರೆ ಎನ್ನದ ಮಹಿಕಾ!
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಟೀಂ ಇಂಡಿಯಾ ಪ್ಲೇಯರ್ಸ್ ಫೋಟೋಶೂಟ್‌ಗೆ ರೆಡಿಯಾಗುತ್ತಿದ್ದರು. ಆಗ ಮೈದಾನದಲ್ಲಿದ್ದ ಮಹೀಕಾರನ್ನು ಪಕ್ಕಕ್ಕೆ ಸರಿಯುವಂತೆ ಐಸಿಸಿ ಸಿಇಒ ಸಂಜೋಗ್ ಗುಪ್ತಾ ಕೇಳಿದ್ದಾರೆ. ಆದ್ರೆ ಸಂಜೋಗ್ ಗುಪ್ತಾ ಮಾತಿಗೆ ಕ್ಯಾರೇ ಎನ್ನದ ಮಹಿಕಾ ಅಲ್ಲಿಂದ ಕದಲದೇ ನಿಂತಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಇದಿಷ್ಟೇ ಅಲ್ಲದೆ ಪಾಂಡ್ಯ ಮತ್ತು ಮಹಿಕಾ ಕ್ರೀಡಾಂಗಣದಲ್ಲಿ ನಡೆದುಕೊಂಡ ಕೆಲ ವರ್ತನೆಗಳೂ ಸಾಕಷ್ಟು ಟ್ರೋಲ್ ಆಗ್ತಿವೆ. ಟಿ 20 ವಿಶ್ವಕಪ್ ಉದ್ದಕ್ಕೂ ಮಹಿಕಾ ಹಾಗೇ ಹಾರ್ದಿಕ್ ಜೊತೆಯಲ್ಲೇ ಟ್ರಾವೆಲ್ ಮಾಡ್ತಿದ್ರು. ಮತ್ತೊಂದೆಡೆ ಮಹಿಕಾಗಾಗಿ ಹಾರ್ದಿಕ್ ಪಾಂಡ್ಯ ತನ್ನ ಅಣ್ಣ ಕೃನಾಲ್ ಪಾಂಡ್ಯ ಫ್ಯಾಮಿಲಿಯಿಂದ ದೂರ ಆದ್ರಾ ಅನ್ನೋ ಮಾತುಗಳೂ ಕೇಳಿ ಬರ್ತಿವೆ. ಒಟ್ನಲ್ಲಿ ಕ್ರಿಕೆಟರ್ಸ್ ಅಂದಾಗ ಅವ್ರಿಗೂ ಫ್ಯಾಮಿಲಿ ಇರುತ್ತೆ, ಗರ್ಲ್ಫ್ರೆಂಡ್ ಇರ್ತಾರೆ. ಅವ್ರ ಜೊತೆಯೂ ಟೈಂ ಸ್ಪೆಂಡ್ ಮಾಡ್ಬೇಕು ಅದೆಲ್ಲಾ ಓಕೆ ಒಪ್ಪಿಕೊಳ್ಳೋಣ. ಬಟ್ ಅದಕ್ಕೆ ಅಂತಾ ಒಂದಷ್ಟು ಇತಿಮಿಗಳು ಇರುತ್ತೆ. ಸೋ ಅದನ್ನ ಯಾವತ್ತೂ ದಾಟಬಾರದು ಅಷ್ಟೇ. ಯಾಕಂದ್ರೆ ಪಾಂಡ್ಯ ಮೈದಾನದಲ್ಲಿ ಅದೆಂಥದ್ದೇ ಗ್ರೇಟ್ ಪರ್ಫಾಮೆನ್ಸ್ ನೀಡಿಯೂ ಮೈದಾನದ ಹೊರಗೆ ಅವ್ರ ನಡವಳಿಕೆ ಸರಿ ಇಲ್ಲ ಅಂದ್ರೆ ಪಾಸಿಟಿವ್ಗಿಂತ ನೆಗೆಟಿವಿಟಿ ಜಾಸ್ತಿಯಾಗಿ ಬಿಡುತ್ತೆ. ಕ್ರಿಕೆಟ್ನಿಂದ ಸಿಕ್ಕ ಸಕ್ಸಸ್ ಇನ್ಯಾವುದೋ ಸಿಚುಯೇಷನ್ನಿಂದ ಮಂಕಾಗಿಬಿಡಬಹುದು.

ನೋಡಿರಿ

