ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣಿಕರಿಗೆ ಗುಡ್‌ನ್ಯೂಸ್! – 115 ನೂತನ ಬಸ್‌ಗಳ ಲೋಕಾರ್ಪಣೆ.. ಯಾವ ಸ್ಥಳಗಳಿಗೆ ಬಸ್ ಸಂಚಾರ?

ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣಿಕರಿಗೆ ಖುಷಿ ಸುದ್ದಿಯೊಂದಿದೆ. ರಾಜ್ಯದ ಈ ಜಿಲ್ಲೆಗಳಿಗೆ ಹೊಸ ಬಸ್ ಬಿಡಲಾಗಿದೆ. ಒಟ್ಟು 115 ನೂತನ ಬಸ್‌ಗಳನ್ನ ಸೇವೆಗೆ ಬಿಡಲಾಗಿದೆ.
ಇದನ್ನೂ ಓದಿ: ಡಿವೋರ್ಸ್ ಆದ ಮಹಿಳೆ ಜೊತೆ ಲಿವ್-ಇನ್‌ನಲ್ಲಿದ್ದ.. ಈಗ ಬೇರೊಬ್ಬಳ ಜೊತೆ ಮದುವೆ! – ಕಾನ್‌ಸ್ಟೇಬಲ್ ಕಳ್ಳಾಟಕ್ಕೆ ಮಹಿಳೆ ಬಲಿ!
ಬೆಂಗಳೂರಿನ ಶಾಂತಿನಗರದಲ್ಲಿರುವ ಕೆಎಸ್‌ಆರ್‌ಟಿಸಿ ಮುಖ್ಯ ಕಚೇರಿಯಲ್ಲಿ 115 ಕೆಎಸ್‌ಆರ್‌ಟಿಸಿ ಬಸ್ ಲೋಕಾರ್ಪಣೆ ಮಾಡಲಾಗಿದೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ನೂತನ ಬಸ್‌ಗಳಿಗೆ ಚಾಲನೆ ನೀಡಿ ಅಧಿಕೃತವಾಗಿ ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯದ ವಿವಿಧ ಭಾಗಗಳಿಗೆ ಸುರಕ್ಷಿತ ಮತ್ತು ಸುಗಮ ಸಾರಿಗೆ ವ್ಯವಸ್ಥೆ ಒದಗಿಸುವುದು ಸರ್ಕಾರದ ಮುಖ್ಯ ಗುರಿಯಾಗಿದೆ ಎಂದು ಹೇಳಿದ್ದಾರೆ.
45 ಸಾಮಾನ್ಯ ಬಸ್ಗಳು, 70 ಪಲ್ಲಕ್ಕಿ ಬಸ್ಗಳು ಸೇವೆಗೆ ಸಿದ್ದ
ಈ ಹಂತದಲ್ಲಿ ಒಟ್ಟು 115 ಬಸ್‌ಗಳನ್ನು ಸೇವೆಗೆ ಸೇರಿಸಲಾಗಿದೆ, ಅದರಲ್ಲಿ 45 ಸಾಮಾನ್ಯ ಬಸ್‌ಗಳು ಮತ್ತು 70 ಪಲ್ಲಕ್ಕಿ (ಸ್ಲೀಪರ್) ಬಸ್‌ಗಳು ಸೇರಿವೆ. ವಿಶೇಷವಾಗಿ ದೀರ್ಘ ದೂರ ಪ್ರಯಾಣಿಸುವ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಆಧುನಿಕ ಸೌಲಭ್ಯಗಳೊಂದಿಗೆ ಈ ಪಲ್ಲಕ್ಕಿ ಬಸ್‌ಗಳನ್ನು ವಿನ್ಯಾಸಗೊಳಿಸಲಾಗಿದೆ.
ಯಾವ ಯಾವ ಮಾರ್ಗಗಳಲ್ಲಿ ಹೊಸ ಬಸ್‌ಗಳ ಸಂಚಾರ?
ಹೊಸ ಪಲ್ಲಕ್ಕಿ ಸ್ಲೀಪರ್ ಬಸ್‌ಗಳನ್ನು ರಾಜ್ಯದ ಹಾಗೂ ಹೊರರಾಜ್ಯಗಳ ಪ್ರಮುಖ ಧಾರ್ಮಿಕ ಮತ್ತು ವಾಣಿಜ್ಯ ಕೇಂದ್ರಗಳನ್ನು ಸಂಪರ್ಕಿಸುವ ಮಾರ್ಗಗಳಲ್ಲಿ ಸಂಚಾರಕ್ಕೆ ಬಿಡಲಾಗಿದೆ. ಅವುಗಳಲ್ಲಿ ಧರ್ಮಸ್ಥಳ, ದಾವಣಗೆರೆ, ಮಂತ್ರಾಲಯ, ಹೈದರಾಬಾದ್, ಚೆನ್ನೈ, ಪಣಜಿ, ಮಧುರೈ, ಎರ್ನಾಕುಲಂ ಹಾಗೂ ರಾಯಚೂರು ಸೇರಿದಂತೆ ಹಲವು ಪ್ರಮುಖ ಮಾರ್ಗಗಳು ಸೇರಿವೆ.
ಸುರಕ್ಷತೆಗೆ ವಿಶೇಷ ವ್ಯವಸ್ಥೆ
ಈ ನೂತನ ಸ್ಲೀಪರ್ ಬಸ್‌ಗಳಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವಿಶೇಷ ವಿನ್ಯಾಸ ಮಾಡಲಾಗಿದೆ. ಇವುಗಳಲ್ಲಿ ಒಟ್ಟು ಐದು ಬಾಗಿಲುಗಳನ್ನು (ಡೋರ್‌ಗಳು) ಅಳವಡಿಸಲಾಗಿದೆ. ಇದಕ್ಕೂ ಮೊದಲು ಸಾಮಾನ್ಯವಾಗಿ ಎರಡು ಬಾಗಿಲುಗಳು ಮತ್ತು ಒಂದು ಎಮರ್ಜೆನ್ಸಿ ಎಕ್ಸಿಟ್ ಬಾಗಿಲು ಮಾತ್ರ ಇದ್ದವು. ಆದರೆ ಹೊಸ ಮಾದರಿಯ ಸ್ಲೀಪರ್ ಬಸ್‌ಗಳಲ್ಲಿ ಬಸ್‌ನ ಮೇಲ್ಭಾಗದಲ್ಲಿಯೂ ಎರಡು ಹೆಚ್ಚುವರಿ ಬಾಗಿಲುಗಳನ್ನು ಅಳವಡಿಸಲಾಗಿದ್ದು, ತುರ್ತು ಪರಿಸ್ಥಿತಿಯಲ್ಲಿ ಪ್ರಯಾಣಿಕರು ಸುರಕ್ಷಿತವಾಗಿ ಹೊರಬರಲು ಈ ವ್ಯವಸ್ಥೆ ಸಹಾಯಕವಾಗಲಿದೆ.

ನೋಡಿರಿ

