ಲಕ್ಷ್ಮೀ ನಿವಾಸ ಸೀರಿಯಲ್‌ಗೆ ಗುಡ್‌ಬೈ ಹೇಳಿದ ಮತ್ತೊಬ್ಬ ನಟಿ! – ಏಕಾಏಕಿ ಸೀರಿಯಲ್‌ ಬಿಟ್ಟಿದ್ದೇಕೆ?

ಲಕ್ಷ್ಮೀ ನಿವಾಸ ಸೀರಿಯಲ್‌ಗೆ ಗುಡ್‌ಬೈ ಹೇಳಿದ ಮತ್ತೊಬ್ಬ ನಟಿ! – ಏಕಾಏಕಿ ಸೀರಿಯಲ್‌ ಬಿಟ್ಟಿದ್ದೇಕೆ?

ಜೀ ಕನ್ನಡದಲ್ಲಿ ಪ್ರಸಾರವಾಗ್ತಿರುವ ಲಕ್ಷ್ಮೀ ನಿವಾಸ ಸೀರಿಯಲ್‌ ರೋಚಕ ಘಟ್ಟ ತಲುಪಿದೆ. ಟಿಆರ್‌ಪಿ ರೇಸ್‌ನಲ್ಲೂ ಮುಂದಿದೆ. ಆದ್ರೆ ಸೀರಿಯಲ್‌ನಲ್ಲಿ ಒಂದ್ಕಡೆ  ಪ್ರಾತ್ರಗಳು ಬದಲಾಗುತ್ತಿದ್ರೆ, ಮತ್ತೊಂದ್ಕಡೆ ಪಾತ್ರಗಳೇ ಅಂತ್ಯ ಆಗ್ತಿದೆ. ಇದೀಗ ಲಕ್ಷ್ಮೀ ನಿವಾಸಕ್ಕೆ ಮತ್ತೊಬ್ಬ ನಟಿ ಗುಡ್‌ಬೈ ಹೇಳಿದ್ದಾರೆ. ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಅಪ್‌ಡೇಟ್‌ ಕೊಟ್ಟಿದ್ದಾರೆ ನಟಿ.

ಇದನ್ನೂ ಓದಿ: 133 ಪ್ರಯಾಣಿಕರಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ತಾಂತ್ರಿಕ ದೋಷ! –  ಹಾರ್ಡ್​ ಲ್ಯಾಂಡಿಂಗ್ ವೇಳೆ ಪುಡಿ ಪುಡಿಯಾದ ಚಕ್ರ!

ಲಕ್ಷ್ಮೀ ನಿವಾಸದಲ್ಲಿ ಭಾವನಾಳನ್ನು ಮದುವೆಯಾಗಲು ಬಂದ ಶ್ರೀಕಾಂತ್ ಅವರ ಮುದ್ದಿನ ತಂಗಿ ಹಾಗೂ ಖುಷಿ ಅತ್ತೆ ಸೌಪರ್ಣಿಕಳಾಗಿ ಯಶಸ್ವಿನಿ ನಟಿಸಿದ್ದರು. ಇದು ನೆಗೆಟಿವ್ ಶೇಡ್ ಹೊಂದಿದ ಕಥೆಯಾಗಿತ್ತು. ಆದರೆ ನಂತರದ ದಿನಗಳಲ್ಲಿ ಇವರನ್ನು ಪಾಸಿಟಿವ್ ಶೇಡ್ ನಲ್ಲಿ ತೋರಿಸಿದ್ದರು. ಇಲ್ಲಿವರೆಗೆ ಸತ್ತಿದ್ದಾರೆ ಎನ್ನಲಾಗಿದ್ದ ಶ್ರೀಕಾಂತ್ ಮತ್ತೆ ಬಂದು, ಕೋರ್ಟ್ ನಲ್ಲಿ ಎಲ್ಲಾ ನಿಜವನ್ನು ತಿಳಿಸಿದ್ದಾರೆ. ಸಿದ್ಧೇಗೌಡ್ರು ತಪ್ಪು ಮಾಡಿಲ್ಲ, ತನ್ನ ಗಂಡನೇ ಅಣ್ಣ ಮತ್ತು ಅಮ್ಮನ ಕೊಲೆ ಮಾಡಿಸಿದ್ದು, ಅನ್ನೋದು ಸೌಪರ್ಣಿಕಾ ಮುಂದೆ ಬಯಲಾಗಿದೆ. ಕೊನೆಗೆ ಶ್ರೀಕಾಂತ್ ತಂಗಿ ಸೌಪರ್ಣಿಕಾ ಮತ್ತು ಮಗಳು ಖುಷಿಯೊಂದಿಗೆ ಆಸ್ಟ್ರೇಲಿಯಾಕ್ಕೆ ತೆರಳುವುದಾಗಿ ಹೇಳುತ್ತಾರೆ. ಆ ಮೂಲಕ ಪಾತ್ರವನ್ನು ಮುಗಿಸಲಾಗಿದೆ.  ಹಾಗಾಗಿ ಮಧುರ ನೆನಪುಗಳೊಂದಿಗೆ ನಟಿ ಸೀರಿಯಲ್‌ಗೆ ವಿದಾಯ ಹೇಳಿದ್ದಾರೆ.

ಇದೀಗ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿರುವ ಯಶಸ್ವಿನಿ, ಸೌಪರ್ಣಿಕ ಪಾತ್ರಕ್ಕೆ ಇಂದಿಗೆ ವಿದಾಯ ಹೇಳುವ ಸಮಯ ಬಂದಿದೆ. ಮತ್ತೊಮ್ಮೆ ಒಳ್ಳೆಯ ಪಾತ್ರದ ಮೂಲಕ ನಿಮ್ಮ ಮುಂದೆ ಆದಷ್ಟು ಬೇಗ ಬರುತ್ತೇನೆ. ಈ ಪಾತ್ರಕ್ಕೆ ಇಷ್ಟೊಂದು ಪ್ರೀತಿ ಕೊಟ್ಟಿರೊ ನಿಮ್ಮೆಲ್ಲರಿಗೂ ಧನ್ಯವಾದಗಳು. ಆದಷ್ಟು ಬೇಗ ಸಿಗುವ ಎಂದು ಹೇಳಿದ್ದಾರೆ.

Shwetha M