ಮದುವೆ ಬೇಡ ಎಂದು ತಲೆ ಬೋಳಿಸಿಕೊಂಡ ಯುವತಿ! – ಆಮೇಲೆ ಏನಾಯ್ತು?

ಮದುವೆ ಬೇಡ ಎಂದು ತಲೆ ಬೋಳಿಸಿಕೊಂಡ ಯುವತಿ! – ಆಮೇಲೆ ಏನಾಯ್ತು?

ಮಕ್ಕಳಿಗೆ ಮದುವೆ ಮಾಡ್ಬೇಕು. ಅವರು ತನ್ನ ಸಂಗಾತಿಯೊಂದಿಗೆ ಸುಖವಾಗಿ ಬಾಳಬೇಕು ಅನ್ನೋ ಆಸೆ ಹೆತ್ತವರಿಗೆ ಇರುತ್ತೆ. ಹೀಗಾಗಿ ಮಕ್ಕಳಿಗೆ ಬೇಗ ಮದುವೆಯಾಗಲು ತಂದೆ ತಾಯಿ ಒತ್ತಾಯಿಸುತ್ತಾರೆ. ಆದ್ರೀಗ ಇಲ್ಲೊಂದು ಕಡೆ, ಯುವತಿಯೊಬ್ಬಳು ಮದುವೆ ವಿಚಾರಕ್ಕೆ ಬೇಸತ್ತು, ತಲೆಯನ್ನೇ ಬೋಳಿಸಿಕೊಂಡಿದ್ದಾಳೆ.

ಇದನ್ನೂ ಓದಿ: ಸ್ನೇಹಿತೆಯ ಬಾಯ್‌ಫ್ರೆಂಡ್‌ ಕಾಲ್ ರಿಸೀವ್ ಮಾಡಿದ್ದಕ್ಕೆ ಗಂಡ, ಹೆಂಡತಿ ಮಧ್ಯೆ ಜಗಳ! – ಆಮೇಲೆ ಆಗಿದ್ದು ಘೋರ ದುರಂತ!

ಹಿಂದಿನ ಕಾಲದಲ್ಲಿ ಹುಡುಗಿಯರು 18 ವರ್ಷ ವಯಸ್ಸು ಹಾಗೆಯೇ ಹುಡುಗರಿಗೆ 21 ವರ್ಷವನ್ನು ತಲುಪಿದಾಗ ಮದುವೆ ಮಾಡಲಾಗುತ್ತಿತ್ತು. ಆದರೆ ಇತ್ತೀಚೆಗೆ ಉದ್ಯೋಗ, ವೈಯಕ್ತಿಕ ಸ್ವಾತಂತ್ರ್ಯ ಹೀಗೆ ನಾನಾ ಕಾರಣದಿಂದ ಯುವ ಜನರು ಹಿಂಜರಿಯುತ್ತಿದ್ದಾರೆ‌. ಇದೀಗ ಯುವತಿಯೊಬ್ಬಳು ಮಹಿಳಾ ದಿನದಂದೇ ಮದುವೆ ವಿಚಾರಕ್ಕೆ ಬೇಸೆತ್ತು ತಲೆ ಬೊಳಿಸಿಕೊಂಡಿದ್ದಾಳೆ. ಇದ್ರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿದೆ.

ಏನಿದು ಘಟನೆ?

