ಐಪಿಎಲ್ ಆರಂಭಕ್ಕೂ ಮುನ್ನವೇ RCB ಮತ್ತು SRHಗೆ ಬಿಗ್ ಶಾಕ್ – ಇಬ್ಬರು ಸ್ಟಾರ್ ಆಟಗಾರರು ಔಟ್

ಐಪಿಎಲ್ ಆರಂಭಕ್ಕೂ ಮುನ್ನವೇ ಆರ್‌ಸಿಬಿ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳಿಗೆ ಬಿಗ್ ಶಾಕ್ ಎದುರಾಗಿದೆ. ಗಾಯದ ಸಮಸ್ಯೆಯಿಂದಾಗಿ ಪ್ಯಾಟ್ ಕಮ್ಮಿನ್ಸ್ ಮತ್ತು ಜೋಶ್ ಹೇಜಲ್‌ವುಡ್ ಮಾರ್ಚ್ 28 ರಂದು ನಡೆಯುವ ಮೊದಲ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆಯಿದೆ. ಪ್ಯಾಟ್ ಕಮ್ಮಿನ್ಸ್ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕರಾಗಿದ್ದರೆ, ಜೋಶ್ ಹೇಜಲ್‌ವುಡ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲಿಂಗ್ ಜೀವಾಳವಾಗಿದ್ದಾರೆ.
2026 ರ ಐಪಿಎಲ್ ವೇಳಾಪಟ್ಟಿಯ ಮೊದಲ 20 ಪಂದ್ಯಗಳ ವೇಳಾಪಟ್ಟಿ ಪ್ರಕಟಗೊಂಡಿದೆ. ಮಾರ್ಚ್ 28 ರಂದು ನಡೆಯುವ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ RCB, ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಆದರೆ ಈ ಪಂದ್ಯಕ್ಕೂ ಮುಂಚೆಯೇ ಎರಡೂ ತಂಡಗಳು ದೊಡ್ಡ ಸಂಕಷ್ಟಕ್ಕೆ ಸಿಲುಕಿವೆ. ವಾಸ್ತವವಾಗಿ, ಎರಡೂ ತಂಡಗಳ ಇಬ್ಬರು ಸ್ಟಾರ್ ಆಟಗಾರರು ಮೊದಲ ಪಂದ್ಯದಲ್ಲಿ ಆಡುವುದು ಖಚಿತವಾಗಿಲ್ಲ. ಗಾಯಗಳಿಂದ ಬಳಲುತ್ತಿರುವ ಮತ್ತು ಇನ್ನೂ ಫಿಟ್‌ನೆಸ್ ಮರಳಿ ಪಡೆಯದ ಜೋಶ್ ಹೇಜಲ್‌ವುಡ್ ಮತ್ತು ಪ್ಯಾಟ್ ಕಮ್ಮಿನ್ಸ್ ಉದ್ಘಾಟನಾ ಪಂದ್ಯದಲ್ಲಿ ಆಡುವುದು ಅನುಮಾನ. ಪ್ಯಾಟ್ ಕಮ್ಮಿನ್ಸ್ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕರಾಗಿದ್ದರೆ, ಜೋಶ್ ಹೇಜಲ್‌ವುಡ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲಿಂಗ್ ಜೀವಾಳವಾಗಿದ್ದಾರೆ. ಹೀಗಾಗಿ ಇವರಿಬ್ಬರ ಅಲಭ್ಯತೆ ಎರಡೂ ತಂಡಗಳಿಗೆ ದೊಡ್ಡ ತಲೆನೋವಾಗಿದೆ.
ಇದನ್ನೂ ಓದಿ: ಡಿವೋರ್ಸ್ ಆದ ಮಹಿಳೆ ಜೊತೆ ಲಿವ್-ಇನ್‌ನಲ್ಲಿದ್ದ.. ಈಗ ಬೇರೊಬ್ಬಳ ಜೊತೆ ಮದುವೆ! – ಕಾನ್‌ಸ್ಟೇಬಲ್ ಕಳ್ಳಾಟಕ್ಕೆ ಮಹಿಳೆ ಬಲಿ!
ಪ್ಯಾಟ್ ಕಮ್ಮಿನ್ಸ್ ಮತ್ತು ಜೋಶ್ ಹೇಜಲ್‌ವುಡ್ ಗಾಯದ ಕಾರಣದಿಂದಾಗಿ 2026 ರ ಟಿ20 ವಿಶ್ವಕಪ್ನಿಂದಲೂ ಹೊರಬಿದಿದ್ದರು. ಇದೀಗ ಇವರಿಬ್ಬರು ಐಪಿಎಲ್ 2026 ರ ಆರಂಭಿಕ ಪಂದ್ಯಗಳನ್ನು ತಪ್ಪಿಸಿಕೊಳ್ಳಬಹುದು ಎಂದು ವರದಿಯಾಗಿದೆ. ಇಬ್ಬರೂ ಆಟಗಾರರು ಇನ್ನೂ ಚೇತರಿಕೆಯ ಹಾದಿಯಲಿದ್ದು, ವೈದ್ಯಕೀಯ ಅನುಮತಿ ಪಡೆದ ನಂತರವೇ ಐಪಿಎಲ್‌ನಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ.
ಪ್ಯಾಟ್ ಕಮ್ಮಿನ್ಸ್ 72 ಐಪಿಎಲ್ ಪಂದ್ಯಗಳಲ್ಲಿ ಪ್ರತಿ ಓವರ್‌ಗೆ 8.8 ರನ್‌ಗಳ ಎಕಾನಮಿ ದರದೊಂದಿಗೆ 79 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಕಳೆದ ವರ್ಷ 14 ಪಂದ್ಯಗಳನ್ನಾಡಿದ ಕಮ್ಮಿನ್ಸ್ 16 ವಿಕೆಟ್‌ಗಳನ್ನು ಕಬಳಿಸಿದ್ದರು. ಇತ್ತ ಹೇಜಲ್‌ವುಡ್ 39 ಪಂದ್ಯಗಳಲ್ಲಿ 57 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಕಳೆದ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಹೇಜಲ್‌ವುಡ್ ಆಡಿದ 12 ಪಂದ್ಯಗಳಲ್ಲಿ 22 ವಿಕೆಟ್‌ಗಳನ್ನು ಕಬಳಿಸಿದ್ದರು. ಅವರ ಈ ಪ್ರದರ್ಶನವು ಆರ್‌ಸಿಬಿ ಮೊದಲ ಬಾರಿಗೆ ಐಪಿಎಲ್ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿತು.

ನೋಡಿರಿ

