RCB Vs SRH.. ಮತ್ತೆ ಇತಿಹಾಸ – ಕಿಶನ್ & ಅಭಿಷೇಕ್ ವಿಲನ್ ಆಗ್ತಾರಾ?
ತವರಿನ ಸವಾಲ್ ಗೆಲ್ತಾರಾ ರಜತ್ ಪಡೆ?

ರಾಯಲ್ ಚಾಲೆಂಜರ್ಸ್ ಬೆಂಗಳೂರು ವರ್ಸಸ್ ಸನ್ ರೈಸರ್ಸ್ ಹೈದ್ರಾಬಾದ್. 19ನೇ ಆವೃತ್ತಿಯ ಮೊದಲ ಪಂದ್ಯದಲ್ಲೇ ಎರಡು ಘಟಾನುಘಟಿ ಟೀಮ್ಗಳೇ ಮುಖಾಮುಖಿ ಆಗ್ತಿವೆ. ಅದ್ರಲ್ಲೂ ಬ್ಯಾಟಿಂಗ್ನಲ್ಲಿ ಸಿಕ್ಕಾಪಟ್ಟೆ ಡೇಂಜರಸ್ ಆಗಿರೋ ಎಸ್ಆರ್ಹೆಸ್ ವಿರುದ್ಧದ ಈ ಮ್ಯಾಚ್ ಮತ್ತೊಂದು ಹೈವೋಲ್ಟೇಜ್ ಫೈಟ್ ಆಗೋದ್ರಲ್ಲಿ ಡೌಟೇ ಇಲ್ಲ. ಹಾಲಿ ಚಾಂಪಿಯನ್ ಆರ್ಸಿಬಿ ಹಾಗೇ ಐಪಿಎಲ್ ಹಿಸ್ಟರಿಯಲ್ಲಿ ಮೋಸ್ಟ್ ಹೈಯೆಸ್ಟ್ ಸ್ಕೋರ್ ಮಾಡಿರೋ ಎಸ್ಆರ್ಹೆಚ್.
ಇದನ್ನೂ ಓದಿ : ಬೆಂಗಳೂರಲ್ಲೇ IPLಗೆ ರಣಕಹಳೆ – RCB ಫಸ್ಟ್ ಆಫ್ ಫೈಟ್ ಹೇಗಿದೆ?
ಬಿಸಿಸಿಐ ಅನೌನ್ಸ್ ಮಾಡಿರೋ ಫಸ್ಟ್ ಫೇಸ್ ಲಿಸ್ಟ್ ಪ್ರಕಾರ ಉದ್ಘಾಟನಾ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲೇ ನಡೆಯಲಿದೆ. ಬೆಂಗಳೂರು ಹಾಗೇ ಹೈದ್ರಾಬಾದ್ ತಂಡಗಳು ಮುಖಾಮುಖಿ ಆಗ್ತಾರೆ. 2024ರ ಟೂರ್ನಿಯಲ್ಲಿ ಇದೇ ಮೈದಾನದಲ್ಲಿ ಹೈದ್ರಾಬಾದ್ ಬ್ಯಾಟಿಂಗ್ನಲ್ಲಿ ಸುನಾಮಿಯನ್ನೇ ಎಬ್ಬಿಸಿತ್ತು. ಬೆಂಗಳೂರು ಕೂಡ ಟಫ್ ಫೈಟ್ ಕೊಟ್ಟಿತ್ತು. ಹೀಗಾಗಿ ಈ ಪಂದ್ಯ ಕೂಡ ಇತಿಹಾಸದ ಪುಟದಲ್ಲಿ ದಾಖಲಾಗೋ ಎಲ್ಲಾ ಚಾನ್ಸಸ್ ಇದೆ.
2026ರ ಮೊದಲ ಪಂದ್ಯದಲ್ಲೇ ರನ್ ಗಳ ಸುರಿಮಳೆ!
