ನಮ್ಮ ಮೆಟ್ರೋ ಪ್ರಯಾಣಿಕರಿಗೆ BMRCLನಿಂದ ಹೊಸ ಸೇವೆ!‌ – ಇನ್ಮುಂದೆ ಮೆಟ್ರೋ ಇಳಿದ ಮೇಲೆ ಆಟೋ ಹತ್ತಬೇಕಿಲ್ಲ!

ನಮ್ಮ ಮೆಟ್ರೋ ಪ್ರಯಾಣಿಕರಿಗೆ BMRCLನಿಂದ ಹೊಸ ಸೇವೆ!‌ – ಇನ್ಮುಂದೆ ಮೆಟ್ರೋ ಇಳಿದ ಮೇಲೆ ಆಟೋ ಹತ್ತಬೇಕಿಲ್ಲ!

ನಮ್ಮ ಮೆಟ್ರೋ ಬೆಂಗಳೂರಿಗರ ಜೀವನಾಡಿಯಾಗಿದೆ. ನಿತ್ಯ ಲಕ್ಷಾಂತರ ಮಂದಿ ಮೆಟ್ರೋ ರೈಲು ಮೂಲಕವೇ ಪ್ರಯಾಣಿಸುತ್ತಾರೆ. ಆದ್ರೆ ಮೆಟ್ರೋ ಪ್ರಯಾಣಿಕರಿಗೆ ನಿಲ್ದಾಣಗಳಿಂದ ತಮ್ಮ ಮನೆ ಹಾಗೂ ಕಚೇರಿಗಳಿಗೆ ತಲುಪಲು ಆಟೋದಲ್ಲಿ ಅಥವಾ ನಡೆದುಕೊಂಡೇ ಹೋಗಬೇಕು. ಇನ್ಮುಂದೆ ಆ ಚಿಂತೆ ಇರಲ್ಲ. ಇನ್ಮುಂದೆ ಮೆಟ್ರೋ ಪ್ರಯಾಣಿಕರು ನಿಲ್ದಾಣದಿಂದ ಬಸ್‌ನಲ್ಲಿ ಸಂಚರಿಸಬಹುದು.

ಇದನ್ನೂ ಓದಿ: ವಿಧಾನಸಭೆಯಲ್ಲೂ LPG ಸಮರ! – ಗ್ಯಾಸ್ ಸಿಲಿಂಡರ್ ಕೊರತೆಗೆ ಕೇಂದ್ರ ಸರ್ಕಾರವೇ ಜವಾಬ್ದಾರಿ ಎಂದ ಸಿಎಂ!

ಮೆಟ್ರೋ ಪ್ರಯಾಣಿಕರಿಗೆ ನಿಲ್ದಾಣಗಳಿಂದ ತಮ್ಮ ಮನೆ ಹಾಗೂ ಕಚೇರಿಗಳಿಗೆ ತಲುಪಲು ಕೊನೆಯ ಮೈಲಿ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಬಿಎಂಆರ್‌ಸಿಎಲ್ ಹಾಗೂ ಬಿಎಂಟಿಸಿ ಜಂಟಿಯಾಗಿ ಮಹತ್ವದ ಹೆಜ್ಜೆ ಇಟ್ಟಿವೆ. ಹಳದಿ ಮಾರ್ಗದ ಹೊಸ ರಸ್ತೆ, ಸಿಂಗಸಂದ್ರ ಹಾಗೂ ಕುಡ್ಲು ಗೇಟ್ ಮೆಟ್ರೋ ನಿಲ್ದಾಣಗಳಿಂದ ವಿವಿಧ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಬಿಎಂಟಿಸಿ ಫೀಡರ್ ಬಸ್ ಸೇವೆಗಳನ್ನು ಇಂದಿನಿಂದ ಅಧಿಕೃತವಾಗಿ ಚಾಲನೆ ನೀಡಲಾಗಿದೆ. 2025ರ ಆಗಸ್ಟ್ 11ರಿಂದ ಹಳದಿ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭವಾಗಿದ್ದು, ದಿನೇ ದಿನೇ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಫೀಡರ್ ಬಸ್ ಸೌಲಭ್ಯವನ್ನು ವಿಸ್ತರಿಸಲಾಗಿದೆ.

ಯಾರಿಗೆ ಅನುಕೂಲ?

