ಕಪ್ ನಲ್ಲೇ AUS ಸೊಕ್ಕಿಳಿಸಿದ ಭಾರತ – 250+ ಸ್ಕೋರ್ ನಲ್ಲಿ ಭಾರತವೇ KING
ವಿಶ್ವಕಪ್ ನಲ್ಲಿ ವಿಶ್ವರೂಪ ಹೇಗಿದೆ?

ಭಾರತ ಬರೀ ಟಿ-20 ವಿಶ್ವಕಪ್ ಮಾತ್ರ ಗೆದ್ದಿಲ್ಲ. ಹೆಜ್ಜೆ ಹೆಜ್ಜೆಗೂ ಚರಿತ್ರೆಯನ್ನೇ ಸೃಷ್ಟಿಸಿ ಚಾಂಪಿಯನ್ ಪಟ್ಟಕ್ಕೇರಿದ್ದಾರೆ. 2026ರ ಟೂರ್ನಿ ದಶಕಗಳ ಹಿಂದಿನ ದಾಖಲೆಗಳನ್ನೂ ಪುಡಿಗಟ್ಟಿದೆ. ಅದ್ರಲ್ಲೂ ಕೊನೆಯ ನಾಲ್ಕು ಪಂದ್ಯಗಳಲ್ಲಿ ಭಾರತೀಯ ಆಟಗಾರರು ಅಕ್ಷರಶಃ ವಿಶ್ವರೂಪ ತಾಳಿದ್ರು. ಬ್ಯಾಕ್ ಟು ಬ್ಯಾಕ್ ಕಪ್ ಗೆದ್ದಿರೋ ಚಾಂಪಿಯನ್ ಆಟಗಾರರು ಚರಿತ್ರೆ ಬರೆದಿದ್ದಾರೆ. ಅಹಮದಾಬಾನ್ನ ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ ನ್ಯೂಜಿಲೆಂಡ್ ತಂಡವನ್ನ ಸೋಲಿಸಿದ ಭಾರತ ಟೂರ್ನಿಯಲ್ಲಿ 3ನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದೆ. ಅದು ಅಂತಿಂಥಾ ಗೆಲುವಲ್ಲ. ಇತಿಹಾಸದ ಪುಟದಲ್ಲಿ ಎಂದೂ ಮರೆಯದೆ ದಾಖಲಾಗುವ ಅದ್ಭುತ ಗೆಲುವು.
ಇದನ್ನೂ ಓದಿ : ಆವತ್ತು ಸೋಲದಿದ್ರೆ ಇವತ್ತು ಗೆಲ್ಲುತ್ತಿರಲಿಲ್ಲ – ಚಿನ್ನದ ಹುಂಡಿ ಚಿಲ್ರೆ ಕಾಸಿಗೆ ಇಟ್ಟಿದ್ರಾ?
ಭಾರತದ ದಾಖಲೆಯ ಗೆಲುವು!
