ಸೌದೆಗೆ ಈಗ ಡಿಮ್ಯಾಂಡಪ್ಪೋ ಡಿಮ್ಯಾಂಡ್..!– ಅಕ್ರಮವಾಗಿ ಮರ ಕಡಿದರೆ ಸರ್ಕಾರದಿಂದ ಕಠಿಣ ಕ್ರಮ..!

ಗ್ಯಾಸ್ ಪೂರೈಕೆ ಆಗದಿದ್ದರೆ ಸೌದೆ ಇದೆಯೆಲ್ವಾ.. ಹೀಗಂತಾ ಅನೇಕರು ರಿಲ್ಯಾಕ್ಸ್ ಆಗಿದ್ದಾರೆ. ಜೊತೆಗೆ ಸೌದೆ ಆರಾಮಾಗಿ ಸಿಗುತ್ತೆ ಅಂತಾ ಅಂದುಕೊಂಡವರು ಇದ್ದಾರೆ. ಇನ್ನು ಸೌದೆಗೂ ಕೂಡಾ ಈಗ ಸಖತ್ ಡಿಮ್ಯಾಂಡ್ ಶುರುವಾಗಿದೆ. ಇದರ ಮಧ್ಯೆ ಸರ್ಕಾರ ಕೂಡಾ ಅಲರ್ಟ್ ಆಗಿದೆ.
ಇದನ್ನೂ ಓದಿ:ಮಂಗಳೂರಲ್ಲಿ ಡ್ರೈಫ್ರೂಟ್ಸ್ ಉದ್ಯಮಕ್ಕೂ ಯುದ್ದದ ಹೊಡೆತ – ರಂಜಾನ್ ಸೀಸನ್‌ನಲ್ಲೂ ವ್ಯಾಪಾರಿಗಳಿಗೆ ನಷ್ಟ..!
ವಾಣಿಜ್ಯ ಸಿಲಿಂಡರ್ ಸಿಗದೆ ಅದೆಷ್ಟೋ ಹೋಟೆಲ್ಗಳು ಸಮಸ್ಯೆಗೀಡಾಗಿವೆ. ಅಡುಗೆ ಮಾಡಲು ಇಂಧನವಿಲ್ಲದೆ ಹೋಟೆಲ್ಗಳು ಬಾಗಿಲು ಮುಚ್ಚುವ ಹಂತಕ್ಕೆ ತಲುಪಿವೆ. ಈ ಸಮಸ್ಯೆಗೆ ಪರಿಹಾರವಾಗಿ ಕೆಲವು ಕಡೆ ಎಲ್ಪಿಜಿ ಸಿಲಿಂಡರ್ ಬದಲಾಗಿ ಸೌದೆ ಬಳಸಿಯೂ ಅಡುಗೆ ಮಾಡಲಾಗುತ್ತಿದೆ. ಇದರಿಂದಾಗಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಸೌದೆಗೆ ಬೇಡಿಕೆ ಹೆಚ್ಚಾಗಿದೆ. ಅನೇಕ ಕಡೆ ಸೌದೆಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಶುರುವಾಗಿದೆ. ಇದರ ಬೆನ್ನಲ್ಲೇ ಮರಗಳನ್ನು ಕಡಿಯುವ ಕೆಲಸವೂ ಶುರುವಾಗಿದೆ. ಇದೀಗ ಸರ್ಕಾರ ಅಕ್ರಮವಾಗಿ ಮರ ಕಡಿಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ರೆಡಿಯಾಗಿದೆ.
ಗ್ಯಾಸ್ ಕೊರತೆಯಿಂದಾಗಿ ಮರದ ಬಳಕೆ ಹೆಚ್ಚಾಗಿದೆ. ಸೌದೆ ಬಳಕೆಯಿಂದ ಗ್ಯಾಸ್ ಸಮಸ್ಯೆಗೆ ಸ್ವಲ್ಪ ಮಟ್ಟಿಗೆ ಪರಿಹಾರವೂ ಸಿಕ್ಕಂತಾಗಿದೆ. ಆದರೆ, ಈ ಪರಿಸ್ಥಿತಿ ಮುಂದುವರಿದರೆ ಅಕ್ರಮವಾಗಿ ಮರ ಕಡಿಯುವ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅರಣ್ಯ ಇಲಾಖೆ ಆತಂಕ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ. ಅರಣ್ಯ ಸಚಿವ ಈಶ್ವರ ಖಂಡ್ರೆ ಈ ಕುರಿತು ಆದೇಶ ಹೊರಡಿಸಿದ್ದು, ಅರಣ್ಯ ಪ್ರದೇಶಗಳಲ್ಲಷ್ಟೇ ಅಲ್ಲದೆ ಸರ್ಕಾರದ ಜಾಗಗಳು, ಉದ್ಯಾನವನಗಳು ಹಾಗೂ ಇತರ ಹಸಿರು ಪ್ರದೇಶಗಳಲ್ಲಿಯೂ ಅಕ್ರಮ ಮರ ಕಡಿಯುವ ಘಟನೆಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಕಟ್ಟಿಗೆಗೆ ಬೇಡಿಕೆ ಜಾಸ್ತಿಯಾಗಿರುವುದರಿಂದ ಮರಗಳನ್ನು ಕಡಿಯುವ ಸಾಧ್ಯತೆ ಹೆಚ್ಚಾಗಿದೆ. ಇದರಿಂದ ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಹೀಗಾಗಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಅರಣ್ಯ ಪ್ರದೇಶಗಳು ಹಾಗೂ ಹಸಿರು ವಲಯಗಳಲ್ಲಿ ಹೆಚ್ಚುವರಿ ಪೆಟ್ರೋಲಿಂಗ್ ನಡೆಸಬೇಕು ಎಂದು ಸರ್ಕಾರ ನಿರ್ದೇಶನ ನೀಡಿದೆ.

ನೋಡಿರಿ

