ಗೆದ್ದೇ ಬಿಡ್ತು ಆದಿ, ಭಾಗ್ಯ ಪ್ರೀತಿ.. ಕುಸುಮಾ ಸೊಸೆ ಮದ್ವೆಗೆ ರೆಡಿ? -ಕಿಡ್ನ್ಯಾಪರ್ ಶ್ರೇಷ್ಠಾಗೆ ಜೈಲೇ ಗತಿ!

ಎಷ್ಟೇ ಕಷ್ಟ ಬಂದ್ರೂ ಭಾಗ್ಯಗೆ ಅದರ ವಿರುದ್ದ ಹೋರಾಡುತ್ತಾಳೆ. ಯಾವುದೇ ಕಾರಣಕ್ಕೂ ಸೋಲನ್ನ ಒಪ್ಪಿಕೊಳ್ಳಲ್ಲ. ತನ್ನವರಿಗೋಸ್ಕರ ಜೀವ ಕೊಡೋದಿಕ್ಕೂ ಸಿದ್ದ ಇರ್ತಾಳೆ. ಇದೀಗ ಶ್ರೇಷ್ಠಾ ಬಲೆಯಿಂದ ಆದಿ, ತಾಂಡವ್‌ನ ಕಾಪಾಡಿದ್ದಲ್ಲದೇ, ತಾನೂ ಬಚಾವ್ ಆಗಿದ್ದಾಳೆ. ಇದೀಗ ಕುತಂತ್ರಿ ಶ್ರೇಷ್ಠಾಗೆ ಸೋಲು ಫಿಕ್ಸ್ ಆಗಿದೆ. ಮತ್ತೊಂದ್ಕಡೆ ಆದಿ ಭಾಗ್ಯ ಮದುವೆಗೆ ಕೌಂಟ್ ಡೌನ್ ಶುರುವಾಗಿದೆ.
ಇದನ್ನೂ ಓದಿ: ಶ್ರೀ ಗಂಧದಗುಡಿಗೂ ಕೈಕೊಟ್ಟ ಸಂಜನಾ? – ಸೀರಿಯಲ್ ಬಿಡೋದಾದ್ರೆ ಒಪ್ಪಿಕೊಳ್ಳುವುದೇಕೆ?
ಭಾಗ್ಯಲಕ್ಷ್ಮೀ ಸೀರಿಯಲ್ ಸ್ಟೋರಿ ಈಗ ರೋಚಕತೆಯಿಂದ ಕೂಡಿದೆ. ತಾಂಡವ್ ಭಾಗ್ಯ ಮನೆಗೆ ಬಂದಿರೋದನ್ನ ಶ್ರೇಷ್ಠಾಗೆ ಸಹಿಸೋದಿಕ್ಕೆ ಆಗ್ತಿಲ್ಲ. ಆತನನ್ನ ಮತ್ತೆ ತನ್ನ ಬುಟ್ಟಿಗೆ ಹಾಕಿಕೊಳ್ಳಬೇಕು ಅಂತ ಏನೇನೋ ಸರ್ಕಸ್ ಮಾಡ್ತಿದ್ದಾಳೆ. ಆರಂಭದಲ್ಲಿ ಸಾಯುತ್ತೇನೆ ಅಂತ ಬಿಲ್ಡಿಂಗ್ ಮೇಲೆ ಹತ್ತಿದ್ಲು. ಆ ಪ್ಲ್ಯಾನ್ ಠುಸ್ ಆದ್ಮೇಲೆ, ಭಾಗ್ಯಳನ್ನ ಸಾಯಿಸಲು ಸುಪಾರಿ ಕೊಟ್ಲು. ರಸ್ತೆಯಲ್ಲಿ ಆಕ್ಸಿಡೆಂಟ್ ಮಾಡಿಸಲು ಹೇಳಿದ್ಲು. ಆದ್ರೆ ಭಾಗ್ಯಳನ್ನ ಆದಿ ಬಚಾವ್ ಮಾಡಿದ್ದ. ಬಳಿಕ ತಾಂಡವ್‌ನ ಕಿಡ್ನ್ಯಾಪ್ ಮಾಡಿಸಿದ್ಲು