ಹೋಟೆಲ್‌ನಲ್ಲಿ ತಿಂಡಿ ತಿಂದವರಿಗೆ ಶಾಕ್!‌ – ಇಡ್ಲಿ-ವಡೆ ಜೊತೆಗೆ ಗ್ಯಾಸ್‌ ಶುಲ್ಕವನ್ನೂ ನೀಡಿದ ರೆಸ್ಟೋರೆಂಟ್!‌

ಹೋಟೆಲ್‌ನಲ್ಲಿ ತಿಂಡಿ ತಿಂದವರಿಗೆ ಶಾಕ್!‌ – ಇಡ್ಲಿ-ವಡೆ ಜೊತೆಗೆ ಗ್ಯಾಸ್‌ ಶುಲ್ಕವನ್ನೂ ನೀಡಿದ ರೆಸ್ಟೋರೆಂಟ್!‌

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ದದಿಂದಾಗಿ ದೇಶದಾದ್ಯಂತ ಅಡುಗೆ ಅನಿಲದ ಕೊರತೆ ಎದುರಾಗಿದೆ. ಎಲ್‌ಪಿಜಿ ಸಿಲಿಂಡರ್‌ ಕೊರತೆಯಿಂದಾಗಿ ಈಗಾಗಲೇ ದೇಶದಲ್ಲಿ ಹಲವು ಹೋಟೆಲ್‌ಗಳು ಮುಚ್ಚಿವೆ. ಇನ್ನೂ ಕೆಲ ಹೋಟೆಲ್‌ಗಳು ಗ್ರಾಹಕರಿಗೆ ಬಿಲ್‌ನಲ್ಲಿ ಗ್ಯಾಸ್‌ ಶುಲ್ಕವನ್ನ ಕೂಡ ಹಾಕುತ್ತಿವೆ.

ಇದನ್ನೂ ಓದಿ: ರಾಜ್ಯದ ಜನರನ್ನು ಕಾಡುತ್ತಿದೆ ಹೊಸ ಮಾದರಿಯ ಸೋಂಕು! – ಭಯಾನಕ ಬ್ಯಾಕ್ಟೀರಿಯಾದಿಂದ ಬಚಾವ್‌ ಆಗೋದು ಹೇಗೆ?

ಎಲ್‌ಪಿಜಿ ಕೊರತೆಯಿಂದಾಗಿ ಈಗಾಗಲೇ ಹೋಟೆಲ್‌ಗಳಲ್ಲಿ ಕೆಲ ದೋಸೆ, ಚಪಾತಿ, ಪೂರಿ ಮುಂತಾದ ಆಹಾರಗಳನ್ನ ನಿಲ್ಲಿಸಲಾಗಿದೆ. ಆದ್ರೀಗ ರೆಸ್ಟೋರೆಂಟ್‌ವೊಂದರಲ್ಲಿ ಬ್ರೇಕ್‌ಫಾಸ್ಟ್‌ ಮಾಡಿದವರಿಗೆ ಗ್ಯಾಸ್‌ ಶುಲ್ಕ ಸೇರಿಸಿ ಬಿಲ್‌ ನೀಡಲಾಗಿದೆ. ಗ್ರಾಹಕರೊಬ್ಬರು ಬಿಲ್‌ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಎಲ್ಲೆಡೆ ಭಾರೀ ಆಕ್ರೋಶಕ್ಕೆ ಕಾರಣವಾಗುತ್ತಿದೆ.

