ಬೇಡವಾಗಿದ್ದ ಕಿಶನ್ ಈಗ ಬ್ರಹ್ಮಾಸ್ತ್ರ – 2 ವರ್ಷ ಆಡದೆ 2 ತಿಂಗಳಲ್ಲೇ ಆರ್ಭಟ
ಗೇಮ್ ಚೇಂಜರ್ ಈ ಪಾಕೆಟ್ ಡೈನಮೋ

ಭಾರತ ಟಿ-20 ವಿಶ್ವಕಪ್ ಗೆದ್ದಾಗಿದೆ. 140 ಕೋಟಿ ಭಾರತೀಯರು ಇನ್ನೂ ಸೆಲೆಬ್ರೇಷನ್ ಗುಂಗಿನಲ್ಲಿದ್ದಾರೆ. ಟೀಂ ಇಂಡಿಯಾದ ಈ ಅದ್ಭುತ ಗೆಲುವಿಗೆ ಎಲ್ಲಾ ಆಟಗಾರರ ಕೊಡುಗೆಯೂ ಇದೆ. ಆದ್ರೆ ಎಲ್ಲರಿಗಿಂತ ಇಶಾನ್ ಕಿಶನ್ ತುಂಬಾನೇ ಸ್ಪೆಷಲ್. ಯಾಕಂದ್ರೆ ಟೂರ್ನಿ ಆರಂಭವಾಗೋ 2 ತಿಂಗಳ ಮುಂಚೆ ತಂಡದಲ್ಲೇ ಇಲ್ಲದ ಕಿಶನ್ ಈಗ ವಿಶ್ವಕಪ್ ಗೆಲುವಿನಲ್ಲಿ ಹೀರೋ ಆಗ್ತಾರೆ ಅಂತಾ ಯಾರೂ ಅಂದುಕೊಂಡಿರಲಿಲ್ಲ.
ಇದನ್ನೂ ಓದಿ : ಶ್ರೀಲಂಕಾ ಕ್ರಿಕೆಟ್ ತಂಡಕ್ಕೆ ದಕ್ಷಿಣ ಆಫ್ರಿಕಾ ಮಾಜಿ ಬ್ಯಾಟ್ಸ್ಮನ್ ಗ್ಯಾರಿ ಕಿರ್ಸ್ಟನ್ ಹೆಚ್ ಕೋಚ್ ಆಗಿ ಆಯ್ಕೆ
ಟಿ-20 ವಿಶ್ವಕಪ್ಗೂ ಮುನ್ನ ಭಾರತ ತಂಡದಲ್ಲಿ ಹಲ್ಚಲ್ ಎಬ್ಬಿಸಿದ್ದ ಆಟಗಾರ ಅಭಿಷೇಕ್ ಶರ್ಮಾ. ಆದ್ರೆ ಟೂರ್ನಿ ಆರಂಭವಾದ ಮೇಲೆ ಮೊದಲ ಮೂರು ಪಂದ್ಯಗಳಲ್ಲೇ ಹ್ಯಾಟ್ರಿಕ್ ಡಕ್. ಆ ನಂತ್ರವೂ ಅಭಿಷೇಕ್ ಕಡೆಯಿಂದ ಬಿಗ್ ಇನ್ನಿಂಗ್ಸ್ ಬರಲಿಲ್ಲ. ಸೋ ಇಂಥಾ ಟೈಮಲ್ಲೇ ಭಾರತಕ್ಕೆ ಬೆನ್ನೆಲುಬಾಗಿ ನಿಂತಿದ್ದೇ ಇಶಾನ್ ಕಿಶನ್. ಓಪನರ್ ಆಗಿಯೂ ಸೈ ಒನ್ ಡೌನ್ ಬ್ಯಾಟರ್ ಆಗಿಯೂ ಜೈ ಅಂತಾ ಬ್ಯಾಟ್ ಹಿಡಿದಾಗ್ಲೆಲ್ಲಾ ಎದುರಾಳಿ ಬೌಲರ್ಗಳ ಬೆವರಿಳಿಸ್ತಿದ್ರು. ಟೂರ್ನಿಯುದ್ದಕ್ಕೂ ಬೆಸ್ಟ್ ಪರ್ಫಾಮೆನ್ಸ್ ನೀಡಿ 300 ಪ್ಲಸ್ ರನ್ಸ್ ಕಲೆ ಹಾಕಿದ್ರು. ಆದ್ರೆ 2 ತಿಂಗಳ ಹಿಂದೆ ಟಿ020 ವಿಶ್ವಕಪ್ನಲ್ಲಿ ಆಡ್ತೀನಿ ಅಂತಾ ಖುದ್ದು ಇಶಾನ್ ಕಿಶನ್ಗೂ ಗೊತ್ತಿರಲಿಲ್ಲ.
ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಅಚ್ಚರಿಯಂತೆ ಆಯ್ಕೆಯಾಗಿದ್ದ ಕಿಶನ್!
ಜನವರಿ ತಿಂಗಳ ಕೊನೆಯಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ-20ಐ ಸರಣಿಗೆ ಇಶಾನ್ ಕಿಶನ್ ಅಚ್ಚರಿ ಎನ್ನುವಂತೆ ಆಯ್ಕೆಯಾಗಿದ್ರು. ಯಾಕಂದ್ರೆ ಅದಕ್ಕೂ ಮುನ್ನ 2 ವರ್ಷಗಳಿಂದ ಅವ್ರು ಭಾರತದ ಪರ ಪಂದ್ಯಗಳನ್ನೇ ಆಡಿರಲಿಲ್ಲ. ಹೀಗಿದ್ರೂ ಬಿಸಿಸಿಐ ಮ್ಯಾನೇಜ್ಮೆಂಟ್ ಇಶಾನ್ ಕಿಶನ್ಗೆ ಚಾನ್ಸ್ ನೀಡಿತ್ತು. ಇದೇ ವೇಳೆ ಇಂಜುರಿಯಿಂದಾಗಿ ತಿಲಕ್ ವರ್ಮಾರನ್ನ ಕೈಬಿಡಬೇಕಿತ್ತು. ಹೀಗಾಗಿ ತಿಲಕ್ ಪ್ಲೇಸ್ಗೆ ಕಿಶನ್ನ ಪಿಕ್ ಮಾಡ್ತಾರೆ. ಈ ಅವಕಾಶವನ್ನ ಎರಡೂ ಕೈಗಳಿಂದ ಬಾಚಿಕೊಂಡ ಕಿಶನ್ ಹಿಂತಿರುಗಿ ನೊಡ್ಲೇ ಇಲ್ಲ. ಐದು ಪಂದ್ಯಗಳ ಸರಣಿಯಲ್ಲಿ 4 ಇನ್ನಿಂಗ್ಸ್ಗಳಲ್ಲಿ ಒಂದು ಶತಕವೂ ಸೇರಿದಂತೆ 215 ರನ್ಸ್ ಕಲೆ ಹಾಕಿದ್ರು. ಈ ಮೂಲಕ ಟಿ-20 ವಿಶ್ವಕಪ್ನ ಪ್ಲೇಯಿಂಗ್ 11ನಲ್ಲಿ ಚಾನ್ಸ್ ನೀಡ್ಲೇಬೇಕು ಅನ್ನೋ ಥರದಲ್ಲಿ ಪರ್ಫಾಮ್ ಮಾಡಿದ್ರು. ಕೊನೆಗೆ ಓಪನರ್ ಆಗಿದ್ದ ಸಂಜು ಸ್ಯಾಮ್ಸನ್ರನ್ನೇ ಕೂರಿಸಿ ಇಶಾನ್ ಕಿಶನ್ಗೆ ಓಪನರ್ ಆಗಿ ಟಿ-20 ವಿಶ್ವಕಪ್ನಲ್ಲಿ ಮ್ಯಾನೇಜ್ಮೆಂಟ್ ಚಾನ್ಸ್ ಕೊಡುತ್ತೆ. ಈ ವೇಳೆ ಮತ್ತೆ ಪಾಕೆಟ್ ಡೈನಮೋ ಒಳ್ಳೆ ಪರ್ಫಾಮೆನ್ಸ್ ನೀಡ್ತಾರೆ. ಅದ್ರಲ್ಲೂ ಪಾಕಿಸ್ತಾನ ವಿರುದ್ಧ ಅಭಿಷೇಕ್ ಶರ್ಮಾ ಡಕ್ ಔಟ್ ಆದಾಗ ಕ್ರೂಶಿಯಲ್ ಟೈಮಲ್ಲೂ 77 ರನ್ಗಳ ಇನ್ನಿಂಗ್ಸ್ ಆಡಿದ್ರು. ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ 38 ರನ್ ಮತ್ತು ಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ 54 ರನ್ ಗಳಿಸಿದ ಕಿಶನ್ ಬ್ಯಾಟಿಂಗ್ ಆರ್ಡರ್ನಲ್ಲಿ ಬೆನ್ನೆಲುಬಾದ್ರು. 9 ಪಂದ್ಯಗಳಿಂದ 3 ಅರ್ಧಶತಕ ಸೇರಿದಂತೆ 317 ರನ್ಗಳನ್ನ ಕಲೆ ಹಾಕಿದ್ರು. ಅದೂ ಕೂಡ 193+ ಸ್ಟ್ರೈಕ್ರೇಟ್ನಲ್ಲಿ. ಌಂಡ್ ಫೀಲ್ಡಿಂಗ್ನಲ್ಲೂ ಕಿಶನ್ ಆಟ ಅತ್ಯದ್ಭುತವಾಗಿತ್ತು.