ಶ್ರೇಷ್ಠಾ. ತಾಂಡವ್‌ನ ಕಿಡ್ನ್ಯಾಪ್ ಮಾಡಿಸಿ, ಆದಿ ಮೇಲೆ ಆರೋಪ ಬರುವಂತೆ ಮಾಡಿದ್ಲು. ಆದ್ರೆ ಭಾಗ್ಯ ಮಗಳಿಗಾಗಿ ತಾಂಡವ್‌ನ ಹುಡುಕಿದ್ಲು. ಆದ್ರೇ ಅಷ್ಟರಲ್ಲಿ ತಾಂಡವ್, ಆದಿ, ಭಾಗ್ಯ ಜೀವಕ್ಕೆ ಅಪಾಯ ಎದುರಾಗಿತ್ತು. ರೌಡಿಗಳು ಆದಿ ಹಾಗೂ ತಾಂಡವ್‌ನ ಕಟ್ಟಿಹಾಕಿದ್ರು. ಬಳಿಕ ಆದಿಗೆ ಚಾಕು ಚುಚ್ಚಲು ಹೊರಟಿದ್ಲು. ಆದ್ರೆ ಅಷ್ಟರಲ್ಲಿ ಭಾಗ್ಯ ರಣಚಂಡಿಯಾದ್ಲು. ತನ್ನನ್ನ ಕಟ್ಟಿ ಹಾಕಿದ್ರೂ, ಅದನ್ನ ಬಿಡಿಸಿಕೊಂಡು ಆದಿಯನ್ನ ಕಾಪಾಡಿದ್ಲು.
ಮತ್ತೊಂದ್ಕಡೆ ರೌಡಿಗಳಿಂದ ಆದಿ, ಭಾಗ್ಯ, ತಾಂಡವ್ ಬಚಾವ್ ಆಗ್ತಿದ್ದಂತೆ, ಶ್ರೇಷ್ಠಾ ಅಲ್ಲಿಗೆ ಪೊಲೀಸರನ್ನ ಕರೆದುಕೊಂಡು ಬಂದಿದ್ದಾಳೆ. ತಾಂಡವ್‌ನ ಭಾಗ್ಯ ಆದಿನೇ ಕಿಡ್ನ್ಯಾಪ್ ಮಾಡಿದ್ದು ಅಂತ ಹೇಳಿದ್ದಾಳೆ. ಆಕೆಯ ಮಾತು ನಂಬಿ ಪೊಲೀಸರು ಕೂಡ ಅರೆಸ್ಟ್ ಮಾಡಲು ಮುಂದಾಗಿದ್ರು. ಅಷ್ಟರಲ್ಲಿ ಕಿಶನ್ ಸಾಕ್ಷಿ ಸಮೇತ ಬಂದು ಆದಿ, ಭಾಗ್ಯಳನ್ನ ಬಚಾವ್ ಮಾಡಿದ. ಇದೀಗ ಕಿಡ್ನ್ಯಾಪರ್ ಯಾರು ಅಂತ ಪೊಲೀಸರು ಪತ್ತೆಹಚ್ಚಲು ಮುಂದಾಗಿದ್ದಾರೆ. ಇದ್ರಿಂದಾಗಿ ಶ್ರೇಷ್ಠಾಗೆ ನಡುಕ ಶುರುವಾಗಿದೆ. ತನ್ನ ವಿರುದ್ದ ಇರೋ ಸಾಕ್ಷಿಗಳನ್ನ ನಾಶ ಮಾಡುತ್ತಿದ್ದಾಳೆ. ತನ್ನ ಫೋನ್‌ನನ್ನ ಕೂಡ ಎಸೆದಿದ್ದಾಳೆ. ಇದೀಗ ಶ್ರೇಷ್ಠಾ ಸಿಕ್ಕಿ ಬೀಳ್ತಾಳಾ? ಅರೆಸ್ಟ್ ಆಗ್ತಾಳಾ ಅನ್ನೋ ಕ್ಯೂರಿಯಾಸಿಟಿ ಮೂಡಿದೆ.
