ಗ್ಯಾಸ್‌ ಸಿಲಿಂಡರ್‌ ನಂತರ ಪೆಟ್ರೋಲ್, ಡೀಸೆಲ್ ದರ ಏರಿಕೆ! – ದರ ಹೆಚ್ಚಾಗುತ್ತೆ ಅಂತ ಬಂಕ್‌ಗೆ ನೀರಿನ ಕ್ಯಾನ್‌ ಹೊತ್ತುಕೊಂಡು ಬಂದ ಸವಾರ!

ಗ್ಯಾಸ್‌ ಸಿಲಿಂಡರ್‌ ನಂತರ ಪೆಟ್ರೋಲ್, ಡೀಸೆಲ್ ದರ ಏರಿಕೆ! – ದರ ಹೆಚ್ಚಾಗುತ್ತೆ ಅಂತ ಬಂಕ್‌ಗೆ ನೀರಿನ ಕ್ಯಾನ್‌ ಹೊತ್ತುಕೊಂಡು ಬಂದ ಸವಾರ!

ವಿಶ್ವದ ತೈಲ ಭಂಡಾರ ಎನ್ನಲಾಗುವ ಮಧ್ಯಪ್ರಾಚ್ಯದಲ್ಲಿ ಶುರುವಾಗಿರುವ ಯುದ್ಧದ ಕಿಡಿ ಇದೀಗ ಜಗತ್ತಿನ ಆರ್ಥಿಕತೆಯ ಮೇಲೆ ಪರಿಣಾಮ ಬೀರಲು ಶುರುಮಾಡಿದೆ. ಯುದ್ಧವು ಕೇವಲ ಎರಡು ದೇಶಗಳ ನಡುವಿನ ಕಾದಾಟವಾಗಿ ಉಳಿಯದೇ ಸಾಮಾನ್ಯ ಜನರ  ಅಡುಗೆ ಮನೆಗೆ ಮತ್ತು ಜನಜೀವನದ ಮೇಲೆ ದಾಳಿ ಮಾಡುತ್ತಿದೆ. ಈಗಾಗಲೇ ಗ್ಯಾಸ್ ಮತ್ತು ಅಡುಗೆ ಎಣ್ಣೆಯ ಬೆಲೆ ಏರಿಕೆಯಿಂದ ಸಂಕಷ್ಟಕ್ಕೀಡಾಗಿದ್ದು, ಇದೀಗ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗುವ ಭೀತಿಯಲ್ಲಿದ್ದಾರೆ. ಇದೀಗ LPG ಸಿಲಿಂಡರ್‌ ಪೂರೈಕೆಯಲ್ಲಿ ಸಮಸ್ಯೆಯಾಗುತ್ತಿರುವ ಬೆನ್ನಲ್ಲೇ ತಮಿಳುನಾಡಿನಲ್ಲಿ ಬಂಕ್‌ ಮುಂದೆ ಜನರು ಸಾಲುಗಟ್ಟಿ ನಿಂತು ವಾಹನಗಳಿಗೆ ಪೆಟ್ರೋಲ್‌ ಹಾಕಿಸುತ್ತಿದ್ದಾರೆ.

ಇದನ್ನೂ ಓದಿ : ನಮ್ಮ ಮೆಟ್ರೋ ಪ್ರಯಾಣಿಕರಿಗೆ BMRCLನಿಂದ ಹೊಸ ಸೇವೆ!‌ – ಇನ್ಮುಂದೆ ಮೆಟ್ರೋ ಇಳಿದ ಮೇಲೆ ಆಟೋ ಹತ್ತಬೇಕಿಲ್ಲ!

ಈಗ ಸಿಲಿಂಡರ್‌ಗೆ ಸಮಸ್ಯೆಯಗಿದೆ ಮುಂದೆ ಪೆಟ್ರೋಲ್ ಕೂಡ ಸಿಗುವುದಿಲ್ಲ. ದರ ಭಾರೀ ಏರಿಕೆಯಾಗಲಿದೆ ಎಂಬ ಗಾಳಿ ಸುದ್ದಿಯನ್ನು ಯಾರೋ ಹಬ್ಬಿಸಿದ್ದಾರೆ. ಸುದ್ದಿ ವೈರಲ್‌ ಆದ ಬೆನ್ನಲ್ಲೇ ತಮಿಳುನಾಡಿನ ಪೆಟ್ರೋಲ್‌ ಬಂಕ್‌ ಮುಂದೆ ಜನ ಪೆಟ್ರೋಲ್‌ ಹಾಕಿಸಲು ಮುಗಿ ಬಿದ್ದಿದ್ದಾರೆ. ವಾಹನಗಳಿಗೆ ಫುಲ್‌ ಟ್ಯಾಂಕ್‌ ಪೆಟ್ರೋಲ್‌ ತುಂಬಿಸುವುದರ ಜೊತೆಗೆ ಸವಾರನೊಬ್ಬ ಮನೆಯಲ್ಲಿದ್ದ 15 ಲೀಟರ್‌ ವಾಟರ್‌ ಕ್ಯಾನ್ ತಂದು ಪೆಟ್ರೋಲ್‌ ತುಂಬಿಸಿಕೊಂಡು ಹೋಗಿದ್ದಾನೆ. ತಮಿಳುನಾಡಿನ ಪೆಟ್ರೋಲ್‌ ಬಂಕ್‌ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ಫುಲ್‌ ವೈರಲ್‌ ಆಗಿದೆ.

ಮಧ್ಯಪ್ರಾಚ್ಯದಲ್ಲಿ ತೈಲ ಬಿಕ್ಕಟ್ಟು ಸಂಭವಿಸಿದರೂ ಭಾರತಕ್ಕೆ ಯಾವುದೇ ಸಮಸ್ಯೆ ಇಲ್ಲ. ನಮ್ಮಲ್ಲಿ ತೈಲಗಳನ್ನು ತುರ್ತು ದಾಸ್ತಾನು ಸಂಗ್ರಹಿಸಿ ಇಡಲಾಗಿದೆ. ಬೇರೆ ದೇಶಗಳಿಂದಲೂ ಕಚ್ಚಾ ತೈಲ ಬರುತ್ತಿದ್ದು ಯಾವುದೇ ಸಮಸ್ಯೆ ಇಲ್ಲ ಎಂದು ಕೇಂದ್ರ ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ.

Shwetha M