ಅಡುಗೆ ಮನೆಗೆ ತಟ್ಟಿದ ಇರಾನ್ – ಇರಾಕ್ ಯುದ್ಧ ಎಫೆಕ್ಟ್ – ಅಡುಗೆ ಎಣ್ಣೆ ರೇಟ್ ಮತ್ತೆ ಹೈಕ್

ಅಡುಗೆ ಮನೆಗೆ ತಟ್ಟಿದ ಇರಾನ್ – ಇರಾಕ್ ಯುದ್ಧ ಎಫೆಕ್ಟ್ – ಅಡುಗೆ ಎಣ್ಣೆ ರೇಟ್ ಮತ್ತೆ ಹೈಕ್

ಇರಾನ್ – ಇರಾಕ್ ನಡೆಯುತ್ತಿರುವ ಭೀಕರ ಸಂಘರ್ಷದ ಪರಿಣಾಮವು ಇದೀಗ ಸಾಮಾನ್ಯ ಜನರ ಅಡುಗೆಮನೆಗಳವರೆಗೂ ತಲುಪಿದೆ. ಕಳೆದ ಒಂದು ವಾರದಿಂದ ಯಾವುದೇ ಪ್ರಕಟಣೆ ಇಲ್ಲದೆಯೇ ಅಡುಗೆ ಎಣ್ಣೆಯ ಬೆಲೆ ದಿಢೀರ್ ಏರಿಕೆಯಾಗುತ್ತಿರುವುದು ಗ್ರಾಹಕರಲ್ಲಿ ಆತಂಕ ಮೂಡಿಸಿದೆ. ಮುಂದಿನ ವಾರ ಪ್ರಮುಖ ಹಬ್ಬವಾದ ಯುಗಾದಿ ಹಾಗೂ ಮುಸ್ಲಿಮರ ಪವಿತ್ರ ರಂಜಾನ್ ಹಬ್ಬಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈ ಬೆಲೆ ಏರಿಕೆಯು ಮನೆಮಂದಿ ಯ ಖರ್ಚಿನ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ.

ಇದನ್ನೂಓದಿ: ಸೌದೆಗೆ ಈಗ ಡಿಮ್ಯಾಂಡಪ್ಪೋ ಡಿಮ್ಯಾಂಡ್..!– ಅಕ್ರಮವಾಗಿ ಮರ ಕಡಿದರೆ ಸರ್ಕಾರದಿಂದ ಕಠಿಣ ಕ್ರಮ..!

ಮಾರುಕಟ್ಟೆ ಮೂಲಗಳ ಪ್ರಕಾರ, ಪ್ರಮುಖ ಬ್ರ್ಯಾಂಡ್‌ಗಳ ಅಡುಗೆ ಎಣ್ಣೆಯ ಬೆಲೆಯಲ್ಲಿ ಪ್ರತಿ ಲೀಟರ್‌ಗೆ ಸರಾಸರಿ ಲೀ. ಸಗಟು ದರ 10 ರಿಂದ 12 ರು.ರಷ್ಟು ಏರಿಕೆಯಾಗಿದೆ. ಕಳೆದ ತಿಂಗಳು ರು.15 ಏರಿಕೆಯಾಗಿತ್ತು. ಹಾಗಾಗಿ ಹಿಂದಿನ ದರಕ್ಕೆ ಹೋಲಿಸಿದರೆ ಒಟ್ಟು 25 ರು. ಏರಿಕೆಯಾದಂತಾಯಿತು.ಮಾರುಕಟ್ಟೆಯಲ್ಲಿ ಸದ್ಯ ಕಂಡುಬರುತ್ತಿರುವ ಏರಿಕೆಯು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯೂ ಇದೆ ಎನ್ನುತ್ತಾರೆ ಅಡುಗೆ ಎಣ್ಣೆ ವ್ಯಾಪಾರಿಗಳು. ಮಾರುಕಟ್ಟೆ ಯಲ್ಲಿ ಹೆಚ್ಚು ಬಳಕೆಯಾಗುವ ಜನಪ್ರಿಯ ಬ್ರ್ಯಾಂಡುಗಳ ಸೂರ್ಯಕಾಂತಿ ಎಣ್ಣೆಯ ಬೆಲೆ ಯು ಕಳೆದ ವಾರ ಒಂದು ಲೀಟರ್‌ಗೆ ಸಗಟು ದರ ರು. 160-165 ಇದ್ದು, ಈಗ ಅದು 170-175 ರು.ಗೆ ಏರಿಕೆಯಾಗಿದೆ. ಇನ್ನು ಚಿಲ್ಲರೆ 175-180 ರು.ಗೆ ಮಾರಾಟವಾಗುತ್ತಿದೆ.

ಇನ್ನೊಂದೆಡೆ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ದೊರೆಯುತ್ತಿದ್ದ ಪಾಮ್ ಆಯಿಲ್ ಬ್ರ್ಯಾಂಡ್‌ನಲ್ಲೂ ಬೆಲೆ ಏರಿಕೆ ದಾಖಲಾಗಿದೆ. ಕಳೆದ ವಾರ ರು.125 ಇದ್ದ ಒಂದು ಲೀಟರ್ ಬೆಲೆ ಈಗ 130 ರು.ಗೆ ಏರಿಕೆಯಾಗಿದೆ. ಚಿಲ್ಲರೆ ದರ 136 ರು.ಗೆ ಮಾರಾಟವಾಗುತ್ತಿದೆ. ಹೋಟೆಲ್ ಉದ್ಯಮದವರು ಬಳಸುವ 15 ಕೆ.ಜಿ ತುಂಬಿದ ಒಂದು ಟಿನ್ ಸನ್ ಫ್ಲವರ್ ಆಯಿಲ್ 2600-2650 ರು. ಇದ್ದ ಬೆಲೆ ಈಗ 2750-2800 ರು. ಆಗಿದೆ.

Kishor KV