ನಿಮ್ಮ ಮನೆಯಲ್ಲಿ ಗಡಿಯಾರ ಎಲ್ಲಿದೆ? ಯಾವ ದಿಕ್ಕಿನಲ್ಲಿದೆ? – ವಾಸ್ತು ಪ್ರಕಾರ ಗಡಿಯಾರ ಎಲ್ಲಿಡಬೇಕು ಗೊತ್ತಾ?

ನಿಮ್ಮ ಮನೆಯಲ್ಲಿ ಗಡಿಯಾರ ಎಲ್ಲಿದೆ? ಯಾವ ದಿಕ್ಕಿನಲ್ಲಿದೆ? – ವಾಸ್ತು ಪ್ರಕಾರ ಗಡಿಯಾರ ಎಲ್ಲಿಡಬೇಕು ಗೊತ್ತಾ?

ಮನೆಯ ವಾಸ್ತು ಸರಿಯಾಗಿದ್ದರೆ ನಿಮ್ಮ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸಲಿದೆ. ಆದ್ರೆ ಇದೇ ವಾಸ್ತು ದೋಷವು ನಿಮ್ಮ ಜೀವನವನ್ನು ಕಷ್ಟಗಳಿಗೆ ತಳ್ಳಬಹುದು.  ಮನೆಯಲ್ಲಿ ಯಾವ ವಸ್ತು ಯಾವ ದಿಕ್ಕಿನ ಕಡೆಗೆ ಇಡಬೇಕು ಎಂಬ ಆದಾರದ ಮೇಲೆ ನಿಮ್ಮ ಶಾಂತಿ, ಜೀವನ, ನೆಮ್ಮದಿ ನಿರ್ಧರಿತವಾಗುತ್ತದೆ.  ಹಾಗೇ ಮನೆಯಲ್ಲಿ ಗಡಿಯಾರವನ್ನು ಎಲ್ಲಿ ಇಡಬೇಕು? ಯಾವ ದಿಕ್ಕಿನಲ್ಲಿ ಇಡಬಾರದು ಎಂಬುದನ್ನು ತಿಳಿದುಕೊಳ್ಳೋಣ.

ವಾಸ್ತು ಶಾಸ್ತ್ರದ ಪ್ರಕಾರ ಹಾಳಾದ ಅಥವಾ ಮುರಿದ ಗಡಿಯಾರವನ್ನು ಇಡುವುದು ದೋಷಕ್ಕೆ ಕಾರಣವಾಗುತ್ತದೆ. ಇದು ಮನೆಯಲ್ಲಿ ಸದಸ್ಯರ ನಡುವಿನ ಮನಃಶಾಂತಿ ಹಾಳು ಮಾಡಲು ಕಾರಣವಾಗಲಿದೆ. ಈ ಗಡಿಯಾರವು ನಿಮ್ಮಲ್ಲಿ ಅಥವಾ ಮನೆಯ ಆರ್ಥಿಕ ಸ್ಥಿತಿಯಲ್ಲಿ ದೊಡ್ಡ ಸಮಸ್ಯೆಗಳ ತರಬಹುದು. ಹಾಗೆ ಮನೆಯಲ್ಲಿ ನಕಾರಾತ್ಮಕ ಶಕ್ತಿಗೆ ಇದು ಕಾರಣವಾಗುತ್ತದೆ ಎಂದು ಹೇಳಲಾಗಿದೆ. ಇದು ನಿದ್ರಾಹೀನತೆ, ಕೆಟ್ಟ ಕನಸುಗಳು ಬೀಳುವುದಕ್ಕೂ ಕಾರಣವಾಗಬಹುದು.

ಇದನ್ನೂ ಓದಿ: ನಿಮ್ಮ ಜಾತಕದಲ್ಲಿ ಸಾಡೇಸಾತಿ ಶನಿ ದೋಷ ಇದ್ಯಾ? – ಈ ರೀತಿಯಾಗಿ ಪೂಜೆ ಮಾಡಿ, ಆಮೇಲೆ ರಿಸಲ್ಟ್ ನೋಡಿ

ಹಲವರ ಮನೆಯಲ್ಲಿ ದೊಡ್ಡ ಕನ್ನಡಿಗಳ ಎದುರಿಗೆ ಗಡಿಯಾರ ಹಾಕುವುದು ನೋಡಬಹುದು. ಆದ್ರೆ ವಾಸ್ತು ಶಾಸ್ತ್ರದಲ್ಲಿ ಇದನ್ನು ತಪ್ಪು ಎಂದು ಪರಿಣಿಸಲಾಗಿದೆ. ಗಡಿಯಾರವು ಕನ್ನಡಿಯಲ್ಲಿ ಪ್ರತಿಫಲಿಸಬಾರದಂತೆ. ಇದು ನಿಮ್ಮ ಹಾಗೆ ಮನೆಯ ವಿಚಾರದಲ್ಲಿ ಅಶುಭ ತರಲಿದೆ ಎಂದು ಹೇಳಲಾಗಿದೆ. ಇದು ನಿಮ್ಮ ಪ್ರಗತಿಯನ್ನು ನಿಧಾನವಾಗಿಸುತ್ತದೆ.

ಮನೆಯ ಧ್ವಾರ ಬಾಗಿಲಿಗೆ ನೇರವಾಗಿ ಮೇಲೆ ಗಡಿಯಾರ ಇಡುವುದು ಸಹ ಉತ್ತಮ ಅಭ್ಯಾಸವಲ್ಲ. ಇದು ಮನೆಯಲ್ಲಿ ಆಗಾಗ ಅನಾರೋಗ್ಯ ಸಂಭವಿಸುವುದಕ್ಕೆ ಕಾರಣವಾಗುತ್ತೆ ಎಂದು ನಂಬಲಾಗಿದೆ. ನೀವು ಮನೆಯ ಒಳಗೆ ಬರುವಾಗ ಹಾಗೆ ಹೊರಹೋಗುವಾಗ ಈ ಗಡಿಯಾರದ ಕೆಳಗೆ ತಲೆ ಬಗ್ಗಿಸಿ ನಡೆಯುವುದು ಹಲವು ಪ್ರಕಾರದಲ್ಲಿ ಅಶುಭ ಎಂದು ಕರೆಯಾಗಿದೆ. ಇದು ನಿಮ್ಮ ಮನೆಯ ಒಟ್ಟರೆ ಪ್ರಗತಿಗೆ ಹಾನಿ ಮಾಡಬಹುದು ಎಂದು ಹೇಳಲಾಗಿದೆ.

Kishor KV

Leave a Reply

Your email address will not be published. Required fields are marked *