ಬೆಂಗಳೂರಿನ 300 ಕಡೆ ಕಾಂಗ್ರೆಸ್ ಪ್ರತಿಭಟನೆ – ಟ್ರಾಫಿಕ್ ಜಾಮ್, ಪೊಲೀಸ್ ಹೈ ಅಲರ್ಟ್!

ಬೆಂಗಳೂರಿನ 300 ಕಡೆ ಕಾಂಗ್ರೆಸ್ ಪ್ರತಿಭಟನೆ – ಟ್ರಾಫಿಕ್ ಜಾಮ್, ಪೊಲೀಸ್ ಹೈ ಅಲರ್ಟ್!

ಬೆಂಗಳೂರಿನಲ್ಲಿ ಸಾಮಾನ್ಯ ದಿನಗಳಲ್ಲೇ ಟ್ರಾಫಿಕ್ ಜಾಮ್ ವಾಹನ ಸವಾರರನ್ನ ತಲೆಬಿಸಿ ಹೆಚ್ಚಿಸುತ್ತೆ. ಅದ್ರಲ್ಲೂ ವಾರದ ಮೊದಲ ದಿನ ಸೋಮವಾರವೇ ಸವಾರರು ಪರದಾಡಬೇಕಾಗಿದೆ. ಸರ್ಕಾರದ ವಿರುದ್ಧ ರೊಚ್ಚಿಗೆದ್ದಿರೋ ಕಾಂಗ್ರೆಸ್ ಪಕ್ಷ ನಗರದ 300 ಕಡೆಗಳಲ್ಲಿ ಪ್ರತಿಭಟನೆ ನಡೆಸುತ್ತಿದೆ. ‘ಭಷ್ಟಾಚಾರ ನಿಲ್ಲಿಸಿ ಬೆಂಗಳೂರು ಉಳಿಸಿ’ ಹೆಸರಿನಡಿ ಅಭಿಯಾನ ನಡೆಸುತ್ತಿದೆ.

ಇದನ್ನೂ ಓದಿ: ಕೋಲಾರದಲ್ಲಿಂದು ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ – ಸಿದ್ದು ಸ್ಪರ್ಧಿಸುವ ಕ್ಷೇತ್ರದಲ್ಲಿ ಅದೆಷ್ಟು ಲೆಕ್ಕಾಚಾರ..!?  

ನಗರದ ವಿವಿಧ ಕಡೆಯ 200 ಸಿಗ್ನಲ್, 25 ಮೆಟ್ರೋ ಸ್ಟೇಷನ್, 26 ಫ್ಲೈಓವರ್​​ಗಳಲ್ಲಿ ಪ್ರತಿಭಟನೆ ನಡೆಸುತ್ತಿದೆ. ಕಾಂಗ್ರೆಸ್ ಪ್ರತಿಭಟನೆಗೆ ಪೊಲೀಸ್ ಇಲಾಖೆ ಯಾವುದೇ ಅನುಮತಿ ನೀಡಿಲ್ಲ. ಆಯಾ ವಿಭಾಗದ ಡಿಸಿಪಿಗಳಿಗೆ ಹಿರಿಯ ಪೊಲೀಸ್ ಅಧಿಕಾರಿಗಳು ಪ್ರತಿಭಟನೆಗೆ ಅವಕಾಶ ನೀಡದಂತೆ ಖಡಕ್ ಆದೇಶ ನೀಡಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆಯಿಂದ ಬೆಂಗಳೂರಿನ ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿದೆ.

ಕಾಂಗ್ರೆಸ್ ನಡೆಸುತ್ತಿರುವ  ಪ್ರತಿಭಟನೆಗೆ ಪೊಲೀಸರು ಅನುಮತಿ ನೀಡಿಲ್ಲ. ಯಾವುದೇ ಅಹಿತಕರ  ಘಟನೆಗಳು ನಡೆಯದಂತೆ ಪೊಲೀಸರು ಅಲರ್ಟ್ ಆಗಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಸೂಕ್ಷ್ಮ ಪ್ರದೇಶಗಳಲ್ಲಿ KSRP ತುಕಡಿ ನಿಯೋಜಿಸಲಾಗಿದೆ. ಹಾಗೂ ಪ್ರತಿಭಟನೆ ನಡೆಸುವವರನ್ನ ಸ್ಥಳದಲ್ಲೇ ವಶಕ್ಕೆ ಪಡೆಯುವಂತೆ ಸೂಚನೆ ನೀಡಲಾಗಿದೆ.

ರಾಜ್ಯ ಸರ್ಕಾರದ ವೈಫಲ್ಯಗಳು, ದುರಾಡಳಿತ, ಭ್ರಷ್ಟಾಚಾರವನ್ನು ವಿರೋಧಿಸಿ ಕಾಂಗ್ರೆಸ್‌ ಧರಣಿ ನಡೆಸುತ್ತಿದೆ. ಆದ್ರೆ ಕಾಂಗ್ರೆಸ್‌ಗೆ ತಿರುಗೇಟು ನೀಡಲು ರಾಜ್ಯ ಬಿಜೆಪಿ ಕಾಂಗ್ರೆಸ್‌ಗೆ ಪ್ರಶ್ನೆಗಳನ್ನು ಕೇಳಿದೆ. ಕೇಸರಿ ನಾಯಕರು ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ರಿಡೂ ಹೆಸರಿನಲ್ಲಿ ಲೂಟಿ ಮಾಡಿದ್ದು ಯಾರು..? ಸೋಲಾರ್ ಹಗರಣದ ರೂವಾರಿ ಯಾರು..? ಸಣ್ಣ ನೀರಾವರಿ ಇಲಾಖೆಯಲ್ಲಿ ಕಾಮಗಾರಿ ಮಾಡದೆ ಗುಳುಂ ಮಾಡಿದ್ದು ಯಾರು..? ಹಾಸಿಗೆ, ದಿಂಬಿನಲ್ಲೂ ಲಂಚ ಹೊಡೆದಿದ್ದು ಯಾರು..? 65 ವರ್ಷ ಅಧಿಕಾರ ನಡೆಸಿ ದೇಶ ಲೂಟಿ ಮಾಡಿದ ಪಕ್ಷ ಯಾವುದು..? – ಹೀಗೆ ಅನೇಕ ಪ್ರಶ್ನೆಗಳ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ.

suddiyaana