ಫೈನಲ್ ಮ್ಯಾಚ್ ಬಗ್ಗೆ ಮೈಕಲ್ ವಾನ್ ಕ್ಯಾತೆ – ಬ್ಯಾಟಿಂಗ್ ಪಿಚ್ ಹಾನಿಕಾರಕ ಅಂತ ಕಿರಿಕ್

ಭಾರತ ತಂಡದ ಈ ಚಾಂಪಿಯನ್ ಪಟ್ಟದ ಬೆನ್ನಲ್ಲೇ ಫೈನಲ್ ಮ್ಯಾಚ್ಗೆ ಸಿದ್ಧಪಡಿಸಲಾದ ಪಿಚ್ ಬಗ್ಗೆ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇವಲ ಬ್ಯಾಟರ್ಗಳಿಗಾಗಿ ನಿರ್ಮಿಸಲಾಗಿರುವ ಇಂತಹ ಪಿಚ್ ಕ್ರಿಕೆಟ್ ಆಟಕ್ಕೆ “ಹಾನಿಕಾರಕ” ಎಂದು ಕರೆದಿದ್ದಾರೆ.
ಇದನ್ನೂ ಓದಿ: ಮೆಡಿಕಲ್ ಶಾಪ್ ಇಡೋ ವಿಚಾರಕ್ಕೆ ಕಿರಿಕ್ – ಗಂಡ ಹೆಂಡತಿ ಸೂ*ಸೈಡ್
ಭಾರತ ತಂಡವು 255 ರನ್ಗಳ ಬೃಹತ್ ಮೊತ್ತವನ್ನು ಪೇರಿಸುತ್ತಿದ್ದಂತೆ ಅಸಮಾಧಾನ ಹೊರಹಾಕಿದ ಮೈಕಲ್ ವಾನ್, ಇದು ಕೇವಲ ಬ್ಯಾಟರ್ಗಳಿಗೆ ಮಾತ್ರ ಅನುಕೂಲಕರವಾದ ಪಿಚ್ ಎಂದು ದೂರಿದರು. ಬೌಲರ್ಗಳಿಗೆ ಯಾವುದೇ ಸಹಾಯವಿಲ್ಲದ ಇಂತಹ ಪಿಚ್ಗಳು ಆಟದ ಸಮತೋಲನವನ್ನು ಕೆಡಿಸುತ್ತವೆ. ಇಂತಹ ಪಿಚ್ಗಳಿಂದ ಸಮತೋಲಿತ ಆಟವು ಮರೆಯಾಗುತ್ತಿದೆ. ಕೇವಲ ಬ್ಯಾಟರ್ಗಳಿಗಾಗಿಯೇ ಈ ಪಿಚ್ ನಿರ್ಮಿಸಲಾಗಿದ್ದು, ಹೀಗಾಗಿಯೇ ಟೀಮ್ ಇಂಡಿಯಾ ಇಷ್ಟೊಂದು ದೊಡ್ಡ ಮೊತ್ತು ಪೇರಿಸಲು ಸಾಧ್ಯವಾಗಿದೆ. ಇದರಿಂದಾಗಿ ಸಮತೋಲಿತ ಪೈಪೋಟಿ ಕಂಡು ಬಂದಿಲ್ಲ ಎಂದು ವಾನ್ ಅಭಿಪ್ರಾಯಪಟ್ಟಿದ್ದಾರೆ.
ಇದಕ್ಕೂ ಮುನ್ನ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಣ ಆ್ಯಶಸ್ ಸರಣಿಯ ವೇಳೆ ಮೊದಲ ದಿನವೇ 20 ವಿಕೆಟ್ಗಳು ಉರುಳಿದಾಗ, ಎಂ.ಸಿ.ಜಿ (MCG) ಪಿಚ್ ಅನ್ನು ಅವರು “ಹಾಸ್ಯಾಸ್ಪದ” ಎಂದು ಕರೆದಿದ್ದರು. ಬ್ಯಾಟರ್ಗಳಿಗೆ ಆಡಲು ಅಸಾಧ್ಯವಾದ ಇಂತಹ ಪಿಚ್ಗಳು ಟೆಸ್ಟ್ ಕ್ರಿಕೆಟ್ನ ಘನತೆಯನ್ನು ಕುಗ್ಗಿಸುತ್ತವೆ ಎಂದು ಅವರು ಒತ್ತಿ ಹೇಳಿದ್ದರು.ಇದೀಗ ಐಸಿಸಿ ಟೂರ್ನಿಯ ಫೈನಲ್ ಪಂದ್ಯಕ್ಕಾಗಿ ಬ್ಯಾಟರ್ಗಳ ಪಾಲಿಗೆ ಸ್ವರ್ಗದಂತಹ ಪಿಚ್ ನಿರ್ಮಿಸಿರುವುದರ ಬಗ್ಗೆ ಮೈಕಲ್ ವಾನ್ ಪ್ರಶ್ನೆಗಳನ್ನೆತ್ತಿದ್ದಾರೆ. ಇಂತಹ ಪಿಚ್ಗಳಿಂದಾಗಿ ಬ್ಯಾಟಿಂಗ್ ಮತ್ತು ಬೌಲಿಂಗ್ ನಡುವೆ ಸಮತೋಲನ ಇಲ್ಲದ ಪಂದ್ಯಗಳು ಕಂಡು ಬರುತ್ತವೆ. ಅಲ್ಲದೆ ಈ ರೀತಿಯ ಪಿಚ್ ಪ್ರೇಕ್ಷಕರ ಆಸಕ್ತಿಯನ್ನು ಕಡಿಮೆ ಮಾಡುತ್ತವೆ ಮತ್ತು ಕ್ರಿಕೆಟ್ನ ಭವಿಷ್ಯಕ್ಕೆ ಹಾನಿ ಮಾಡುತ್ತವೆ ಎಂದು ವಾನ್ ಕಳವಳ ವ್ಯಕ್ತಪಡಿಸಿದ್ದಾರೆ.

ನೋಡಿರಿ

