ವಿಷ್ಣುವಿನ ಅನುಗ್ರಹದೊಂದಿಗೆ ಗುರು ಗ್ರಹದ ಆಶೀರ್ವಾದವೂ ಬೇಕಾ? – ಗುರುವಾರ ಈ ತರ ಪೂಜೆ ಮಾಡಿ

ವಿಷ್ಣುವಿನ ಅನುಗ್ರಹದೊಂದಿಗೆ ಗುರು ಗ್ರಹದ ಆಶೀರ್ವಾದವೂ ಬೇಕಾ? – ಗುರುವಾರ ಈ ತರ ಪೂಜೆ ಮಾಡಿ

ಗುರುವಾರವನ್ನು ಭಗವಾನ್ ವಿಷ್ಣು ಹಾಗೂ ಗುರು ಗ್ರಹ ಬೃಹಸ್ಪತಿಗೆ ಸಂಬಂಧಿಸಿದ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ ಶ್ರದ್ಧೆಯಿಂದ ಪೂಜೆ, ಉಪವಾಸ ಮತ್ತು ದಾನ ಧರ್ಮಗಳನ್ನು ಆಚರಿಸಿದರೆ ಇಷ್ಟಾರ್ಥಗಳು ನೆರವೇರುತ್ತವೆ ಎಂಬ ನಂಬಿಕೆ ಇದೆ. ಗುರವಾರ ಪೂಜೆಯಿಂದ ಏನೆಲ್ಲಾ ಲಾಭ ಅನ್ನೋದ್ದನ್ನ ನೋಡೋಣ.

ಮದುವೆ ಅಡೆತಡೆ ನಿವಾರಣೆಗೆ

ಗುರುವಾರ ಬಾಳೆಗಿಡಕ್ಕೆ ನೀರು ಅರ್ಪಿಸಿ, ಶುದ್ಧ ತುಪ್ಪದ ದೀಪ ಹಚ್ಚಿ ಗುರುವಿನ 108 ನಾಮಗಳನ್ನು ಜಪಿಸುವುದು ಶುಭಕರ. ಈ ವಿಧಾನದಿಂದ ವಿವಾಹದಲ್ಲಿ ಉಂಟಾಗಿರುವ ವಿಘ್ನಗಳು ದೂರಾಗಿ, ಶೀಘ್ರದಲ್ಲೇ ಕಂಕಣ ಭಾಗ್ಯ ದೊರಕುತ್ತದೆ ಎನ್ನಲಾಗಿದೆ.

ವಿಷ್ಣುವಿನ ಅನುಗ್ರಹಕ್ಕಾಗಿ

ಈ ದಿನ ಹಳದಿ ಬಣ್ಣದ ವಸ್ತ್ರ ಧರಿಸಿ, ಹಳದಿ ಆಹಾರ ಸೇವಿಸುವುದು ಒಳಿತು. ಇದರಿಂದ ವಿಷ್ಣುವಿನ ಕೃಪೆ ಲಭಿಸಿ ಮನಸ್ಸಿಗೆ ನೆಮ್ಮದಿ ಹಾಗೂ ಜೀವನದ ಸಂಕಷ್ಟಗಳಿಂದ ಮುಕ್ತಿ ಸಿಗುತ್ತದೆ ಎಂಬ ನಂಬಿಕೆ ಇದೆ. ವ್ಯಾಪಾರ ಸ್ಥಳದಲ್ಲಿ ಅರಿಶಿನದ ಹಳದಿ ಮಾಲೆಯನ್ನು ನೇತುಹಾಕಿ, ವಿಷ್ಣು ಹಾಗೂ ಲಕ್ಷ್ಮೀ ದೇವಿಗೆ ಲಡ್ಡುಗಳನ್ನು ನೈವೇದ್ಯವಾಗಿ ಅರ್ಪಿಸುವುದು ಲಾಭದಾಯಕ. ಹಳದಿ ವಸ್ತುಗಳನ್ನು ದಾನ ಮಾಡುವುದರಿಂದ ಉದ್ಯೋಗದಲ್ಲಿ ಬಡ್ತಿ ಸಾಧ್ಯತೆಗಳು ಹೆಚ್ಚುತ್ತವೆ ಮತ್ತು ದಾಂಪತ್ಯ ಜೀವನದ ಅಡೆತಡೆಗಳು ನಿವಾರಣೆಯಾಗುತ್ತವೆ.

ಈ ದಿನ ತಪ್ಪಿಸಬೇಕಾದ ಕಾರ್ಯಗಳು

ಗುರುವಾರ ಕೂದಲು ಅಥವಾ ಉಗುರು ಕತ್ತರಿಸುವುದನ್ನು ತಪ್ಪಿಸಬೇಕು. ಸೋಪು ಮತ್ತು ಎಣ್ಣೆಯ ಬಳಕೆ ಮಾಡಬಾರದು ಎಂದು ಹೇಳಲಾಗಿದೆ. ಮಹಿಳೆಯರು ಕೂದಲು ತೊಳೆಯುವುದನ್ನು ವಜಾಗೊಳಿಸುವುದು ಶುಭಕರ. ಇಂತಹ ನಿಯಮಗಳನ್ನು ಪಾಲಿಸದಿದ್ದರೆ ಆರ್ಥಿಕ ಸಂಕಷ್ಟ ಹೆಚ್ಚಾಗುತ್ತದೆ ಎಂಬ ನಂಬಿಕೆ ಇದೆ.

Kishor KV

Leave a Reply

Your email address will not be published. Required fields are marked *