ಈ ನೂತನ ಬಸ್ ಸೇವೆಯು ಪ್ರಮುಖವಾಗಿ ಐಟಿ ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ವಸತಿ ಸಮುಚ್ಚಯಗಳ ನಿವಾಸಿಗಳಿಗೆ ವರದಾನವಾಗಲಿದೆ. ಹರಲೂರು, ಸೋಮಸುಂದರಪಾಳ್ಯ, ಚಿಕ್ಕನಾಯಕನಹಳ್ಳಿ ಹಾಗೂ ದೊಡ್ಡನಾಗಮಂಗಲ ಭಾಗದ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವ ಸಾವಿರಾರು ಜನರಿಗೆ ಈ ಮೊದಲು ಮೆಟ್ರೋ ನಿಲ್ದಾಣ ತಲುಪಲು ಇದ್ದ ಅಡಚಣೆಗಳು ಈಗ ದೂರವಾಗಲಿವೆ. ಅಲ್ಲದೆ, ನ್ಯಾಷನಲ್ ಪಬ್ಲಿಕ್ ಸ್ಕೂಲ್ ಸೇರಿದಂತೆ ಸುತ್ತಮುತ್ತಲಿನ ಶೈಕ್ಷಣಿಕ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಮತ್ತು ಕಾರ್ಮೆಲಾರಾಮ್ ರೈಲ್ವೆ ನಿಲ್ದಾಣದ ಕಡೆಗೆ ಸಂಚರಿಸುವ ಪ್ರಯಾಣಿಕರಿಗೆ ಈ ನೇರ ಬಸ್ ಸಂಪರ್ಕವು ಅತ್ಯಂತ ಅನುಕೂಲಕರವಾಗಿ ಪರಿಣಮಿಸಲಿದೆ.

ಬಸ್‌ ಸಮಯ ಮತ್ತು ಮಾರ್ಗ

ಸಾರಿಗೆ ಮಾರ್ಗಗಳ ವಿವರವನ್ನು ಗಮನಿಸುವುದಾದರೆ, ಹೊಸ ರಸ್ತೆ ಮೆಟ್ರೋ ನಿಲ್ದಾಣದಿಂದ ಎರಡು ಪ್ರತ್ಯೇಕ ರಿಂಗ್ ರೂಟ್ ಮಾರ್ಗಗಳನ್ನು ಸಿದ್ಧಪಡಿಸಲಾಗಿದೆ. ಮಾರ್ಗ-1 ಸೆಂಟ್ರಲ್ ಜೈಲ್, ಹರಲೂರು, ಅಗ್ರ ಹಾಗೂ ಸೋಮಸುಂದರಪಾಳ್ಯ ಮೂಲಕ ಸಂಚರಿಸಿದರೆ, ಮಾರ್ಗ-2 ಬೆಳ್ಳಂದೂರು ಗೇಟ್ ಹಾಗೂ ಪರಂಗಿಪಾಳ್ಯ ಭಾಗಗಳನ್ನು ಒಳಗೊಳ್ಳಲಿದೆ. ಈ ಎರಡು ಮಾರ್ಗಗಳಲ್ಲಿ ಬೆಳಗ್ಗೆ 06:00 ರಿಂದ ರಾತ್ರಿ 09:40 ರವರೆಗೆ ನಿರಂತರವಾಗಿ ಬಸ್‌ಗಳು ಲಭ್ಯವಿರುತ್ತವೆ. ಇದರ ಜೊತೆಗೆ ಹೊಸ ರಸ್ತೆ ನಿಲ್ದಾಣದಿಂದ ಕಾರ್ಮೆಲಾರಾಮ್ ಬಸ್ ನಿಲ್ದಾಣಕ್ಕೆ ದೊಡ್ಡನಾಗಮಂಗಲದ ಮೂಲಕ ವಿಶೇಷ ಬಸ್ ಸೌಲಭ್ಯವನ್ನು ಕಲ್ಪಿಸಲಾಗಿದ್ದು, ಇದು ಎರಡೂ ಕಡೆಯಿಂದ ಬೆಳಗ್ಗೆ 6 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಕಾರ್ಯನಿರ್ವಹಿಸಲಿದೆ.

