ಮಗಳ ಮದುವೆ ಮಾಡಿಸಲು ಆಗಿಲ್ಲ ಎಂದು ಆತ್ಮಹ*ತ್ಯೆಗೆ ಶರಣಾದ ತಂದೆ! – ಅಪ್ಪನ ಸಾವಿನ ಬೆನ್ನಲ್ಲೇ ಮಗಳು ದುರಂತ ಅಂತ್ಯ!

ಮಗಳ ಮದುವೆ ಮಾಡಿಸಲು ಆಗಿಲ್ಲ ಎಂದು ಆತ್ಮಹ*ತ್ಯೆಗೆ ಶರಣಾದ ತಂದೆ! – ಅಪ್ಪನ ಸಾವಿನ ಬೆನ್ನಲ್ಲೇ ಮಗಳು ದುರಂತ ಅಂತ್ಯ!

ಮನೆಯಲ್ಲಿ ವಯಸ್ಸಿಗೆ ಬಂದ ಹೆಣ್ಣು ಮಕ್ಕಳಿದ್ರೆ ತಂದೆ, ತಾಯಿಗೆ ಅವರ ಮದುವೆಯದ್ದೇ ಚಿಂತೆ ಇರುತ್ತದೆ. ಒಂದೆಡೆ ಆರ್ಥಿಕ ಸಂಕಷ್ಟ ಮತ್ತೊಂದೆಡೆ ಬಡತನ ಕಾರಣದಿಂದ ಉತ್ತಮ ಸಂಬಂಧಗಳು ಬರುತ್ತಿಲ್ಲ. ಮಗಳ ವಯಸ್ಸು 30 ದಾಟುತ್ತಿದ್ದಂತೆ ತಂದೆ ಮಾನಸಿಕವಾಗಿ ಕುಗುತ್ತಾರೆ. ಇದೀಗ ಇಲ್ಲೊಂದು ಕಡೆ ಮಗಳಿಗೆ ಮದುವೆ ಆಗಿಲ್ಲ ಎಂದು ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಂದೆ ಸಾವಿನ ಸುದ್ದಿ ಕೇಳಿ ಮಗಳು ಕೂಡ ದುರಂತ ಅಂತ್ಯ ಕಂಡಿದ್ದಾಳೆ.

ಇದನ್ನೂ ಓದಿ: LPG ಗ್ಯಾಸ್ ಸಿಲಿಂಡರ್ ಬುಕಿಂಗ್​ಗೆ ಹೊಸ ರೂಲ್ಸ್!‌ –  ಇನ್ಮುಂದೆ LPG ಸಿಲಿಂಡರ್‌ ಸುಲಭವಾಗಿ ಸಿಗೋದು ಕಷ್ಟ!