ತನ್ನ ಕುಟುಂಬದಿಂದ ಹೆಚ್ಚುತ್ತಿರುವ ವಿವಾಹದ ಒತ್ತಡದಿಂದ ತಪ್ಪಿಸಿಕೊಳ್ಳಲು ಯುವತಿಯೊಬ್ಬಳು ತಲೆ ಬೋಳಿಸಿಕೊಂಡಿದ್ದಾರೆ. ವೈಯಕ್ತಿಕ ಸ್ವಾತಂತ್ರ್ಯ ಮತ್ತು ಮಹಿಳೆಯರ ಮೇಲೆ ಇರಿಸಲಾದ ಸಾಮಾಜಿಕ ನಿರೀಕ್ಷೆಗಳ ಬಗ್ಗೆ ಯುವತಿ ಬೇಸರಗೊಂಡಿದ್ದು ಮಹಿಳಾ ದಿನವೇ ಕೂದಲನ್ನು ಬೊಳಿಸಿಕೊಂಡಿದ್ದಾರೆ.  ವೈರಲ್‌ ಆದ ವಿಡಿಯೋದಲ್ಲಿ, ಮನೆಯವರ ನಿರಂತರ ಮದುವೆ ಒತ್ತಡದಿಂದ ಪಾರಾಗಲು ಈ ಹೆಜ್ಜೆ ಇಟ್ಟಿದ್ದೇನೆ. ಮಹಿಳೆ ತನ್ನ ಕೂದಲನ್ನು ಕತ್ತರಿಸುವುದು ತನಗೆ ನಿಜವಾಗಿಯೂ ಇಷ್ಟಿರಲಿಲ್ಲ ಎಂದು ವಿವರಿಸುತ್ತಾಳೆ. ಇತರ ಅನೇಕ ಮಹಿಳೆಯರಂತೆ ತಾನು ತನ್ನ ಕೂದಲನ್ನು ಅತೀಯಾಗಿ ಪ್ರೀತಿಸುತ್ತಿದ್ದೆ, ಆದರೆ ಮದುವೆಯಾಗಲು ತನ್ನ ಕುಟುಂಬದಿಂದ ನಿರಂತರ ಒತ್ತಡದಿಂದಾಗಿ ಮಣಿದು ನಾನು ಈ ನಿರ್ಧಾರ ಕೈಗೊಂಡಿದ್ದೇನೆ ಎಂದಿದ್ದಾರೆ.

@kajals move ಎಂದು ಗುರುತಿಸಲಾದ ಬಳಕೆದಾರರು ಈ ಕ್ಲಿಪ್ ಅನ್ನು ಶೇರ್ ಮಾಡಿಕೊಂಡಿದ್ದು ಈಗಾಗಲೇ ಸುಮಾರು 3.7 ಲಕ್ಷ ವೀಕ್ಷಣೆಗಳನ್ನು ಗಳಿಸಿದೆ, ಅನೇಕ ಬಳಕೆದಾರರು ತಮ್ಮ ವೈಯಕ್ತಿಕ ನಿರ್ಧಾರದ ಬಗ್ಗೆ ಶ್ಲಾಘಿಸಿದ್ದಾರೆ. ಯುವತಿ ತನ್ನ ವಿಡಿಯೋದಲ್ಲಿ ಸಮಾಜದ ನಡವಳಿಕೆ, ವರ್ತನೆಯ ಬಗ್ಗೆ ಕಿಡಿಕಾರಿದ್ದಾರೆ. ಹೆಣ್ಣುಮಕ್ಕಳು ತಮ್ಮ ನಿರ್ಧಾರವನ್ನು ತಾವೇ ತೆಗೆದುಕೊಳ್ಳಲು ಸಮಾಜ ಯಾಕೆ ನಿರಾಕರಿಸುತ್ತದೆ? ಮದುವೆಯ ವಿಚಾರದಲ್ಲಿ ಹೆಣ್ಣಿನ ಭಾವನೆಗಳಿಗೆ ಬೆಲೆ ಇಲ್ಲವೆ? ಮಹಿಳೆಯರು ತಮ್ಮ ನೋಟ ಅಥವಾ ಜೀವನ ನಿರ್ಧಾರಗಳ ಬಗ್ಗೆ ಅವರೇ ಆಯ್ಕೆಗಳನ್ನು ಮಾಡಿದಾಗ ಸಮಾಜ ಏಕೆ ಈ ರೀತಿಯಾಗಿ ಪ್ರತಿಕ್ರಿಯಿಸುತ್ತದೆ ಎಂದು ಪ್ರಶ್ನಿಸಿದ್ದಾರೆ. ಬದಲಾಗಿ, ಇದೇ ರೀತಿಯ ಸಂದರ್ಭಗಳನ್ನು ಎದುರಿಸುತ್ತಿರುವ ಇತರ ಮಹಿಳೆಯರಿಗೂ ಧೈರ್ಯ ತುಂಬಿದ್ದಾರೆ. ಅವರು ತಮ್ಮ ಗುರಿಗಳ ಮೇಲೆ ಕೇಂದ್ರೀಕರಿಸಲು ಪ್ರತಿಯೊಂದು ಮಹಿಳೆಯರನ್ನು ಹುರಿದುಂಬಿಸಿದ್ದಾರೆ.

Shwetha M

Leave a Reply

Your email address will not be published. Required fields are marked *