ನಿಮ್ಮ ಮನೆಯ ಗ್ಯಾಸ್ ಹೆಚ್ಚು ದಿನ ಬಳಕೆ ಬರಬೇಕಾ? – ಈ 5 ಸಿಂಪಲ್ ಟಿಪ್ಸ್ ಫಾಲೋ ಮಾಡಿ

ನಿಮ್ಮ ಮನೆಯ ಗ್ಯಾಸ್ ಹೆಚ್ಚು ದಿನ ಬಳಕೆ ಬರಬೇಕಾ? – ಈ 5 ಸಿಂಪಲ್ ಟಿಪ್ಸ್ ಫಾಲೋ ಮಾಡಿ

ಮಧ್ಯಪ್ರಾಚ್ಯದಲ್ಲಿನ ಇರಾನ್‌ ಮತ್ತು ಅಮೆರಿಕ-ಇಸ್ರೇಲ್ ಸಂಘರ್ಷ ಜಾಗತಿಕವಾಗಿ ಹಲವು ಪರಿಣಾಮಗಳನ್ನು ಬೀರಿದೆ. ಇದರ ಪರಿಣಾಮವಾಗಿ, ಭಾರತ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ತೈಲ ಹಾಗೂ ಎಲ್‌ಪಿಜಿ ಕೊರತೆ   ಎದುರಾಗಿದೆ. ಇದರಿಂದ ಪ್ರಸ್ತುತ ಎಲ್‌ಪಿಜಿ  ಸಿಲಿಂಡರ್‌ ಬಳಕೆದಾರರಿಗೆ ಸಾಕಷ್ಟು ಸಮಸ್ಯೆ ಸೃಷ್ಟಿಯಾಗಿದೆ. ಮುಂದಿನ ದಿನಗಳಲ್ಲಿ ಅಡುಗೆಗೆ ಸಿಲಿಂಡರ್ ಸಿಗುತ್ತಾ ಸಿಗಲ್ವಾ ಅನ್ನೋ ಅನುಮಾನ ಕೂಡ ಇದೆ. ಇರೋ ಗ್ಯಾಸ್‌ ಸಿಲಿಂಡರ್ ಹೆಚ್ಚು ಕಾಲ ಬರುವುದ್ದಕ್ಕೆ ಈ 5 ಟಿಪ್ಸ್‌ಗಳನ್ನ ಫಾಲೋ ಮಾಡಿ. ಒಂದು ತಿಂಗಳ ಬರೋ ಗ್ಯಾಸ್ ಎರಡು ತಿಂಗಳು ಬರುವುದು ಪಕ್ಕಾ.

ರೆಗ್ಯೂಲೇಟರ್ ಆಫ್

ಅನೇಕರು ಅಡುಗೆ ಮುಗಿದ ನಂತರ ಗ್ಯಾಸ್ ಸ್ಟೌವ್‌ನ ನಾಬ್ ಮಾತ್ರ ತಿರುಗಿಸಿ ಆಫ್ ಮಾಡುತ್ತಾರೆ, ಆದರೆ ಸಿಲಿಂಡರ್ ಮೇಲಿರುವ ರೆಗ್ಯೂಲೇಟರ್ ಅನ್ನು ಆಫ್ ಮಾಡುವುದಿಲ್ಲ. ಹೀಗೆ ಮಾಡುವುದರಿಂದ ಸಣ್ಣ ಪ್ರಮಾಣದಲ್ಲಿ ಗ್ಯಾಸ್ ಲೀಕ್ ಆಗುವ ಸಾಧ್ಯತೆ ಇರುತ್ತದೆ. ಇದು ಸಿಲಿಂಡರ್ ಬಹುಬೇಗ ಖಾಲಿಯಾಗಲು ಒಂದು ಪ್ರಮುಖ ಕಾರಣವಾಗಬಹುದು. ಆದ್ದರಿಂದ, ಪ್ರತಿಬಾರಿ ಅಡುಗೆ ಬಳಿಕ ರೆಗ್ಯೂಲೇಟರ್ ಸಹ ಆಫ್ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ.

ಪ್ರೆಷರ್ ಕುಕ್ಕರ್ ಬಳಕೆ

ಅಡುಗೆ ಮಾಡುವಾಗ ಸಾಧ್ಯವಾದಷ್ಟು ಪ್ರೆಷರ್ ಕುಕ್ಕರ್ ಬಳಸುವುದು ಉತ್ತಮ. ಕುಕ್ಕರ್‌ನಲ್ಲಿ ಆಹಾರ ಬೇಗ ಬೇಯುವುದರಿಂದ, ಅನಿಲದ ಬಳಕೆ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲದೆ, ಇತರ ಪಾತ್ರೆಗಳಲ್ಲಿ ಅಡುಗೆ ಮಾಡುವಾಗ ಅವುಗಳನ್ನು ಮುಚ್ಚಳದಿಂದ ಮುಚ್ಚಿ ಬೇಯಿಸುವುದರಿಂದಲೂ ಶಾಖ ಹೊರಹೋಗುವುದನ್ನು ತಡೆಯಬಹುದು ಮತ್ತು ತ್ವರಿತವಾಗಿ ಅಡುಗೆ ಮುಗಿಸಿ ಗ್ಯಾಸ್ ಉಳಿತಾಯ ಮಾಡಬಹುದು.