ಇನ್ನು ಭಾಗ್ಯ ತಾಂಡವ್‌ನ ಕಾಪಾಡಿದ್ದಕ್ಕೆ ಸುನಂದ ತನ್ನದೇ ಕತೆ ಕಟ್ಟಿ ಆದಿಯನ್ನ ದೂರ ಮಾಡಲು ಪ್ರಯತ್ನಿಸಿದ್ದಾಳೆ. ಭಾಗ್ಯಗೆ ಗಂಡನ ಮೇಲಿರೋ ಪ್ರೀತಿಯಿಂದ ತಾಂಡವ್‌ನ ಕಾಪಾಡಿದ್ದು. ಇನ್ನಾದ್ರೂ ಭಾಗ್ಯಳಿಂದ ದೂರ ಇರಿ ಎಂದಿದ್ದಾಳೆ. ಅಷ್ಟರಲ್ಲಿ ಭಾಗ್ಯ ಬಂದು ತಾಯಿಗೆ ವಾರ್ನ್ ಮಾಡಿದ್ದಾಳೆ. ತನಗೆ ತಾಂಡವ್ ಮೇಲೆ ಪ್ರೀತಿನೂ ಇಲ್ಲ. ಕನಿಕರನೂ ಇಲ್ಲ. ಮಗಳಿಗಾಗಿ ನಾನು ಅವಳನ್ನ ಬಚಾವ್ ಮಾಡಿದ್ದು ಎಂದು ಹೇಳಿದ್ದಾಳೆ. ಮತ್ತೊಂದ್ಕಡೆ ತನ್ವಿ ಕೂಡ ತಾಂಡವ್‌ಗೆ ನಿನ್ನ ಮೇಲಿನ ಪ್ರೀತಿಯಿಂದ ಅಮ್ಮ ನಿನ್ನನ್ನ ಕಾಪಾಡಿದ್ದು ಅಂತ ಹೇಳಿದ್ದಾಳೆ. ಇದ್ರಿಂದಾಗಿ ತಾಂಡವ್ ಫುಲ್ ಖುಷಿಯಾಗಿದ್ದಾನೆ.
ಮತ್ತೊಂದ್ಕಡೆ ಭಾಗ್ಯ ಆದೀಶ್ವರ್ ಪ್ರೀತಿಯನ್ನ ಒಪ್ಪಿಕೊಂಡಿದ್ದಾಳೆ. ಕುಸುಮಾ ಕೂಡ ಇವರಿಬ್ಬರು ಆದಷ್ಟು ಬೇಗ ಒಂದು ಮಾಡ್ಬೇಕು. ಆದಿ ಭಾಗ್ಯ ಮದುವೆ ಮಾಡಿಸಬೇಕು ಅಂತ ಕಾಯುತ್ತಿದ್ದಾಳೆ. ಬುಡಬುಡಿಕೆಯವರು ಕೂಡ ಈ ಮನೆಯಲ್ಲಿ ಸದ್ಯದಲ್ಲೇ ಮದುವೆ ನಡೆಯಲಿದೆ ಎಂದು ಹೇಳಿದ್ದಾಳೆ. ಸುನಂದ ತಾಂಡವ್, ಭಾಗ್ಯ ಜಾತಕವನ್ನ ಜೋತಿಷಿ ಬಳಿ ತೋರಿಸಿದ್ರೆ, ಕುಸುಮಾ ಭಾಗ್ಯ, ಆದಿ ಜಾತನವನ್ನು ತೋರಿಸಿದ್ದಾಳೆ. ಜ್ಯೋತಿಷಿ ಭಾಗ್ಯ ಇಬ್ಬರ ಜೊತೆ ಕೂಡ ಖುಷಿಯಿಂದ ಜೀವನ ಮಾಡ್ತಾಳೆ ಅಂತ ಹೇಳಿದ್ದಾರೆ. ಇದೀಗ ಭಾಗ್ಯ ಯಾರನ್ನ ಮದುವೆ ಆಗ್ತಾಳೆ. ಮಕ್ಕಳಿಗಾಗಿ ತಾಂಡವ್ ಜೊತೆ ಇರ್ತಾಳಾ ಅಥವಾ ಮನಸಾರೆ ಪ್ರೀತಿಸಿದ ಆದಿ ಜೊತೆ ಇರ್ತಾಳಾ ಅನ್ನೋ ಕ್ಯೂರಿಯಾಸಿಟಿ ಮೂಡಿದೆ. ಒಟ್ಟಿನಲ್ಲಿ ಭಾಗ್ಯಲಕ್ಷ್ಮೀ ಸೀರಿಯಲ್ ನಲ್ಲಿ ಮತ್ತೆ ಮದುವೆ ಸಂಭ್ರಮ ಶುರುವಾಗಲಿದೆ.

ನೋಡಿರಿ

