ನೀವು ಶ್ವಾನ ಪ್ರಿಯರಾಗಿದ್ರೆ ಈ ವಿಚಾರ ತಿಳಿದುಕೊಳ್ಳಲೇ ಬೇಕು! – ನಾಯಿ ಕಚ್ಚುವುದು ಮಾತ್ರವಲ್ಲ, ನೆಕ್ಕುವುದು ಕೂಡ ಡೇಂಜರ್!

ನೀವು ಶ್ವಾನ ಪ್ರಿಯರಾಗಿದ್ರೆ ಈ ವಿಚಾರ ತಿಳಿದುಕೊಳ್ಳಲೇ ಬೇಕು! – ನಾಯಿ ಕಚ್ಚುವುದು ಮಾತ್ರವಲ್ಲ, ನೆಕ್ಕುವುದು ಕೂಡ ಡೇಂಜರ್!

ನಾಯಿ ಎಂದರೆ ನಮಗೆಲ್ಲಾ ತುಂಬಾ ಪ್ರೀತಿ. ಮನೆಯಲ್ಲಿ ನಾಯಿಗಳಿದ್ದರೆ ಅವುಗಳನ್ನು ಮುದ್ದಾಡುವುದು, ಅವು ನಮ್ಮನ್ನು ನೆಕ್ಕುವುದು ತುಂಬಾ ಸಾಮಾನ್ಯ. ಆದ್ರೆ ನಾಯಿಗಳ ವಿಚಾರದಲ್ಲಿ ನಾವು ಜಾಗ್ರತೆಯಿಂದ ಇರಲೇಬೇಕು. ಸ್ವಲ್ಪ ಎಚ್ಚರ ತಪ್ಪಿದ್ರು ಅಪಾಯ ಫಿಕ್ಸ್. ನಾಯಿ ನೆಕ್ಕಿದ್ರೆ ಅಪಾಯಕಾರಿ ರೋಗ ನಮ್ಮನ್ನು ಕಾಡುವ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ: ಋತುಚಕ್ರ ರಜೆ ಕಡ್ಡಾಯ ಕಾನೂನು ಮಹಿಳೆಯರ ವೃತ್ತಿಜೀವನದ ಮೇಲೆ ಎಫೆಕ್ಟ್ ಬೀಳುತ್ತೆ – ಸುಪ್ರೀಂ ಕೋರ್ಟ್

ಭಾರತ ಸೇರಿದಂತೆ ಪ್ರಪಂಚದಾದ್ಯಂತ ನಾಯಿ ನೆಕ್ಕುವುದರಿಂದ ಅನೇಕ ಜನರು ಸಾವನ್ನಪ್ಪಿದ್ದಾರೆ. ಇತ್ತೀಚೆಗೆ ಲಂಡನ್‌ನಲ್ಲಿ ವಾಸಿಸುವ ಮಹಿಳೆಯೊಬ್ಬರಿಗೆ ನಾಯಿ ನೆಕ್ಕಿದ್ದರಿಂದ ಅವರ ಕೈ ಮತ್ತು ಕಾಲುಗಳನ್ನೇ ಕತ್ತರಿಸಬೇಕಾಯಿತು. ಇದರಿಂದ ಮಹಿಳೆಗೆ ಸೆಪ್ಸಿಸ್ ಎಂಬ ಕಾಯಿಲೆ ಬಂದಿತ್ತು. ಆದ್ದರಿಂದ ನಾಯಿ ಕಚ್ಚುವುದು ಮಾತ್ರವಲ್ಲ, ನೆಕ್ಕುವುದು ಸಹ ನಿಮ್ಮ ಜೀವಕ್ಕೆ ಅಪಾಯಕಾರಿ. WHO ಪ್ರಕಾರ, ಭಾರತದಲ್ಲಿ ಪ್ರತಿವರ್ಷ ಸಾವಿರಾರು ಜನರು ರೇಬೀಸ್‌ನಿಂದ ಸಾಯುತ್ತಾರೆ. ಸಾಕು ನಾಯಿ ಕಚ್ಚಿದರೂ ಅಥವಾ ಬೀದಿ ನಾಯಿ ಕಚ್ಚಿದರೂ, ತಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು. ಇಂತಹ ಪರಿಸ್ಥಿತಿಯಲ್ಲಿ ರೇಬೀಸ್ ವಿರೋಧಿ ಇಂಜೆಕ್ಷನ್ ಪಡೆಯುವುದು ಅತ್ಯಗತ್ಯ. ಕೆಲವೇ ಗಂಟೆಗಳಲ್ಲಿ ರೇಬೀಸ್ ಇಂಜೆಕ್ಷನ್ ನೀಡದಿದ್ದರೆ, ವೈರಸ್ ದೇಹದಾದ್ಯಂತ ಹರಡಬಹುದು. ರೇಬೀಸ್ ಮೆದುಳು, ನರಮಂಡಲ ಮತ್ತು ಹೃದಯದ ಮೇಲೆ ಪರಿಣಾಮ ಬೀರುತ್ತದೆ. ಇದು ಸಾವಿಗೂ ಕಾರಣವಾಗಬಹುದು.