 ಹೊಸ ರಸ್ತೆ ಮೆಟ್ರೋ ನಿಲ್ದಾಣ – ಹೊಸ ರಸ್ತೆ ಮೆಟ್ರೋ ನಿಲ್ದಾಣ (ರಿಂಗ್ ರೂಟ್ – 1)

ಮಾರ್ಗ: ಸೆಂಟ್ರಲ್ ಜೈಲ್ – ನ್ಯಾಷನಲ್ ಪಬ್ಲಿಕ್ ಸ್ಕೂಲ್ – ಹರಲೂರು – ಹರಲೂರು ಕ್ರಾಸ್ – ಅಗ್ರ – ಪರಂಗಿಪಾಳ್ಯ – ಸೋಮಸುಂದರಪಾಳ್ಯ – ಕುಡ್ಲು ಗೇಟ್ – ಸಿಂಗಸಂದ್ರ.

ಹೊಸ ರಸ್ತೆ ಮೆಟ್ರೋ ನಿಲ್ದಾಣದಿಂದ ಹೊರಡುವ ಸಮಯಗಳು:

06:00, 07:00, 08:15, 08:45, 09:15, 09:30, 10:00, 10:30, 11:00, 11:30, 12:00, 12:40, 13:10, 14:30, 15:00, 15:30, 16:00, 16:20, 16:50, 17:10, 17:30, 18:00, 19:10, 20:20, 21:40.

ಹೊಸ ರಸ್ತೆ ಮೆಟ್ರೋ ನಿಲ್ದಾಣ – ಹೊಸ ರಸ್ತೆ ಮೆಟ್ರೋ ನಿಲ್ದಾಣ (ರಿಂಗ್ ರೂಟ್ – 2)

ಮಾರ್ಗ: ಸಿಂಗಸಂದ್ರ – ಕುಡ್ಲು ಗೇಟ್ – ಸೋಮಸುಂದರಪಾಳ್ಯ – ಪರಂಗಿಪಾಳ್ಯ – ಅಗ್ರ – ಬೆಳ್ಳಂದೂರು ಗೇಟ್/ಹರಲೂರು ಕ್ರಾಸ್ – ಹರಲೂರು – ನ್ಯಾಷನಲ್ ಪಬ್ಲಿಕ್ ಸ್ಕೂಲ್ – ಸೆಂಟ್ರಲ್ ಜೈಲ್.

ಹೊಸ ರಸ್ತೆ ಮೆಟ್ರೋ ನಿಲ್ದಾಣದಿಂದ ಹೊರಡುವ ಸಮಯಗಳು:

06:15, 07:15, 08:30, 09:00, 09:30, 09:45, 10:15, 10:45, 11:15, 11:45, 12:15, 12:55, 13:25, 14:05, 14:35, 15:10, 15:30, 15:55, 16:25, 16:45, 17:10, 17:30, 18:45, 19:55, 21:20.

ಹೊಸ ರಸ್ತೆ ಮೆಟ್ರೋ ನಿಲ್ದಾಣ – ಕಾರ್ಮೆಲಾರಾಮ್ ಬಸ್ ನಿಲ್ದಾಣ

ಮಾರ್ಗ: ಸೆಂಟ್ರಲ್ ಜೈಲ್ – ದೊಡ್ಡನಾಗಮಂಗಲ – ಚಿಕ್ಕನಾಯಕನಹಳ್ಳಿ – ದೊಡ್ಡಕನ್ನಹಳ್ಳಿ.

ಹೊಸ ರಸ್ತೆ ಮೆಟ್ರೋ ನಿಲ್ದಾಣದಿಂದ ಹೊರಡುವ ಸಮಯಗಳು

06:00, 06:35, 07:10, 07:55, 08:35, 09:15, 09:55, 10:45, 11:20, 11:55, 12:30, 14:30, 15:05, 15:40, 16:25, 17:00, 17:35, 18:15, 18:55, 19:35, 20:10, 21:00.

ಕಾರ್ಮೆಲಾರಾಮ್ ಬಸ್ ನಿಲ್ದಾಣದಿಂದ ಹೊರಡುವ ಸಮಯಗಳು:

06:00, 06:35, 07:10, 07:55, 08:35, 09:15, 09:55, 10:45, 11:20, 11:55, 13:55, 14:30, 15:05, 15:40, 16:25, 17:00, 17:35, 18:15, 18:55, 19:35, 20:10, 21:00.

Shwetha M

Leave a Reply

Your email address will not be published. Required fields are marked *