ಸತತ 2 ಕಪ್ ಗೆದ್ದ ತಂಡ.. 3ನೇ ಟ್ರೋಫಿ ಗೆದ್ದ ದಾಖಲೆ
ಟೂರ್ನಿ ಆಯೋಜನೆ ಮಾಡಿ ಕಪ್ ಗೆದ್ದ ಮೊದಲ ತಂಡ
ಟಿ20 ವಿಶ್ವಕಪ್ ಫೈನಲ್ ನಲ್ಲಿ ಇದುವರೆಗಿನ ಅತ್ಯಧಿಕ ಮೊತ್ತ
ಟೂರ್ನಿಯೊಂದರಲ್ಲಿ 106 ಸಿಕ್ಸರ್ ಸಿಡಿಸಿದ ಮೊದಲ ತಂಡ ಭಾರತ
ವಿಶ್ವಕಪ್ ಫೈನಲ್ ನಲ್ಲಿ ಹೈಯೆಸ್ಟ್ ರನ್ ಗಳ ಅಂತರದಲ್ಲಿ ಗೆಲುವು
ತವರಿನಲ್ಲಿ ಏಕದಿನ, ಟಿ20 ವಿಶ್ವಕಪ್ ಗೆದ್ದ ಮೊದಲ ಟೀಂ ಭಾರತ
ಟಿ-20ಐ ನಲ್ಲಿ ಸತತ 2 ಬಾರಿ 250+ ಸ್ಕೋರ್ ಮಾಡಿದ ಮೊದಲ ತಂಡ
ಭಾರತಕ್ಕೆ ಟಿ-20 ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಲ್ಕನೇ ನಾಯಕ ಸೂರ್ಯ
ಅತೀ ಹೆಚ್ಚು ಐಸಿಸಿ ಪ್ರಶಸ್ತಿಗಳನ್ನ ಗೆದ್ದ ಭಾರತ, 14 ಐಸಿಸಿ ಟ್ರೋಫಿ ಗೆಲುವು
ಌಕ್ಚುಲಿ ಟಿ-20ಐನಲ್ಲಿ ಭಾರತ ಏಕದಿನ ಮಾದರಿಗಿಂತ ಹೆಚ್ಚಿನ ಸ್ಕೋರ್ ಕಲೆ ಹಾಕ್ತಿದೆ. ಌಂಡ್ ಕಳೆದ ಮೂರು ಏಕದಿನ ವಿಶ್ವಕಪ್ ಫೈನಲ್ ಪಂದ್ಯಗಳಲ್ಲಿ ದಾಖಲಾದ ಮೊದಲ ಇನ್ನಿಂಗ್ಸ್ ರನ್ಸ್ಗಿಂತ ಜಾಸ್ತಿ ಈ ಸಲ ಭಾರತ ಸ್ಕೋರ್ ಮಾಡಿದೆ. 2015ರ ವಿಶ್ವಕಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡ ಫಸ್ಟ್ ಬ್ಯಾಟಿಂಗ್ ಮಾಡಿ 50 ಓವರ್ಗಳಲ್ಲಿ 183 ರನ್ ಗಳಿಸಿದ್ರೆ 2019ರ ಫೈನಲ್‌ನಲ್ಲಿ ನ್ಯೂಜಿಲೆಂಡ್ 241 ರನ್ ಗಳಿಸಿತ್ತು. ಇನ್ನು ಅಹಮದಾಬಾದ್‌ನಲ್ಲೇ ನಡೆದಿದ್ದ 2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 50 ಓವರಲ್ಲಿ 240ಕ್ಕೆ ಆಲೌಟ್ ಆಗಿತ್ತು. ಬಟ್ ಈ ಸಲ ಅದೂ ಕೂಡ ಟಿ-20ಐನಲ್ಲಿ ಭಾರತ ಫಸ್ಟ್ ಬ್ಯಾಟಿಂಗ್ ಮಾಡಿ 255 ರನ್ಸ್ ಕಲೆ ಹಾಕಿದೆ.
ವೀಕ್ಷಣೆಯಲ್ಲೂ ದಾಖಲೆ ಬರೆದ ಫೈನಲ್ ಪಂದ್ಯ!
