ತಾಂಡವ್‌ ಮಿಸ್ಸಿಂಗ್ ಕೇಸ್‌ಗೆ ಬಿಗ್‌ ಟ್ವಿಸ್ಟ್‌! – ಶ್ರೇಷ್ಠಾ ಕುತಂತ್ರಕ್ಕೆ ಭಾಗ್ಯ ಬಲಿ?‌

ತಾಂಡವ್‌ ಮಿಸ್ಸಿಂಗ್ ಕೇಸ್‌ಗೆ ಬಿಗ್‌ ಟ್ವಿಸ್ಟ್‌! – ಶ್ರೇಷ್ಠಾ ಕುತಂತ್ರಕ್ಕೆ ಭಾಗ್ಯ ಬಲಿ?‌

ಭಾಗ್ಯ ಲೈಫ್‌ನಲ್ಲಿ ಇನ್ನೇನು ಒಳ್ಳೆಯದ್ದಾಗುತ್ತೆ ಅನ್ನುವಾಗಲೇ ಇನ್ನೇನೋ ಆಗಿರುತ್ತೆ. ಆದಿ ಭಾಗ್ಯ ಒಂದಾಗ್ಬೇಕು ಅನ್ನುವಷ್ಟರಲ್ಲಿ ತಾಂಡವ್‌ ಎಂಟ್ರಿ ಕೊಟ್ಟಿದ್ದ. ಆತ ಭಾಗ್ಯ ಮನೆಗೆ ಕಾಲಿಟ್ಟಿದ್ದೇ ಕಾಲಿಟ್ಟಿದ್ದು.. ಭಾಗ್ಯ ಜೀವನಕ್ಕೆ ಮತ್ತೆ ಸಮಸ್ಯೆಗಳು ಶುರುವಾಗಿದೆ. ಇದೀಗ ತಾಂಡವ್‌ ಕಿಡ್ನ್ಯಾಪ್‌ ಆಗಿದ್ದು, ಭಾಗ್ಯ, ಆದಿಗೆ ಸಂಕಷ್ಟ ಎದುರಾಗಿದೆ.

ಇದನ್ನೂ ಓದಿ: ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲೇ ಶಾಸಕರ ಮಧ್ಯೆ ಗಲಾಟೆ! – ಕೈಕೈ ಮಿಲಾಯಿಸುವ ಹಂತಕ್ಕೆ ಜಗಳ ಮಾಡಿಕೊಂಡ ಕೈ ನಾಯಕರು!

ಭಾಗ್ಯಲಕ್ಷ್ಮೀ ಸೀರಿಯಲ್‌ನಲ್ಲಿ ಭಾಗ್ಯ ಕಷ್ಟ ನಿಲ್ಲುವಂತೆ ಕಾಣ್ತಿಲ್ಲ. ಒಂದಾದ ಮೇಲೊಂದು ಸಮಸ್ಯೆ ಆಕೆಗೆ ಎದುರಾಗುತ್ತಲೇ ಇದೆ. ಭಾಗ್ಯ ಮನೆಗೆ ಬಂದಿದ್ದ ತಾಂಡವ್‌ ಈಗ ನಾಪತ್ತೆಯಾಗಿದ್ದಾನೆ. ಇದೀಗ ಭಾಗ್ಯ ತಾಂಡವ್‌ನ ಹುಡುಕಲು ಹರಸಾಹಸ ಪಡುತ್ತಿದ್ದಾಳೆ. ಇದೀಗ ತಾಂಡವ್‌ ಮಿಸ್ಸಿಂಗ್‌ ಆಗಲು ತಾಂಡವ್‌ ಕಾರಣ ಎಂದು ತನ್ವಿ ಹಾಗೂ ಸುನಂದ ಆರೋಪ ಮಾಡ್ತಿದ್ದಾರೆ.