ಅಕ್ಕಿ ನೆನಸಿಡಿ

ಪ್ರತಿದಿನ ಅಡುಗೆ ಮಾಡುವಾಗ ಅಕ್ಕಿ ಮತ್ತು ಬೇಳೆಗಳನ್ನು ಬಳಸುತ್ತೇವೆ. ಅನ್ನ ಮಾಡುವ ಮೊದಲು ಅಕ್ಕಿಯನ್ನು ಕನಿಷ್ಠ 15 ನಿಮಿಷಗಳ ಕಾಲ ನೆನೆಸಿಡಿ. ಸಾಂಬಾರ್‌ಗೆ ಬೇಳೆ ಬಳಸುವಾಗಲೂ ಇದೇ ರೀತಿ ನೆನೆಸುವುದರಿಂದ ಅವು ಬೇಗ ಬೇಯುತ್ತವೆ. ಇದರಿಂದ ಅಡುಗೆಗೆ ಬೇಕಾಗುವ ಸಮಯ ಕಡಿಮೆಯಾಗಿ ಗ್ಯಾಸ್ ಉಳಿತಾಯವಾಗುತ್ತದೆ. ಈ ಅಭ್ಯಾಸವನ್ನು ಒಂದು ತಿಂಗಳು ನಿರಂತರವಾಗಿ ಕಣ್ಣರಿತಿದ್ದಲ್ಲಿ, ಗ್ಯಾಸ್‌ನಲ್ಲಿನ ಗಮನಾರ್ಹ ಉಳಿತಾಯವನ್ನು ನೀವೇ ಗಮನಿಸಬಹುದು.

ಫ್ರಿಡ್ಜ್‌ನಲ್ಲಿರೋ ವಸ್ತು ಡೈರೆಕ್ಟ್ ಬಿಸಿ ಮಾಡಬೇಡಿ 

ಫ್ರಿಡ್ಜ್‌ನಲ್ಲಿ ಇಟ್ಟಿರುವ ಆಹಾರ ಪದಾರ್ಥಗಳನ್ನು ಹೊರತೆಗೆದು ತಕ್ಷಣವೇ ಒಲೆಯ ಮೇಲಿಟ್ಟು ಬಿಸಿ ಮಾಡಬೇಡಿ. ತಂಪಾಗಿರುವ ವಸ್ತುಗಳು ಬಿಸಿಯಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ. ಆದ್ದರಿಂದ, ಫ್ರಿಡ್ಜ್‌ನಿಂದ ಹೊರತೆಗೆದ ನಂತರ ಸ್ವಲ್ಪ ಸಮಯ ಅವುಗಳನ್ನು ಕೋಣೆಯ ತಾಪಮಾನಕ್ಕೆ ಬರುವಂತೆ ಇಡಬೇಕು. ಹೀಗೆ ಮಾಡುವುದರಿಂದ, ಅವು ಬೇಗ ಬಿಸಿಯಾಗುತ್ತವೆ ಮತ್ತು ಗ್ಯಾಸ್ ಉಳಿತಾಯವಾಗುತ್ತದೆ.

ಹೊಸ ಗ್ಯಾಸ್ ಬರ್ನರ್

ನೀವು ವರ್ಷಗಳಿಂದ ಒಂದೇ ಗ್ಯಾಸ್ ಬರ್ನರ್ ಬಳಸುತ್ತಿದ್ದರೆ, ಅದನ್ನು ಬದಲಾಯಿಸುವ ಸಮಯ ಬಂದಿದೆ ಎಂದು ಅರ್ಥ. ಹಳೆಯ ಮತ್ತು ತುಕ್ಕು ಹಿಡಿದ ಬರ್ನರ್‌ಗಳಲ್ಲಿ ಗ್ಯಾಸ್ ಲೀಕೇಜ್ ಸಮಸ್ಯೆ ಇರಬಹುದು ಅಥವಾ ಅವು ಕೊಳಕು ಸಿಕ್ಕಿಹಾಕಿಕೊಂಡು ಅನಿಲದ ಹರಿವನ್ನು ನಿರ್ಬಂಧಿಸಬಹುದು. ಇದರಿಂದ ಅನಿಲ ಪೋಲಾಗುವುದಲ್ಲದೆ, ಅಡುಗೆಗೆ ಹೆಚ್ಚು ಸಮಯವೂ ಹಿಡಿಯುತ್ತದೆ. ನವೀಕೃತ ಬರ್ನರ್‌ಗಳು ಅನಿಲದ ಸದ್ಬಳಕೆಗೆ ನೆರವಾಗುತ್ತವೆ.

Kishor KV

Leave a Reply

Your email address will not be published. Required fields are marked *