ಬಾಂಗ್ಲಾ ವಿರುದ್ಧವೂ ಗೆಲ್ಲದ PAK – ODIನಲ್ಲೇ ಅತ್ಯಂತ ಹೀನಾಯ ಸೋಲು!
ಇಂಥಾ ಸಂಪತ್ತಿಗೆ ಕ್ರಿಕೆಟ್ ಯಾಕೆ?

ಬಾಂಗ್ಲಾ ವಿರುದ್ಧವೂ ಗೆಲ್ಲದ PAK – ODIನಲ್ಲೇ ಅತ್ಯಂತ ಹೀನಾಯ ಸೋಲು!ಇಂಥಾ ಸಂಪತ್ತಿಗೆ ಕ್ರಿಕೆಟ್ ಯಾಕೆ?

ಟಿ-20 ವಿಶ್ವಕಪ್ ಆರಂಭಕ್ಕೂ ಮುನ್ನ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಹತ್ತಾರು ಡ್ರಾಮಾ ಮಾಡಿತ್ತು. ಅದೂ ಕೂಡ ಬಾಂಗ್ಲಾದೇಶದ ಪರ ನಾವಿದ್ದೇವೆ ಅಂತಾ. ಬಾಂಗ್ಲಾ ಟೂರ್ನಿಯಿಂದ ಹಿಂದೆ ಸರಿದಾಗ ಅವ್ರ ಪಂದ್ಯಗಳನ್ನ ಶ್ರೀಲಂಕಾಗೆ ಶಿಫ್ಟ್ ಮಾಡಿ ಇಲ್ದಿದ್ರೆ ನಾವು ಟೂರ್ನಿಯನ್ನೇ ಬಾಯ್ಕಾಟ್ ಮಾಡ್ತೀವಿ, ಭಾರತದ ವಿರುದ್ಧ ಆಡಲ್ಲ ಅಂತೆಲ್ಲಾ ಕ್ಯಾತೆ ತೆಗೆದು ಆಮೇಲೆ ಸೈಲೆಂಟಾಗಿ ಬಂದು ಮ್ಯಾಚಸ್ ಆಡಿದ್ರು. ಸೆಮೀಸ್​ಗೂ ಕ್ವಾಲಿಫೈ ಆಗದೆ ಗುಡ್ ಬೈ ಹೇಳಿದ್ರು. ಆದ್ರೀಗ ಅದೇ ಪಾಕಿಸ್ತಾನ ಬಾಂಗ್ಲಾದೇಶದ ವಿರುದ್ಧವೇ ಹೀನಾಯವಾಗಿ ಸೋತಿದೆ. ಕ್ರಿಕೆಟರ್ಸ್​ಗಿಂತ ಕಡೆಯಾಗಿ ಆಡ್ತಿರೋ ಪಾಕ್ ಆಟಗಾರರ ವಿರುದ್ಧ ಅಲ್ಲಿನ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ.

ಇದನ್ನೂ ಓದಿ : IPL ಮಹಾ ಕದನಕ್ಕೆ ಡೇಟ್ ಫಿಕ್ಸ್ – ಮಾರ್ಚ್‌ 28ರಿಂದ ಶುರು, ಚಿನ್ನಸ್ವಾಮಿಯಲ್ಲೇ ಉದ್ಘಾಟನಾ ಪಂದ್ಯ

ಪಾಕಿಸ್ತಾನ ಕ್ರಿಕೆಟ್ ಪರಿಸ್ಥಿತಿ ಅಧ್ವಾನ ಆಗೋಗಿದೆ ಅನ್ನೋದನ್ನ ಸ್ವತಃ ಅಲ್ಲಿನ ಮಾಜಿ ಕ್ರಿಕೆಟಿಗರೇ ಒಪ್ಪಿಕೊಂಡಿದ್ದಾರೆ. ಈ ಸಲ ಟಿ-20 ವಿಶ್ವಕಪ್ ಆದ್ಮೇಲಂತೂ ಪಾಕ್ ಕ್ರಿಕೆಟರ್​ಗಳ ಚಳಿ ಬಿಡಿಸಿದ್ದಾರೆ. ದೊಡ್ಡ ದೊಡ್ಡ ತಂಡಗಳ ವಿರುದ್ಧ ಇವ್ರು ಗೆಲ್ಲೋಕೂ ಆಗಲ್ಲ ಅಂತಾ ತಮ್ಮದೇ ಕ್ರಿಕೆಟಿಗರ ಮಾನ ಹರಾಜು ಹಾಕಿದ್ದಾರೆ. ಈಗ ಇದಕ್ಕೆ ಮತ್ತೊಂದು ಎಕ್ಸಾಂಪಲ್ ಅನ್ನುವಂತೆ ಬಾಂಗ್ಲಾ ವಿರುದ್ಧ ಮಕಾಡೆ ಮಲಗಿದ್ದಾರೆ.

