ಗ್ಯಾಸ್ ಏಮರ್ಜೆನ್ಸಿ ಬಗ್ಗೆ ಮೋದಿ ಮಾತು – ಯಾವಾಗ ಬಗೆಹರಿಯುತ್ತೆ ಗ್ಯಾಸ್ ಸಮಸ್ಯೆ?

ಗ್ಯಾಸ್ ಏಮರ್ಜೆನ್ಸಿ ಬಗ್ಗೆ ಮೋದಿ ಮಾತು – ಯಾವಾಗ ಬಗೆಹರಿಯುತ್ತೆ ಗ್ಯಾಸ್ ಸಮಸ್ಯೆ?

ಇರಾನ್ – ಇರಾಕ್ ಯುದ್ಧದಿಂದ ದೇಶದಲ್ಲಿ ಗ್ಯಾಸ್ ಸಮಸ್ಯೆ ದೊಡ್ಡ ಮಟ್ಟದಲ್ಲಿದ್ದು, ಈ ಬಗ್ಗೆ ಮಾತನಾಡಿದ್ದಾರೆ.  ದೇಶದಲ್ಲಿ ಎಲ್‌ಪಿಜಿ ಪರಿಸ್ಥಿತಿ ಬಗ್ಗೆ ಆತಂಕ ಮೂಡಿಸಲು ಯತ್ನಿಸುತ್ತಿರುವವರನ್ನು ತರಾಟೆಗೆ ತೆಗೆದುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಅಂತವರು ಜನರ ಮುಂದೆ ತಮ್ಮನ್ನು ತಾವು ಬಹಿರಂಗಪಡಿಸಿಕೊಳ್ಳುವುದಲ್ಲದೆ, ದೇಶಕ್ಕೂ ಹಾನಿ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

 ಎನ್‌ಎಕ್ಸ್‌ಟಿ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷವು ಎಲ್ಲಾ ರಾಷ್ಟ್ರಗಳ ಮೇಲೆ ಪರಿಣಾಮ ಬೀರಿದೆ. ಆದರೆ ಭಾರತವು ಈ ಸವಾಲು ಎದುರಿಸಲು ಸಂಪೂರ್ಣವಾಗಿ ಬದ್ಧವಾಗಿದೆ. ದೇಶವು ತನ್ನ ಇಂಧನ ಸುರಕ್ಷತೆ ಕಾಪಾಡಿಕೊಳ್ಳಲು ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ ಎಂದು ತಿಳಿಸಿದರು.ಪ್ರಸ್ತುತ ಪರಿಸ್ಥಿತಿಯ ಲಾಭ ಪಡೆಯುವ ಮೂಲಕ ಕೆಲ ಜನರು ಕೆಲವು ಉತ್ಪನ್ನಗಳನ್ನು ಬ್ಲಾಕ್​ ಮಾರುಕಟ್ಟೆಗೆ ಹಾಕಲು ಪ್ರಯತ್ನಿಸುತ್ತಿದ್ದಾರೆ. ಅಂತಹ ನಿರ್ಲಜ್ಜ ಕೆಲಸದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಧಾನಿ ಮೋದಿ ಎಚ್ಚರಿಸಿದರು.

ಇದನ್ನೂ ಓದಿ: ಅಸ್ಸಾಂನಲ್ಲಿ ಅಪರೇಷನ್ ಕಮಲ ಭೀತಿ – 10 ಮಂದಿ ಕೈ ಶಾಸಕರು ರಾಮನಗರಕ್ಕೆ ಶಿಫ್ಟ್

ಬ್ಲಾಕ್ ಮಾರುಕಟ್ಟೆದಾರರು ಮತ್ತು ಸಂಗ್ರಹಣೆದಾರರನ್ನು ತಡೆಯಲು ರಾಜ್ಯ ಸರ್ಕಾರಗಳು ಮೇಲ್ವಿಚಾರಣೆ ಹೆಚ್ಚಿಸಬೇಕು. ಎಲ್‌ಪಿಜಿ ಬಗ್ಗೆ ಪ್ರಸ್ತುತ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಕೆಲವರು ಅನಗತ್ಯ ಭೀತಿ ಹರಡುತ್ತಿದ್ದಾರೆ. ಈ ಸಮಯದಲ್ಲಿ ನಾನು ಯಾವುದೇ ರಾಜಕೀಯ ಹೇಳಿಕೆ ನೀಡಲು ಬಯಸುವುದಿಲ್ಲ. ಆತಂಕ ಉಂಟು ಮಾಡುವವರು ಸಾರ್ವಜನಿಕರ ಮುಂದೆ ತಮ್ಮನ್ನು ತಾವು ಬಹಿರಂಗಪಡಿಸಿಕೊಳ್ಳುವುದಲ್ಲದೆ, ದೇಶಕ್ಕೂ ಹಾನಿ ಮಾಡುತ್ತಿದ್ದಾರೆ. ಸರ್ಕಾರವು ಬಹುಮುಖಿ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.

ಪೂರೈಕೆ ಸರಪಳಿಯಲ್ಲಿನ ಅಡೆತಡೆ ನಿವಾರಣೆಗೆ ಹಾಗೂ ನಮ್ಮ ರೈತರು ಮತ್ತು ನಾಗರಿಕರನ್ನು ಜಾಗತಿಕ ಸವಾಲುಗಳ ಹೊರೆಯಿಂದ ರಕ್ಷಿಸಲು ನಾವು ನಿರಂತರ ಪ್ರಯತ್ನ ಮಾಡುತ್ತಿದ್ದೇವೆ. ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದಿಂದ ಉದ್ಭವಿಸಿರುವ ಪ್ರಸ್ತುತ ಬಿಕ್ಕಟ್ಟನ್ನು ನಿಭಾಯಿಸಲು ರಾಜಕೀಯ ಪಕ್ಷಗಳು, ಮಾಧ್ಯಮಗಳು, ಯುವಕರು, ನಗರಗಳು ಅಥವಾ ಹಳ್ಳಿಗಳು ಸೇರಿದಂತೆ ಪ್ರತಿಯೊಬ್ಬರೂ ಪ್ರಮುಖ ಪಾತ್ರ ವಹಿಸಬೇಕು ಎಂದು ಪ್ರಧಾನಿ ಕರೆ ನೀಡಿದರು.

Kishor KV

Leave a Reply

Your email address will not be published. Required fields are marked *