ಹಾರ್ಮುಜ್ ಜಲಸಂಧಿ ದಾಟಿ ಭಾರತಕ್ಕೆ ಬರುತ್ತಿವೆ ಎರಡು LPG ಹಡಗು – ಭಾರತಕ್ಕೆ ದೊಡ್ಡ ಜಯ

ಗ್ಯಾಸ್ ಸಿಗದೆ ಕಂಗೆಟ್ಟ ಭಾರತೀಯರಿಗೆ ಮತ್ತೊಂದು ಗುಡ್‌ನ್ಯೂಸ್ ಸಿಕ್ಕಿದೆ. ಭಾರತದ ಧ್ವಜ ಹೊತ್ತ ಎರಡು ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ (SCI) LPG ಟ್ಯಾಂಕರ್‌ಗಳು ಇಂದು ಹಾರ್ಮುಜ್ ಜಲಸಂಧಿಯನ್ನು ದಾಟಿ ಭಾರತದ ಕಡೆಗೆ ಸಾಗುತ್ತಿವೆ. ಹಡಗುಗಳ ಹೆಸರುಗಳು ಶಿವಾಲಿಕ್ ಮತ್ತು ನಂದಾ ದೇವಿ. ಇರಾನ್ ಮತ್ತು ಆ ಪ್ರದೇಶದ ಇತರ ಎಲ್ಲಾ ದೇಶಗಳ ಸಹಕಾರದೊಂದಿಗೆ ಇದು ಬಹಳ ಎಚ್ಚರಿಕೆಯಿಂದ ನಡೆಸಲಾದ ಕಾರ್ಯಾಚರಣೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ಕೆಲವು ದಿನಗಳಿಂದ ಭಾರತ ಮತ್ತು ಇರಾನಿನ ನಾಯಕತ್ವಗಳ ನಡುವಿನ ಸರಣಿ ಮಾತುಕತೆ ನಂತರ ಈ ಎರಡು ಹಡಗುಗಳ ಓಡಾಟ ಆರಂಭಗೊಂಡಿದೆ ಎಂದು ಅವರು ಹೇಳಿದರು. ಹಾರ್ಮುಜ್ ಜಲಸಂಧಿಯ ಎರಡೂ ಬದಿಗಳಲ್ಲಿ ಪ್ರಸ್ತುತ ಬೀಡುಬಿಟ್ಟಿರುವ ಎರಡು ಡಜನ್‌ಗೂ ಹೆಚ್ಚು ಭಾರತೀಯ ಧ್ವಜ ಹೊಂದಿರುವ ವ್ಯಾಪಾರಿ ಹಡಗುಗಳಿಗೆ ಸುರಕ್ಷಿತ ಮಾರ್ಗವನ್ನು ಖಚಿತಪಡಿಸಿಕೊಳ್ಳಲು ಭಾರತ ಪ್ರಯತ್ನಗಳನ್ನು ತೀವ್ರಗೊಳಿಸಿದೆ.
ಇದನ್ನೂ ಓದಿ: ಮುಂದುವರಿದ ಇರಾನ್ VS ಅಮೆರಿಕ ಇಸ್ರೇಲ್ ಕದನ – ದುಬೈ ಮೇಲೆ ದಾಳಿ, ಯುಎಸ್ ರಾಯಭಾರ ಕಚೇರಿಗೆ ಡ್ರೋನ್ ಡಿಕ್ಕಿ
ಶಿವಾಲಿಕ್ ಸುಮಾರು 40,000 ಮೆಟ್ರಿಕ್ ಟನ್ ಅನಿಲವನ್ನು ಹೊತ್ತೊಯ್ಯುತ್ತಿದೆ ಮತ್ತು ನಂದಾ ದೇವಿ ಕೂಡ ಹೆಚ್ಚಿನ ಪ್ರಮಾಣದ ಅನಿಲವನ್ನು ಹೊತ್ತು ಬರುತ್ತಿದೆ. ಒಮನ್‌ನಿಂದ ಆಫ್ರಿಕಾಕ್ಕೆ ಗ್ಯಾಸೋಲಿಂಗ್ ಸಾಗಿಸುತ್ತಿರುವ ಭಾರತೀಯ ಧ್ವಜ ಹೊತ್ತ ಮತ್ತೊಂದು ತೈಲ ಟ್ಯಾಂಕರ್ ಜಗ್ ಪ್ರಕಾಶ್ ಕೂಡ ಹಾರ್ಮುಜ್ ಜಲಸಂಧಿಯ ಪೂರ್ವದಿಂದ ಪ್ರಯಾಣ ಬೆಳೆಸಿದೆ ಎಂದು ಹಡಗು ಸಚಿವಾಲಯದ ವಿಶೇಷ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿನ್ಹಾ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದರು.

ನೋಡಿರಿ

