ಬೆಂಗಳೂರಲ್ಲೇ IPLಗೆ ರಣಕಹಳೆ – RCB ಫಸ್ಟ್ ಆಫ್ ಫೈಟ್ ಹೇಗಿದೆ?
ರಿವೇಂಜ್ ಮ್ಯಾಚ್ ಗಳು ಎಷ್ಟು?

ಫೈನಲಿ ಐಪಿಎಲ್ ಶೆಡ್ಯೂಲ್ ಅನೌನ್ಸ್ ಆಯ್ತು. ಫಸ್ಟ್ ಮ್ಯಾಚ್ ಬೆಂಗಳೂರಲ್ಲೇ ನಡೆಯೋದು ಕನ್ನಡಿಗರಿಗೆ ಮತ್ತೊಂದು ಸ್ಪೆಷಲ್. ಉದ್ಘಾಟನಾ ಪಂದ್ಯದಲ್ಲೇ ಆರ್ಸಿಬಿ ವರ್ಸಸ್ ಎಸ್ಆರ್ಹೆಚ್ ನಡುವೆ ಹೈವೋಲ್ಟೇಜ್ ಮ್ಯಾಚ್ ನಡೆಯಲಿದೆ. ಆದ್ರೆ ಮೊದಲ ಹಂತದಲ್ಲಿ 20 ಪಂದ್ಯಗಳ ಶೆಡ್ಯೂಲ್ ಮಾತ್ರ ಅನೌನ್ಸ್ ಆಗಿದೆ.
ಇದನ್ನೂ ಓದಿ : ಕನ್ನಡಿಗ ರಾಹುಲ್ ದ್ರಾವಿಡ್ ಕರ್ನಲ್ ಸಿ.ಕೆ. ನಾಯುಡು ಜೀವಮಾನ ಸಾಧನೆ ಪ್ರಶಸ್ತಿ
2026ರ ಐಪಿಎಲ್ಗೆ ಇನ್ನು ಎರಡು ವಾರಗಳಷ್ಟೇ ಬಾಕಿ. ಇದೇ ಮಾರ್ಚ್ 28ರಿಂದ ಏಪ್ರಿಲ್ 12ರವರೆಗೆ ಮೊದಲ ಹಂತದ ಪಂದ್ಯಗಳು ನಡೆಯಲಿವೆ. ಫಸ್ಟ್ ಆಫ್ನಲ್ಲಿ 20 ಪಂದ್ಯಗಳ ಶೆಡ್ಯೂಲ್ ರಿಲೀಸ್ ಆಗಿದೆ. ಌಂಡ್ ಈ 20 ಮ್ಯಾಚ್ಗಳಲ್ಲಿ 4 ಡಬಲ್ ಹೆಡ್ಡರ್ ಮ್ಯಾಚ್ಗಳಿವೆ. ಅಂದ್ರೆ 4 ದಿನಗಳಲ್ಲಿ ಒಟ್ಟು 8 ಮ್ಯಾಚ್ಗಳು ಇರುತ್ವೆ. ಇನ್ಯಾಗುರೇಷನ್ ಮ್ಯಾಚಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡಲಿದೆ. ಅದು ತವರು ಅಂಗಳ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ. ಇನ್ನು ಫಸ್ಟ್ ಆಫ್ನಲ್ಲಿ ಬೆಂಗಳೂರು ಟೀಂ ನಾಲ್ಕು ಪಂದ್ಯಗಳನ್ನ ಆಡಲಿದೆ. ಎರಡು ಪಂದ್ಯಗಳು ಹೋಂ ಪಿಚ್ನಲ್ಲಿ ನಡೆದ್ರೆ ಇನ್ನೆರಡು ಪಂದ್ಯ ಅವೇ ಸ್ಟೇಡಿಯಮ್ನಲ್ಲಿ ನಡೆಯುತ್ತೆ.
ಆರ್ ಸಿಬಿ ಪಂದ್ಯಗಳು!
ಎದುರಾಳಿ ಮೈದಾನ ದಿನಾಂಕ ಸಮಯ
ಎಸ್ ಆರ್ ಹೆಚ್ ಬೆಂಗಳೂರು ಮಾ.28 7.30
ಸಿಎಸ್ ಕೆ ಬೆಂಗಳೂರು ಏಪ್ರಿಲ್ 5 7.30
ರಾಜಸ್ಥಾನ ಗುವಾಹಟಿ ಏಪ್ರಿಲ್ 10 7.30
ಮುಂಬೈ ಮುಂಬೈ ಏಪ್ರಿಲ್ 12 7.30
ಇದು ಕೇವಲ ಮೊದಲ ಹಂತದ ಶೆಡ್ಯೂಲ್ನ ಪಂದ್ಯಗಳು. 20 ಮ್ಯಾಚ್ಗಳಷ್ಟೇ ರಿಲೀಸ್ ಮಾಡಿದ್ದಾರೆ. ಬಟ್ ಈ ಎಲ್ಲಾ ತಂಡಗಳಿಗೂ ರಿವೇಂಜ್ ಮ್ಯಾಚ್ ಸಿಗುವ ಸಾಧ್ಯತೆ ಇದೆ. ಯಾಕಂದ್ರೆ ಈ ಸಲ ಟೋಟಲ್ ಆಗಿ 84 ಪಂದ್ಯಗಳನ್ನ ಆಡಿಸೋ ಸಾಧ್ಯತೆ ಇದೆ. ಅಲ್ದೇ ಈ ಬಾರಿ ಕೆಲವು ತಂಡಗಳು ತಮ್ಮ ತವರಿನ ಪಂದ್ಯಗಳನ್ನು ಬೇರೆ ನಗರಗಳಲ್ಲಿಯೂ ಆಡಲಿವೆ. ರಾಜಸ್ಥಾನ್ ರಾಯಲ್ಸ್ ತಂಡವು ಗುವಾಹಟಿಯಲ್ಲಿ ಚೆನ್ನೈ ಮತ್ತು ಮುಂಬೈ ತಂಡಗಳಿಗೆ ಆತಿಥ್ಯ ವಹಿಸಲಿದೆ. ರಾಜಸ್ಥಾನ ರಾಯಲ್ಸ್‌ನ 3 ಪಂದ್ಯ ಗುವಾಹಟಿಯಲ್ಲಿ ನಡೆದ್ರೆ, 4ನೇ ಪಂದ್ಯ ಜೈಪುರದಲ್ಲಿ ನಡೆಯಲಿದೆ. ಇನ್ನು ಆರ್‌ಸಿಬಿಯ ಐದು ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದ್ದು, ರಾಯ್‌ಪುರದಲ್ಲಿ 2 ಪಂದ್ಯಗಳನ್ನು ಆಡಲಿದೆ. ಪಂಜಾಬ್ ಕಿಂಗ್ಸ್ ತಂಡ ನ್ಯೂ ಚಂಡೀಗಢದಲ್ಲಿ 4 ಪಂದ್ಯ ಮತ್ತು ಧರ್ಮಶಾಲಾದಲ್ಲಿ 3 ಪಂದ್ಯಗಳನ್ನು ಆಡಲಿದೆ.

ನೋಡಿರಿ