ತಾಂಡವ್ ಕಾಣೆಯಾಗುತ್ತಿದ್ದಂತೆ ತನ್ವಿ ಅಪ್ಪ ಕಿಡ್ನ್ಯಾಪ್‌ ಆಗಿದ್ದಾರೆ ಎಂದು ಹೇಳಿದ್ದಾಳೆ. ತಾಂಡವ್‌ನ ಯಾರೋ ಕಾರಿನಲ್ಲಿ ಕಿಡ್ನಾಪ್ ಮಾಡಿದ್ದಾರೆ ಎಂದು ಅಕ್ಕಪಕ್ಕದ ಮನೆಯವರು ಕೂಡ ಹೇಳಿದ್ದಾರೆ. ಈ ಬೆನ್ನಲ್ಲೇ ತಾಂಡವ್‌ನ ಹುಡುಕುವ ಪ್ರಯತ್ನ ಮಾಡ್ತಿದ್ದಾಳೆ. ಮತ್ತೊಂದ್ಕಡೆ ಸುನಂದ ಪೊಲೀಸ್‌ ಸ್ಟೇಷನ್‌ಗೆ ಹೋಗಿ ತಾಂಡವ್‌  ಕಾಣ್ತಿಲ್ಲ ಎಂದು ದೂರು ಕೊಟ್ಟಿದ್ದಾಳೆ. ಯಾರ ಮೇಲಾದ್ರೂ ಅನುಮಾನ ಇದ್ಯಾ ಎಂದು ಕೇಳಿದ್ದಕ್ಕೆ ಆದೀಶ್ವರ್‌ ಹೆಸರನ್ನ ಹೇಳಿದ್ದಾಳೆ. ಈ ಬೆನ್ನಲ್ಲೇ ಶ್ರೇಷ್ಠಾ ಕೂಡ ಪೊಲೀಸ್‌ ಸ್ಟೇಷನ್‌ಗೆ ಎಂಟ್ರಿ ಕೊಟ್ಟಿದ್ದಾಳೆ. ಆದೀಶ್ವರ್‌ ಮಾತ್ರವಲ್ಲ. ಇನ್ನೊಬ್ಬರ ಮೇಲೆ ಅನುಮಾನ ಇದೆ ಎಂದು ಹೇಳುತ್ತಾ ಭಾಗ್ಯ ಹೆಸರನ್ನ ಹೇಳಿದ್ದಾಳೆ. ಇದೀಗ ಸುನಂದಾಗೆ ತಾಂಡವ್‌ ಕಿಡ್ನ್ಯಾಪ್‌ ವಿಚಾರದಲ್ಲಿ ಅನುಮಾನ ಶುರುವಾಗಿದೆ. ಯಾರು ಕಿಡ್ನ್ಯಾಪ್‌ ಮಾಡಿರಬಹುದು ಅನ್ನೋದನ್ನ ಹೇಗಾದ್ರೂ ಮಾಡಿ ಪತ್ತೆಹಚ್ಚಬೇಕು ಎಂದು ಡಿಸೈಡ್‌ ಮಾಡಿದ್ದಾಳೆ. ಇದೀಗ ಈ ತನಿಖೆಯಿಂದ ಸತ್ಯ ಬಯಲಾಗುತ್ತಾ? ಎಂಬುದೇ ಈಗಿನ ಕುತೂಹಲ.