ಬಿಲ್‌ ಹಂಚಿಕೊಂಡ ವ್ಯಕ್ತಿ ಇಡ್ಲಿ, ವಡೆಯನ್ನು ತೆಗೆದುಕೊಂಡಿದ್ದಾರೆ. ಬಿಲ್‌ನಲ್ಲಿ ಗ್ಯಾಸ್‌ ಶುಲ್ಕವನ್ನು ಸಹ ನಮೂದು ಮಾಡಲಾಗಿದೆ. ಈ ಬಿಲ್‌ ಚೆನ್ನೈನ ತಿರುವೆಂಕಡನಗರ್, ಎಂ.ಜಿ.ಆರ್. ಸಾಲೈ ಪೆರುಂಗುಡಿಯ ಗ್ರೀರಾಸ್‌ ರೆಸ್ಟೋರೆಂಟ್‌”ಗೆ ಸೇರಿದ್ದಾಗಿದೆ. ಇದರಲ್ಲಿ ದಿನಾಂಕ 12/03/2026, ಸಮಯ 08:32 ಎಂದು ಇದೆ. Gas’ಗೆ 9.52 ರೂಪಾಯಿ ಶುಲ್ಕ ಸೇರಿಸಲಾಗಿದೆ. ರೆಸ್ಟೋರೆಂಟ್‌ಗಳು ತೆರಿಗೆಗಳಲ್ಲದೆ ತಮ್ಮ ಖರ್ಚುವೆಚ್ಚಗಳನ್ನು ತೋರಿಸಲು ಈ ರೀತಿ ವಿಭಿನ್ನ ಹೆಸರಿನಲ್ಲಿ ಶುಲ್ಕ ವಿಧಿಸುತ್ತವೆ.

ಕೆಲವು ಹೊಟೆಲ್‌ಗಳು ಈಗಾಗಲೇ ಆಹಾರದ ದರದಲ್ಲಿ ಏರಿಕೆ ಮಾಡಿದೆ. ಸರ್ಕಾರವು ಈ ಪೂರೈಕೆ ಕೊರತೆಯನ್ನು ನಿಭಾಯಿಸಲು ಪ್ರಯತ್ನಿಸುತ್ತಿದೆ. ಆದರೂ, ಹೋಟೆಲ್ ಮಾಲೀಕರು ಎಲ್‌ಪಿಜಿ ಲಭ್ಯತೆ ಸುಸ್ಥಿರವಾಗದಿದ್ದರೆ ಮುಂದಿನ ದಿನಗಳಲ್ಲಿ ಆಹಾರದ ದರಗಳು ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದ್ದಾರೆ. ಅಡುಗೆ ಅನಿಲ ಉತ್ಪಾದನೆಯಲ್ಲಿ ಶೇ.25 ರಷ್ಟು ಹೆಚ್ಚಳವಾಗಿದ್ದು, ಸಾರ್ವಜನಿಕರು ಅಥವಾ ಉದ್ಯಮಿಗಳು ಭಯಭೀತರಾಗಿ ಖರೀದಿಸುವ ಅಗತ್ಯವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಈ ಕುರಿತು ಮಾತನಾಡಿದ ಪೆಟ್ರೋಲಿಯಂ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ, ಭಾರತವು ತನ್ನ ಅಗತ್ಯದ ಎಲ್​ಪಿಜಿಯನ್ನು ಶೇ. 60 ರಷ್ಟು ವಿದೇಶಗಳಿಂದ ಪಡೆಯುತ್ತಿತ್ತು. ಅದರಲ್ಲಿ ಶೇ. 90 ರಷ್ಟು ಹಾರ್ಮುಜ್ ಜಲಸಂಧಿಯ ಮೂಲಕ ಪಡೆಯಲಾಗುತ್ತಿತ್ತು. ಆದರೆ, ಇಸ್ರೇಲ್​ ಮತ್ತು ಇರಾನ್​ ಸಂಘರ್ಷದಿಂದಾಗಿ ಈ ಆಯಕಟ್ಟಿನ ಜಲಸಂಧಿಯನ್ನು ಮುಚ್ಚಿರುವುದು ಭಾರತದ ಇಂಧನ ಭದ್ರತೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದರು. ಆದಾಗ್ಯೂ, ಅಂದಿನಿಂದ ಸರ್ಕಾರ ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು ನಿರ್ದೆಶನ ನೀಡಿದ್ದು, ಈಗಾಗಲೇ ಸಂಸ್ಕರಣಾಗಾರಗಳು ಉತ್ತಾದನೆಯನ್ನು ಶೇ. 25 ಕ್ಕೆ ಹೆಚ್ಚಿಸಿವೆ ಎಂದು ಹೇಳಿದರು.

Shwetha M