ಬಾಂಗ್ಲಾ ವಿರುದ್ಧವೂ ಗೆಲ್ಲೋಕಾಗದ ಪಾಕಿಸ್ತಾನ!

ಪಾಕಿಸ್ತಾನಿಯರ ಆಟ ಏನಿದ್ರೂ ಕ್ರಿಕೆಟ್ ಶಿಶುಗಳ ಮುಂದೆಯಷ್ಟೇ ಅನ್ನೋದು ಕ್ರಿಕೆಟ್ ಜಗತ್ತಿಗೇ ಗೊತ್ತಾಗಿದೆ. ಬಹುಶಃ ಇವ್ರು ಫೈನಲ್​ಗೆ ಹೆಂಗೂ ಬರಲ್ಲ ಅನ್ನೋದು ಪಿಸಿಬಿಗೆ ಮೊದ್ಲೇ ಗೊತ್ತಿತ್ತು ಅನ್ಸುತ್ತೆ. ಅದಕ್ಕೇ ಮಾರ್ಚ್ 8ಕ್ಕೆ ಟಿ-20 ವಿಶ್ವಕಪ್ ಫೈನಲ್ ಶೆಡ್ಯೂಲ್ ಆಗಿದ್ರೂ ಮಾರ್ಚ್ 11ರಿಂದಲೇ ಬಾಂಗ್ಲಾದೇಶದ ವಿರುದ್ಧ ಏಕದಿನ ಸರಣಿ ಫಿಕ್ಸ್ ಮಾಡಿದ್ರು. ವಿಶ್ವಕಪ್​ನಲ್ಲಿ ಸೆಮೀಸ್​ಗೂ ಕಾಲಿಡದೆ ಗುಡ್ ಬೈ ಹೇಳಿದ್ದ ಪಾಕಿಸ್ತಾನ ಮಾರ್ಚ್ 11ಕ್ಕೆ ಬಾಂಗ್ಲಾ ವಿರುದ್ಧ ಮೊದಲ ಏಕದಿನ ಪಂದ್ಯ ಆಡಿದೆ. ಈ ಮ್ಯಾಚಲ್ಲಿ ಪಾಕಿಸ್ತಾನಿಯರ ಪರ್ಫಾಮೆನ್ಸ್ ನೋಡಿದ್ರೆ ಬಹುಶಃ ಲೋಕಲ್ ಬಾಯ್ಸ್ ಇವ್ರಿಗಿಂತ ಬೆಟರ್ ಆಗಿ ಆಡ್ತಾರೆ ಅನ್ನಿಸ್ತಿದೆ. ಶೇರ್ ಎ ಬಾಂಗ್ಲಾ ಸ್ಟೇಡಿಯಮ್​ನಲ್ಲಿ ನಡೆದ ಈ ಮ್ಯಾಚಲ್ಲಿ ಟಾಸ್ ಗೆದ್ದ ಬಾಂಗ್ಲಾ ಬೌಲಿಂಗ್ ಚೂಸ್ ಮಾಡಿಕೊಂಡಿದೆ. ಅದ್ರಂತೆ ಫಸ್ಟ್ ಬ್ಯಾಟಿಂಗ್​ಗೆ ಬಂದ ಪಾಕಿಸ್ತಾನದ ಪರ ಬ್ಯಾಟರ್​ಗಳು ಪೆವಿಲಿಯನ್ ಪರೇಡ್ ನಡೆಸಿದ್ದಾರೆ.

ಪಾಕಿಸ್ತಾನ ಫ್ಲ್ಯಾಪ್ ಶೋ!