ಮತ್ತೊಂದ್ಕಡೆ ಭಾಗ್ಯ ಹಾಗೂ ಆದಿ ತಾಂಡವ್‌ನ ಹುಡುಕುತ್ತಿದ್ದಾರೆ. ಸಿಸಿಟಿವಿಯಲ್ಲೂ ಫೂಟೇಜ್‌ ನೋಡುತ್ತಿದ್ದಾರೆ. ಈ ವೇಳೆ ಎಲ್ಲ ಸಾಕ್ಷಿಗಳು ಆದಿ ವಿರುದ್ದವೇ ಇದೆ ಅನ್ನೋದು ಗೊತ್ತಾಗುತ್ತೆ. ಶ್ರೇಷ್ಠಾ ಆದೀಶ್ವರ್‌ ವಾಚ್‌ನ ಕಿಡ್ನ್ಯಾಪ್‌ ಮಾಡಿರೋ ಜಾಗದಲ್ಲಿ ಹಾಕಿದ್ದಾಳೆ. ಟೆಕ್ನಾಲಜಿ ಮೂಲಕ ಆದಿ ವಾಯ್ಸ್‌ ನೋಟ್‌ ಕಳುಹಿಸಿದ್ದಾಳೆ. ಇದೀಗ ತಾಂಡವ್‌ ಕಿಡ್ನ್ಯಾಪ್‌ ಕೇಸ್‌ನಲ್ಲಿ ಆದಿ ಅರೆಸ್ಟ್‌ ಆಗೋದು ಫಿಕ್ಸ್‌ ಆಗಿದೆ. ಇದೀಗ ಭಾಗ್ಯ ಆದಿ, ತಾಂಡವ್‌ನ ಬಚಾವ್‌ ಮಾಡ್ತಾಳಾ ಅನ್ನೋ ಕ್ಯೂರಿಯಾಸಿಟಿ ಮೂಡಿದೆ.

ಇನ್ನು ತಾಂಡವ್‌ನ ಶ್ರೇಷ್ಠಾಳೇ ಕಿಡ್ನ್ಯಾಪ್‌ ಮಾಡಿದ್ದಾಳೆ. ಯಾಕಂದ್ರೆ ತಾಂಡವ್‌ ಭಾಗ್ಯ ಮನೆಗೆ ಬರ್ತಿದ್ದಂತೆ ಆತನನ್ನು ತನ್ನ ಮನೆಗೆ ಕರೆಸಿಕೊಳ್ಬೇಕು ಎಂದು ಏನೇನೋ ಡ್ರಾಮಾ ಮಾಡಿದ್ಲು. ತಾನು ಸೂಸೈಡ್‌ ಮಾಡಿಕೊಳ್ಳುತ್ತೇನೆ ಎಂದು ಬ್ಲ್ಯಾಕ್‌ಮೇಲ್‌ ಮಾಡಿದ್ಲು. ಅದಾದ ಮೇಲೆ ಭಾಗ್ಯಳನ್ನ ಆಕ್ಸಿಡೆಂಟ್ ಮಾಡಿ ಕೊಲ್ಲಲು ಪ್ರಯತ್ನಿಸಿದ್ಲು. ಆದ್ರೆ ತಾಂಡವ್‌ ಭಾಗ್ಯ ಜೊತೆ ಇರುತ್ತೇನೆ ಎಂದು ದೃಢ ನಿರ್ಧಾರ ಮಾಡಿದ್ದಾನೆ. ಇದೇ ಕಾರಣಕ್ಕೆ ಶ್ರೇಷ್ಠಾ ತಾಂಡವ್‌ನ ಕಿಡ್ನ್ಯಾಪ್‌ ಮಾಡಿರಬಹುದು. ಇದೀಗ ಭಾಗ್ಯ ಶ್ರೇಷ್ಠಾಳ ಸಂಚುಗಳು ಒಂದೊಂದಾಗಿ ಬಯಲಾಗುತ್ತಾ? ತಾಂಡವ್‌ ಆದಿಯನ್ನ ಭಾಗ್ಯ ಬಚಾವ್‌ ಮಾಡ್ತಾಳಾ ಅಂತಾ ಕಾದುನೋಡ್ಬೇಕು. ಒಟ್ಟಿನಲ್ಲಿ ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಸದ್ಯಕ್ಕೆ ಹೈ-ವೋಲ್ಟೇಜ್ ಡ್ರಾಮಾ ನಡೆಯುತ್ತಿದೆ. ತಾಂಡವ್ ಮರಳಿ ಬರುತ್ತಾನಾ? ಭಾಗ್ಯ ತನ್ನ ತಾಂಡವ್‌ನ ಹೇಗೆ ಹುಡುಕುತ್ತಾಳೆ ಅಂತ ಕಾದುನೋಡ್ಬೇಕು.

Shwetha M

Leave a Reply

Your email address will not be published. Required fields are marked *