ಅಸ್ಸಾಂನಲ್ಲಿ ಅಪರೇಷನ್ ಕಮಲ ಭೀತಿ – 10 ಮಂದಿ ಕೈ ಶಾಸಕರು ರಾಮನಗರಕ್ಕೆ ಶಿಫ್ಟ್

ಅಸ್ಸಾಂನಲ್ಲಿ ಅಪರೇಷನ್ ಕಮಲ ಭೀತಿ – 10 ಮಂದಿ ಕೈ ಶಾಸಕರು ರಾಮನಗರಕ್ಕೆ ಶಿಫ್ಟ್

ಅಸ್ಸಾಂನಲ್ಲಿ ಅಪರೇಷನ್ ಕಮಲದ ಭೀತಿ ಹಿನ್ನೆಲೆಯಲ್ಲಿ, ಅಲ್ಲಿನ 10 ಮಂದಿ ಕಾಂಗ್ರೆಸ್​​ ಶಾಸಕರನ್ನು ರಾಮನಗರದ ಬಿಡದಿ ಸಮೀಪದ ವಂಡರ್ ಲಾ ಹಾಗೂ ಈಗಲ್ ಟನ್ ರೆಸಾರ್ಟ್​ಗಳಿಗೆ ಕರೆತರಲಾಗಿದೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೂಚನೆ ಮೇರೆಗೆ ಶಾಸಕರನ್ನು ಇಲ್ಲಿಗೆ ಶಿಫ್ಟ್​ ಮಾಡಲಾಗಿದೆ ಎನ್ನಲಾಗಿದೆ.

ಅಸ್ಸಾಂ ಶಾಸಕರು ಗುರುವಾರ ತಡರಾತ್ರಿ ಸುಮಾರು 2 ಗಂಟೆ ಸುಮಾರಿಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಈ ವೇಳೆ, ಕಾಂಗ್ರೆಸ್ ಮುಖಂಡರು ಶಾಸಕರನ್ನು 8 ಇನ್ನೋವಾ ಕಾರುಗಳಲ್ಲಿ ವಂಡರ್ ಲಾ ಹಾಗೂ ಈಗಲ್ ಟನ್ ರೆಸಾರ್ಟ್​​ನಲ್ಲಿ ತಂಗಿದ್ದಾರೆ. ರೆಸಾರ್ಟ್​​ಗೆ ಬಂದ ಶಾಸಕರನ್ನು ಹೂ ಹಾರ ಹಾಕಿ ಸ್ವಾಗತಿಸಿದ ಸ್ಥಳೀಯ ಕಾಂಗ್ರೆಸ್ ಮುಖಂಡರು ವಿಶ್ರಾಂತಿ ಪಡೆಯಲು ಅವರಿಗೆ ಮೊದಲೇ ಕಾಯ್ದಿರಿಸಿದ ಕೊಠಡಿಗಳಿಗೆ ಕಳುಹಿಸಿದ್ದಾರೆ.

ರೆಸಾರ್ಟ್ ಸುತ್ತ ಸ್ಥಳೀಯ ಪೊಲೀಸರಿಂದ ಬಿಗಿ ಭದ್ರತೆ ಕಲ್ಪಿಸಲಾಗಿದ್ದು, ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಡಿ.ಕೆ.ಶಿವಕುಮಾರ್ ಆಪ್ತ ಕಾಂಗ್ರೆಸ್ ಮುಖಂಡರಿಗೆ ಮಾತ್ರ ರೆಸಾರ್ಟ್​ಗೆ ಪ್ರವೇಶವಿದ್ದು, ಬೇರೆ ಯಾರೂ ಸುಳಿಯದಂತೆ ಎಚ್ಚರಿಕೆ ವಹಿಸಲಾಗಿದೆ.ಅಸ್ಸಾಂ ವಿಧಾನಸಭೆಗೆ ಮುಂದಿನ ಕೆಲ ತಿಂಗಳಲ್ಲಿ ಚುನಾವಣೆ ನಡೆಯು ಸಾಧ್ಯತೆಯಿದ್ದು, ಇನ್ನೂ ದಿನಾಂಕ ಘೋಷಣೆ ಆಗಿಲ್ಲ. ಆದರೆ ಈಗಾಗಲೇ ಕಾಂಗ್ರೆಸ್​​ನ ಕೆಲ ಶಾಸಕರಿಗೆ ಟಿಕೆಟ್‌ ಕೈ ತಪ್ಪಲಿದೆ ಎಂಬ ಸುದ್ದಿಯ ಹಿನ್ನೆಲೆಯಲ್ಲಿ, ಅಲ್ಲಿನ ಕೈ ಪಾಳಯದಲ್ಲಿ ಪಕ್ಷಾಂತರ ಪರ್ವ ಆರಂಭವಾಗಿದೆ. ಈಗಾಗಲೇ ಕೆಲ ಪ್ರಮುಖರು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಇದನ್ನೂ  ಓದಿ: ಮಂಗಳೂರಲ್ಲಿ ಡ್ರೈಫ್ರೂಟ್ಸ್ ಉದ್ಯಮಕ್ಕೂ ಯುದ್ದದ ಹೊಡೆತ – ರಂಜಾನ್ ಸೀಸನ್‌ನಲ್ಲೂ ವ್ಯಾಪಾರಿಗಳಿಗೆ ನಷ್ಟ..!

ಅಸ್ಸಾಂ ಚುನಾವಣಾ ಉಸ್ತುವಾರಿ ವಹಿಸಿಕೊಂಡಿರುವ ಕೈ ಪಾಳಯದ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್​, ಮತ್ತಷ್ಟು ಶಾಸಕರು ಬಿಜೆಪಿ ಸೇರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ಕೇಸರಿ ಪಕ್ಷದ ಸಂಪರ್ಕಕ್ಕೆ ಸಿಗದಂತೆ ತಪ್ಪಿಸಲು ಕೈ ಶಾಸಕರ ರೆಸಾರ್ಟ್​​ನಲ್ಲಿ ಇರಿಸಿದ್ದಾರೆ ಎನ್ನಲಾಗಿದೆ.

ನಮ್ಮ ಎಲ್ಲ ಹಿರಿಯ ನಾಯಕರು ಮತ್ತು ಪದಾಧಿಕಾರಿಗಳು ನೆಲಮಟ್ಟದಲ್ಲಿ ದೊಡ್ಡ ಆಡಳಿತ ವಿರೋಧಿ ಅಲೆ ಇದೆ ಎಂದು ಗುರುತಿಸಿದ್ದಾರೆ. ಅಸ್ಸಾಂನ ಜನರು ಬದಲಾವಣೆ ಬಯಸುತ್ತಿದ್ದಾರೆ. ನಿಜವಾಗಿಯೂ ಬಿಜೆಪಿ ಪ್ರಬಲವಾಗಿದ್ದರೆ, ಅವರೇಕೆ ನಮ್ಮ ಪಕ್ಷದ ಮಾಜಿ ಅಧ್ಯಕ್ಷ (ಭೂಪೇನ್ ಬೋರಾ) ಅವರನ್ನು ತಮ್ಮತ್ತ ಸೆಳೆಯುತ್ತಿದ್ದರು ಎಂದು ವ್ಯಂಗ್ಯವಾಡಿದ್ದರು.

Kishor KV

Leave a Reply

Your email address will not be published. Required fields are marked *