ಶ್ರೀಲಂಕಾ ಕ್ರಿಕೆಟ್ ತಂಡಕ್ಕೆ ದಕ್ಷಿಣ ಆಫ್ರಿಕಾ ಮಾಜಿ ಬ್ಯಾಟ್ಸ್‌ಮನ್ ಗ್ಯಾರಿ ಕಿರ್ಸ್ಟನ್ ಹೆಚ್ ಕೋಚ್ ಆಗಿ ಆಯ್ಕೆ

ಶ್ರೀಲಂಕಾ ಕ್ರಿಕೆಟ್ ತಂಡಕ್ಕೆ ದಕ್ಷಿಣ ಆಫ್ರಿಕಾ ಮಾಜಿ ಬ್ಯಾಟ್ಸ್‌ಮನ್ ಹಾಗೂ ಭಾರತದ ಮಾಜಿ ಹೆಡ್ ಕೋಚ್ ಗ್ಯಾರಿ ಕಿರ್ಸ್ಟನ್ ಅವರನ್ನು ಎರಡು ವರ್ಷದ ಒಪ್ಪಂದದ ಮೇಲೆ ತಂಡದ ಮುಖ್ಯ ಕೋಚ್ ಆಗಿ ನೇಮಿಸಿದೆ. ದೇಶದಲ್ಲೇ ನಡೆದ ಟಿ20 ವಿಶ್ವಕಪ್‌ನಲ್ಲಿ ನಿರಾಶಾಜನಕ ಪ್ರದರ್ಶನ ನೀಡಿದ ಬಳಿಕ ಸನತ್ ಜಯಸೂರ್ಯ ಹುದ್ದೆಯಿಂದ ರಾಜೀನಾಮೆ ನೀಡಿದ್ದರಿಂದ, ಅವರ ಸ್ಥಾನಕ್ಕೆ ಕಿರ್ಸ್ಟನ್ ಬಂದಿದ್ದಾರೆ. 58ರ ವಯಸ್ಸಿನ ದಕ್ಷಿಣ ಆಫ್ರಿಕಾ ಮಾಜಿ ಓಪನರ್ 2025ರಿಂದ ಹಿರಿಯ ಪುರುಷರ ತಂಡದ ಎಲ್ಲಾ ಫಾರ್ಮ್ಯಾಟ್‌ಗಳ ಕೋಚ್ ಆಗಿ ಕಾ. 2027ರ ಏಕದಿನ ವಿಶ್ವಕಪ್‌ನಲ್ಲಿ ಶ್ರೀಲಂಕಾ ಉತ್ತಮ ಪ್ರದರ್ಶನ ನೀಡುವಂತೆ ಮಾಡುವುದೇ ಅವರ ಮುಖ್ಯ ಗುರಿಯಾಗಿರುತ್ತದೆ.
“ದಕ್ಷಿಣ ಆಫ್ರಿಕಾ, ನಮೀಬಿಯಾ ಮತ್ತು ಜಿಂಬಾಬ್ವೆಯಲ್ಲಿ ನಡೆಯಲಿರುವ 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಸಲುವಾಗಿ ಶ್ರೀಲಂಕಾ ರಾಷ್ಟ್ರೀಯ ಪುರುಷರ ತಂಡದ ಸಿದ್ಧತೆ ಮತ್ತು ಅಭಿಯಾನವನ್ನು ಮುನ್ನಡೆಸುವುದು ಗ್ಯಾರಿ ಕಿರ್ಸ್ಟನ್ ಅವರ ಪ್ರಮುಖ ಜವಾಬ್ದಾರಿಗಳಲ್ಲೊಂದು ಆಗಿರುತ್ತದೆ,” ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: LPG ಗ್ಯಾಸ್ ಸಿಲಿಂಡರ್ ಬುಕಿಂಗ್ಗೆ ಹೊಸ ರೂಲ್ಸ್! – ಇನ್ಮುಂದೆ LPG ಸಿಲಿಂಡರ್ ಸುಲಭವಾಗಿ ಸಿಗೋದು ಕಷ್ಟ!

ನೋಡಿರಿ