30.4 ಓವರ್ ಗಳಲ್ಲೇ 114 ರನ್ ಗಳಿಗೆ ಪಾಕ್ ಆಲೌಟ್

ನಾಲ್ವರು ಬ್ಯಾಟರ್ ಗಳು ಮಾತ್ರವೇ ಡಬಲ್ ಡಿಜಿಟ್ ಸ್ಕೋರ್

ಬಾಂಗ್ಲಾ ಪರ ಬೌಲರ್ಸ್ ಎಕಾನಮಿ 5ರ ಒಳಗೆ ಬೌಲಿಂಗ್

ಪಾಕಿಸ್ತಾನ ಪರ 6ಕ್ಕಿಂತ ಜಾಸ್ತಿ ಎಕಾನಮಿಯಲ್ಲಿ ಬೌಲಿಂಗ್

15.1 ಓವರ್ ಗಳಲ್ಲೇ 2 ವಿಕೆಟ್ ನಷ್ಟಕ್ಕೆ ಟಾರ್ಗೆಟ್ ರೀಚ್

209 ಎಸೆತಗಳು ಬಾಕಿ ಇರುವಂತೆಯೇ ಗೆದ್ದ ಬಾಂಗ್ಲಾದೇಶ

ಎಸೆತಗಳ ಆಧಾರದಲ್ಲಿ ಪಾಕ್ ವಿರುದ್ಧ ಬಾಂಗ್ಲಾ ದೊಡ್ಡ ಗೆಲುವು

ಕೇವಲ 4 ಗಂಟೆಗಳಲ್ಲೇ ಮುಗಿದ ಏಕದಿನ ಪಂದ್ಯ

ಏಕದಿನ ರ್ಯಾಂಕಿಂಗ್​ನಲ್ಲಿ 10ನೇ ಸ್ಥಾನದಲ್ಲಿರೋ ಬಾಂಗ್ಲಾದೇಶದ ವಿರುದ್ಧ 4ನೇ ರ್ಯಾಂಕಿಂಗ್​ನಲ್ಲಿರೋ ಪಾಕಿಸ್ತಾನ ಹೀನಾಯವಾಗಿ ಸೋತಿದೆ. ಇದೇ ಈಗ ಅಲ್ಲಿನ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಅದೂ ಅಲ್ದೇ ಪಾಕ್ ನೀಡಿದ ಟಾರ್ಗೆಟ್ ಬೆನ್ನತ್ತಿದ್ದ ಬಾಂಗ್ಲಾದೇಶ ಪಂದ್ಯ ಗೆಲ್ಲೋಕೆ ಕೇವಲ 6 ರನ್​ಗಳ ಅವಶ್ಯಕತೆ ಇದ್ದಾಗ ಪಾಕ್ ಬೌಲರ್ ನಜ್ಮುಲ್ ಹೊಸೈನ್ ಶಾಂಟೋ ಅವ್ರ ವಿಕೆಟ್ ಪಡೆದು ಸೆಲೆಬ್ರೇಟ್ ಮಾಡಿದ್ದಾರೆ. ಅವಶ್ಯಕತೆ ಇಲ್ಲದ ಟೈಮಲ್ಲಿ ವಿಕೆಟ್ ಪಡೆದಿದ್ದೂ ಅಲ್ದೇ ಸೆಲೆಬ್ರೇಟ್ ಬೇರೆ ಮಾಡ್ತಾರೆ ಅಂಥಾ ಕೆಲವ್ರು ಟೀಕೆ ಮಾಡಿದ್ದಾರೆ.  ಒಟ್ನಲ್ಲಿ ಪಾಕಿಸ್ತಾನದ ಸೋಲಿನ ಸರಣಿ ಕಂಟಿನ್ಯೂ ಆಗ್ತಿದೆ. ಈಗ ಬಾಂಗ್ಲಾದಂಥ ದೇಶಗಳ ವಿರುದ್ಧವೂ ಸೋಲೋ ಮೂಲಕ ತಂಡದ ಬಣ್ಣವನ್ನ ಬಯಲಿಗೆಳೆದಿದ್ದಾರೆ. ಇಂಥಾ ಸಂಪತ್ತಿಗೆ ಕ್ರಿಕೆಟ್ ಯಾಕೆ ಆಡ್ತೀರಿ ಅಂತಾ ಅಲ್ಲಿನ ಅಭಿಮಾನಿಗಳೇ ಆಟಗಾರರಿಗೆ ಛೀಮಾರಿ ಹಾಕಿದ್ದಾರೆ.

Shantha Kumari

Leave a Reply

Your email address will not be published. Required fields are marked *