ಸೈಯದ್ ಮುಷ್ತಾಕ್ ಅಲಿ ಟ್ರೋಫಿಯೇ ಟರ್ನಿಂಗ್ ಪಾಯಿಂಟ್!
ಇಶಾನ್ ಕಿಶನ್ ಟೀಂ ಇಂಡಿಯಾಗೆ ಕಂ ಬ್ಯಾಕ್ ಮಾಡೋಕೆ ಮುಖ್ಯ ಕಾರಣವೇ ದೇಶೀ ಟೂರ್ನಿಯಲ್ಲಿನ ಅದ್ಭುತ ಪ್ರದರ್ಶನ. ಬುಚಿಬಾಬು ಟೂರ್ನಮೆಂಟ್, ಐಪಿಎಲ್, ರಣಜಿ, ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡೋಕೆ ಸ್ಟಾರ್ಟ್ ಮಾಡಿದ್ರು. 2025ರಲ್ಲಿ ಜಾರ್ಖಂಡ್ ಪರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ನಾಯಕನಾಗಿ ತಂಡವನ್ನ ಅದ್ಭುತವಾಗಿ ಮುನ್ನಡೆಸಿದ್ರು. 10 ಪಂದ್ಯಗಳಲ್ಲಿ 197.44 ರ ಸ್ಟ್ರೈಕ್ ರೇಟ್ನಲ್ಲಿ 517 ರನ್ಗಳೊಂದಿಗೆ ಟೂರ್ನಮೆಂಟ್ನ ಹೈಯೆಸ್ಟ್ ಸ್ಕೋರರ್ ಆದ್ರು. ಌಂಡ್ ಫೈನಲ್ ಪಂದ್ಯದಲ್ಲಿ 49 ಎಸೆತಗಳಲ್ಲಿ ಭರ್ಜರಿ ಶತಕ ಗಳಿಸುವ ಮೂಲಕ ಜಾರ್ಖಂಡ್ ತಂಡವನ್ನು ತಮ್ಮ ಮೊದಲ SMAT ಪ್ರಶಸ್ತಿಗೆ ಕೊಂಡೊಯ್ದರು. ಌಕ್ಚುಲಿ ಈ ಫೈನಲ್ ಪಂದ್ಯವನ್ನ ಬಿಸಿಸಿಐ ಮ್ಯಾನೇಜ್ಮೆಂಟ್ನ ಅಧಿಕಾರಿಗಳೂ ವೀಕ್ಷಿಸುತ್ತಿದ್ರು. ಈ ಮ್ಯಾಚಲ್ಲಿ ಕಿಶನ್ ಬ್ಯಾಟಿಂಗ್ ನೋಡಿದ ಅಧಿಕಾರಿಗಳು ಮತ್ತೆ ಟೀಂ ಇಂಡಿಯಾಗೆ ಕಂ ಬ್ಯಾಕ್ ಮಾಡಲು ಬಾಗಿಲು ತೆರೆದಿದ್ರು. ಈ ಚಾನ್ಸ್ ಸಿಕ್ಕ ಕೂಡಲೇ ಇಶಾನ್ ಕಿಶನ್ ಹಿಂದೆಂದಿಗಿಂತರೂ ಬೆಸ್ಟ್ ಪರ್ಫಾಮೆನ್ಸ್ ಕೊಟ್ಟಿದ್ದಾರೆ.

ನೋಡಿರಿ

