ಲವ್ ಮಾಕ್ಟೇಲ್ ಸಿನಿಮಾದಿಂದ ನನಗೆ ಫೇಮ್ ಅಲ್ಲ, ಶೇಮ್ ಆಯ್ತು! – ನಟಿ ಗೀತಾ ಭಾರತಿ ಭಟ್ ಆರೋಪ!

ಬ್ರಹ್ಮಗಂಟು ಧಾರಾವಾಹಿಯಲ್ಲಿ ನಟಿಸಿದ್ದ ಗೀತಾ ಭಟ್ ಅವರು ಲವ್ ಮಾಕ್ಟೇಲ್ ಕಾಣಿಸಿಕೊಂಡಿದ್ರು. ಈ ಚಿತ್ರದಲ್ಲಿ ಈ ಸಿನಿಮಾದಲ್ಲಿ ಹೂಥರ ಇದ್ದವಳು, ಹೂಕೋಸು ಥರ ಆಗೋದಳು ಎಂಬ ಡೈಲಾಗ್ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ಆದ್ರೀಗ ಗೀತಾಭಟ್ ಈ ಸಿನಿಮಾದ ಬಗ್ಗೆ ಅಪಸ್ವರ ಎತ್ತಿದ್ದಾರೆ. ಈ ಸಿನಿಮಾದಲ್ಲಿ ಬಾಡಿಶೇಮಿಂಗ್ ಡೈಲಾಗ್ ಕುರಿತು ಗೀತಾ ಭಾರತಿ ಭಟ್ ಅಸಮಾಧಾನ ಹೊರಹಾಕಿದ್ದರು. ಇದಕ್ಕೆ ಚಿತ್ರತಂಡದ ಮಿಲನಾ ನಾಗರಾಜ್ ಮತ್ತು ನಿರ್ದೇಶಕ ಕೃಷ್ಣ ಸಂದರ್ಶನವೊಂದರಲ್ಲಿ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಯುದ್ಧದ ಎಫೆಕ್ಟ್‌ನಿಂದಾಗಿ ಕಮರ್ಷಿಯಲ್ ಸಿಲಿಂಡರ್ ಅಭಾವ – ರೆಸ್ಟೋರೆಂಟ್‌ಗಳು ಬಂದ್
ಲವ್ ಮಾಕ್ಟೇಲ್ ಚಿತ್ರದಲ್ಲಿ ಯಾಕಾದರೂ ನಾನು ಈ ಸಿನಿಮಾ ಒಪ್ಪಿಕೊಂಡೆನೋ ಏನೋ ಎಂದು ಗೀತಾ ಭಾರತೀ ಭಟ್ ಅವರು ಸಂದರ್ಶನವೊಂದರಲ್ಲಿ ಹೇಳಿದ್ದರು. ಈ ವಿಷಯಕ್ಕೆ ಚಿತ್ರದ ನಿರ್ಮಾಪಕಿ ಮಿಲನಾ ನಾಗರಾಜ್ ಹಾಗೂ ನಿರ್ದೇಶಕ ಕೃಷ್ಣ ಅವರು ಪ್ರತಿಕ್ರಿಯಿಸಿದ್ದಾರೆ. ಅದು ಬಾಡಿ ಶೇಮಿಂಗ್ ಮಾಡಿದ್ದಲ್ಲ. ರೈಮಿಂಗ್ ಆಗಿ ಬರೆದಿದ್ದು ಅಷ್ಟೇ ಎಂದು ಕೃಷ್ಣ ಅವರು ಹೇಳಿದ್ದಾರೆ.
