ಸ್ಲೀಪರ್ ಕೋಚ್ ಬಸ್‌ನಲ್ಲಿ 90 ಲಕ್ಷ ಅಬೇಸ್ – ಪಕ್ಕಾ ಪ್ಲಾನ್ ಮಾಡಿ ಕದ್ದ ಖತರ್ನಾಕ್‌ಗಳು

ಸ್ಲೀಪರ್ ಕೋಚ್ ಬಸ್‌ನಲ್ಲಿ 90 ಲಕ್ಷ ಅಬೇಸ್ – ಪಕ್ಕಾ ಪ್ಲಾನ್ ಮಾಡಿ ಕದ್ದ ಖತರ್ನಾಕ್‌ಗಳು

ಮಂತ್ರಾಲಯದಿಂದ  ಮಂಗಳೂರಿಗೆ ತೆರಳುತ್ತಿದ್ದ ಸ್ಲೀಪರ್ ಕೋಚ್ ಬಸ್‌ನಲ್ಲಿ 90 ಲಕ್ಷ ಮೌಲ್ಯದ ಚಿನ್ನ, ವಜ್ರಾಭರಣವಿದ್ದ   ಬ್ಯಾಗ್ ದರೋಡೆಯಾಗಿದೆ. ಕೊಪ್ಪಳ   ಹೊರಹೊಲಯದಲ್ಲಿ ಊಟಕ್ಕೆಂದು ಬಸ್ ನಿಲ್ಲಿಸಿದಾಗ ಮಂಗಳೂರಿನ ಮೊಹಮ್ಮದ್, ಇರ್ಷಾದ್​ ಎಂಬುವರಿಗೆ ಸೇರಿದ ಚಿನ್ನ, ವಜ್ರಾಭರಣವಿದ್ದ ಚೀಲವನ್ನು ಕದ್ದು ಪರಾರಿಯಾಗಿದ್ದಾರೆ. ಬಸ್‌ನಲ್ಲಿ ಮಲಗಿದ್ದ ಪ್ರಯಾಣಿಕನೋರ್ವ ಚಿನ್ನ ಬ್ಯಾಗ್​ ಹಿಡಿದು ಪರಾರಿಯಾಗುತ್ತಿರುವ ಸಂಪೂರ್ಣ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದೀಗ ಪೊಲೀಸರು ಆರೋಪಿ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.

ಈ ದರೋಡೆ ಘಟನೆ ಕೊಪ್ಪಳ ಹೊರವಲಯದಲ್ಲಿರುವ Tawa Punjab Hotel ಮುಂಭಾಗದಲ್ಲಿ ನಡೆದಿದೆ. ಮಂತ್ರಾಲಯದಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಸ್ಲೀಪರ್ ಕೋಚ್ ಬಸ್, ರಾಷ್ಟ್ರೀಯ ಹೆದ್ದಾರಿ 63ಕ್ಕೆ ಹೊಂದಿಕೊಂಡ ತವ ಪಂಜಾಬ್ ಹೊಟೇಲ್​​ ಬಳಿ ನಿಲ್ಲಿಸಿದೆ. ಆ ವೇಳೆ ಬಸ್‌ನಲ್ಲೇ ಮಲಗಿದ್ದ ಮಹಮ್ಮದ್ ಮತ್ತು ಇರ್ಷಾದ್ ಎಂಬ ಪ್ರಯಾಣಿಕರ ಬಳಿಯಿದ್ದ ಬಂಗಾರದ ಚೀಲವನ್ನು ಖದೀಮ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ. ಇನ್ನು  ಚಿನ್ನಾಭರಗಳನ್ನು ಯುನಿಸೆಫ್ ಗೋಲ್ಡ್ ಕಂಪನಿಗೆ ಸೇರಿದ್ದು ಎನ್ನುವುದು ತಿಳಿದುಬಂದಿದೆ.

ಇದನ್ನೂ ಓದಿ: ಅಬ್ಬಬ್ಬಾ.. ಮಗುವಿನ ಕೈಯಲ್ಲೇ ಸ್ಪೋಟವಾಯ್ತು ಮೊಬೈಲ್!‌ – ಪುಟ್ಟ ಕಂದನಿಗೆ ಏನಾಯ್ತು? 

ಪ್ರಾಥಮಿಕ ತನಿಖೆಯ ಪ್ರಕಾರ, ಈ ದರೋಡೆ ಪ್ರಕರಣದ ಮಾಸ್ಟರ್ ಮೈಂಡ್ ಸಿಂಧನೂರಿನಿಂದ ಸ್ಲೀಪರ್ ಕೋಚ್ ಬಸ್‌ನಲ್ಲಿ ಪ್ರಯಾಣಿಸಿ ಕೊಪ್ಪಳಕ್ಕೆ ಬಂದಿದ್ದಾನೆ. ಅದೇ ವೇಳೆ ಇನ್ನೂ ಮೂವರು ಖದೀಮರು ಬೇರೆ ವಾಹನದಲ್ಲಿ ಬಸ್‌ನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ. ಒಟ್ಟು ನಾಲ್ವರು ಮೊದಲೇ ಸಂಚು ರೂಪಿಸಿ ಈ  ಕೃತ್ಯವನ್ನು  ಮಾಡಿದ್ದಾರೆ.

ಹೋಟೆಲ್ ಮುಂಭಾಗದಲ್ಲಿದ್ದ ಸಿಸಿ ಕ್ಯಾಮರದಲ್ಲಿ ಈ ದರೋಡೆ ಕೃತ್ಯದ ಸಂಪೂರ್ಣ ದೃಶ್ಯ ದಾಖಲಾಗಿದ್ದು, ಆರೋಪಿಗಳು ಹೇಗೆ ಬಸ್‌ಗೆ ಹತ್ತಿ ಬಂಗಾರದ ಚೀಲವನ್ನು ಕದ್ದುಕೊಂಡು ಹೋಗಿದ್ದಾರೆ ಎಂಬುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಅವರದ್ದೇ ಆದ ಸಿಗ್ನಲ್‌ಗಳು ಒಬ್ಬೊಬ್ಬರಂತೆ ಬಂದು ಹೋಗುವುದು ಕಂಡುಬಂದಿದೆ. ಈ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಸಿಸಿ ಕ್ಯಾಮರಾ ದೃಶ್ಯಾವಳಿ ಹಾಗೂ ಬಸ್ ಪ್ರಯಾಣಿಕರ ಮಾಹಿತಿಯ ಆಧಾರದ ಮೇಲೆ ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರು ವ್ಯಾಪಕ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ದರೋಡೆ ನಡೆಸಿದ ನಾಲ್ವರು ಖದೀಮರು ಯಾವ ದಿಕ್ಕಿಗೆ ಪರಾರಿಯಾಗಿದ್ದಾರೆ ಎಂಬುದರ ಕುರಿತು ಮಾಹಿತಿ ಕಲೆಹಾಕುತ್ತಿದ್ದಾರೆ.

Kishor KV

Leave a Reply

Your email address will not be published. Required fields are marked *