ಇನ್ನು ಟಿ-20 ವಿಶ್ವಕಪ್ ಫೈನಲ್ ಮ್ಯಾಚ್ ವ್ಯೂವರ್ಶಿಪ್ನಲ್ಲೂ ದಾಖಲೆ ಬರೆದಿದೆ. ಲೈವ್ ಸ್ಟ್ರೀಮಿಂಗ್ನಲ್ಲಿ ದಾಖಲೆಯ 82.1 ಕೋಟಿ ವೀಕ್ಷಕರು ಮ್ಯಾಚ್ ನೋಡಿದ್ದಾರೆ. ಇದು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಜಿಯೋಹಾಟ್‌ಸ್ಟಾರ್‌ನಲ್ಲಿ ದಾಖಲೆಯ ವೀಕ್ಷಣೆಯಾಗಿದೆ. ಟೀಂ ಇಂಡಿಯಾದ ಬೌಲಿಂಗ್ ವೇಳ 19ನೇ ಓವರ್‌ನಲ್ಲಿ ನ್ಯೂಜಿಲೆಂಡ್ ಕೊನೇ ವಿಕೆಟ್ ಬಿದ್ದು ಭಾರತ 96 ರನ್‌ಗಳ ಗೆಲುವು ಸಾಧಿಸ್ತಿದ್ದಂತೆ ಜಿಯೋಹಾಟ್‌ಸ್ಟಾರ್‌ನಲ್ಲಿ ವೀಕ್ಷಕರ ಸಂಖ್ಯೆ 74.5 ಕೋಟಿ ಇತ್ತು. ಆನಂತ್ರ ಪ್ರಶಸ್ತಿ ಹಂಚಿಕೆ ವೇಳೆ ಇದು 82.1 ಕೋಟಿ ತಲುಪಿತ್ತು. ಹೀಗಾಗಿ ಈ ಪಂದ್ಯ ಭಾರತಕ್ಕೆ ಬರೀ ಗೆಲುವಲ್ಲ ಐತಿಹಾಸಿಕ ಗೆಲುವು. ಇನ್ನು ಫೈನಲ್ ಮ್ಯಾಚಲ್ಲಿ ಗೋಲ್ಡನ್ ಡಕ್ ಆದ್ರೂ ತಂಡವನ್ನ ಯಶಸ್ವಿಯಾಗಿ ನಿಭಾಯಿಸಿದ ಸೂರ್ಯಕುಮಾರ್ ಯಾದವ್ ಭಾರತಕ್ಕೆ ಮತ್ತೊಂದು ವಿಶ್ವಕಪ್ ಕಿರೀಟ ತೊಡಿಸಿದ್ದಾರೆ. ಪಂದ್ಯದ ಬಳಿಕ ಮಾತನಾಡಿದ ಸೂರ್ಯ ಗೆಲುವಿನ ಕ್ರೆಡಿಟ್ನ ಆಟಗಾರರಿಗೂ ಕೊಟ್ಟಿದ್ದಾರೆ. ಸಂಜು ಬಗ್ಗೆ ಮಾತನಾಡಿದ ಸೂರ್ಯ, ಸಂಜು ತಮ್ಮ ಪ್ರತಿಭೆಯಿಂದ ತಂಡಕ್ಕೆ ಅದ್ಭುತ ಗೆಲುವುಗಳನ್ನು ನೀಡಿದ್ದಾರೆ. ಅವರು ಸತತ ಮೂರು ನಿರ್ಣಾಯಕ ಪಂದ್ಯಗಳಲ್ಲಿ ಬ್ಯಾಟಿಂಗ್‌ನಲ್ಲಿ ಮಿಂಚಿದ್ದಾರೆ. ಅವರು ಅದ್ಭುತ ಆಟಗಾರ. ಸಂಜು ಆಗಮನದಿಂದ ತಂಡದಿಂದ ಎಲ್ಲವೂ ಬದಲಾಗಿದೆ ಎಂದು ಅಪ್ರಿಶಿಯೇಟ್ ಮಾಡಿದ್ರು. ಹಾಗೇ ಜಸ್ಪ್ರೀತ್ ಬುಮ್ರಾ, ಅಕ್ಷರ್ ಪಟೇಲ್ ಮತ್ತು ಹಾರ್ದಿಕ್ ಪಾಂಡ್ಯ ಪರ್ಫಾಮೆನ್ಸ್ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ರು. ಒಟ್ನಲ್ಲಿ ಭಾರತ ಗೆದ್ದಾಗಿದೆ ಇನ್ನೇನಿದ್ರೂ ಮತ್ತೊಂದು ವಿಶ್ವಕಪ್ವರೆಗೂ ಇದೇ ಜರ್ನಿ ಕಂಟಿನ್ಯೂ ಮಾಡೋದಷ್ಟೇ ಬಾಕಿ.

ನೋಡಿರಿ