ನಾಯಿ ನೆಕ್ಕಿದರೆ ಏನಾಗುತ್ತದೆ?

ವೈದ್ಯರ ಪ್ರಕಾರ, ಸೋಂಕು ನಾಯಿ ಕಡಿತದಿಂದ ಮಾತ್ರವಲ್ಲದೆ ನಾಯಿಯ ನೆಕ್ಕುವಿಕೆಯಿಂದಲೂ ಬರಬಹುದು. ನಾಯಿಯ ಲಾಲಾರಸದಲ್ಲಿ ಸೋಂಕು ಉಂಟುಮಾಡುವ ಬ್ಯಾಕ್ಟೀರಿಯಾವೂ ಇರುತ್ತದೆ. ಸೋಂಕಿತ ನಾಯಿ ಮಾನವನ ಗಾಯ, ಕಡಿತ, ಗೀರು ಅಥವಾ ಕಣ್ಣು, ಮೂಗು ಅಥವಾ ಬಾಯಿಯನ್ನ ನೆಕ್ಕಿದರೆ, ನಾಯಿಯ ಲಾಲಾರಸದಲ್ಲಿರುವ ವೈರಸ್‌ಗಳು ದೇಹವನ್ನ ಪ್ರವೇಶಿಸುತ್ತವೆ. ಈ ವೈರಸ್‌ಗಳು ಮಾನವ ನರಮಂಡಲದ ಮೇಲೆ ಪರಿಣಾಮ ಬೀರುತ್ತವೆ ಮತ್ತು ರೇಬೀಸ್‌ಗೆ ಕಾರಣವಾಗಬಹುದು. ಈ ಸೋಂಕು ಸೆಪ್ಸಿಸ್‌ಗೆ ಕಾರಣವಾಗಬಹುದು.

ಸೆಪ್ಸಿಸ್ ಲಕ್ಷಣಗಳು

ಸೆಪ್ಸಿಸ್‌ನಿಂದಾಗಿ ಹೆಚ್ಚಿನ ಜ್ವರ ಅಥವಾ ದೇಹದ ಉಷ್ಣತೆ ಕಡಿಮೆಯಾಗಬಹುದು. ಇದರ ಲಕ್ಷಣಗಳು ಹೃದಯ ಬಡಿತದ ತೊಂದರೆ, ಉಸಿರಾಟ ಕಷ್ಟವಾಗುವುದು, ಮೂತ್ರ ವಿಸರ್ಜನೆ ಕಡಿಮೆಯಾಗುವುದು, ಅತಿಯಾದ ಆಯಾಸ, ಚರ್ಮದ ಮೇಲೆ ಕೆಂಪು ಅಥವಾ ಕಪ್ಪು ಕಲೆಗಳು, ಕಡಿಮೆ ರಕ್ತದೊತ್ತಡ, ಮೂರ್ಛೆ ಹೋಗುವುದು, ಶೀತ ಮತ್ತು ನಡುಕ, ತೀವ್ರ ನೋವು ಅಥವಾ ಅಸ್ವಸ್ಥತೆ ಕಂಡುಬರಬಹುದು.

ನಾಯಿಗಳ ಬಗ್ಗೆ ಎಚ್ಚರದಿಂದಿರಿ

ಹೀಗಾಗಿ ಸಾಕು ನಾಯಿಗಳಿಂದ ನೀವು ಗಾಯಗೊಂಡರೆ ಅಥವಾ ಗೀರು ಹಾಕಿದರೆ ಅವುಗಳಿಂದ ನೀವು ದೂರವಿರಬೇಕು. ನಿಮ್ಮ ಮನೆಯಲ್ಲಿ ನಾಯಿ ಇದ್ದರೆ, ಅದನ್ನ ನಿಮ್ಮ ಬಾಯಿ, ಮೂಗು ಮತ್ತು ಕಣ್ಣುಗಳಿಂದ ದೂರವಿಡಿ. ನೀವು ನಾಯಿಯನ್ನ ಮುಟ್ಟಿದರೆ, ತಕ್ಷಣವೇ ನಿಮ್ಮ ಕೈಗಳನ್ನ ಸೋಪಿನಿಂದ ಚೆನ್ನಾಗಿ ತೊಳೆಯಬೇಕು. ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆಗಳನ್ನ ತೆಗೆದುಕೊಳ್ಳುವುದು ಆರೋಗ್ಯ ದೃಷ್ಟಿಯಿಂದ ಉತ್ತಮ.

Shwetha M

Leave a Reply

Your email address will not be published. Required fields are marked *