ಬೆಂಗಳೂರಿನ ಚಿನ್ನಸ್ವಾಮಿ ಮೈದಾನ ಬ್ಯಾಟಿಂಗ್ ಫ್ರೆಂಡ್ಲಿ ಪಿಚ್ ಅನ್ನೋದು ಎಲ್ರಿಗೂ ಗೊತ್ತಿರೋದೇ. ಌಂಡ್ ಸಣ್ಣ ಬೌಂಡರಿ ಲೈನ್ಸ್ ಇರೋದ್ರಿಂದ ಇಲ್ಲೇನಿದ್ರೂ ಬಿಗ್ ಹಿಟ್ಗಳಲ್ಲೇ ಡೀಲ್ ಮಾಡ್ತಾರೆ. ಆರ್ಸಿಬಿಗೆ ಇದು ಹೋಂ ಪಿಚ್ ಆಗಿರೋದ್ರಿಂದ ಬೆಂಗಳೂರು ಕೂಡ ಅದ್ಭುತ ಪ್ರದರ್ಶನ ನೀಡೋದು ಪಕ್ಕಾ. ಎಲ್ಲಕ್ಕಿಂತ ಮುಖ್ಯವಾಗಿ ಆರ್ಸಿಬಿ ತಂಡದಲ್ಲಿ ಬ್ಯಾಟಿಂಗ್ ಡೆಪ್ತ್ ಸಿಕ್ಕಾಪಟ್ಟೆ ಚೆನ್ನಾಗಿದೆ. ಟಾಪ್ ಆರ್ಡರ್ ಌಂಡ್ ಫಿನಿಶಿಂಗ್ ಬೊಂಬಾಟ್ ಇರೋದ್ರಿಂದ ಈ ಸಲ ಇನ್ನೂ ಹೈಸ್ಕೋರ್ಗಳನ್ನ ನಿರೀಕ್ಷೆ ಮಾಡ್ಬೋದು. ಆರ್ ಸಿಬಿ ಪರ ಌಸ್ ಯೂಶುಯಲ್ ವಿರಾಟ್ ಕೊಹ್ಲಿ ಌಂಡ್ ಫಿಲ್ ಸಾಲ್ಟ್ ಇನ್ನಿಂಗ್ಸ್ ಆರಂಭ ಮಾಡ್ತಾರೆ. ಮಿಡಲ್ ಆರ್ಡರ್ ಕೂಡ ಚೆನ್ನಾಗಿದೆ. ಌಂಡ್ ರೊಮ್ಯಾರಿಯೋ ಶೆಫರ್ಡ್ ಮತ್ತು ಟಿಮ್ ಡೇವಿಡ್ ಫಿನಿಶರ್ ರೋಲ್ನಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡ್ತಾರೆ. ಅತ್ತ ಹೈದ್ರಾಬಾದ್ ತಂಡದಲ್ಲೂ ಪವರ್ ಹಿಟ್ಟರ್ಗಳ ದಂಡೇ ಇದೆ. ಅದ್ರಲ್ಲೂ ಅಭಿಷೇಕ್ ಮತ್ತು ಇಶಾನ್ ಕಿಶನ್ ಜೊತೆ ಟ್ರಾವಿಸ್ ಹೆಡ್ ಇರೋದು ಹೈದ್ರಾಬಾದ್ನ ಮೇನ್ ವೆಪನ್ ಆಗ್ತಾರೆ.
ಅಭಿಷೇಕ್ ಮತ್ತು ಕಿಶನ್ ಜೊತೆ ಹೆಡ್ ಸಿಡಿದ್ರೆ ಇತಿಹಾಸ!
ಸನ್ ರೈಸರ್ಸ್ ಹೈದ್ರಾಬಾದ್ ತಂಡದ ಅತಿದೊಡ್ಡ ಅಸ್ತ್ರವೇ ಬ್ಯಾಟಿಂಗ್. ಹೈದ್ರಾಬಾದ್ ಪರ ಅಭಿಷೇಕ್ ಶರ್ಮಾ ಮತ್ತು ಟ್ರಾವಿಸ್ ಹೆಡ್ ಇನ್ನಿಂಗ್ಸ್ ಓಪನ್ ಮಾಡ್ತಾರೆ. ಌಂಡ್ ನಂಬರ್ 3ನಲ್ಲಿ ಇಶಾನ್ ಕಿಶನ್ ಬರ್ತಾರೆ. ಈ ಮೂವರೂ ಕೂಡ ಬಿಗ್ ಹಿಟ್ಗಳ ಮೂಲಕವೇ ರನ್ಸ್ ಸ್ಕೋರ್ ಮಾಡ್ತಾರೆ. ಌಂಡ್ ಅಭಿಷೇಕ್ ಶರ್ಮಾ ಮತ್ತು ಇಶಾನ್ ಕಿಶನ್ ಇಬ್ರೂ ಕೂಡ ಎದುರಾಳಿ ಪಡೆಗೆ ವಿಲನ್ ಆಗೋದು ಪಕ್ಕಾ. ಈಗಷ್ಟೇ ಟಿ-20 ವಿಶ್ವಕಪ್ ಮುಗಿಸಿ ರೆಸ್ಟ್ ಮೂಡ್ನಲ್ಲಿರೋ ಈ ಪವರ್ ಹಿಟ್ಟರ್ಸ್ ಐಪಿಎಲ್ನಲ್ಲೂ ಅಬ್ಬರಿಸೋಕೆ ಕಾಯ್ತಿದ್ದಾರೆ. ಅದೂ ಅಲ್ದೇ ಅಭಿಷೇಕ್ ಟಿ-20ಐನಲ್ಲಿ ನಂಬರ್ 1 ಬ್ಯಾಟರ್ ಆಗಿದ್ರೆ ಕಿಶನ್ ನಂಬರ್ 2 ಬ್ಯಾಟರ್ ಆಗಿದ್ದಾರೆ. ಇಬ್ರೂ ಕೂಡ ಆಲ್ಮೋಸ್ಟ್ 200 ಸ್ಟ್ರೈಕ್ರೇಟ್ನಲ್ಲೇ ಬ್ಯಾಟ್ ಬೀಸೋದ್ರಿಂದ ಪವರ್ ಪ್ಲೇನಲ್ಲೇ ಗೇಮ್ ಚೇಂಜಿಂಗ್ ಪರ್ಫಾಮೆನ್ಸ್ ಬಂದು ಬಿಡುತ್ತೆ. ಌಂಡ್ ಇವ್ರ ವೀಕ್ನೆಸ್ ಕೂಡ ಇದೇ ಆಗಿರುತ್ತೆ. ಹೊಡೆದ್ರೆ ಬಿಗ್ ಹಿಟ್ ಇಲ್ದಿದ್ರೆ ಬೇಗ ಔಟ್ ಆಗ್ತಾರೆ. ಬಟ್ 10 ಬಾಲ್ಗಳನ್ನ ಫೇಸ್ ಮಾಡಿದ್ರೂ ತಮ್ಮ ಆಟ ಮುಗಿಸಿರ್ತಾರೆ ಅನ್ನೋದನ್ನ ಮರೆಯೋ ಹಾಗಿಲ್ಲ. ಅದೂ ಅಲ್ದೇ ಐಪಿಎಲ್ ಹಿಸ್ಟರಿ ಕೆದಕಿದ್ರೆ ಹೈಯೆಸ್ಟ್ ಟಾರ್ಗೆಟ್ ಸೆಟ್ ಲಿಸ್ಟ್ನಲ್ಲಿ ಟಾಪ್ 4ನಲ್ಲಿ ಅವ್ರೇ ಇದ್ದಾರೆ. ಌಂಡ್ ಹೈಯೆಸ್ಟ್ ಎವರ್ ಟಾರ್ಗೆಟ್ ನಮ್ಮ ಆರ್ಸಿಬಿ ವಿರುದ್ಧವೇ ಇದೆ. ಜೊತೆಗೆ ಆ ಪಂದ್ಯ ನಡೆದಿದ್ದೂ ಕೂಡ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲೇ.
ಬ್ಯಾಟಿಂಗ್ ನಲ್ಲಿ ಬೊಂಬಾಟ್ ಹೈದ್ರಾಬಾದ್!
ಎದುರಾಳಿ ತಂಡ ಸ್ಕೋರ್ ಮೈದಾನ ದಿನಾಂಕ
ಆರ್ ಸಿಬಿ 287/3 ಬೆಂಗಳೂರು ಏ.15, 2024
ಆರ್ ಆರ್ 286/6 ಹೈದರಾಬಾದ್ ಮಾ.23, 2025
ಕೆಕೆಆರ್ 278/3 ದೆಹಲಿ ಮೇ.25, 2025
ಎಂಐ 277/3 ಹೈದರಾಬಾದ್ ಮಾ.27, 2024
ಇಲ್ಲಿ ಟಾಪ್ 5 ಲಿಸ್ಟ್ನಲ್ಲಿ ಮೊದಲ ನಾಲ್ಕು ಸ್ಥಾನಗಳನ್ನ ಹೈದ್ರಾಬಾದ್ ತಂಡವೇ ಕ್ರಿಯೇಟ್ ಮಾಡಿದೆ. ಐದನೇ ಸ್ಥಾನದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಇದೆ. 2024ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 7 ವಿಕೆಟ್ ನಷ್ಟಕ್ಕೆ 272 ರನ್ಗಳನ್ನ ಸ್ಕೋರ್ ಮಾಡಿತ್ತು. ಌಂಡ್ 6ನೇ ಸ್ಥಾನದಲ್ಲೂ ಹೈದ್ರಾಬಾದ್ ತಂಡವೇ ಇದೆ. ಡಿಸಿ ವಿರುದ್ಧ 266 ರನ್‌ಗಳ ಇನ್ನಿಂಗ್ಸ್‌ನೊಂದಿಗೆ ಆರನೇ ಸ್ಥಾನವನ್ನೂ ತಾನೇ ಪಡೆದಿದೆ. ಅಂದ್ರೆ ಟಾಪ್ 6 ಲಿಸ್ಟ್ನಲ್ಲಿ ಹೈದ್ರಾಬಾದ್ 5 ಸ್ಥಾನಗಳಲ್ಲಿ ತನ್ನ ಹೆಸರನ್ನೇ ಬರೆದಿದೆ. ಹೀಗಾಗಿ ಆರ್ಸಿಬಿ ಮತ್ತು ಎಸ್ಆರ್ಹೆಚ್ ನಡುವಿನ ಮೊದಲ ಪಂದ್ಯ ಧೂಳೆಬ್ಬಿಸೋದ್ರಲ್ಲಿ ಅನುಮಾನವೇ ಇಲ್ಲ.

ನೋಡಿರಿ