ಈ ಘಟನೆ ಚೆನ್ನೈನ ಹೊರವಲಯದಲ್ಲಿರುವ ವಡಪಳನಿಯಲ್ಲಿ ನಡೆದಿದೆ. 57 ವರ್ಷದ ಆಟೋ ಚಾಲಕ ಕೃಷ್ಣಕುಮಾರ್ ಪತ್ನಿ ಹಾಗೂ ಕಿರಿಯ ಮಗಳೊಂದಿಗೆ ವಡಪಳನಿಯಲ್ಲಿ ವಾಸವಾಗಿದ್ದರು. ಹಿರಿಯ ಮಗಳನ್ನು ಕೆಲ ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿದ್ದರು. ಇದರ ಸಾಲದಲ್ಲೇ ಕೃಷ್ಣಕುಮಾರ್ ಕುಟುಂಬ ಪರದಾಡುತ್ತಿತ್ತು. ಕಿರಿಯ ಮಗಳಿಗೆ ಮದುವೆ ಮಾಡಿಸಲು ಸಾಲ ತೀವ್ರಗೊಂಡ ಕಾರಣ ಸಂಬಂಧಗಳು ಬಂದರೂ ಸಾಧ್ಯವಾಗಿರಲಿಲ್ಲ. ಸಾಲದ ಹೊರೆ ಕಡಿಮೆಯಾದ ತಕ್ಷಣವೇ ಕಿರಿಯ ಮಗಳು 30 ವರ್ಷದ ಪಾಕಿಯಂ ಮದುವೆ ಮಾಡಿಸಲು ಮುಂದಾಗಿದ್ದರು. ಆದರೆ ಸಾಲ ಹೊರೆ ಕಡಿಮೆಯಾಗುವಷ್ಟರಲ್ಲಿ ಮಗಳಿಗೆ ಸಂಬಂಧಗಳೇ ಬರದಾಯಿತು. ತನ್ನ ಸಾಲದಿಂದ ಕಿರಿಯ ಮಗಳ ಬಾಳು ನರಕವಾಯಿತು ಎಂದು ಕೃಷ್ಣಕುಮಾರ್ ಪದೇ ಪದೇ ನೊಂದುಕೊಂಡಿದ್ದರು. ಕಳೆದ ಒಂದು ತಿಂಗಳಿನಿಂದ  ಇದೇ ವಿಚಾರವಾಗಿ ಕೃಷ್ಣಕುಮಾರ್ ಮಾನಸಿಕವಾಗ ಕುಗ್ಗಿ ಹೋಗಿದ್ದರು. ಇದರ ಪರಿಣಾಮ ಬದುಕು ಅಂತ್ಯಗೊಳಿಸಿದ್ದಾರೆ. ತಂದೆ ಮನೆಗೆ ಬಾರದ ಕಾರಣ ಪುತ್ರಿ ಎಲ್ಲೆಡೆ ವಿಚಾರಿಸಲು ಆರಂಭಿಸಿದ್ದಾಳೆ. ಆದರೆ ಯಾವುದೇ ಸುಳಿವು ಸಿಗಲಿಲ್ಲ. ಇತ್ತ ತಂದೆಯ ಫೋನ್ ಮನೆಯ ಹಿಂಭಾಗದಲ್ಲಿ ಪತ್ತೆಯಾಗಿದೆ. ಆತಂಕಗಗೊಂಡ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಹುಡುಕಾಡಿದಾಗ ಕೃಷ್ಣಕುಮಾರ್ ಮೃತದೇಹ ಪತ್ತೆಯಾಗಿದೆ. ತಂದೆ ಹಲವು ಬಾರಿ ತನ್ನು ನೋವು ಮಗಳಲ್ಲಿ ಹೇಳಿಕೊಂಡಿದ್ದರು. ಈ ವೇಳೆ ತಂದೆಯನ್ನೇ ಸಮಾಧಾನ ಪಡಿಸಿದ್ದ ಮಗಳಿಗೆ ತಂದೆ ಸಾವು ತೀವ್ರ ಆಘಾತ ನೀಡಿದೆ. ಅಂತ್ಯಸಂಸ್ಕಾರ ಮುಗಿಸಿ ಬಂದ ಮಗಳು ಕೋಣೆಗೆ ತೆರಳಿ ಬಾಗಿಲು ಹಾಕಿ ದುರಂತ ಅಂತ್ಯಕಂಡಿದ್ದಾಳೆ.

ಮಗಳು ಬಾಗಿಲು ತೆರೆಯದ ಕಾರಣ ಆತಂಕಗೊಂಡ ತಾಯಿ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಬಾಗಿಲು ತೆರೆದುನೋಡಿದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಗಳು ಬಿದ್ದಿದ್ದಳು. ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರು ಪ್ರಯೋಜನವಾಗಲಿಲ್ಲ. ಅಷ್ಟರಲ್ಲಾಗಲೇ ಆಕೆಯ ಉಸಿರು ನಿಂತಿತ್ತು.

Shwetha M

Leave a Reply

Your email address will not be published. Required fields are marked *