ಅವರಿಗೆ ಸಿನಿಮಾ ಪಾತ್ರ ಗೊತ್ತಿತ್ತು. ಈಗ ಮಾತನಾಡುವ ಅವಶ್ಯಕತೆ ಇಲ್ಲ. ಅವರು ಸಂಪೂರ್ಣ ದೃಶ್ಯವನ್ನೇ ಮಾಡಿ ಹೋಗಿದ್ದಾರೆ. ಕಲಾವಿದರಿಗೆ ಹೇಳದೆ ನಾವು ದೃಶ್ಯ ಮಾಡೋಕಾಗಲ್ಲ. ಯಾವುದನ್ನು ಮುಚ್ಚಿಟ್ಟು ಮಾಡಲ್ಲ. ಆಡಿಷನ್ ಮಾಡಿ ಕಾಸ್ಟ್ ಮಾಡಿರೋದು. ನಿಮಗೆ ಆಗಲ್ಲ ಅಂದ್ರೆ ಬಿಡಿ ಎಂದು ಮಿಲನ ಖಡಕ್ ಆಗಿ ಹೇಳಿದ್ದಾರೆ.
ಗೀತಾ ಅವರು ಧಾರಾವಾಹಿ ಮಾಡುತ್ತಾ ಇದ್ದರು. ಅದರಲ್ಲೂ ಅದೇ ಕಥೆ ಇತ್ತು. ಮೂರು ವರ್ಷ ಆ ರೀತಿಯ ಧಾರಾವಾಹಿ ಮಾಡಿ, ಈಗ ಹೀಗೆ ಹೇಳಿದ್ದಾರೆ. ಮೇಕಿಂಗ್ ವಿಡಿಯೋ ಯೂಟ್ಯೂಬ್ನಲ್ಲೇ ಇದೆ. ಯಾರಿಗೂ ಹರ್ಟ್ ಮಾಡಬೇಕು ಎಂದು ಮಾಡಿದ್ದಲ್ಲ ಎಂದು ಕೃಷ್ಣ ಹೇಳಿದರು.
ಬ್ರಹ್ಮಗಂಟು ನಟಿ ಗೀತಾ ಭಾರತಿ ಭಟ್ ಮಾಧ್ಯಮವೊಂದಕ್ಕೆ ರಿಯಾಕ್ಷನ್ ಕೊಟ್ಟಿದ್ದಾರೆ. ನಾನು ಮೊದಲು ಬಾಡಿ ಶೇಮಿಂಗ್ ಇರುವ ಸೀರಿಯಲ್‌ನಲ್ಲಿ ನಟಿಸಿದ್ದೆ ಎಂದು ಹೇಳುತ್ತಿರುವವರಿಗೆ ಒಂದು ಸ್ಪಷ್ಟನೆ ಕೊಡಬೇಕಿದೆ. ಆ ಸೀರಿಯಲ್ಲಿನ ಕಥೆ ಒಬ್ಬ ದಪ್ಪ ಹುಡುಗಿ ಸಮಾಜದಲ್ಲಿ ಎದುರಿಸುವ ನಿಜವಾದ ಸಮಸ್ಯೆಗಳ ಬಗ್ಗೆ ಇತ್ತು.
ಆ ನೋವನ್ನು ತೋರಿಸುವುದು ಬಾಡಿ ಶೇಮಿಂಗ್ ಅನ್ನು ಹಾಸ್ಯದ ಹೆಸರಿನಲ್ಲಿ ಬೆಂಬಲಿಸುವುದು ಒಂದೇ ಅಲ್ಲ. ಆ ಒಂದು ಡೈಲಾಗ್ ಫೇಮಸ್ ಆಯಿತು ಅಂದ್ರೆ ಅದು ಕೇವಲ ಕಾಮಿಡಿ ಆಗಿದ್ದರಿಂದ ಮಾತ್ರ ಅಲ್ಲ, ಜನರು ಅದನ್ನು ಇನ್ನೊಬ್ಬರನ್ನು ಹಾಸ್ಯ ಮಾಡಲು ಬಳಸಿದ ಕಾರಣವೂ ಹೌದು ಎಂದಿದ್ದಾರೆ.

ನೋಡಿರಿ

